ಅತ್ಯಾಚಾರ, ಮತಾಂತರ ಆರೋಪದ ಮೇಲೆ ಬಾಯ್ ಫ್ರೆಂಡ್ ಅನ್ನು ಜೈಲಿಗೆ ಕಳಿಸಿದ ಮಹಿಳೆ; ‘ದಿ ಕೇರಳ ಸ್ಟೋರಿ’ ವೀಕ್ಷಿಸಿದ ನಂತರ ದೂರು ದಾಖಲು
ಮಹಿಳೆಯೊಬ್ಬರು ದಿ ಕೇರಳ ಸ್ಟೋರಿ ಚಿತ್ರವನ್ನು ವೀಕ್ಷಿಸಿದ ನಂತರ ತನ್ನ ಪ್ರಿಯಕರನ ಮೇಲೆ ಅತ್ಯಾಚಾರ ಮತ್ತು ಬಲವಂತವಾಗಿ ಮತಾಂತರಕ್ಕೆ ಪ್ರಯತ್ನಿಸುತ್ತಿದ್ದಾನೆ ಎಂದು ಆರೋಪಿಸಿ ಪೊಲೀಸ್ ಬಳಿ ದೂರು ದಾಖಲಿಸಿದ್ದಾರೆ.
ಇಂದೋರ್: ಕೇರಳದಲ್ಲಿ ಐಸಿಸ್ ಸೇರಲು ಯುವತಿಯರನ್ನು ಮತಾಂತರಿಸುವ (Conversion) ಅಂಶವನ್ನು ತೋರುವ ಚಿತ್ರಣದಿಂದಾಗಿ ‘ದಿ ಕೇರಳ ಸ್ಟೋರಿ’ (The Kerala Story) ಚಿತ್ರದ ಸುತ್ತ ವಿವಾದ ಭುಗಿಲೆದ್ದಿದೆ. ಚಿತ್ರವು ಮುಸ್ಲಿಮರನ್ನು ಋಣಾತ್ಮಕವಾಗಿ ಪ್ರಸ್ತುತಪಡಿಸುತ್ತದೆ ಎಂಬ ಟೀಕೆಗಳನ್ನು ಎದುರಿಸಿದೆ. ಚಿತ್ರಕ್ಕೆ ಸಂಬಂಧಿಸಿದ ಹೊಸ ಬೆಳವಣಿಗೆಯೊಂದರಲ್ಲಿ, ಮಧ್ಯಪ್ರದೇಶದ ಇಂದೋರ್‌ನ (Indore) ಮಹಿಳೆಯೊಬ್ಬರು ದಿ ಕೇರಳ ಸ್ಟೋರಿ ಚಿತ್ರವನ್ನು ವೀಕ್ಷಿಸಿದ ನಂತರ ತನ್ನ ಪ್ರಿಯಕರನ ಮೇಲೆ ಅತ್ಯಾಚಾರ ಮತ್ತು ಬಲವಂತವಾಗಿ ಮತಾಂತರಕ್ಕೆ ಪ್ರಯತ್ನಿಸುತ್ತಿದ್ದಾನೆ ಎಂದು ಆರೋಪಿಸಿ ಪೊಲೀಸ್ ಬಳಿ ದೂರು ದಾಖಲಿಸಿದ್ದಾರೆ.
ವರದಿಗಳ ಪ್ರಕಾರ, ‘ದಿ ಕೇರಳ ಸ್ಟೋರಿ’ ವೀಕ್ಷಿಸಿದ ನಂತರ ಸಂತ್ರಸ್ತೆ ಮತ್ತು ಆರೋಪಿಯ ನಡುವೆ ಉಂಟಾದ ಜಗಳದ ನಂತರ 23 ವರ್ಷದ ಮಹಿಳೆ ತನ್ನ ಗೆಳೆಯನ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ. ಬಲವಂತದ ಮತಾಂತರಗಳನ್ನು ನಿಷೇಧಿಸುವ ಮಧ್ಯಪ್ರದೇಶ ಧರ್ಮ ಸ್ವಾತಂತ್ರ್ಯ ಕಾಯಿದೆ 2021 ಮತ್ತು ಭಾರತೀಯ ದಂಡ ಸಂಹಿತೆ (IPC) ಅಡಿಯಲ್ಲಿ ಆರೋಪಿಯನ್ನು ನಂತರ ಬಂಧಿಸಲಾಯಿತು.
“ತನ್ನ ಗೆಳೆಯ ತನ್ನ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ, ತನ್ನ ಧರ್ಮವನ್ನು ಬದಲಾಯಿಸುವಂತೆ ಒತ್ತಾಯಿಸಿದನು, ಇದು ಮಾನಸಿಕ ಯಾತನೆ ಉಂಟುಮಾಡಿದೆ” ಎಂದು ಮಹಿಳೆ ತನ್ನ ಎಫ್‌ಐಆರ್‌ನಲ್ಲಿ ಆರೋಪಿಸಿದ್ದಾರೆ. ಚಲನಚಿತ್ರವನ್ನು ವೀಕ್ಷಿಸಿದ ನಂತರ, ಈ ಜೋಡಿ ಜಗಳವಾಡಿದರು, ಈ ಸಮಯದಲ್ಲಿ ಆರೋಪಿ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಮೇ 19 ರಂದು ಸಂತ್ರಸ್ತೆ ಪೊಲೀಸರನ್ನು ಸಂಪರ್ಕಿಸಿ ಎಫ್ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ: ಪಿಎಸ್‌ಐ ಮನೆಗೆಯೇ ಬೆಂಕಿ ಹಚ್ಚಿದ ದುಷ್ಕರ್ಮಿಗಳು, ಲಕ್ಷಾಂತರ ಮೌಲ್ಯದ ವಸ್ತುಗಳು ಆಹುತಿ
ಆರೋಪಿ ಒಬ್ಬ 12ನೇ ತರಗತಿ ಉತ್ತೀರ್ಣರಾದ ನಿರುದ್ಯೋಗಿ ಮತ್ತು ಉನ್ನತ ಶಿಕ್ಷಣ ಪಡೆದು ಮಹಿಳೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ವರದಿ ತಿಳಿಸುತ್ತದೆ. ಐದು ವರ್ಷದ ಹಿಂದೆ ಇವರರಿಬ್ಬರು ಟ್ಯೂಷನ್ ಒಂದರಲ್ಲಿ ಬೇಟಿಯಾಗಿದ್ದಾಗಿ ಸಂತ್ರಸ್ತೆ ಮಾಹಿತಿ ನೀಡಿದ್ದಾರೆ. ಮಹಿಳೆಗೆ ಪ್ರೀತಿ ಮತ್ತು ಮದುವೆಯ ನೆಪದಲ್ಲಿ ಆಮಿಷವೊಡ್ಡುತ್ತಿದ್ದ ಎಂದು ಆರೋಪಿಸಲಾಗಿದೆ. ಸದ್ಯ ಮಹಿಳೆ ಮಾಡಿರುವ ಆರೋಪದ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯು ‘ದಿ ಕೇರಳ ಸ್ಟೋರಿ’ ಸುತ್ತಲಿನ ವಿವಾದವನ್ನು ಮತ್ತಷ್ಟು ಹೆಚ್ಚಿಸಿದೆ
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ