Weird Wedding Tradition: ಮದುವೆಯಲ್ಲಿ ಮಗಳ ಎದೆಯ ಮೇಲೆ ಉಗುಳುವ ತಂದೆ, ವಧುದಕ್ಷಿಣೆ ನೀಡುವ ವರ ಹೀಗೊಂದು ವಿಚಿತ್ರ ಸಂಪ್ರದಾಯ
ನೀವು ಅನೇಕ ದೇಶಗಳ ಸಂಸ್ಕೃತಿಯನ್ನು ನೋಡಿರಬಹುದು, ಅಲ್ಲಿ ಒಬ್ಬರಿಗೊಬ್ಬರು ವಿಶ್ ಮಾಡುವ ವಿಧಾನವನ್ನು ಸಹ ನೀವು ಇಷ್ಟಪಟ್ಟಿರಬಹುದು, ಆದರೆ ಕೆಲವು ದೇಶಗಳಿವೆ, ಅಲ್ಲಿಯ ವಿಚಿತ್ರ ರೀತಿಯ ಸ್ವಾಗತವು ಖಂಡಿತವಾಗಿಯೂ ನಿಮಗೆ ಅಚ್ಚರಿಯನ್ನುಂಟು ಮಾಡುತ್ತೆ, ಆದರೆ ಪ್ರತಿಯೊಂದು ದೇಶವು ತನ್ನದೇ ಆದ ಸಂಸ್ಕೃತಿಯನ್ನು ಹೊಂದಿದೆ. ಹಾಗೆಯೇ ಪ್ರಪಂಚದಾದ್ಯಂತ ವಿಚಿತ್ರವಾದ ವಿವಾಹ ಸಂಪ್ರದಾಯಗಳು ಆಚರಣೆಯಲ್ಲಿದೆ.
ನೀವು ಅನೇಕ ದೇಶಗಳ ಸಂಸ್ಕೃತಿಯನ್ನು ನೋಡಿರಬಹುದು, ಅಲ್ಲಿ ಒಬ್ಬರಿಗೊಬ್ಬರು ವಿಶ್ ಮಾಡುವ ವಿಧಾನವನ್ನು ಸಹ ನೀವು ಇಷ್ಟಪಟ್ಟಿರಬಹುದು, ಆದರೆ ಕೆಲವು ದೇಶಗಳಿವೆ, ಅಲ್ಲಿಯ ವಿಚಿತ್ರ ರೀತಿಯ ಸ್ವಾಗತವು ಖಂಡಿತವಾಗಿಯೂ ನಿಮಗೆ ಅಚ್ಚರಿಯನ್ನುಂಟು ಮಾಡುತ್ತೆ, ಆದರೆ ಪ್ರತಿಯೊಂದು ದೇಶವು ತನ್ನದೇ ಆದ ಸಂಸ್ಕೃತಿಯನ್ನು ಹೊಂದಿದೆ. ಹಾಗೆಯೇ ಪ್ರಪಂಚದಾದ್ಯಂತ ವಿಚಿತ್ರವಾದ ವಿವಾಹ ಸಂಪ್ರದಾಯಗಳು ಆಚರಣೆಯಲ್ಲಿದೆ.
ಒಂದು ದೇಶದಲ್ಲಿಯೇ ಬೇರೆ ಬೇರೆ ರಾಜ್ಯಗಳಲ್ಲಿ ಸಂಪ್ರದಾಯಗಳು ಬೇರೆಯೇ ಇರುತ್ತವೆ, ಹಾಗೆಯೇ ಬೇರೆ ದೇಶವೆಂದ ಮೇಲೆ ಪದ್ಧತಿಗಳು ಸಂಪೂರ್ಣವಾಗಿ ಬೇರೆ ಇದ್ದೇ ಇರುತ್ತದೆ. ಈ ಸಂಪ್ರದಾಯಗಳು ಶತಮಾನಗಳಷ್ಟು ಹಳೆಯದು. ಇತರೆ ದೇಶದ ಜನರು ಅವರನ್ನು ವಿಚಿತ್ರವಾಗಿ ಪರಿಗಣಿಸಬಹುದು ಅಥವಾ ಈ ಪದ್ಧತಿಗಳನ್ನು ಗೇಲಿ ಮಾಡಬಹುದು, ಆಫ್ರಿಕಾದ ಬುಡಕಟ್ಟು ಪ್ರದೇಶಗಳಲ್ಲಿ ಅಂತಹ ಒಂದು ವಿಶಿಷ್ಟ ಸಂಪ್ರದಾಯವನ್ನು ಅನುಸರಿಸಲಾಗುತ್ತದೆ. ಕೀನ್ಯಾ ಮತ್ತು ತಾಂಜಾನಿಯಾದಲ್ಲಿ ವಾಸಿಸುವ ಬುಡಕಟ್ಟು ಸಮುದಾಯದಲ್ಲಿ ಮಗಳು ಹಸೆಮಣೆ ಏರುವ ಮುನ್ನ ಅವಳ ತಂದೆ ಆಕೆಯ ಎದೆಯ ಮೇಲೆ ಉಗುಳುತ್ತಾರೆ.
ಮೀಡಿಯಂ ವೆಬ್‌ಸೈಟ್‌ನ ವರದಿಯ ಪ್ರಕಾರ, ಉತ್ತರ-ಮಧ್ಯ ಕೀನ್ಯಾ ಮತ್ತು ಉತ್ತರ ತಾಂಜಾನಿಯಾದಲ್ಲಿ ವಾಸಿಸುವ ಮಸಾಯಿ ಬುಡಕಟ್ಟಿನ ಜನರನ್ನು ಅಪಾಯಕಾರಿ ಎಂದು ಹೇಳಲಾಗುತ್ತದೆ. ಈ ಬುಡಕಟ್ಟಿನ ನಂಬಿಕೆಗಳು ತುಂಬಾ ವಿಚಿತ್ರವಾಗಿವೆ, ಇದನ್ನು ಅವರು ಇಲ್ಲಿಯವರೆಗೆ ನಂಬುತ್ತಿದ್ದಾರೆ. ಮದುವೆಯ ಸಮಯದಲ್ಲಿ ವಧುವಿನ ಎದೆಯ ಮೇಲೆ ಉಗುಳುವುದು ಈ ನಂಬಿಕೆಗಳಲ್ಲಿ ಒಂದಾಗಿದೆ.
ಮತ್ತಷ್ಟು ಓದಿ: ಮದುವೆಯ ದಿನವೇ ವಧು ನಾಪತ್ತೆ; ಮಂಟಪದಲ್ಲೇ 13 ದಿನ ಕಾದು ಕುಳಿತ ವರ
ಮದುಮಗ ವಧುದಕ್ಷಿಣೆ ಕೊಡುತ್ತಾನೆ ಮಸಾಯಿ ಬುಡಕಟ್ಟಿನ ಸಂಪ್ರದಾಯದಲ್ಲಿ, ಮದುವೆಯ ಸಮಯದಲ್ಲಿ ಹುಡುಗಿಯರು ವರದಕ್ಷಿಣೆ ನೀಡುವುದಿಲ್ಲ, ಆದರೆ ಹುಡುಗರು ವರದಕ್ಷಿಣೆ ನೀಡುತ್ತಾರೆ. ಈ ವರದಕ್ಷಿಣೆಯನ್ನು ವಧು ಮತ್ತು ಅವರ ಕುಟುಂಬ ಸದಸ್ಯರು ಸ್ವೀಕರಿಸಿದಾಗ, ಮದುವೆಯನ್ನು ದೃಢೀಕರಿಸಲಾಗುತ್ತದೆ ಮತ್ತು ಆಚರಣೆಗಳನ್ನು ಮುಂದುವರಿಸಲಾಗುತ್ತದೆ.
ತಂದೆ ಏಕೆ ಉಗುಳುತ್ತಾರೆ? ವರದಕ್ಷಿಣೆಯನ್ನು ಸ್ವೀಕರಿಸಿದಾಗ, ವಧುವಿನ ತಲೆಯನ್ನು ಬೋಳಿಸಲಾಗುತ್ತದೆ. ನಂತರ ಕುಟುಂಬದ ಹಿರಿಯರೆಲ್ಲ ಕುಳಿತಿರುವ ಜಾಗಕ್ಕೆ ಹೋಗುತ್ತಾಳೆ. ಅದರ ನಂತರ ಅವಳು ಅವನ ಮುಂದೆ ಮಂಡಿಯೂರುತ್ತಾಳೆ ಮತ್ತು ತಂದೆ ಮಗಳ ಹಣೆ ಮತ್ತು ಎದೆಯ ಮೇಲೆ ಉಗುಳುತ್ತಾನೆ. ತಂದೆಯ ಜೊತೆಗೆ ಮನೆಯ ಹಿರಿಯರೂ ಹಣೆ, ಎದೆಗೆ ಉಗುಳುತ್ತಾರೆ, ತಮ್ಮ ಮನೆಯ ಮಗಳಿಗೆ ಹಿರಿಯರು ಆಶೀರ್ವಾದ ಮಾಡುವ ರೀತಿಯೇ ಇದು. ಉಗುಳುವುದು ಮಸಾಯಿ ಸಂಪ್ರದಾಯದಲ್ಲಿ ಶುಭಾಶಯದ ಒಂದು ರೂಪವೆಂದು ಪರಿಗಣಿಸಲಾಗಿದೆ. ಇದರೊಂದಿಗೆ, ಪ್ರೀತಿಪಾತ್ರರಿಗೆ ವಿದಾಯ ಹೇಳಲು ಸಹ ಇದನ್ನು ಬಳಸಲಾಗುತ್ತದೆ, ಏಕೆಂದರೆ ಈ ಉಗುಳು ಉಗುಳುವ ವ್ಯಕ್ತಿಯ ಕಡೆಗೆ ಸ್ವೀಕಾರ ಮತ್ತು ಗೌರವದ ಸಂಕೇತವಾಗಿದೆ.
ಸಂಪ್ರದಾಯಗಳ ಪ್ರಕಾರ , ಮದುವೆಗಳಲ್ಲಿ ಮಾತ್ರವಲ್ಲ, ಮಗು ಜನಿಸಿದಾಗ, ಜನರು ಅದರ ಮೇಲೆ ಉಗುಳುತ್ತಾರೆ ಮತ್ತು ಹಣೆಯ ಮೇಲೆ ಉಗುಳುತ್ತಾರೆ. ಇದಲ್ಲದೇ ಗ್ರಾಮದ ಜನರನ್ನು ಭೇಟಿಯಾದಾಗ ಮೊದಲು ಅವರ ಕೈಗೆ ಉಗುಳಿ, ಹರವಿ ನಂತರ ಹಸ್ತಲಾಘವ ಮಾಡುತ್ತಾರೆ. ವಿದೇಶಿಯರ ಆಗಮನದಲ್ಲೂ ಅದೇ ರೀತಿ ಮಾಡಲಾಗುತ್ತದೆ.
ಸ್ವಾಗತಿಸುವುದರಲ್ಲಿಯೂ ಇದೆ ಭಿನ್ನತೆ ನಮ್ಮ ದೇಶದಲ್ಲಿ ಜನರು ಕೈಮುಗಿದು ನಮಸ್ಕರಿಸುವುದನ್ನು ಮತ್ತು ಜನರನ್ನು ಸ್ವಾಗತಿಸುವುದನ್ನು ನೀವು ನೋಡಿರಬಹುದು. ಆದರೆ ನೀವು ಎಂದಾದರೂ ಇತರ ದೇಶಗಳಲ್ಲಿ ಜನರನ್ನು ಹೇಗೆ ಸ್ವಾಗತಿಸಲಾಗುತ್ತದೆ? ಅನ್ನೋದನ್ನು ನೋಡಿದ್ದೀರಾ? ಎಲ್ಲೋ ಜನರು ತಮ್ಮ ತಲೆಗಳನ್ನು ಬಾಗಿಸಿ ಒಬ್ಬರಿಗೊಬ್ಬರು ನಮಸ್ಕರಿಸುತ್ತಾರೆ, ಮತ್ತು ಎಲ್ಲೋ ಅವರು ತಮ್ಮ ಮೂಗನ್ನು ಪರಸ್ಪರ ತಾಗಿಸುವ ಮೂಲಕ ಶುಭಾಶಯ ಕೋರುತ್ತಾರೆ.
ಟಿಬೆಟಿನಲ್ಲಿ ಜನರು ಪರಸ್ಪರ ಭೇಟಿಯಾದಾಗ ಅಥವಾ ಅಲ್ಲಿನ ಜನರು ತಮ್ಮ ಮುಂದೆ ಇರುವ ವ್ಯಕ್ತಿಯನ್ನು ತಮ್ಮ ನಾಲಿಗೆಯಿಂದ ಸ್ವಾಗತಿಸುತ್ತಾರೆ. ಹೆಚ್ಚಾಗಿ ಬೌದ್ಧ ಭಿಕ್ಷುಗಳು ಇದನ್ನು ಮಾಡುತ್ತಾರೆ. ಇದು ನಿಮಗೆ ವಿಚಿತ್ರ ಎನಿಸಬಹುದು, ಆದರೆ ಇದು ಅವರ ಸಂಪ್ರದಾಯವಾಗಿದೆ. ಇದರ ಜೊತೆಗೆ ಅವರು ಎರದು ಕೈಗಳನ್ನು ಕಟ್ಟಿ ಎದೆ ಮೇಲೆ ಇಡುತ್ತಾರೆ. ಇದರ ಅರ್ಥ ಅವರು ಶಾಂತಿ ತರುವವರು ಎಂದು.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ