Spending Hubby Money is Hobby​​: ಅಬ್ಬಾ ಇಂಥಾ ಹೆಂಡತಿಯಿದ್ದರೆ ಇಡೀ ಆಸ್ತಿ ಮಾರಬೇಕಾಗುತ್ತೆ ಅಷ್ಟೇಯಾ! ಒಂದೇ ದಿನದಲ್ಲಿ 73 ಲಕ್ಷ ರೂ ಶಾಪಿಂಗ್ ಮಾಡಿದ ಮಡದಿ!

‘ನನ್ನ ಪತಿಯ ಮನಸ್ಥಿತಿಗೆ ಅನುಗುಣವಾಗಿ ನಾನು ದಿನಕ್ಕೆ 73 ಲಕ್ಷ ರೂ. ವರೆಗೆ ಶಾಪಿಂಗ್ ಮಾಡುತ್ತೇವೆ ಎಂದ ದುಬೈನ ಸಾದಿಯಾ

Spending Hubby Money is Hobby​​: ಅಬ್ಬಾ ಇಂಥಾ ಹೆಂಡತಿಯಿದ್ದರೆ ಇಡೀ ಆಸ್ತಿ ಮಾರಬೇಕಾಗುತ್ತೆ ಅಷ್ಟೇಯಾ! ಒಂದೇ ದಿನದಲ್ಲಿ 73 ಲಕ್ಷ  ರೂ ಶಾಪಿಂಗ್ ಮಾಡಿದ ಮಡದಿ!
ಒಂದೇ ದಿನದಲ್ಲಿ 73 ಲಕ್ಷ ರೂ ಶಾಪಿಂಗ್ ಮಾಡಿದ ಮಡದಿ!
Follow us
ಸಾಧು ಶ್ರೀನಾಥ್​
|

Updated on:May 29, 2023 | 2:14 PM

‘ಹೆಂಡತಿ ಜೊತೆ ಶಾಪಿಂಗ್ ಹೋಗುವುದಕ್ಕಿಂತ ಬುದ್ದಿಹೀನ ಕೆಲಸ ಮತ್ತೊಂದಿಲ್ಲ’.. ಇದು ಅನೇಕ ಗಂಡಂದಿರ ಸಾಮಾನ್ಯ ಮಾತು. ಏಕೆಂದರೆ ಆ ಸಮಯದಲ್ಲಿ ಹಣವು ನೀರಿನಂತೆ ಖರ್ಚಾಗುತ್ತದೆ. ಸಾಮಾನ್ಯವಾಗಿ ಮಹಿಳೆಯರು ಶಾಪಿಂಗ್ ಮಾಡಲು ಇಷ್ಟಪಡುತ್ತಾರೆ. ಕಂಡದ್ದನ್ನೆಲ್ಲ ಕೊಂಡುಕೊಳ್ಳುತ್ತಾರೆ. ಅದಕ್ಕೇ ಗಂಡಂದಿರು ಹೆಂಡತಿಯ ಜೊತೆ ಶಾಪಿಂಗ್ ಮಾಡಲು ಹೆದರುತ್ತಾರೆ! ಆದರೆ ಇಲ್ಲಿ ನಾವು ಒಬ್ಬ ಮಹಿಳೆಯ ಶಾಪಿಂಗ್ ಬಗ್ಗೆ ಹೇಳುತ್ತೇವೆ ಕೇಳಿ. ಆಕೆ ದಿನಕ್ಕೆ ಎಷ್ಟು ಶಾಪಿಂಗ್ ಮಾಡಿದ್ದಾಳೆ ಅಂತ ಗೊತ್ತಾದ್ರೆ.. ನೀವು ಶಾಕ್ ಆಗೋದು ಗ್ಯಾರಂಟಿ.

ದುಬೈನ ಸಾದಿಯಾ ಎಂಬುವವರು, ಸೌದಿ ಅರೇಬಿಯಾದ ಜಮಾಲ್ ಎಂಬ ವ್ಯಕ್ತಿಯನ್ನು ವಿವಾಹವಾದರು. ಅವರಿಬ್ಬರೂ ದುಬೈ ಯೂನಿವರ್ಸಿಟಿಯಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು. ನಂತರ ಅದು ಸ್ವಲ್ಪ ಪ್ರೀತಿಗೆ ತಿರುಗಿತು. ಎರಡು ವರ್ಷಗಳ ನಂತರ, ಇಬ್ಬರೂ ಮೂರುಗಂಟಿನ ಬಂಧದಲ್ಲಿ ಬಿಗಿಯಾದರು. ಜಮಾಲ್ ಬಹಳ ಶ್ರೀಮಂತ ವ್ಯಕ್ತಿ. ಹಾಗಾಗಿ, ಮದುವೆಯ ನಂತರ ಸಾದಿಯಾ ಬಯಸಿದ್ದನ್ನೆಲ್ಲ ಪಡೆಯುತ್ತಾಳೆ. ತಮ್ಮ ಐಷಾರಾಮಿ ಜೀವನವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ನೆಟಿಜನ್‌ ಫ್ರೆಂಡ್ಸ್​​ ಜೊತೆ ಹಂಚಿಕೊಂಡಿದ್ದಾರೆ.

‘‘ನನ್ನ ಪತಿಯ ಮನಸ್ಥಿತಿಗೆ ಅನುಗುಣವಾಗಿ ನಾನು ದಿನಕ್ಕೆ 73 ಲಕ್ಷ ರೂ. ವರೆಗೆ ಶಾಪಿಂಗ್ ಮಾಡುತ್ತೇವೆ. ನಮ್ಮಿಬ್ಬರ ನೆಚ್ಚಿನ ತಾಣ ಮಾಲ್ಡೀವ್ಸ್. ನಾವು ಲಂಡನ್‌ನಲ್ಲಿದ್ದರೆ, ನಾವು ಆಗಾಗ್ಗೆ ಅಲ್ಲಿಗೆ ಹೋಗುತ್ತೇವೆ. ಇದೀಗಗತಾನೆ ಸಿಷೆಲ್ಸ್ ಪ್ರವಾಸದಿಂದ ಹಿಂತಿರುಗಿದ್ದೆ. ಮುಂದಿನ ಪ್ರವಾಸ ಜಪಾನ್. ನನ್ನ ಪತಿ ನನಗೆ ಪ್ರತಿದಿನ ಕಾರ್ಡ್‌ಗಳ ಉಡುಗೊರೆಯನ್ನು ತರುತ್ತಾನೆ. ಅವರು ಇತ್ತೀಚೆಗೆ ಎರಡು ದುಬಾರಿ ಕಾರುಗಳನ್ನು ಖರೀದಿಸಿದ್ದಾರೆ. ಹೊರಗಡೆ ರೆಸ್ಟೋರೆಂಟ್ ಗೆ ಹೋದರೆ.. ರೂ. 1.10 ಲಕ್ಷ ಖರ್ಚಾಗುತ್ತದೆ’ ಎಂದು ಸಾದಿಯಾ ತನ್ನ ಜೀವನದ ಬಗ್ಗೆ ಹೇಳಿಕೊಂಡಿದ್ದಾರೆ. ಕೊನೆಗೆ ‘ನಾನು ಶ್ರೀಮಂತ ದುಬೈ ಗೃಹಿಣಿ, ಗಂಡನ ಸಂಪಾದನೆ ಖರ್ಚು ಮಾಡುವುದು ನನ್ನ ಹವ್ಯಾಸ’ ಎಂದು ಬರೆದುಕೊಂಡಿದ್ದಾಳೆ. ಈ ನಡುವೆ ನೆಟ್ಟಿಗರು ತಮ್ಮದೇ ಶೈಲಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:12 pm, Mon, 29 May 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ