ಬೀದಿ ನಾಯಿಗಳನ್ನು ಕದಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ; ಅಕ್ರಮ ನಾಯಿ ಮಾಂಸ ಮಾರಾಟಕ್ಕಿರಬಹುದು ಎಂದು ಶಂಕಿಸಿದ ಪೊಲೀಸ್
ಅಪರಿಚಿತ ವ್ಯಕ್ತಿಗಳು ಬೀದಿ ನಾಯಿಗಳಿಗೆ ಆಹಾರದ ಆಮಿಷ ಒಡ್ಡಿ ಬಲವಂತವಾಗಿ ಕಾರಿಗೆ ಹಾಕುತ್ತಿರುವ ದೃಶ್ಯ ಕಂಡುಬಂದಿದೆ.
ಮಾಲೀಕರಿಂದ ನಾಯಿಗಳನ್ನು ಕದಿಯುವ (Dognapping) ಪ್ರಕರಣಗಳು ಅಸ್ಸಾಂ ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿಯು ನಡೆಯುತ್ತಿರುವ ಕಾನೂನುಬಾಹಿರ ಚಟುವಟಿಕೆ. ಗುವಾಹಟಿಯಿಂದ (Guwahati) ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋದಲ್ಲಿ ಅಪರಿಚಿತ ವ್ಯಕ್ತಿಗಳು ಬೀದಿ ನಾಯಿಗಳಿಗೆ (Street Dogs) ಆಹಾರದ ಆಮಿಷ ಒಡ್ಡಿ ಬಲವಂತವಾಗಿ ಕಾರಿಗೆ ಹಾಕುತ್ತಿರುವ ದೃಶ್ಯ ಕಂಡುಬಂದಿದೆ. ಈ ಘಟನೆಯು ಈ ಪ್ರದೇಶದಲ್ಲಿ ಸಂಭವಿಸಿದ ನಾಯಿ ಕಳ್ಳತನ ಪ್ರಕರಣಗಳ ಸರಣಿಯ ಮೇಲೆ ಬೆಳಕು ಚೆಲ್ಲುತ್ತದೆ.
A video of a #dog kidnapping incident has gone viral on social media platforms, where it was seen that a group of three unidentified men whisked away a dog in a car in #Guwahati. @GuwahatiPol pic.twitter.com/nHyflprntz
— G Plus (@guwahatiplus) May 23, 2023
ಸೆಪ್ಟೆಂಬರ್ 2022 ರಲ್ಲಿ, ಅಸ್ಸಾಂ ಪೊಲೀಸರು ಬೊಕಾಖಾಟ್ ಪಟ್ಟಣದಿಂದ 31 ಕಳ್ಳಸಾಗಣೆ ನಾಯಿಗಳನ್ನು ರಕ್ಷಿಸಿದರು. ನಾಯಿಗಳ ಬಾಯಿ ಮತ್ತು ಕಾಲುಗಳನ್ನು ಕಟ್ಟಿ ಗೋಣಿಚೀಲದಲ್ಲಿ ತುರುಕಿರುವುದು ಕಂಡುಬಂದಿದೆ. ಅದೇ ರೀತಿ, ಡಿಸೆಂಬರ್ 2021 ರಲ್ಲಿ, ಜೋರ್ಹತ್‌ನ ಚಗುರಿ ಪ್ರದೇಶದಲ್ಲಿ 24 ನಾಯಿಗಳನ್ನು ರಕ್ಷಿಸಲಾಯಿತು. ಈ ಘಟನೆಗಳು ಪ್ರದೇಶದಲ್ಲಿನ ನಾಯಿ ಕಳ್ಳರ ಸಂಘಟಿತ ಸ್ವರೂಪವನ್ನು ಎತ್ತಿ ತೋರಿಸುತ್ತವೆ.
Assam | Police officials rescued 31 stray dogs left tied in sacks on roadside in Bokakhat in Golaghat dist (16.09)
Animal traffickers might have dumped these dogs near a drain due to a glitch in their vehicle & fled from the area. Further probe on, says local police officer pic.twitter.com/unxJw6VfrK
— ANI (@ANI) September 17, 2022
ಅಸ್ಸಾಂನಲ್ಲಿ ಮಾತ್ರ ಇಂತಹ ಕಳ್ಳತನ ನಡೆಯುತ್ತಿಲ್ಲ:
ಫೆಬ್ರವರಿ 2023 ರಲ್ಲಿ, ದೆಹಲಿ ಪೊಲೀಸರು ಚಿತ್ತರಂಜನ್ ಪಾರ್ಕ್‌ನಲ್ಲಿ ಸಾಕು ನಾಯಿಯನ್ನು ಕದಿಯುತ್ತಿದ್ದ ಕಳ್ಳನನ್ನು ಸಿಸಿಟಿವಿಯ ದೃಶ್ಯಗಳ ಸಹಾಯದಿಂದ ಬಂಧಿಸಿದರು. 2021 ರಲ್ಲಿ ಪ್ರತಿ ತಿಂಗಳು 3-4 ಘಟನೆಗಳು ಪೊಲೀಸರಿಗೆ ವರದಿಯಾಗುವುದರೊಂದಿಗೆ ಹೈದರಾಬಾದ್ ಕೂಡ ನಾಯಿ ಕಳ್ಳತನ ಪ್ರಕರಣಗಳ ಹೆಚ್ಚಳಕ್ಕೆ ಸಾಕ್ಷಿಯಾಗಿದೆ.
ನಾಯಿ ಕಳ್ಳತನ ವಿವಿಧ ಕಾರಣಗಳಿಗೆ ನಡೆಯುತ್ತದೆ:
“ವಿಶೇಷ ನಾಯಿ ತಳಿಗಳು ಸಾಮಾನ್ಯವಾಗಿ ಮರುಮಾರಾಟಕ್ಕೆ ಗುರಿಯಾಗುತ್ತವೆ, ಕಳ್ಳರಿಗೆ ಗಮನಾರ್ಹ ಆರ್ಥಿಕ ಲಾಭವನ್ನು ತರುತ್ತವೆ. ಹೆಚ್ಚುವರಿಯಾಗಿ, ಅಕ್ರಮ ಸಂತಾನೋತ್ಪತ್ತಿ ಉದ್ದೇಶಗಳಿಗಾಗಿ ನಾಯಿಗಳನ್ನು ಕದಿಯಲಾಗುತ್ತದೆ. ನೋಂದಾಯಿಸದ ತಳಿಗಾರರು ನಿರ್ದಿಷ್ಟವಾಗಿ ಸಾಕುಪ್ರಾಣಿಗಳನ್ನು ಕದಿಯಲು ಮನೆಗಳನ್ನು ಗುರಿಯಾಗಿರಿಸಿಕೊಳ್ಳುತ್ತಾರೆ, ಅವುಗಳನ್ನು ಸಂತಾನೋತ್ಪತ್ತಿಗಾಗಿ ಬಳಸುತ್ತಾರೆ ಮತ್ತು ನಂತರ ಅವುಗಳನ್ನು ಬೀದಿಗೆ ಬಿಡುತ್ತಾರೆ ಅಥವಾ ಸಾಯಿಸುತ್ತಾರೆ. ಈ ಸಂತಾನೋತ್ಪತ್ತಿ ಕೇಂದ್ರಗಳಲ್ಲಿನ ಪರಿಸ್ಥಿತಿಗಳು ಸಾಮಾನ್ಯವಾಗಿ ಶೋಚನೀಯವಾಗಿದ್ದು, ಸರಿಯಾದ ಆಹಾರ ಮತ್ತು ಪಶುವೈದ್ಯಕೀಯ ಆರೈಕೆಯ ಕೊರತೆಯಿದೆ” ಎಂದು ಅನಿಮಲ್ ವಾರಿಯರ್ಸ್ ಕನ್ಸರ್ವೇಶನ್ ಸೊಸೈಟಿಯ ಪ್ರದೀಪ್ ನಾಯರ್ ಟೈಮ್ಸ್ ಆ ಇಂಡಿಯಾ ವರದಿಯಲ್ಲಿ ಹೇಳಿದ್ದಾರೆ.
ಇದಲ್ಲದೆ, ಅಸ್ಸಾಂನಲ್ಲಿ ಸ್ಥಳೀಯ ನಾಯಿ ತಳಿಗಳ ಕಳ್ಳಸಾಗಣೆ ನಾಗಾಲ್ಯಾಂಡ್ನಲ್ಲಿನ ನಾಯಿ ಮಾಂಸದ ವ್ಯಾಪಾರದೊಂದಿಗೆ ಸಂಬಂಧ ಹೊಂದಿದೆ. ಭಾರತೀಯ ಕಾನೂನು ವ್ಯವಸ್ಥೆಯು ನಾಯಿ ಕಳ್ಳತನಕ್ಕೆ ಕಠಿಣ ಶಿಕ್ಷೆಗಳನ್ನು ಹೊಂದಿಲ್ಲ, ಅಂತಹ ಅಪರಾಧಗಳನ್ನು ತಡೆಯುವುದು ಸವಾಲಿನ ಸಂಗತಿಯಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:35 pm, Sat, 27 May 23