Viral Video: ಸೀರೆಯುಟ್ಟು ಹೈಹೀಲ್ಸ್ ಧರಿಸಿ ನೃತ್ಯ ಮಾಡಿದ ಮಹಿಳೆಯ ವಿಡಿಯೋ ವೈರಲ್
Dance : ನನಗೆ ಸೀರೆಯುಟ್ಟರೆ ನೆಟ್ಟಗೆ ನಡೆಯಲು ಬರುವುದಿಲ್ಲ. ಅಂಥದ್ದರಲ್ಲಿ ಈಕೆ ಹೈಹೀಲ್ಸ್ ಧರಿಸಿ ನರ್ತಿಸುತ್ತಿದ್ದಾಳೆ. ಜೀನ್ಸ್ ಮೇಲಷ್ಟೇ ಹೈಹೀಲ್ಸ್ ಧರಿಸಬೇಕು ಎನ್ನುವ ನಿಯಮವನ್ನು ಈಕೆ ಹೀಗೆ ಮುರಿದಿದ್ದು ಸಂತಸ ತಂದಿದೆ ಎನ್ನುತ್ತಿದ್ದಾರೆ ನೆಟ್ಟಿಗರು.
Viral: ನರ್ತಿಸುವುದು ಎಲ್ಲರಿಗೂ ಸಿದ್ಧಿಸುವಂಥದ್ದಲ್ಲ. ಅದು ನಿರಂತರ ಪರಿಶ್ರಮ, ಅಭ್ಯಾಸ ಬೇಡುವಂಥ ಕಲೆ. ಆದರೂ ನರ್ತಿಸಬೇಕೆನ್ನುವ (Dance) ಆಸೆಯಂತೂ ಸಾಮಾನ್ಯವಾಗಿ ಎಲ್ಲರಿಗೂ ಇದ್ದೇ ಇರುತ್ತದೆ. ಸಂದರ್ಭಕ್ಕಾಗಿ ಕಾಯಲಾಗುತ್ತಿರುತ್ತದೆ. ಈಗಿಲ್ಲಿ ಈ ಮಹಿಳೆಯನ್ನು ಗಮನಿಸಿ. ಸೀರೆಯುಟ್ಟು ಹೈಹೀಲ್ಸ್ (High Heels) ಧರಿಸಿ ನರ್ತಿಸಿದ್ದಾಳೆ. ಪಾರ್ಟಿಯಲ್ಲಿರುವ ಜನರೆಲ್ಲ ಚಪ್ಪಾಳೆ ತಟ್ಟಿ ಆಕೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ.
View this post on Instagram
ಜೀನ್ಸ್ ಹಾಕಿ ಮಾಡುವ ನೃತ್ಯವನ್ನು ಈಕೆ ಸೀರೆಯಲ್ಲಿ ಮಾಡುತ್ತಿದ್ದಾಳಲ್ಲ ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಸೀರೆ ಉಟ್ಟರೆ ನನಗೆ ನೆಟ್ಟಗೆ ನಡೆಯಲು ಬರುವುದಿಲ್ಲ ಇನ್ನು ಸೀರೆಯುಟ್ಟು, ಹೈಹೀಲ್ಸ್ ಧರಿಸಿ ಇಷ್ಟು ವೇಗದಲ್ಲಿ ನರ್ತಿಸುವುದೆಂದರೆ ಅಚ್ಚರಿಯಾಗುತ್ತಿದೆ ಎಂದಿದ್ದಾರೆ ಒಬ್ಬರು. ಅಬ್ಬಾ ಆಕೆಯ ಹೀಲ್ಸ್ ನೋಡಿ ನನಗೆ ಆಘಾತ ಉಂಟಾಗುತ್ತಿದೆ ಎಂದು ಇನ್ನೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ : Viral Video: ಹೀಗೊಂದು ಟ್ವಿಸ್ಟ್ ಈ ವಿಡಿಯೋಗಿರಬಹುದು ಎಂದು ನೀವು ಊಹಿಸಲಾರಿರಿ
ಆಹಾ ಇವರ ಈ ನೃತ್ಯದಿಂದ ನಾನು ಉಲ್ಲಾಸಗೊಂಡಿದ್ದೇನೆ ಎಂದು ಮತ್ತೊಬ್ಬರು ಹೇಳಿದ್ದಾರೆ. ನನಗೂ ಹೀಗೆ ಹೀಲ್ಸ್ ಹಾಕಿಕೊಂಡು ಸೀರೆಯುಟ್ಟು ನರ್ತಿಸಬೇಕು ಎನ್ನಿಸುತ್ತಿದೆ ಎನ್ನುತ್ತಿದ್ದಾರೆ ಮಗದೊಬ್ಬರು. ಈಕೆ ಹೀಗೆ ಸಂಪ್ರದಾಯವನ್ನು ಮುರಿಯುತ್ತಿರುವುದು ಆಸಕ್ತಿಕರವಾಗಿದೆ ಎಂದು ಇನ್ನೂ ಒಬ್ಬರು ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:19 pm, Thu, 1 June 23