Viral: ದಿನಕ್ಕೆ ರೂ. 70 ಲಕ್ಷ ಶಾಪಿಂಗ್ ಮಾಡುವುದೇ ಈ ಮಿಲಿಯನೇರ್ ಗೃಹಿಣಿಯ ಹವ್ಯಾಸ
Hobby : ಇವರಿಬ್ಬರಿಗೂ ಲಂಡನ್ ಎಂದರೆ ಸಿಟಿಬಸ್ಸಿನಲ್ಲಿ ಓಡಾಡಿದಂತೆ. ಒಂದು ಬ್ಯಾಗ್ ಕೊಂಡರೆ ಕಡಿಮೆ ಎಂದರೂ ಐದರಿಂದ ಹತ್ತು ಲಕ್ಷರೂಪಾಯಿ. ಇನ್ನು ಅತೀ ದುಬಾರಿ ಖಾದ್ಯ ಯಾವುದೆಂದು ಹೋದಲ್ಲೆಲ್ಲ ಹುಡುಕುತ್ತಾರೆ.
Shopping : ನಿಮ್ಮ ನೆಚ್ಚಿನ ಹವ್ಯಾಸಗಳೇನು? ಬೆಕ್ಕು ನಾಯಿ ಮೊಲ ಆಮೆ ಕೋಳಿ ಪಕ್ಷಿಗಳನ್ನು ಸಾಕುವುದು. ಕ್ರಿಕೆಟ್, ಫುಟ್ಬಾಲ್, ವಾಲಿಬಾಲ್ ಇನ್ನಿತರೇ ಆಟಗಳನ್ನು ಆಡುವುದು. ಕಸೂತಿ ಹಾಕುವುದು, ಬಟ್ಟೆ ಹೊಲಿಯುವುದು, ಪೇಂಟಿಂಗ್ ಮತ್ತಿತರೇ ಕರಕುಶಲ ವಸ್ತುಗಳನ್ನು ತಯಾರಿಸುವುದು. ಓದುವುದು, ಹಾಡುವುದು, ನರ್ತಿಸುವುದು, ಸಮಾಜ ಸೇವೆ ಮಾಡುವುದು, ಅಡುಗೆಯನ್ನೂ ಆಗಾಗ ಮಾಡುವುದು. ಆದರೆ ಇದೀಗ ವೈರಲ್ ಆಗುತ್ತಿರುವ ಈ ಹೆಣ್ಣುಮಗಳ ಹವ್ಯಾಸವನ್ನು (Hobbies) ಕೇಳಿದಿರೋ ಗ್ಯಾರಂಟಿ ನೀವು ಕುಳಿತಲ್ಲೇ ಹೌಹಾರಿ ಸೀಲಿಂಗ್ಗೆ ಅಂಟಿಕೊಂಡಿರುತ್ತೀರಿ!
ಇದನ್ನೂ ಓದಿView this post on Instagram
ದುಬೈನಲ್ಲಿ ವಾಸಿಸುತ್ತಿರುವ ಸೌದಿ ಮಿಲಿಯನೇರ್. ಅರೇಬಿಯಾದ ಶ್ರೀಮಂತ ಗೃಹಿಣಿ ಈಕೆಯಾಗಿದ್ದು ಟಿಕ್ಟಾಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ತಮ್ಮ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾಳೆ. ಲಕ್ಷಾಂತರ ಫಾಲೋವರ್ಸ್ ಈಕೆಯ ವಿಡಿಯೋ, ಫೋಟೋಗಳನ್ನು ರೀಶೇರ್ ಮಾಡುತ್ತಾಳೆ. ಕೆಲವರು ಈಕೆಯ ಶ್ರೀಮಂತಿಕೆಯನ್ನು ಹೊಗಳುತ್ತಾರೆ ಇನ್ನೂ ಕೆಲವರು ನೀವು ಖರ್ಚು ಮಾಡುವ ಹಣದಲ್ಲಿ ಅರ್ಧದಷ್ಟಾದರೂ ನಿರ್ಗತಿಕರಿಗೆ ಮೀಸಲಿಟ್ಟಿದ್ದರೆ ನಿಮ್ಮ ಜನ್ಮ ಸಾರ್ಥಕವಾಗುತ್ತಿತ್ತು ಎಂದು ಹೇಳುತ್ತಾರೆ.
View this post on Instagram
ಸಾಮಾಜಿಕ ಜಾಲತಾಣದ ಇನ್ಫ್ಯೂಯೆನ್ಸರ್ (Social Media Influencer) ಆಗಿರುವ ಈಕೆಗೆ ಆಹಾರ, ಪ್ರಯಾಣ ಮತ್ತು ಶಾಪಿಂಗ್ ನೆಚ್ಚಿನ ಹವ್ಯಾಸಗಳು. ಡಿಸೈನರ್ ಬ್ಯಾಗ್ಗಳು, ಮಿರಿಮಿರಿ ಹೊಳೆಯುವ ಕಾರುಗಳು ಮತ್ತು ಜಗತ್ತಿನ ಐಷಾರಾಮಿ ಸ್ಥಳಗಳಿಗೆ ಭೇಟಿ ನೀಡಿದ ವಿಡಿಯೋ, ಫೋಟೋಗಳನ್ನು ಈಕೆ ಇಲ್ಲಿ ಅಪ್ಲೋಡ್ ಮಾಡುತ್ತಾಳೆ. ರಜಾ ದಿನಗಳಲ್ಲಿ ಪತಿಯೊಂದಿಗೆ ಪ್ರವಾಸ ಕೈಗೊಳ್ಳುತ್ತಾಳೆ ಈಕೆಯ ಪತಿ ಜಮಾಲ್ ಬಿನ್ ನಡಕ್ ಈಕೆಯ ದಾತ ಮತ್ತು ಶಾಪಿಂಗ್ಗೆ ಪ್ರೇರಕಶಕ್ತಿ.
View this post on Instagram
ಇತ್ತೀಚೆಗೆ ಇವರಿಬ್ಬರೂ ಮಾಲ್ಡೀವ್ಸ್ಗೆ ಹೋಗಿದ್ದರು. ಅದಕ್ಕೂ ಮೊದಲು ಸೆಶೆಲ್ಸ್ ಪ್ರವಾಸಕ್ಕೆ ಹೋಗಿದ್ದರು. ಲಂಡನ್ಗೆ ಹೋಗಿಬರುವುದಂತೂ ತೀರಾ ಸಾಮಾನ್ಯ. ಮುಂಬರುವ ದಿನಗಳಲ್ಲಿ ಜಪಾನ್ಗೆ ಪ್ರಯಾಣಿಸುವುದಾಗಿ ಹೇಳಿಕೊಂಡಿದ್ದಾಳೆ. ಸೌದಿ ಮತ್ತು ಜಮಾಲ್ ಅದ್ದೂರಿ ಉಡುಗೊರೆ, ದುಬಾರಿ ಜೀವನಶೈಲಿಗಳಿಂದ ಪರಸ್ಪರರನ್ನು ಅಚ್ಚರಿಗೊಳಿಸುವುದೇ ತಮ್ಮ ಜೀವನದ ಧ್ಯೇಯ ಎಂಬಂತೆ ಬದುಕುತ್ತಿದ್ದಾರೆ.
View this post on Instagram
ಸಸೆಕ್ಸ್ನಲ್ಲಿ ಜನಿಸಿದ ಸೌದಿ ಆರು ವರ್ಷದವಳಿದ್ದಾಗ ದುಬೈಗೆ ಹೋದಳು. ಸೌದಿ ಅರೇಬಿಯಾ ಮೂಲದ ಜಮಾಲ್ನನ್ನು ದುಬೈ ವಿಶ್ವವಿದ್ಯಾಲಯದಲ್ಲಿ ಭೇಟಿಯಾದಳು. ಇವರಿಬ್ಬರೂ ಮದುವೆಯಾಗಿ ಎರಡು ವರ್ಷಗಳು ಕಳೆದಿವೆ. ಹೀಗೆ ವೈಭವೋಪೇತ ಜೀವನಶೈಲಿಯನ್ನು ಅನುಸರಿಸುತ್ತ ಪ್ರಪಂಚವನ್ನು ಸುತ್ತುತ್ತಿದ್ದಾರೆ. ಇದೇ ಬದುಕು ಎಂದುಕೊಂಡಿದ್ದಾರೆ.
ಈಗ ಹೇಳಿ ನಿಮ್ಮ ಹವ್ಯಾಸವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ