AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಅತ್ತೆ- ಸೊಸೆ ಜಗಳ; ಮದುವೆಯಾದ ಒಂದೇ ವಾರಕ್ಕೆ ಪತಿಯನ್ನು ತೊರೆದ ಪತ್ನಿ

ಮದುವೆಯಾಗಿ ಗಂಡನ ಮನೆಗೆ ಬಂದು ವಾರ ಕಳೆದಿದೆ ಅಷ್ಟೇ. ಅತ್ತೆ ಸೊಸೆ ನಡುವೆ ಮನಸ್ತಾಪಗಳು ಪ್ರಾರಂಭವಾಗಿವೆ. ಮೊಬೈಲ್​​ ವಿಚಾರಕ್ಕೆ ಪ್ರಾರಂಭವಾದ ಸಂಘರ್ಷದಲ್ಲಿ ನವ ವಧು ತನ್ನ ಪತಿ ಹಾಗೂ ಪತಿ ಮನೆಯವರನ್ನು ತೊರೆದು ಹೋಗಿದ್ದಾಳೆ.

Viral News: ಅತ್ತೆ- ಸೊಸೆ ಜಗಳ; ಮದುವೆಯಾದ ಒಂದೇ ವಾರಕ್ಕೆ ಪತಿಯನ್ನು ತೊರೆದ ಪತ್ನಿ
ಸಾಂದರ್ಭಿಕ ಚಿತ್ರImage Credit source: Odisha Bytes
ಅಕ್ಷತಾ ವರ್ಕಾಡಿ
|

Updated on:Jun 01, 2023 | 1:15 PM

Share

ಬಿಹಾರ: ಮದುವೆಯಾಗಿ ಗಂಡನ ಮನೆಗೆ ಬಂದು ವಾರ ಕಳೆದಿದೆ ಅಷ್ಟೇ. ಅತ್ತೆ ಸೊಸೆ ನಡುವೆ ಮನಸ್ತಾಪಗಳು ಪ್ರಾರಂಭವಾಗಿವೆ. ಮೊಬೈಲ್​​ ವಿಚಾರಕ್ಕೆ ಪ್ರಾರಂಭವಾದ ಸಂಘರ್ಷದಲ್ಲಿ ನವ ವಧು ತನ್ನ ಪತಿ ಹಾಗೂ ಪತಿ ಮನೆಯವರನ್ನು ತೊರೆದು ಹೋಗಿದ್ದಾಳೆ. ಬಿಹಾರದ ಹಾಜಿಪುರದಲ್ಲಿ ಈ ಘಟನೆ ನಡೆದಿದ್ದು, ಇದೀಗಾ ಎಲ್ಲೆಡೆ ವೈರಲ್​​ ಆಗಿದೆ. ಸೊಸೆ ಅತಿಯಾಗಿ ಫೋನ್​​ ಬಳಸುತ್ತಿರುವುದನ್ನು ಕಂಡು ಅತ್ತೆ ಮೊಬೈಲ್​​ ಬಳಸದಂತೆ ಹೇಳಿದ್ದು, ಇವರಿಬ್ಬರ ನಡುವೆ ಸಂಘರ್ಷ ಪ್ರಾರಂಭವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ದಿನವಿಡೀ ಸಮಯ ಕಳೆಯುತ್ತಿದ್ದಳು ಎಂದು ಅತ್ತೆ ಪೊಲೀಸ್​​ ದೂರಿನಲ್ಲಿ ತಿಳಿಸಿದ್ದಾರೆ.

ಸಬಾ ಖಾತೂನ್ ಎಂದು ಗುರುತಿಸಲಾದ ಮಹಿಳೆ, ಸುಮಾರು ಹದಿನೈದು ದಿನಗಳ ಹಿಂದೆ ಇಲಿಯಾಸ್ ಎಂಬಾತನನ್ನು ಮದುವೆಯಾಗಿದ್ದಳು. ಘಟನೆಯನ್ನು ಪೊಲೀಸರಿಗೆ ವಿವರಿಸಿದ ಸಾಬಾ ಅವರ ಸಂಬಂಧಿಕರು, ಅವರು ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗೆ ವ್ಯಸನಿಯಾಗಿದ್ದರು ಮತ್ತು ದಿನವಿಡೀ ಮೊಬೈಲ್ ಫೋನ್ ಬಳಸುತ್ತಿದ್ದರು ಎಂದು ದೂರಿದ್ದಾರೆ. ಘಟನೆಯ ಬಗ್ಗೆ ಸಾಬಾ ತನ್ನ ಪೋಷಕರು ಮತ್ತು ಸಹೋದರನಿಗೆ ದೂರು ನೀಡಿದ್ದು, ಇದು ಜಗಳಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಅವರು ಹೇಳಿದರು. ಘರ್ಷಣೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು, ತಮ್ಮೊಂದಿಗೆ ಪೊಲೀಸ್ ಠಾಣೆಗೆ ಬರುವಂತೆ ಕುಟುಂಬವನ್ನು ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: ಎಲಾನ್​ ಮಸ್ಕ್​ ಭಾರತದ ಅಳಿಯನಾಗಲಿದ್ದಾರೆಯೇ?!

ತನ್ನ ಹೇಳಿಕೆಯಲ್ಲಿ, ಸಬಾ ಅವರ ತಾಯಿ, ರಜಿಯಾ ಖಾನ್, ತನ್ನ ಮಗಳ ಮೊಬೈಲ್ ಫೋನ್ ಅನ್ನು ಆಕೆಯ ಸಂಬಂಧಿಕರು ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ, ಅವರು ತಮ್ಮ ಕುಟುಂಬದೊಂದಿಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಪ್ರತಿ ದೂರು ನೀಡಿದ್ದಾರೆ. ಒಟ್ಟಾರೆಯಾಗಿ ಮದುವೆಯಾದ ಒಂದು ವಾರಕ್ಕೆ ಮೊಬೈಲ್​​ ವಿಚಾರಕ್ಕೆ ಪತಿಯ ಮನೆಯನ್ನೇ ಪತ್ನಿ ತೊರೆದಿದ್ದಾಳೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 12:35 pm, Thu, 1 June 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ