Viral: ಎಲಾನ್​ ಮಸ್ಕ್​ ಭಾರತದ ಅಳಿಯನಾಗಲಿದ್ದಾರೆಯೇ?!

Elon Musk : ಕಲಾವಿದರೊಬ್ಬರು AI ಸಹಾಯದಿಂದ ಉತ್ತರ ಭಾರತೀಯ ವಿವಾಹ ಶೈಲಿಯಲ್ಲಿ ಎಲಾನ್​ ಮಸ್ಕ್‌ನನ್ನು ಶೇರವಾನಿಯಲ್ಲಿ ಸಿಂಗರಿಸಿ, ಮದುಮಗನಂತೆ ಕುದುರೆಯೇರಿಸಿ, ತಮ್ಮ ತಾಳಕ್ಕೆ ತಕ್ಕಂತೆ ಬಗೆಬಗೆಯಲ್ಲಿ ಕುಣಿಸಿದ್ದಾರೆ.

Viral: ಎಲಾನ್​ ಮಸ್ಕ್​ ಭಾರತದ ಅಳಿಯನಾಗಲಿದ್ದಾರೆಯೇ?!
ರೋಲಿಂಗ್ ಕ್ಯಾನ್ವಾಸ್​ ಎಂಬ ಇನ್​ಸ್ಟಾ ಪುಟದಲ್ಲಿ ಎಐ ಕಲಾವಿದರ ಕೈಚಳಕದಲ್ಲಿ ಭಾರತೀಯ ವರನಂತೆ ಕಂಗೊಳಿಸುತ್ತಿರುವ ಎಲಾನ್ ಮಸ್ಕ್
Follow us
ಶ್ರೀದೇವಿ ಕಳಸದ
|

Updated on:May 31, 2023 | 3:07 PM

Artificial Intelligence : ‘ಈ ಕಾಲಘಟ್ಟದಲ್ಲಿ ಬದುಕಿದ್ದು ಒಂದು ಮಹಾ ಪರಿವರ್ತನೆಯ ಅಂಗವಾಗಿರುವುದೇ ಸಮ್ಮೋಹಕ. ಇದು ಒಳಿತೋ ಕೆಡಕೋ ಗೊತ್ತಿಲ್ಲ, ಆದರೆ ಆಗುತ್ತಿರುವುದಂತೂ ನಿಜ. ಜಗತ್ತು ಬದಲಾಗುತ್ತಿರುವುದಷ್ಟೇ ಅಲ್ಲ ಅತಿ ವೇಗದಿಂದ ಬದಲಾಗುತ್ತಿದೆ.’ ಇದು ಕೃತಕ ಬುದ್ಧಿಮತ್ತೆಯ (AI) ಹೊಸ ಬೆಳವಣಿಗೆಗಳನ್ನು ಗಮನಿಸುತ್ತಿರುವ ವೃತ್ತಿಪರ ಕಲಾವಿದರೊಬ್ಬರ ಒಕ್ಕಣೆ. ಟೆಸ್ಲಾ, ಸ್ಪೇಸ್‌ಎಕ್ಸ್, ಮತ್ತು ಇತ್ತೀಚೆಗೆ ಟ್ವಿಟರ್‌ ಖ್ಯಾತಿಯ ಎಲಾನ್ ಮಸ್ಕ್ (Elon Musk) ಉತ್ತರ ಭಾರತೀಯ ಶೈಲಿಯಲ್ಲಿ ಮದುವೆಯಾದರೆ ಯಾವ ರೀತಿಯ ಪೋಷಾಕು ಧರಿಸುತ್ತಾರೆ, ಹೇಗೆ ಕಾಣುತ್ತಾರೆ, ಊಹಿಸಬಲ್ಲಿರಾ? ಕೃತಕ ಬುದ್ಧಿಮತ್ತೆಯ ಹೊಸ ಬೆಳವಣಿಗೆಗಳಾದ ಜಿಪಿಟಿ ಮತ್ತು ಉತ್ಪಾದಕ ಕೃತಕ ಬುದ್ಧಿಮತ್ತೆ (Generative AI) ನಿಮ್ಮ ಕುತೂಹಲವನ್ನು ತಣಿಸುವುದಲ್ಲದೇ ನೀವು ಬೆಚ್ಚಿಬೀಳುವಂತೆಯೂ ಮಾಡಬಲ್ಲುವು.

ಇದನ್ನೂ ಓದಿ
Image
Viral Video: ಅಜ್ಜಿ, ನಿಮ್ಮ ಶಕ್ತಿಚೈತನ್ಯವನ್ನು ನಮಗೂ ಸ್ವಲ್ಪ ಕಳಿಸಿ ಎನ್ನುತ್ತಿರುವ ನೆಟ್ಟಿಗರು
Image
Viral Video: ಮಳೆಯ ಆಹ್ಲಾದಕ್ಕೆ ಮನಸೋತ ಮರಿಯಾಮೆಗಳ ವಿಡಿಯೋ
Image
Viral Video: ಚೈನೀಸ್​ ಖಾದ್ಯದಲ್ಲಿ ಜೀವಂತ ಕಪ್ಪೆಮರಿ; ಗ್ರಾಹಕರ ಕ್ಷಮೆ ಕೇಳಿದ ರೆಸ್ಟೋರೆಂಟ್
Image
Viral Video: ಆಮೆಯನ್ನು ರಕ್ಷಿಸಲು ಮನುಷ್ಯರ ಬಳಿ ಸಹಾಯ ಕೇಳಿದ ಶಾರ್ಕ್​?!
View this post on Instagram

A post shared by Rolling Canvas Presentations?? (@rolling_canvas_)

‘ನನ್ನ ಕಲ್ಪನೆಯಲ್ಲಿ ಎಲಾನ್​ ಮಸ್ಕ್‌ನ ಭಾರತೀಯ ವಿವಾಹ’ ಎಂಬ ಒಕ್ಕಣೆಯ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಕಲಾವಿದರೊಬ್ಬರು AI ಸಹಾಯದಿಂದ ಮಸ್ಕ್‌ನನ್ನು ಶೇರವಾನಿಯಲ್ಲಿ ಸಿಂಗರಿಸಿ, ಮದುಮಗನಂತೆ ಕುದುರೆಯೇರಿಸಿ, ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲೆಲ್ಲ ವೈರಲ್ ಆಗಿ ಭಾರೀ ಮೋಡಿ ಮಾಡಿದೆ.

ಇದನ್ನೂ ಓದಿ : Viral: ನನ್ನನ್ನು ಮದುವೆಯಾಗುವೆಯಾ? ಡಬ್ಲಿನ್​ ವಿಮಾನ ನಿಲ್ದಾಣದಲ್ಲಿ ಹೀಗೊಂದು ಪ್ರೇಮನಿವೇದನಾ ಪ್ರಸಂಗ

‘ಒಂದೊಮ್ಮೆ ನಮ್ಮ ಕಲ್ಪನೆಗಳನ್ನು ಕುಂಚದಿಂದ ಹಾಳೆಯಲ್ಲಿ ಮೂಡಿಸುತ್ತಿದ್ದೆವು, ಈಗ ನಮ್ಮ ಕನಸುಗಳನ್ನು AIಗೆ ಸಂವಹಿಸಿ ಅವನ್ನು ನನಸಾಗಿಸಬಹುದು’ ಎಂದು ತಮ್ಮ ಕಲಾಪಯಣವನ್ನು ವ್ಯಾಖ್ಯಾನಿಸಿದ್ದಾರೆ. ‘ಇದು ನಿಜವಾಗಿಯೂ AI ಸೃಷ್ಟಿಸಿದ್ದು ಎಂದು ನಂಬಲೇ ಆಗುತ್ತಿಲ್ಲ,’ ಎಂದಿದ್ದಾರೆ ಅನೇಕರು. ‘ನಮ್ಮ ಮುಂದಿರುವುದು ಯಾವುದು ಅಸಲಿ ಯಾವುದು ನಕಲಿ ಎಂದು ಗೊತ್ತಾಗದೇ ಹುಚ್ಚೆಬ್ಬಿಸುವ ಕಾಲ,’ ಎಂದು ಭವಿಷ್ಯ ನುಡಿದಿದ್ದಾರೆ ಕೆಲವರು.

ಇದನ್ನು ಓದಿ : Viral Video: 22 ವರ್ಷಗಳ ನಂತರ ಒಡಹುಟ್ಟಿದವರ ಪುನರ್ಮಿಲನ

ಸೋಶಿಯಲ್ ಮೀಡಿಯಾದ ಮಿತಿಮೀರಿದ ಬಳಕೆಯ, ಸುಳ್ಳುಸುದ್ದಿಗಳ ಸತತ ಹರಡುವಿಕೆಯ ಈ ಕಾಲದಲ್ಲಿ ಇಂಥ AI ತಂತ್ರಜ್ಞಾನಗಳು ಮಂಗನ ಕೈಯ್ಯಲ್ಲಿ ಕೊಟ್ಟ ಮಾಣಿಕ್ಯವಾಗುತ್ತವೋ? ಅಥವಾ ಮನುಷ್ಯನನ್ನು ಇನ್ನೂ ಹೆಚ್ಚಿನ ಪ್ರಗತಿಯತ್ತ ಒಯ್ಯುವ ದಾರಿದೀಪಗಳಾಗುತ್ತವೋ? ಉತ್ತರ ಯಾರಿಗೂ ಗೊತ್ತಿಲ್ಲ. ಸದ್ಯಕ್ಕೆ ಮೇಲಿನ ಚಿತ್ರಗಳನ್ನು ನೋಡಿ ನಿಮಗೇನನ್ನಿಸಿತು? ತಿಳಿಸಿ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:04 pm, Wed, 31 May 23

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು