Viral: ಅತ್ತೆ ಸೊಸೆ ಒಂದೇ ಸೀರೆ; ಇದು ನಿಜಕ್ಕೂ ಆರ್ಥಿಕ ಹಿಂಜರಿಕೆ ಎನ್ನುತ್ತಿರುವ ನೆಟ್ಟಿಗರು

Aishwarya Rai : 'ಇದು ರಿಸೆಷ್ಷನ್​ ಅಲ್ಲ ಅಫೆಕ್ಷನ್​,' 'ನಾನು ಬಟ್ಟೆಗಳನ್ನೂ ರೀಸೈಕಲ್ ಮಾಡಿ ಪರಿಸರಹಾನಿ ತಪ್ಪಿಸುತ್ತೇನೆ,‘ ಪರಸ್ಪರರ ಸೀರೆಗಳನ್ನು ಉಟ್ಟುಕೊಳ್ಳುವುದು ನಮ್ಮ ಸಂಸ್ಕೃತಿ, ಗೌರವ ಮತ್ತು ಹೆಮ್ಮೆಯ ಪ್ರತೀಕ,' ನೀವೇನಂತೀರಿ?

Viral: ಅತ್ತೆ ಸೊಸೆ ಒಂದೇ ಸೀರೆ; ಇದು ನಿಜಕ್ಕೂ ಆರ್ಥಿಕ ಹಿಂಜರಿಕೆ ಎನ್ನುತ್ತಿರುವ ನೆಟ್ಟಿಗರು
ಸೊಸೆ ಐಶ್ವರ್ಯಾ ರೈ ಮತ್ತು ಅತ್ತೆ ಜಯಾ ಬಚನ್​ ಒಂದೇ ಸೀರೆ ಉಟ್ಟಿರುವುದು
Follow us
ಶ್ರೀದೇವಿ ಕಳಸದ
|

Updated on:May 30, 2023 | 1:39 PM

Saree : ಸಂಬಂಧಿಕರ ಮನೆಗೆ ಉಳಿದುಕೊಳ್ಳಲು ಹೋದಾಗ ಅಥವಾ ಶುಭಸಮಾರಂಭಗಳಲ್ಲಿ ಅಜ್ಜಿಯ, ಅತ್ತೆಯ, ಅಮ್ಮನ, ನಾದಿನಿಯ, ಓರಗಿತ್ತಿಯ, ಅಕ್ಕನ, ತಂಗಿಯ, ಅತ್ತಿಗೆಯ ಸೀರೆ, ಆಭರಣಗಳನ್ನು ಧರಿಸುವುದು ಒಂದು ಆಪ್ತ ಅನುಭವವನ್ನು ಕೊಡುತ್ತದೆ ಎನ್ನುವ ವಿಷಯ ನಿಮಗೀಗಾಗಲೇ ತಿಳಿದಿದೆ ಮತ್ತು ಅನುಭವಕ್ಕೂ ಬಂದಿರುತ್ತದೆ. ಹಾಗೆಯೇ ಗಂಡಸರಿಗೂ ಇದು ಅನ್ವಯಿಸುತ್ತದೆ; ಅಜ್ಜನ ಅಪ್ಪನ, ಅಣ್ಣನ… ಇತ್ಯಾದಿ. ಅಷ್ಟೇ  ಯಾಕೆ ಸ್ನೇಹಿತರು ಪ್ರೀತಿಪಾತ್ರರೂ ಪರಸ್ಪರ ಈ ಪಟ್ಟಿಗೆ ಸೇರುತ್ತಾರೆ. ಅಂತೆಯೇ ಆಪ್ತತೆ ಎನ್ನುವುದು ರಕ್ತಸಂಬಂಧಗಳಿಗಷ್ಟೇ ಮೀಸಲಾಗಿಲ್ಲ. ಆದರೆ ಬಟ್ಟೆ, ಒಡವೆ ಅಥವಾ ವಸ್ತುಗಳು ಎಷ್ಟೋ ಸಲ ಆಪ್ತತೆ, ಪ್ರೀತಿ, ಗೌರವದ ದ್ಯೋತಕವಾಗಿ  ಭಾಸವಾಗುತ್ತವೆ.

ನೆಟ್ಟಿಗರು ಈ ಫೋಟೋ ನೋಡಿ ಬಗೆಬಗೆಯಲ್ಲಿ ಪ್ರತಿಕ್ರಿಯಿಸಿದ್ಧಾರೆ. ಮ್ಯಾಚಿಂಗ್​ ಬ್ಲೌಸ್​ ಪೀಸಿನದೇ ಸಮಸ್ಯೆಯಾಗಿರಬೇಕು, ಒಂದೇ ಥರದ ಬಟ್ಟೆ ಸಿಗುತ್ತಲೇ ಇಲ್ಲ. ಅವರಿಬ್ಬರೂ ಅತ್ಯಂತ ಶ್ರೀಮಂತ ಸೆಲೆಬ್ರಿಟಿಗಳಾಗಿರುವುದೇ ಸಮಸ್ಯೆ. ನಿಜಕ್ಕೂ ಇದು ಚೆನ್ನಾಗಿದೆ. ನಮ್ಮ ಅತ್ತೆ, ನಾದಿನಿಯರಿಂದ ಸೀರೆಗಳನ್ನಿಸಿದುಕೊಂಡು ಉಟ್ಟುಕೊಳ್ಳುತ್ತೇವೆ, ಇದರಲ್ಲಿ ತಪ್ಪೇನಿದೆ? ಇದು ಪರಸ್ಪರ ಪ್ರೀತಿಯನ್ನು ತೋರಿಸುತ್ತಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral: ತನ್ನ ಮೊಬೈಲ್​ ​ಹುಡುಕಲು 21 ಲಕ್ಷ ಲೀಟರ್​ ನೀರುಪೋಲು ಮಾಡಿದ ಛತ್ತೀಸ್​ಗಢ ಅಧಿಕಾರಿ ಅಮಾನತು

ಬಟ್ಟೆಗಳನ್ನೂ ಹೀಗೆ ರೀಸೈಕಲ್ ಮಾಡಿ, ನಾನಂತೂ ಮಾಡುತ್ತೇನೆ. ಈ ಮೂಲಕ ಪರಿಸರಕ್ಕೆ ಉಂಟಾಗುವ ಹಾನಿಯನ್ನು ತಪ್ಪಿಸೋಣ. ಇದು ರಿಸೆಷ್ಷನ್​ ಅಲ್ಲ, ಅಫೆಕ್ಷನ್​. ಇದು ಭಾರತೀಯ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಲಕ್ಷಾಂತರ ರೂಪಾಯಿ ಬೆಲೆಬಾಳುವ ಸೀರೆ ಉಡಲು ಇವರು ಶಕ್ತರಾಗಿದ್ಧಾರಾದರೂ ಪರಸ್ಪರರ ಸೀರೆಗಳನ್ನು ಉಟ್ಟುಕೊಳ್ಳುತ್ತಾರೆಂದರೆ ಇದು ಇವರಿಬ್ಬರ ನಡುವಿನ ಬಾಂಧವ್ಯವನ್ನು ಸೂಚಿಸುತ್ತದೆ. ಇದು ಒಳ್ಳೆಯ ಆಲೋಚನೆ. ನಾವೂ ಕೂಡ ಹೀಗೆ ಮಾಡುತ್ತೇವೆ.

ಇದನ್ನೂ ಓದಿ : Viral Video: ಕ್ಯಾನ್ಸರ್​ನಿಂದ ಬಳಲುತ್ತಿರುವ ಸ್ನೇಹಿತೆಗೆ ತಲೆ ಬೋಳಿಸಿಕೊಂಡು ಸಾಥ್ ನೀಡಿದ ಸ್ನೇಹಿತರು

ನಾನು ಭಾರತೀಯ ಸಿನೆಮಾ ಮತ್ತು ನಾಟಕಗಳಲ್ಲಿ ನೋಡಿದಂತೆ, ಅತ್ತೆ ತನ್ನ ಬಟ್ಟೆ ಅಥವಾ ಆಭರಣಗಳಲ್ಲಿ ಒಂದನ್ನು ಸೊಸೆಗೆ ಉಡುಗೊರೆಯಾಗಿ ನೀಡಿ ಅವಳ ಬಗ್ಗೆ ತನ್ನ ಮೆಚ್ಚುಗೆ ಮತ್ತು ಪ್ರೀತಿಯನ್ನು ಸೂಚಿಸುತ್ತಾಳೆ. ಸೊಸೆ ಅವುಗಳನ್ನು ಹೆಮ್ಮೆಯಿಂದ ಧರಿಸುತ್ತಾಳೆ. ಇದು ರಿಸೆಷ್ಷನ್​ ಅಲ್ಲ, ರೆಸ್ಪೆಕ್ಟ್​. ಅತ್ತೆಯ ಅಮ್ಮನ ಸೀರೆಯನ್ನು ಉಡುವುದು ಪ್ರೀತಿ ಮತ್ತು ಗೌರವದಿಂದ… ಇಲ್ಲಿರುವ ಸುಮಾರು 770ಕ್ಕೂ ಹೆಚ್ಚು ಪ್ರತಿಕ್ರಿಯೆಗಳೇ ಸಾಕಷ್ಟು ಆಸಕ್ತಿಕರವಾಗಿ ಕೂಡಿವೆ.

ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:38 pm, Tue, 30 May 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ