AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯ ದಿನವೇ ವಧು ನಾಪತ್ತೆ; ಮಂಟಪದಲ್ಲೇ 13 ದಿನ ಕಾದು ಕುಳಿತ ವರ

ಮದುವೆಯ ದಿನ ವಧು ನಾಪತ್ತೆಯಾಗಿದ್ದಾಳೆ. ಆಕೆಯ ಬರುವಿಕೆಗಾಗಿ ವರ ಮಂಟಪದಲ್ಲೇ 13 ದಿನಗಳ ವರೆಗೆ ಕಾದು ಕುಳಿತ್ತಿದ್ದಾನೆ. ಮುಂದೇನಾಯಿತು? ಎಂಬುದೇ ಇಂಟರೆಸ್ಟಿಂಗ್​​​ ಸ್ಟೋರಿ.

ಮದುವೆಯ ದಿನವೇ ವಧು ನಾಪತ್ತೆ; ಮಂಟಪದಲ್ಲೇ 13 ದಿನ ಕಾದು ಕುಳಿತ ವರ
ಮದುವೆಯ ದಿನವೇ ವಧು ನಾಪತ್ತೆ
ಅಕ್ಷತಾ ವರ್ಕಾಡಿ
|

Updated on:May 30, 2023 | 10:57 AM

Share

ರಾಜಸ್ಥಾನ: ಸೈನಾ ಗ್ರಾಮದ ಮದುವೆಯ ವಿಚಾರವೊಂದು ಎಲ್ಲೆಡೆ ಭಾರೀ ವೈರಲ್​​​ ಆಗಿದೆ. ವರ ತನ್ನ ವಧುವಿನ ಬರುವಿಕೆಗಾಗಿ 13 ದಿನಗಳ ವರೆಗೆ ಮಂಟಪದಲ್ಲೇ ಕಾದು ಕುಳಿತ್ತಿದ್ದಾನೆ. ಮೇ 3ರಂದು ನಡೆಯಬೇಕಿದ್ದ ಮದುವೆ ಕಡೆಗೂ ಮೇ 15ರಂದು ನಡೆದಿದೆ. ಅಷ್ಟಕ್ಕೂ ಈ ಮದುವೆ ಇಷ್ಟೆಲ್ಲಾ ಗೊಂದಲವನ್ನು ಸೃಷ್ಟಿಸಲು ಕಾರಣವೇನು ಗೊತ್ತಾ? ಇಲ್ಲಿದೆ ನೋಡಿ ವಿವರ.

ಏನಿದು ಘಟನೆ?

ಮೇ 03ರಂದು ಗುರು ಹಿರಿಯರ ಸಮ್ಮುಖದಲ್ಲಿ ವಿವಾಹ ನಡೆಸುವುದಾಗಿ ನಿರ್ಧರಿಸಲಾಗಿತ್ತು. ಆದರಂತೆ ಆ ದಿನವೇ ವಧು ಹಾಗು ವರ ಅವರ ಕುಟುಂಬದವರು ಮದುವೆ ಮಂಟಪಕ್ಕೆ ತಲುಪಿದ್ದಾರೆ. ಮದುವೆ ಶಾಸ್ತ್ರಗಳು ನಡೆಯುತ್ತಿದ್ದಂತೆ ವಧು ಹೊಟ್ಟೆ ನೋವು, ವಾಕರಿಕೆ ಬರುವುದಾಗಿ ವಾಶ್​​​ ರೂಮಿಗೆ ಹೋಗಿದ್ದಾಳೆ. ಆದರೆ ಆದರೆ ಎಷ್ಟೇ ಹೊತ್ತಾದರೂ ವಧುವಿನ ಪತ್ತೆಯೇ ಇಲ್ಲ. ಅನುಮಾನಗೊಂಡು ಆಕೆಯ ಪೋಷಕರು ಹುಡುಕಾಡ ತೊಡಗಿದ್ದಾರೆ. ಆದರೆ ಕೆಲವೇ ಹೊತ್ತಿಗೆ ಆಕೆ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿರುವುದಾಗಿ ತಿಳಿದುಬಂದಿದೆ. ಆದರೆ ವರ ಆಕೆಯನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದು 13 ದಿನಗಳ ವರೆಗೆ ಮದುವೆ ಮಂಟಪದಲ್ಲೇ ಕುಳಿತ್ತಿದ್ದಾನೆ.

ಇದನ್ನೂ ಓದಿ: ಈ ಪ್ರೀತಿಯ ವರ್ಣಿಸಲು ಪದಗಳಿಲ್ಲ, ಪತ್ನಿ ಇಲ್ಲದಿದ್ದರೂ ಸದಾ ನೆನಪಿಸಿಕೊಳ್ಳುವ ಹೃದಯ, ಮೃತ ಪತ್ನಿಯ ಫೋಟೋಗೆ ಜ್ಯೂಸ್​ ಕುಡಿಸುತ್ತಿರುವ ವೃದ್ಧ

ವಧುವನ್ನು ಮತ್ತೇ ಕರೆತಂದು ಮದುವೆ;

ವರ ಆಕೆಯನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದು ಕುಳಿತಿರುವುದನ್ನು ಕಂಡು ವಧುವಿನ ಕುಟುಂಬಸ್ಥರು ಆಕೆಗಾಗಿ ಹುಡುಕಾಟ ನಡೆಸಿದ್ದಾರೆ. ಜೊತೆಗೆ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪರಿಣಾಮವಾಗಿ, ಪೋಲೀಸರ ಮಧ್ಯಪ್ರವೇಶದ ನಂತರ, ಮೇ 15 ರಂದು ಮಹಿಳೆಯನ್ನು ಪತ್ತೆಹಚ್ಚಲಾಗಿದ್ದು, ಆಕೆಯ ಮನೆಗೆ ಒಪ್ಪಿಸಲಾಗಿದೆ. ಬಳಿಕ ಮಂಟಪದಲ್ಲೇ ಕಾದು ಕುಳಿತಿದ್ದ ವರನೊಂದಿಗೆ ಎಲ್ಲಾ ವಿಧಿವಿಧಾನಗಳೊಂದಿಗೆ ವಿವಾಹ ನೆರವೇರಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Published On - 10:57 am, Tue, 30 May 23

ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ