Viral Video: ರಾಮ್ತಾ ಜೋಗಿ ಹಾಡಿಗೆ ಸಕತ್ ಆಗಿ ಸ್ಟೆಪ್ಸ್ ಹಾಕಿದ ಕಾಲೇಜು ಯುವತಿಯರು

ಕಾಲೇಜು ಫೇಸ್ಟ್ ನಲ್ಲಿ ಯುವತಿಯರ ಗುಂಪೊಂದು ರಾಮ್ತಾ ಜೋಗಿ ಹಿಂದಿ ಹಾಡಿಗೆ ನೃತ್ಯ ಮಾಡುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೋಡುಗರನ್ನು ಮೋಡಿ ಮಾಡಿದೆ.

Viral Video: ರಾಮ್ತಾ ಜೋಗಿ ಹಾಡಿಗೆ ಸಕತ್ ಆಗಿ ಸ್ಟೆಪ್ಸ್ ಹಾಕಿದ ಕಾಲೇಜು ಯುವತಿಯರು
Viral VideoImage Credit source: instagram
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: May 31, 2023 | 4:47 PM

ಸಾಮಾಜಿಕ ಮಾಧ್ಯಮಗಳಲ್ಲಿ ನೃತ್ಯಗಳ ಬಗೆಗಿನ ವೀಡಿಯೋ ತುಣುಕುಗಳು ಆಗಾಗ್ಗೆ ಹರಿದಾಡುತ್ತಿರುತ್ತವೆ. ಇಂತಹ ಡಾನ್ಸ್ ವೀಡಿಯೋಗಳು ಸಾಕಷ್ಟಿದ್ದರೂ, ಅದರಲ್ಲಿ ಕೆಲವು ಮಾತ್ರ ನೋಡುಗರನ್ನು ಮೋಡಿ ಮಾಡುತ್ತವೆ ಹಾಗೂ ಮತ್ತೆ ಮತ್ತೆ ವೀಕ್ಷಿಸಬೇಕು ಎಂಬಂತಿರುತ್ತವೆ. ಇದೇ ರೀತಿ ಇತ್ತೀಚಿಗೆ ಐಶ್ವರ್ಯ ರೈ ಬಚ್ಚನ್ ಹಾಗೂ ಅನಿಲ್ ಕಪೂರ್ ನಟನೆಯ 90 ದಶಕದ ತಾಳ್ ಚಿತ್ರದ ‘ರಾಮ್ತಾ ಜೋಗಿ’ ಎಂಬ ಜನಪ್ರಿಯ ಹಾಡಿಗೆ ಕಾಲೇಜು ಯುವತಿಯರ ಗುಂಪು ನೃತ್ಯ ಮಾಡಿರುವ ವೀಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೃತ್ಯ ಪ್ರೇಮಿಗಳ ಮನಗೆದ್ದಿದೆ.

ನೋಯ್ಡಾದ ಅಮಿಟಿ ವಿಶ್ವವಿದ್ಯಾನಿಯಲದ ಕಾಲೇಜ್ ಫೆಸ್ಟ್ ಸಂದರ್ಭದಲ್ಲಿ ಯುವತಿಯರ ಗುಂಪು ಈ ನೃತ್ಯ ಪ್ರದರ್ಶನವನ್ನು ಮಾಡಿದ್ದು, ಹಾರ್ದಿಕ್ ತಲ್ವಾರ್ ಎಂಬವರು ಈ ವೀಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 4 ರಿಂದ 5 ಜನರಿರುವ ಯುವತಿಯರ ಗುಂಪು ಇಂಡೋ-ವೆಸ್ಟರ್ನ್ ಶೈಲಿಯ ಕಪ್ಪು ಬಣ್ಣದ ಉಡುಗೆಯನ್ನು ಧರಿಸಿ ರಾಮ್ತಾ ಜೋಗಿ ಹಾಡಿಗೆ ಮೋಡಿ ಮಾಡುವ ಹಾಗೆ ಸೊಂಟಬಳುಕಿಸುತ್ತಾ, ನೋಡುಗರನ್ನು ಕುಣಿಯುವಂತೆ ಮಾಡಿದ್ದಾರೆ. ಬಹಳ ಚಂದವಾಗಿ ಮೂಡಿಬಂದ ಇವರ ನೃತ್ಯ ಪ್ರದರ್ಶನಕ್ಕೆ ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆಯ ಭರಪೂರವೇ ಹರಿದು ಬರುವುದನ್ನು ಈ ವೀಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ: ನಡುರಸ್ತೆಯಲ್ಲಿ ಸ್ನಾನಮಾಡಿಕೊಂಡು ರೀಲ್ ಮಾಡಿದ್ದಕ್ಕಾಗಿ ದಂಡ ವಿಧಿಸಿದ ಟ್ರಾಫಿಕ್ ಪೋಲಿಸ್

ಏಪ್ರಿಲ್ 4 ರಂದು ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಈವರೆಗೆ 2.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಸಾವಿರಾರು ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಲವಾರು ಕಮೆಂಟ್ಸ್ ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ‘ನಿಮ್ಮ ನೃತ್ಯ ಪ್ರದರ್ಶನ ಅದ್ಭುತವಾಗಿತ್ತು’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಒಂದೊಳ್ಳೆ ಹಾಡಿಗೆ ಉತ್ತಮ ನೃತ್ಯ ಪ್ರದರ್ಶನ’ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಇನ್ನೂ ಅನೇಕ ಯುವಕರು ಈ ಯುವತಿಯರ ನೃತ್ಯಕ್ಕೆ ಮನಸೋತು ‘ನಾವು ಅಮಿಟಿ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶಾತಿ ಪಡೆದುಕೊಳ್ಳುತ್ತೇವೆ’ ಎಂದು ತಮಾಷೆಯ ಕಮೆಂಟ್ ಗಳನ್ನು ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ