Old Man’s Story: ಒಬ್ಬ ಮಗ ಐಎಎಸ್, ಇನ್ನೊಬ್ಬ ಬ್ಯುಸಿನೆಸ್; ವೃದ್ಧಾಶ್ರಮಕ್ಕೆ ಬಂದು ಕಣ್ಣೀರಿಟ್ಟ ವೃದ್ಧ; ಕರುಳುಹಿಂಡುತ್ತದೆ ಇವರ ಕಥೆ

Rich Person Walking Into Old Age Home: ವೃದ್ಧಾಶ್ರಮಕ್ಕೆ ಬ್ರ್ಯಾಂಡೆಡ್ ಬಟ್ಟೆ ಹಾಕಿಕೊಂಡಿದ್ದ ಒಬ್ಬ ವೃದ್ಧರು ಕಣ್ಣೀರಿಡುತ್ತಾ ನಿಂತಿದ್ದು ಎಲ್ಲರನ್ನೂ ದಿಗ್ಮೂಢರನ್ನಾಗಿಸಿತ್ತು. ನೋಡಲು ಶ್ರೀಮಂತರಾಗಿರುವ ಇವರಿಗೇನಪ್ಪಾ ಸಂಕಷ್ಟ ಎಂದು ಅನಿಸಿದವರಿಗೆ ಇವರ ಕರುಣಾಜನಕ ಕಥೆ ಕೇಳಿ ಕರುಳು ಹಿಂಡಿದಂತಾಗಿತ್ತು.

Old Man's Story: ಒಬ್ಬ ಮಗ ಐಎಎಸ್, ಇನ್ನೊಬ್ಬ ಬ್ಯುಸಿನೆಸ್; ವೃದ್ಧಾಶ್ರಮಕ್ಕೆ ಬಂದು ಕಣ್ಣೀರಿಟ್ಟ ವೃದ್ಧ; ಕರುಳುಹಿಂಡುತ್ತದೆ ಇವರ ಕಥೆ
ವೃದ್ಧ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 29, 2023 | 3:05 PM

ವೃದ್ಧಾಶ್ರಮಕ್ಕೆ (Old Age Home) ಎಂಥವರು ಹೋಗುತ್ತಾರೆ? ಎಲ್ಲವನ್ನೂ ಕಳೆದುಕೊಂಡು, ಮಕ್ಕಳ ಪ್ರೀತಿ ಪ್ರೇಮ ಇಲ್ಲದೇ ಅನಾಥವಾಗಿ ಜೀವನದ ಮೇಲೆ ಜಿಗುಪ್ಸೆ ಬಂದವರನ್ನು ವೃದ್ಧಾಶ್ರಮದಲ್ಲಿ ನೋಡಬಹುದು. ಸಾಧಾರಣ ಉಡುಗೆ ತೊಡುಗೆ, ನಗಲೋಬೇಡವೋ ಎನ್ನುವಷ್ಟು ಅಳುಕು ಭಾವ ಗುರುತಿಸಬಹುದು. ಇನ್ನೂ ಕೆಲವರು ಸೂಟು ಬೂಟು ಹಾಕಿಕೊಂಡವರು ಕಾಣಿಸಿದರೆ ಇವರು ವೃದ್ಧಾಶ್ರಮದಲ್ಲಿ ಬರ್ತ್​ಡೇ ಆಚರಿಸಲು ಬಂದವರೋ, ಅಥವಾ ದಾನ ಕೊಡಲು ಬಂದವರೋ ಆಗಿರುತ್ತಾರೆ. ಆದರೆ, ಉತ್ತರಪ್ರದೇಶದ ಕಾನಪುರ ದೇಹಾತ್ ಜಿಲ್ಲೆಯ ಸಿಕಂದರದ (Sikandra) ಒಂದು ವೃದ್ಧಾಶ್ರಮಕ್ಕೆ ಬ್ರ್ಯಾಂಡೆಡ್ ಬಟ್ಟೆ ಹಾಕಿಕೊಂಡಿದ್ದ ಒಬ್ಬ ವೃದ್ಧರು ಕಣ್ಣೀರಿಡುತ್ತಾ ನಿಂತಿದ್ದು ಎಲ್ಲರನ್ನೂ ದಿಗ್ಮೂಢರನ್ನಾಗಿಸಿತ್ತು. ನೋಡಲು ಶ್ರೀಮಂತರಾಗಿರುವ ಇವರಿಗೇನಪ್ಪಾ ಸಂಕಷ್ಟ ಎಂದು ಅನಿಸಿದವರಿಗೆ ಇವರ ಕರುಣಾಜನಕ ಕಥೆ ಕೇಳಿ ಕರುಳು ಹಿಂಡಿದಂತಾಗಿತ್ತು. ಅಷ್ಟಕ್ಕೂ ಇವರ ಜೀವನದಲ್ಲಿ ನಡೆದಿರುವ ಘಟನೆಗಳು ಬಹುತೇಕ ಎಲ್ಲಾ ಕುಟುಂಬಗಳಲ್ಲೂ ಇವತ್ತಿ ದಿನದಲ್ಲಿ ಕಾಣಿಸುವ ಸಮಸ್ಯೆಯ ಪ್ರತಿಬಿಂಬಿಗಳೇ.

ಮಕ್ಕಳಿಬ್ಬರು ಐಎಎಸ್ ಅಧಿಕಾರಿ, ಉದ್ಯಮಿ, ಹೆಂಡತಿ ಶಾಕಿಣಿ

ಸಿಕಂದ್ರದ ರಾಮಲಾಲ್ ವೃದ್ಧಾಶ್ರಮದಲ್ಲಿ ಖಾಯಂ ಇರಲು ಬಂದ ವ್ಯಕ್ತಿ 78 ವರ್ಷದ ನಿವೃತ್ತ ಸರ್ಕಾರಿ ಅಧಿಕಾರಿ. ಇವರ ಒಬ್ಬ ಮಗ ಐಎಎಸ್ ಅಧಿಕಾರಿಯಾದರೆ, ಇನ್ನೊಬ್ಬ ಮಗ ಉದ್ಯಮಿ. ಇವರ ಹೆಸರಲ್ಲಿ ಒಂದು ಬಂಗಲೆ ಇದೆ. ಒಳ್ಳೆಯ ಆಸ್ತಿ ಸಂಪಾದನೆ ಮಾಡಿದ್ದಾರೆ. ಸಾಕಷ್ಟು ಪಿಂಚಣಿ ಬರುತ್ತದೆ. ಇನ್ನೇನು ಬೇಕು ನಿವೃತ್ತಿ ಜೀವನಕ್ಕೆ?

ಇದನ್ನೂ ಓದಿSpending Hubby Money is Hobby​​: ಅಬ್ಬಾ ಇಂಥಾ ಹೆಂಡತಿಯಿದ್ದರೆ ಇಡೀ ಆಸ್ತಿ ಮಾರಬೇಕಾಗುತ್ತೆ ಅಷ್ಟೇಯಾ! ಒಂದೇ ದಿನದಲ್ಲಿ 73 ಲಕ್ಷ ರೂ ಶಾಪಿಂಗ್ ಮಾಡಿದ ಮಡದಿ!

ಎಲ್ಲವೂ ಇರುವ ತನಗೆ ಮನೆಯಲ್ಲಿ ಯಾರೂ ಬೆಲೆ ಕೊಡುತ್ತಿಲ್ಲ. ಅದಕ್ಕೆ ವೃದ್ಧಾಶ್ರಮಕ್ಕೆ ಬಂದೆ ಎಂದು ಇವರು ಹೇಳಿದಾಗ ಇದು ಎಲ್ಲರ ಮನೆಯ ದೋಸೆ ತೂತಾಗಿರುವಷ್ಟೇ ಸಹಜ ಎಂದು ಅಲ್ಲಿದ್ದವರಿಗೆ ಅನಿಸಿತ್ತು.

ಆದರೆ, ಮುಂದೆ ಹೇಳಿದ ಘಟನೆ ಮನಕಲುಕುವಂತಿತ್ತು. ಇವರ ಹಿರಿಯ ಮಗ ಐಎಎಸ್ ಅಧಿಕಾರಿಯಾಗಿದ್ದು, ಮನೆಗೆ ಬಂದಾಗೆಲ್ಲಾ ಅಪ್ಪನಿಗೆ ಮರ್ಯಾದೆ ಕೊಡುವುದಿಲ್ಲವಂತೆ. ಇನ್ನು ಕಿರಿಯ ಮಗ ಈ ವೃದ್ಧರ ಸಹವಾಸವೇ ಬೇಡ ಎಂದು ಕೈತೊಳೆದುಕೊಂಡು ಬೇರೆ ಮನೆಯಲ್ಲಿದ್ದಾನಂತೆ. ಆದರೆ, ಪತ್ನಿ? ಗಂಡ ಹೆಂಡತಿ ಇಳಿವಯಸ್ಸಿನಲ್ಲಿ ಹೆಚ್ಚ ಸಖ ಸಖಿಗಳಾಗಿರುತ್ತಾರಂತೆ. ಆದರೆ, ಈ ವೃದ್ಧರ ಬಾಳಸಂಗಾತಿಯ ಸ್ವಭಾವವೇ ಬೇರೆ. ಇವತ್ತಿನ ಕಾಲೇಜು ಯುವತಿಯರಂತೆ ಅವರು ಸದಾ ಫೋನ್​ನಲ್ಲೇ ಕಾಲಕ್ಷೇಪ ಮಾಡುತ್ತಾ, ಸದಾ ಕಾಲ ಜಗಳವಾಡುತ್ತಲೇ ಇರುತ್ತಾರಂತೆ. ಹಾಗಂತ ಹೇಳಿಕೊಂಡು ವೃದ್ಧಾಶ್ರಮದಲ್ಲಿ ಆ ವ್ಯಕ್ತಿ ಕಣ್ಣೀರಿಟ್ಟರು. ತನಗೆ ಕಿಂಚಿತ್ತೂ ಮರ್ಯಾದೆ ಇಲ್ಲದ ಜಾಗದಲ್ಲಿ ತಾನಿರಲಾರೆ, ಈ ಆಶ್ರಮದಲ್ಲೇ ಕೊನೆಯ ಉಸಿರಿನವರೆಗೂ ಇರುತ್ತೇನೆ ಎಂದು ಆ ಹಿರಿ ಜೀವ ಹೇಳಿದಾಗ ಯಾರಿಗಾದರೂ ಕರುಳು ಚುರುಕ್ ಆಗದೇ ಇದ್ದೀತಾ, ಕಣ್ಣಂಚಲಿ ನೀರು ಜಿನುಗದೇ ಇದ್ದೀತಾ..!

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ