Viral Video: ಈ ಅವಳಿ ಸಹೋದರಿಯರ ಸುಮಧುರ ಕಂಠದಲ್ಲಿ ಮೂಡಿ ಬಂದ ಮ್ಯಾಶಪ್ ಗೀತೆ

ಅಮೇರಿಕಾದ ಅವಳಿ ಸಹೋದರಿಯರಾದ ಕಿರಣ್ ಮತ್ತು ನಿವಿ ಟ್ರೆಂಡಿಂಗ್ ‘ಪೀಪಲ್ X ನೈನೋವಾಲೆ ನೆ’ ಮ್ಯಾಶಪ್ ಗೀತೆಯನ್ನು ಹಾಡಿದ್ದು, ಇವರ ಈ ರೀಲ್ಸ್ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿದೆ.

Viral Video: ಈ ಅವಳಿ ಸಹೋದರಿಯರ ಸುಮಧುರ ಕಂಠದಲ್ಲಿ ಮೂಡಿ ಬಂದ ಮ್ಯಾಶಪ್ ಗೀತೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: May 29, 2023 | 6:00 PM

ಪಾಶ್ಚಿಮಾತ್ಯ ಹಾಡುಗಳು ಹಾಗೂ ಭಾರತೀಯ ಸಿನಿಮಾ ಗೀತೆಗಳ ಮಿಶ್ರಣದ ಮ್ಯಾಶಪ್ ಗೀತೆಗಳು ಕೇಳಲು ಹೊಸತನದ ಅನುಭವವನ್ನು ನೀಡುತ್ತದೆ. ಮ್ಯಾಶಪ್ ಎನ್ನುವುದು ಒಂದು ಹೊಸ ಹಾಡನ್ನು ರಚಿಸಲು ಎರಡು ಅಥವಾ ಅದಕ್ಕಿಂತ ಹೆಚ್ಚು ವಿಭಿನ್ನ ಹಾಡುಗಳ ಅಂಶವನ್ನು ಮಿಶ್ರಣ ಮಾಡುವ ಮೂಲಕ ರಚಿಸಲಾದ ಸಂಗೀತದ ಟ್ರ್ಯಾಕ್ ಆಗಿದೆ. ಈ ಮ್ಯಾಶಪ್ ಗೀತೆಗಳು ಎಂದಿಗೂ ಮಾಸದ ಸಂಗೀತದ ಒಂದು ಟ್ರೆಂಡ್ ಅಂತಾನೇ ಹೇಳಬಹುದು. ಪ್ರಸ್ತುತ ಪೀಪಲ್ (ಐ ವಿಲ್ ಬೀನ್ ಡ್ರಿಂಕಿಗ್ ಮೋರ್ ಆಲ್ಕೋಹಾಲ್) ಮತ್ತು ಹಿಂದಿಯ ನೈನೋವಾ ನೇ ಎಂಬ ಈ ಎರಡು ಹಾಡುಗಳ ಸಂಯೋಜನೆಯ ಮ್ಯಾಶಪ್ ಗೀತೆ ಭಾರಿ ಸದ್ದು ಮಾಡುತ್ತಿದ್ದು, ಮೂಲತಃ ಇದನ್ನು ಸಂಗೀತ ಸಂಯೋಜಕ ಯಶ್ ರಾಜ್ ಮುಖಾಟೆ ಎಂಬವರು ರಚಿಸಿದ್ದಾರೆ. ಇನ್ಸ್ಟಾಗ್ರಾಮ್ ರೀಲ್ಸ್, ಯೂಟ್ಯೂಬ್ ಎಲ್ಲಾ ಕಡೆ ಈ ವೈರಲ್ ಮ್ಯಾಶಪ್ ಗೀತೆಯದ್ದೇ ಹವಾ. ಇದೀಗ ಈ ಮ್ಯಾಶಪ್ ಗೀತೆಯನ್ನು ಅಮೇರಿಕಾದ ಅವಳಿ ಸಹೋದರಿಯರಾದ ಕಿರಣ್ ಮತ್ತು ನಿವಿ ಎಂಬುವವರು ಹಾಡಿದ್ದು, ಅದನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಹೋದರಿಯರ ಸುಮಧುರ ಕಂಠಕ್ಕೆ ನಟ್ಟಿಗರು ಮಂತ್ರಮುಗ್ಧರಾಗಿದ್ದಾರೆ.

ಈ ವೀಡಿಯೋವನ್ನು ಕಿರಣ್ -ನಿವಿ (@kiranandnivi) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಕಿರಣ್ ಮತ್ತು ನಿವಿ ಹಾಡುವುದನ್ನು ಹಾಗೂ ಸಂಗೀತಗಾರ ಕಮಲಕಿರಣ್ ವಿಂಜಮುರಿ ಅವರು ಪಿಟೀಲು ನುಡಿಸುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು.

&

View this post on Instagram

A post shared by Kiran + Nivi (@kiranandnivi)

ಇದನ್ನೂ ಓದಿ: Viral News: ಪತಿಯ ಹೆಸರನ್ನೇ ಹಣೆಯ ಮೇಲೆ ಟ್ಯಾಟೂ ಹಾಕಿಸಿಕೊಂಡ ಮಹಿಳೆ; ವಿಡಿಯೋ ವೈರಲ್​​

ವೀಡಿಯೋವನ್ನು ಮೇ 19 ರಂದು ಪೋಸ್ಟ್ ಮಾಡಲಾಗಿದ್ದು, ಈವರೆಗೆ 1.7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 212 K ಲೈಕ್ಸ್ಗಳನ್ನು ಹಾಗೂ ಸಾವಿರಾರು ಕಮೆಂಟ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ತುಂಬಾ ಚೆನ್ನಾಗಿದೆ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಈ ಹಾಡು ನಿಜವಾಗಿಯೂ ತುಂಬಾ ಅದ್ಭುತವಾಗಿದೆ’ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಈ ಹಾಡನ್ನು ಪದೇ ಪದೇ ಕೇಳಬೇಕೆಂದೆನಿಸುತ್ತದೆ’ ಎಂದು ಕಮೆಂಟ್ನಲ್ಲಿ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ