AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಅಮ್ಮಾ, ನಿನ್ನ ಹೊಟ್ಟೆಯೊಳಗಿರುವುದು ಬೆಕ್ಕಿನಮರಿ ಅಲ್ಲವೋ…

Pregnant Lady : ಅಮ್ಮನ ಹೊಟ್ಟೆಯಿಂದ ಮಗು ಹೊರಬಂದಮೇಲೆ ಅದು ಹೇಗಿರುತ್ತದೆ? ನನ್ನ ಹಾಗೆಯೋ ಅಮ್ಮನ ಹಾಗೆಯೋ ಎಂಬ ಧ್ಯಾನದಲ್ಲಿ ಈ ಬೆಕ್ಕು ಮುಳುಗಿದಂತಿದೆ. ಕೊನೆಗೂ ಒಂದು ದಿನ...

Viral Video: ಅಮ್ಮಾ, ನಿನ್ನ ಹೊಟ್ಟೆಯೊಳಗಿರುವುದು ಬೆಕ್ಕಿನಮರಿ ಅಲ್ಲವೋ...
ಓಹೋ ಅಮ್ಮನ ಹೊಟ್ಟೆಯಲ್ಲಿ ಪುಟ್ಟಮಗು ಇದೆ!
TV9 Web
| Edited By: |

Updated on: Jun 01, 2023 | 2:31 PM

Share

Cat : ಸಾಕಿದವರು ತನ್ನನ್ನು ಬಿಟ್ಟು ಬೇರೆ ಯಾರನ್ನೂ ಮುದ್ದು ಮಾಡಬಾರದು ಎನ್ನುವಷ್ಟು ಪೊಸೆಸಿವ್​​ನೆಸ್​ (possessiveness)​ ಈ ಬೆಕ್ಕು ಎಂಬ ಮೆತ್ತಗಿನ ಜೀವಕ್ಕೆ. ಅದಕ್ಕೇ ಸದಾ ಅಂಟಿಕೊಂಡೇ ಇರುತ್ತದೆ. ಗುಡರ್ ಗುಡರ್ ಎಂದು ಶಬ್ದ ಮಾಡುತ್ತ ಮೈಕೈಗೆ ತಿಕ್ಕುತ್ತ ಮುದ್ದುಕ್ಕಿಸುವಂತೆ ಮುಖ ಮಾಡಿ ಗಮನ ಸೆಳೆಯುತ್ತಿರುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಇದನ್ನು ಸಾಕಿದ ಮಹಿಳೆಯ ಒಡಲೊಳಗೊಂದು ಜೀವ ಮಿಸುಕಾಡುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ ಎಷ್ಟು ಸೂಕ್ಷ್ಮವಾಗಿ ಮುಟ್ಟಿ ನೋಡುತ್ತದೆಯಲ್ಲ?

ಅಯ್ಯೋ ಆಕೆಯ ಹೊಟ್ಟೆಯಲ್ಲಿರೋದು ಬೆಕ್ಕಿನ ಮರಿ ಅಲ್ಲ ಎಂಬು ಬೇಸರ ಮಾಡಿಕೊಳ್ಳುತ್ತದೆ. ಡಾಕ್ಟರ್​ ಬೆಕ್ಕು! ಮಗುವಿನ ಹಾರ್ಟ್​ ಬೀಟ್​ ಎಲ್ಲ ಸರಿ ಇದೆಯಾ? ಮಗು ಹೊರಗೆ ಬಂದಮೇಲೆ ನಿನ್ನ ಕತೆ ಅಷ್ಟೇ ಬೆಕ್ಕೇ. ಎಂಥ ಮುದ್ದಾದ ಬೆಕ್ಕಿದು ಎಷ್ಟು ಮೃದುವಾಗಿ ಅಮ್ಮನನ್ನು ಮಗುವನ್ನು ಕಾಯುತ್ತಿದೆ… ಹೀಗೆ ಅನೇಕರು ಈ ವಿಡಿಯೋ ನೋಡಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral Video: 22 ವರ್ಷಗಳ ನಂತರ ಒಡಹುಟ್ಟಿದವರ ಪುನರ್ಮಿಲನ

ಬೆಕ್ಕುಗಳು ಮಗುವಿನ ಹೃದಯಬಡಿತವನ್ನು ಕೇಳಬಲ್ಲವು. ಅಷ್ಟೇ ಏಕೆ ಎಲ್ಲವನ್ನೂ ಅವು ಸೂಕ್ಷ್ಮವಾಗಿ ಗ್ರಹಿಸಬಲ್ಲವು. ಹೊಸತಾಯಿಗೆ ಅಭಿನಂದನೆ, ಬೆಕ್ಕು ಮಗುವಿನ ಸುತ್ತ ಓಡಾಡುತ್ತ, ಆಟವಾಡುತ್ತಿರುವ ವಿಡಿಯೋಗಳಿಗಾಗಿ ಕಾಯುತ್ತೇವೆ… ಅಂತೆಲ್ಲ ಮತ್ತೂ ಒಂದಿಷ್ಟು ಜನ ಪ್ರತಿಕ್ರಿಯಿಸಿದ್ದಾರೆ.

4 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಈ ವಿಡಿಯೋ ನೋಡಿ ನಿಮಗೇನು ಅನ್ನಿಸುತ್ತಿದೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ