Viral Story: ಪ್ರೀತಿಗಾಗಿ 60ನೇ ವಯಸ್ಸಿನಲ್ಲಿ ಮೌಂಟ್ ಎವರೆಸ್ಟ್ ಏರಿದ ಮೊದಲ ಭಾರತೀಯ ವ್ಯಕ್ತಿ
60 ವರ್ಷದ ಶರದ್ ಕುಲಕರ್ಣಿ ಅವರು ತನ್ನ ಪತ್ನಿಯ ಗೌರವಾರ್ಥವಾಗಿ ಅವರು ವಿಶ್ವದ ಅತಿ ಎತ್ತರದ ಪರ್ವತವಾದ ಮೌಂಟ್ ಎವರೆಸ್ಟ್ನ್ನು ಏರಿದ್ದಾರೆ.
ಪ್ರೀತಿಗಾಗಿ ಅನೇಕರು ಈ ಜಗತ್ತಿನಲ್ಲಿ ಏನೆಲ್ಲಾ ಮಾಡಿಲ್ಲ ಹೇಳಿ, ಹೌದು ಪ್ರೀತಿ ಸಂಕೇತವಾಗಿ ಅನೇಕ ದೇವಾಲಯಗಳನ್ನು ಕಟ್ಟಿದ ಉದಾಹರಣೆಯು ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಷಹಜಹಾನ್ ತನ್ನ ಪ್ರೀತಿಯ ಪತ್ನಿ ನೂರ್ಜಹಾನ್ ಗೌರವಾರ್ಥವಾಗಿ ತಾಜ್ ಮಹಲ್ನ್ನು ನಿರ್ಮಿಸಿದ್ದಾರೆ. ಇದು ಆನೇಕರ ಪ್ರೀತಿಗೆ ಸ್ಫೂರ್ತಿಯಾಗಿದೆ. ಇದೀಗ ಇಲ್ಲೊಂದು ಇಂತಹದೇ ಒಂದು ಪ್ರೀತಿಗೆ ಸಾಕ್ಷಿಯಾಗಿದೆ. 60 ವರ್ಷದ ಶರದ್ ಕುಲಕರ್ಣಿ ಅವರು ತನ್ನ ಪತ್ನಿಗಾಗಿ ಮೊಘಲ್ ಚಕ್ರವರ್ತಿಯಂತೆ ಸ್ಮಾರಕವನ್ನು ನಿರ್ಮಿಸಲಿಲ್ಲ, ಆದರೆ ಆಕೆಯ ಗೌರವಾರ್ಥವಾಗಿ ಅವರು ವಿಶ್ವದ ಅತಿ ಎತ್ತರದ ಪರ್ವತವಾದ ಮೌಂಟ್ ಎವರೆಸ್ಟ್ನ್ನು ಏರಿದ್ದಾರೆ. ಅವರ ಪತ್ನಿ ತೀರಿಕೊಂಡ ನಂತರ ಅವರು ವಿಶ್ವದ ಅತಿ ಎತ್ತರದ ಶಿಖರವನ್ನು ಏರಿದ್ದಾರೆ. ಈ ವಯಸ್ಸಿನಲ್ಲಿ ಮೌಂಟ್ ಎವರೆಸ್ಟ್ ಅನ್ನು ಏರಿದ ಭಾರತದ ಮೊದಲ ಪರ್ವತಾರೋಹಿ ಎಂಬ ಪ್ರಶಂಸೆಯನ್ನು ಕೂಡ ಪಡೆದುಕೊಂಡಿದ್ದಾರೆ.
ಕುಲಕರ್ಣಿ ದಂಪತಿಗಳು ತಮ್ಮ ಹುಟ್ಟೂರಾದ ಮಹಾರಾಷ್ಟ್ರದ ಬೀಡ್ನ್ನು ತೊರೆದು ಠಾಣೆಯಲ್ಲಿ ನೆಲೆಸಿದರು. ಶರದ್ ದಿನಕರ್ ಕುಲಕರ್ಣಿ ಮತ್ತು ಅವರ ಪತ್ನಿ ಅಂಜಲಿ ಅವರು ವಿಶ್ವದ ಏಳು ಅತಿ ಎತ್ತರದ ಶಿಖರಗಳನ್ನು ಏರುವ ನಿರ್ಧಾರವನ್ನು ಮಾಡಿಕೊಂಡಿದ್ದರು. ಇದು ಶರದ್ ದಿನಕರ್ ಕುಲಕರ್ಣಿ ಅವರ ಹೆಂಡತಿಯ ಆಸೆಯು ಕೂಡ ಆಗಿತ್ತು. ತಮ್ಮ ಮಡದಿಯ ಆಸೆಯಂತೆ ಮೌಂಟ್ ಎವರೆಸ್ಟ್ ಹತ್ತಿದ್ದಾರೆ. ಇಬ್ಬರು ಒಟ್ಟಾಗಿ ಈ ಸಾಹಸವನ್ನು ಕೈಗೊಂಡಿದ್ದು, ತಮ್ಮ ಕನಸನ್ನು ನನಸು ಮಾಡುವ ಮುನ್ನವೇ ಶರದ್ ದಿನಕರ್ ಕುಲಕರ್ಣಿ ಅವರು ತಮ್ಮ ಪತ್ನಿ ಅಂಜಲಿಯನ್ನು ಕಳೆದುಕೊಂಡಿದ್ದು, ಜತೆಗೆಯಾಗಿ ಮೌಂಟ್ ಎವರೆಸ್ಟ್ ಏರಲು ಸಾಧ್ಯವಾಗಲಿಲ್ಲ.
2019 ರಲ್ಲಿ, ಅಂಜಲಿ ಮತ್ತು ಶರದ್ ಎವರೆಸ್ಟ್ ಏರಲು ಪ್ರಾರಂಭಿಸಿದರು. ಮೇ 22 ರಂದು, ಮೌಂಟ್ ಎವರೆಸ್ಟ್ ಹತ್ತುವ ವೇಳೆ ಒಂದು , ಅಪರೂಪದ ಸನ್ನಿವೇಶ ಇಲ್ಲಿ ಉಂಟಾಗಿತ್ತು, ಮೌಂಟ್ ಎವರೆಸ್ಟ್ ಏರಲು ಬಂದಿದ್ದ ಹಲವಾರು ಪರ್ವತಾರೋಹಿಗಳ ಹಿಲರಿ ಸ್ಟೆಪ್ ಬಳಿ ಟ್ರಾಫಿಕ್‌ನೆಕ್ ಇದ್ದ ಕಾರಣ ಮತ್ತೆ ಕೆಳಗೆ ಇಳಿಯಲು ಮುಂದಾಗಿದ್ದಾರೆ. ಈ ಸಮಯದಲ್ಲಿ ಅಲ್ಲಿ ಒಂದೇ ರೋಪ್ ವೇ ಇರುವುದರಿಂದ. ಒಂದು ಹಗ್ಗ ಮಾತ್ರ ಮೇಲಕ್ಕೆ ಬರುತ್ತದೆ. ಈ ಹಗ್ಗವೇ ಕೆಳಗೆ ಬರುತ್ತದೆ. ಇದರಲ್ಲಿ ಚಿಕ್ಕ ಕಿಟಕಿ ಇರುವ ಕಾರಣ ಸ್ವಲ್ಪ ಉಸಿರಾಡಲು ಕಷ್ಟ, ಅನೇಕರು ಈ ರೋಪ್ ವೇದಲ್ಲಿ ಇಳಿಯಲು ಮುಂದಾಗಿದ್ದು ಭಾರಿ ರಶ್ ಉಂಟಾಗಿತ್ತು. ಈ ವೇಳೆ ಸಾಕಷ್ಟು ಆಮ್ಲಜನಕ ಲಭ್ಯವಿಲ್ಲದ ಕಾರಣ ಅಂಜಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:Viral Story: ಮದುವೆಯಾದ ಮರುದಿನವೇ ಸರ್ಕಾರಿ ನೌಕರಿ ಕಳೆದುಕೊಂಡ ವರ
ತನ್ನ ಪತ್ನಿ ಅಂಜಲಿಯ ಮರಣದ ನಂತರ, ಶರದ್ ಆಕೆಯ ಆಸೆಯನ್ನು ಪೂರೈಸುವ ನಿರ್ಧಾರವನ್ನು ಮಾಡಿದ್ದಾರೆ. ಅವರು 60ನೇ ವಯಸ್ಸಿನಲ್ಲಿ ತಮ್ಮ ಮೌಂಟ್ ಎವರೆಸ್ಟ್ ಏರುವ ಕನಸನ್ನು ಶ್ರದ್ಧೆಯಿಂದ ಮಾಡಿದ್ದಾರೆ ಮತ್ತು ಇದರ ಜತೆಗೆ ನಾಲ್ಕು ವಿಭಿನ್ನ ಪರ್ವತಗಳ ಶಿಖರಗಳನ್ನು ಏರಲು ಮುಂದಾಗಿದ್ದಾರೆ. ಶರದ್ ಅವರು ತಮ್ಮ 60ನೇ ವಯಸ್ಸಿನಲ್ಲಿ ಮೌಂಟ್ ಎವರೆಸ್ಟ್ ಪ್ರಯಾಣವನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಗೊಳಿಸಿದ್ದಾರೆ, 60ನೇ ವಯಸ್ಸಿನಲ್ಲಿ ಮೊದಲ ಮತ್ತು ಏಕೈಕ ಭಾರತೀಯರಾದರು ವ್ಯಕ್ತಿ ಎಂದು ಹೇಳಲಾಗಿದೆ.