ಸ್ವಂತ ಗಂಡನನ್ನು ಕೊಂದ ಬಳಿಕ ಹತ್ತಿರದವರನ್ನು ಕೆಳೆದುಕೊಂಡ ಮಕ್ಕಳಿಗೆ ಈಕೆ ಬರೆದಿದ್ದಳು ಒಂದು ಸುಂದರ ಪುಸ್ತಕ; ಇದೊಂದು ಅಪರೂಪದ ಕೊಲೆ ಕೇಸ್!

ತನ್ನ ಪತಿ ಎರಿಕ್ ರಿಚಿನ್ಸ್‌ನ ಮರಣದ ನಂತರ ದುಃಖದ ಬಗ್ಗೆ ಮಕ್ಕಳ ಪುಸ್ತಕವನ್ನು ಬರೆದ ಮೂರು ಮಕ್ಕಳ ತಾಯಿಯಾದ ಕೌರಿ ರಿಚಿನ್ಸ್ ಅವರನ್ನು ತಮ್ಮ ಗಂಡನನ್ನು ಕೊಲೆ ಮಾಡಿರುವ ಆರೋಪದ ಮೇಲೆ ಬಂಧಿಸಲಾಯಿತು.

ಸ್ವಂತ ಗಂಡನನ್ನು ಕೊಂದ ಬಳಿಕ ಹತ್ತಿರದವರನ್ನು ಕೆಳೆದುಕೊಂಡ ಮಕ್ಕಳಿಗೆ ಈಕೆ ಬರೆದಿದ್ದಳು ಒಂದು ಸುಂದರ ಪುಸ್ತಕ; ಇದೊಂದು ಅಪರೂಪದ ಕೊಲೆ ಕೇಸ್!
ಕೌರಿ ರಿಚಿನ್ಸ್, ಎರಿಕ್ ರಿಚಿನ್ಸ್
Follow us
ನಯನಾ ಎಸ್​ಪಿ
|

Updated on:May 27, 2023 | 10:59 AM

ಮಕ್ಕಳ ಪುಸ್ತಕ (Children Books) ಸಾಮಾನ್ಯವಾಗಿ ಮನಸ್ಸಿಗೆ ಮುದ ನೀಡುವ ಶೈಲಿಯಲ್ಲಿ ಬರಹಗಾರರು (Author) ಹೆಣೆದಿರುತ್ತಾರೆ. ಇದೆ ರೀತಿ ಮೂರೂ ಮಕ್ಕಳ ತಾಯಿಯಾದ ಕೌರಿ ರಿಚಿನ್ಸ್ (Kouri Richins) 2022 ರಲ್ಲಿ ತನ್ನ ಗಂಡನನ್ನು ಕಳೆದುಕೊಂಡ ನಂತರ ಮಕ್ಕಳು ಆ ಆಘಾತದಿಂದ ಹೊರ ಬರಲು ‘ಆರ್ ಯು ವಿಥ್ ಮೀ?’ ಎಂಬ ಪುಸ್ತಕ ಬಿಡುಗಡೆ ಮಾಡಿದರು. ಈ ಪುಸ್ತಕ ಬಿಡುಗಡೆಯಾದ ಕೇವಲ 2 ತಿಂಗಳ ನಂತರ ಆಘಾತಕಾರಿ ವಿಷಯ ಒಂದು ಬೆಳಕಿಗೆ ಬಂದಿದೆ. ಉತಾಹ್‌ನ ಕಮಾಸ್ ಎಂಬ ಸ್ಥಳದವರಾದ ಮಕ್ಕಳ ಲೇಖಕಿ ರಿಚಿನ್ಸ್ ಅವರನ್ನು ತಮ್ಮ ಗಂಡನ ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ. ಈ ವಿಷಯ ಬೆಳಕಿಗೆ ಬಂದ ಕೂಡಲೇ ಈ ಪುಸ್ತಕವನ್ನು ಕೊಂಡ ಅದೆಷ್ಟೋ ಜನ ಶಾಕ್ ಆಗಿದ್ದಾರೆ.

ಪ್ರಾಸಿಕ್ಯೂಟರ್‌ಗಳು ರಿಚಿನ್ಸ್ ವಿರುದ್ಧದ ಕೊಲೆ ಆರೋಪಗಳನ್ನು ಅನಾವರಣಗೊಳಿಸಿದರು, ಅವರು ತಮ್ಮ ಪತಿ ಎರಿಕ್ ರಿಚಿನ್ಸ್‌ಗೆ ಫೆಂಟನಿಲ್‌ನ ಮಾರಣಾಂತಿಕ ಡೋಸ್‌ ನೀಡುವ ಮೂಲಕ ಅವರನ್ನು ಕೊಲೆ ಮಾಡಿದ್ದಾರೆ ಎಂಬುದನ್ನು ತಿಳಿಸಿದರು. ಮಾರ್ಚ್ 2022 ರಲ್ಲಿ ಎರಿಕ್ ಅವರ ಅಕಾಲಿಕ ಮರಣದ ತನಿಖೆಗಳು ಅವರ ಸಾವು ಅನುಮಾನಾಸ್ಪದವಾಗಿದೆ ಎಂದು ಬಹಿರಂಗಪಡಿಸಿತು, ಅವರ ದೇಹದಲ್ಲಿದ್ದ ಫೆಂಟನಿಲ್ ಮಟ್ಟವು ಮಾರಣಾಂತಿಕ ಮಿತಿಗಿಂತ ಐದು ಪಟ್ಟು ಮೀರಿದೆ ಎಂಬುದು ತಿಳಿದು ಬಂದಿತ್ತು.

“ರಿಯಲ್ ಎಸ್ಟೇಟ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎರಿಕ್ ಒಂದು ಮನೆ ಮಾರಾಟ ಮಾಡಿದ ಖುಷಿಯಲ್ಲಿ ಗಂಡನಿಗೆ ವೋಡ್ಕಾ ಮತ್ತು ಸೋಡಾ ಮಿಕ್ಸ್ ಅನ್ನು ಕುಡಿಯಲು ಕೊಟ್ಟಿದ್ದ”, ಎಂದು ಕೌರಿ ಅಧಿಕಾರಿಗಳಿಗೆ ತಿಳಿಸಿದರು. ಅದರಲ್ಲಿ ಒಂದು ಭಾಗವನ್ನು ತಾನೇ ಸೇವಿಸಿರುವುದಾಗಿ ಹೇಳಿಕೊಂಡರು, ಉಳಿದ ಭಾಗವನ್ನು ಎರಿಕ್‌ಗೆ ನೀಡಿದ್ದರು. ಈ ಸಮಯದಲ್ಲಿ ಅವರ ಮಕ್ಕಳು ಮನೆಗೆ ಬಂದು, ವಾಪಾಸ್ ಆದ ಬಳಿಕ ಕೌರಿ ಹೋಗಿ ನೋಡಿದಾಗ ತನ್ನ ಪತಿ ಸ್ಪಂದಿಸದೆ ಇರುವುದನ್ನು ಕಂಡು, ಆತ ಸತ್ತಿರುವ ವಿಷಯ ತಿಳಿಯಿತಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಇದನ್ನೂ ಓದಿ: ಸ್ವಂತ ಪತಿಯನ್ನೇ ಕೊಂದರು ಈ ಪುಟ್ಟ ಹಳ್ಳಿಗೆ ಇವಳೇ ಹೀರೋ; ಈ ಕೇಸಿನ ವಿಶೇಷತೆ ತಿಳಿಯಿರಿ

ದಿ ಸಾಲ್ಟ್ ಲೇಕ್ ಟ್ರಿಬ್ಯೂನ್ ಪ್ರಕಾರ, ಸರ್ಚ್ ವಾರಂಟ್ ಅಫಿಡವಿಟ್ ಅನ್ನು ಉಲ್ಲೇಖಿಸಿ, ಎರಿಕ್ ಮರಣಹೊಂದಿದ ಮರುದಿನ, ಕೌರಿ ಮನೆ ಮುಚ್ಚುವ ಪ್ರಕ್ರಿಯೆಯನ್ನು ಏಕಾಂಗಿಯಾಗಿ ಪೂರ್ಣಗೊಳಿಸಿದರು. ನಂತರ ಸ್ನೇಹಿತರನ್ನು ಕರೆದು ಒಂದು ದೊಡ್ಡ ಮಟ್ಟದ ಪಾರ್ಟಿ ಮಾಡಿ ಮೋಜು ಮಾಡಿರುವುದು ಕಂಡುಬಂದಿದೆ.

ಕೌರಿಯವರ ಪುಸ್ತಕವನ್ನು ಓದಿದವರು ಈ ಆಘಾತಕಾರಿ ಘಟನೆ ಕೇಳಿ ತತ್ತರಿಸಿದ್ದಾರೆ, ಈಗ ಆಕೆಯ ವಿರುದ್ಧ ಹೊರಿಸಲಾದ ಅನಿರೀಕ್ಷಿತ ಮತ್ತು ಕಠೋರ ಆರೋಪಗಳೊಂದಿಗೆ ಸೆಣಸಾಡುತ್ತಿದ್ದಾರೆ. ಕಾನೂನು ಪ್ರಕ್ರಿಯೆಗಳು ತೆರೆದುಕೊಳ್ಳುತ್ತಿದ್ದಂತೆ, ಪ್ರೀತಿ ಮತ್ತು ನಷ್ಟದ ಹೃದಯವಿದ್ರಾವಕ ಕಥೆಯು ದುರಂತ ಮತ್ತು ದಿಗ್ಭ್ರಮೆಗೊಳಿಸುವ ತಿರುವನ್ನು ತೆಗೆದುಕೊಳ್ಳುತ್ತದೆ. ಒಂದೆಡೆ ಕೆಲವರು ಕೌರಿ ತನ್ನ ಗಂಡನನ್ನು ಯಾಕೆ ಕೊಂದಿರಬಹುದು ಎಂದು ಹುಡುಕುತ್ತಿದ್ದರೆ ಮತ್ತೊಂದೆಡೆ ಹಲವರು ಮಕ್ಕಳ ಪುಸ್ತಕದ ಲೇಖಕಿ ಕೊಲೆ ಮಾಡಲು ಸಾಧ್ಯವೇ ಎಂಬ ಆಳವಾದ ಅಪನಂಬಿಕೆಯ ನಡುವೆ ಸಾಂತ್ವನವನ್ನು ಹುಡುಕುತ್ತಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:57 am, Sat, 27 May 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್