ಪ್ಲಾಸ್ಟಿಕ್ ತಾಜ್ಯ ಬಳಸಿ ರಸ್ತೆ ನಿರ್ಮಾಣ; ನೀಲಿ ರಸ್ತೆಯ ವಿಶೇಷತೆ ಇಲ್ಲಿದೆ
ಪಶ್ಚಿಮ ಬಂಗಾಳದ ಪೂರ್ವ ಬುರ್ದ್ವಾನ್‌ನಲ್ಲಿರುವ ರೈನಾದ ಉಚಲನ್ ಗ್ರಾಮ ಪಂಚಾಯತ್ ವ್ಯಾಪ್ತಿ ಪ್ರದೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡಲು ರಾಜ್ಯದ ಮೊದಲ ಪರಿಸರ ಸ್ನೇಹಿ ನೀಲಿ ರಸ್ತೆಯನ್ನು ನಿರ್ಮಿಸಲಾಗಿದ್ದು, ಈ ರಸ್ತೆ ಇದೀಗಾ ಎಲ್ಲರ ಗಮನಸೆಳೆದಿದೆ.
ಸಾಮಾನ್ಯವಾಗಿ ರಸ್ತೆ ನಿರ್ಮಾಣಗೊಂಡ ಕೆಲವೇ ತಿಂಗಳುಗಳಲ್ಲಿ ರಸ್ತೆಗಳಿಗಿಂತ ಗುಂಡಿಗಳೇ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಇಲ್ಲೊಂದು ನಗರದಲ್ಲಿ ಪ್ಲಾಸ್ಟಿಕ್ ತಾಜ್ಯ ಬಳಸಿ ನೀಲಿ ಬಣ್ಣದ ರಸ್ತೆ ನಿರ್ಮಾಗೊಂಡಿದ್ದು, ಇದು ಮಳೆ, ಬಿಸಿಲು ಏನೇ ಇದ್ದರೂ ಕೂಡ ದೀರ್ಘಕಾಲದ ವರೆಗೆ ಬಳಕೆಯಲ್ಲಿರುವುದಾಗಿ ಎಂದು ತಿಳಿದುಬಂದಿದೆ. ಪಶ್ಚಿಮ ಬಂಗಾಳದ ಪೂರ್ವ ಬುರ್ದ್ವಾನ್‌ನಲ್ಲಿರುವ ರೈನಾದ ಉಚಲನ್ ಗ್ರಾಮ ಪಂಚಾಯತ್ ವ್ಯಾಪ್ತಿ ಪ್ರದೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡಲು ರಾಜ್ಯದ ಮೊದಲ ಪರಿಸರ ಸ್ನೇಹಿ ನೀಲಿ ರಸ್ತೆಯನ್ನು ನಿರ್ಮಿಸಲಾಗಿದ್ದು, ಈ ರಸ್ತೆ ಇದೀಗಾ ಎಲ್ಲರ ಗಮನಸೆಳೆದಿದೆ.
ಸಣ್ಣ ಕಾಲುವೆ ಸೇತುವೆಗೆ ಹೋಗುವ ರೈನಾದಲ್ಲಿ 350 ಮೀಟರ್ ಉದ್ದದ ರಸ್ತೆಯನ್ನು ಜೈವಿಕ ವಿಘಟನೀಯವಲ್ಲದ ಪ್ಲಾಸ್ಟಿಕ್ ಕಸದಿಂದ ಹೊರತೆಗೆಯಲಾದ ನೀಲಿ ವರ್ಣದ್ರವ್ಯದಿಂದ ಲೇಪಿಸಲಾಗಿದೆ. ಮೂಲಸೌಕರ್ಯ ಅಭಿವೃದ್ಧಿ ಎಂಜಿನಿಯರ್‌ಗಳ ಪ್ರಕಾರ ಈ ನೀಲಿ ರಸ್ತೆ ಬಿಸಿಲಿನ ಶಾಖವನ್ನು ಹೀರಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನಡುರಸ್ತೆಯಲ್ಲಿ ಸ್ನಾನಮಾಡಿಕೊಂಡು ರೀಲ್ ಮಾಡಿದ್ದಕ್ಕಾಗಿ ದಂಡ ವಿಧಿಸಿದ ಟ್ರಾಫಿಕ್ ಪೋಲಿಸ್
ದುಬೈನಿಂದ ವರ್ಗಾವಣೆಗೊಂಡ ತಂತ್ರಜ್ಞಾನವನ್ನು ಬಳಸಿ ಈ ರಸ್ತೆಯನ್ನು ನಿರ್ಮಿಸಲಾಗಿದೆ. ಇಲ್ಲಿನ ರೈನಾ 2ನೇ ಬ್ಲಾಕ್‌ನಲ್ಲಿರುವ ಉಚ್ಚಲೋನ್ ಪಂಚಾಯತ್‌ನಲ್ಲಿ ಸಾರ್ವಜನಿಕ ಬಳಕೆಗಾಗಿ ರಸ್ತೆಯನ್ನು ರಾಜ್ಯ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರದೀಪ್ ಮಜುಂದಾರ್ ಅವರು ಇತ್ತೀಚೆಗಷ್ಟೇ ಉದ್ಘಾಟಿಸಿದ್ದಾರೆ. ರಸ್ತೆ ಉದ್ಘಾಟಿಸಿ ಮಾತನಾಡಿದ ಪ್ರದೀಪ್ ಮಜುಂದಾರ್ ಪರಿಸರ ಸಂರಕ್ಷಣೆಗಾಗಿ ಇದೊಂದು ಅದ್ಭುತ ಪ್ರಯತ್ನ, ಜೊತೆಗೆ ದೀರ್ಘಾವಧಿಯ ರಸ್ತೆಯ ನಿರ್ಮಾಣ ವೆಚ್ಚವನ್ನು ಸ್ವಲ್ಪ ಕಡಿಮೆ ಮಾಡುತ್ತದೆ. ಪರಿಸರ ಸ್ನೇಹಿಯೂ ಹೌದು ಎಂದು ಹೇಳಿದರು.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: