AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tattoo: ಭಾರತೀಯ ಬುಡಕಟ್ಟು ಸಂಸ್ಕೃತಿಯ ಒಂದು ಭಾಗವೇ ನಾವೀಗ ಫ್ಯಾಶನ್ ಆಗಿ ಬಳಸುತ್ತಿರುವ ಟ್ಯಾಟೂಗಳು; ಇಲ್ಲಿದೆ ಇದರ ಕುರಿತ ಮಾಹಿತಿ

ಟ್ಯಾಟೂ ಹಾಕಿಸಿಕೊಳ್ಳುವುದು ವಿದೇಶಿಗರಿಂದ ಭಾರತಕ್ಕೆ ಬಂದ ಹೊಸ ಫ್ಯಾಶನ್ ಎಂದು ನೀವು ತಿಳಿದುಕೊಂಡಿದ್ದರೆ ಅದು ತಪ್ಪು ಮಾಹಿತಿ. ಈ ಕಲೆಯು ಭಾರತೀಯ ಬುಡಕಟ್ಟು ಸಂಪ್ರದಾಯಕ್ಕೆ ತಕ್ಕಂತೆ ಧಾರ್ಮಿಕವಾಗಿ ಪೂಜಿಸಲ್ಪಟ್ಟಿದೆ.

Tattoo: ಭಾರತೀಯ ಬುಡಕಟ್ಟು ಸಂಸ್ಕೃತಿಯ ಒಂದು ಭಾಗವೇ ನಾವೀಗ ಫ್ಯಾಶನ್ ಆಗಿ ಬಳಸುತ್ತಿರುವ ಟ್ಯಾಟೂಗಳು; ಇಲ್ಲಿದೆ ಇದರ ಕುರಿತ ಮಾಹಿತಿ
Taato
TV9 Web
| Edited By: |

Updated on:Oct 27, 2022 | 11:04 PM

Share

ಹಳ್ಳಿ ಪ್ರದೇಶಗಳಲ್ಲಿ ತಮ್ಮ ಸಮುದಾಯಕ್ಕೆ ತಕ್ಕಂತೆ ಕಲೆ ಮತ್ತು ಸಂಸ್ಕೃತಿ ಪ್ರತೀಕವಾಗಿ ಒಂದೊಂದು ವಿಭಿನ್ನ ರೀತಿಯ ಹಚ್ಚೆಗಳನ್ನು ಹಾಕುವುದೇ ಸಾಂಪ್ರದಾಯವಾಗಿದೆ. ಆದರೆ ಇಂದಿನ ಬದಲಾದ ಜೀವನ ಪದ್ಧತಿಯಿಂದಾಗಿ ಬುಡಕಟ್ಟು ಸಮುದಾಯಗಳ ಹಚ್ಚೆಗಳು ಕಣ್ಮರೆಯಾಗುತ್ತಿವೆ. ತಮ್ಮ ಸಮುದಾಯದ ಹಚ್ಚೆ ಅಭ್ಯಾಸಗಳು ಏನೆಂದು ಯುವ ಪೀಳಿಗೆಗೆ ತಿಳಿಸುವುದು ಅಗತ್ಯವಾಗಿದೆ.

ಇಂದು ಹಚ್ಚೆ ಅಥವಾ ಟ್ಯಾಟೂಗಳು ಯುವಪೀಳಿಗೆಗೆ ಫ್ಯಾಶನ್ ಆಗಿ ಬದಲಾಗಿದ್ದು, ದಿನಕ್ಕೊಂದು ರೀತಿಯ ಹೊಸ ಹೊಸ ವಿನ್ಯಾಸಗಳ ಆವಿಷ್ಕಾರಗಳನ್ನು ಕಾಣಬಹುದು. ಇದೀಗ ಉದ್ಯಮವಾಗಿ ಬದಲಾಗಿದ್ದು, ಕೆಲವೊಂದಷ್ಟು ಜನರು ನಾಲಿಗೆ, ಕಣ್ಣುಗಳೊಳಗೆ ಕೂಡ ಹಾಕಿರುವ ಅದೆಷ್ಟೋ ನಿದರ್ಶನಗಳಿವೆ.

ಟ್ಯಾಟೂಗಳು ಸಾಮಾನ್ಯವಾಗಿ ಚರ್ಮದ ವರ್ಣದ್ರವ್ಯವನ್ನು ಬದಲಾಯಿಸಲು, ಅಳಿಸಲಾಗದ ಅಥವಾ ತಾತ್ಕಾಲಿಕ ಶಾಯಿ, ರಂಗುಗಳು ಹಾಗೂ ವರ್ಣದ್ರವ್ಯಗಳನ್ನು ಚರ್ಮದ ಒಳಪದರದಲ್ಲಿ ಹಾಕಿ ವಿನ್ಯಾಸವನ್ನು ಮಾಡಲಾಗುತ್ತದೆ.

ಟ್ಯಾಟೂ ಹಾಕಿಸಿಕೊಳ್ಳುವುದು ವಿದೇಶಿಗರಿಂದ ಭಾರತಕ್ಕೆ ಬಂದ ಹೊಸ ಫ್ಯಾಶನ್ ಎಂದು ನೀವು ತಿಳಿದುಕೊಂಡಿದ್ದರೆ ಅದು ತಪ್ಪು ಮಾಹಿತಿ. ಈ ಕಲೆಯು ಭಾರತೀಯರಲ್ಲಿ ಯುಗಗಳಿಂದಲೂ ಜನಪ್ರಿಯವಾಗಿದೆ. ಈಶಾನ್ಯದ ಖೋಯ್ಬು ಬುಡಕಟ್ಟು ಮತ್ತು ನೀಲಿಗಿರ್ಸ್‌ನ ತೋಡಾ ಬುಡಕಟ್ಟಿನಿಂದ ಮಧ್ಯಪ್ರದೇಶದ ಬೈಗಾ ಬುಡಕಟ್ಟಿನವರೆಗೂ ಆವರ ಸಂಪ್ರದಾಯಕ್ಕೆ ತಕ್ಕಂತೆ ಧಾರ್ಮಿಕವಾಗಿ ಪೂಜಿಸಲ್ಪಟ್ಟಿದೆ.

ಕೆಲವೊಂದು ಬುಡಕಟ್ಟುಗಳಲ್ಲಿ ಬಳಸುವ ಹಚ್ಚೆಗಳ ಕುರಿತ ವಿವರಗಳೆಂದರೆ

  • ಬೈಗಾ ಬುಡಕಟ್ಟಿನ ಮಹಿಳೆಯರು ತಮ್ಮ ದೇಹದ ಮೇಲೆ ಹಚ್ಚೆಗಳನ್ನು ಆಭರಣಗಳಂತೆ ಹಾಕಿರುವುದನ್ನು ಕಾಣಬಹುದು. ಈ ಹಚ್ಚೆಗಳು ಅಲ್ಲಿನ ಪ್ರದೇಶದ ಕುತೂಹಲ ಮತ್ತು ಆಸಕ್ತಿಯನ್ನು ಹುಟ್ಟುಹಾಕುವ ವಿವಿಧ ಚಿತ್ರಣಗಳನ್ನು ಬಿಡಿಸಲಾಗುತ್ತದೆ.
  • ಅರುಣಾಚಲ ಪ್ರದೇಶದ ಅಪತಾನಿ ಬುಡಕಟ್ಟು ಜನಾಂಗದವರ ತಮ್ಮ ಮುಖದ ಮೇಲಿನ ಹಚ್ಚೆಯ ಜೊತೆಗೆ ಮೂಗಿಗೆ ಚುಚ್ಚಿರುವ ಆಭರಣವೇ ವಿಭಿನ್ನವಾಗಿದ್ದು, ಅದರ ಜೊತೆಗೆ ಮಹಿಳೆಯರು ಹಣೆಯಿಂದ ಮೂಗಿನ ತುದಿಯವರೆಗೆ ಉದ್ದನೆಯ ಗೆರೆ ಮತ್ತು ಗಲ್ಲದ ಮೇಲೆ ಐದು ಚಿಕ್ಕ ಗೆರೆಗಳನ್ನು ಕಾಣಬಹುದು. ಇದು ಅವರ ಸಂಸ್ಕೃತಿ ಸಂಪ್ರದಾಯವನ್ನು ತಿಳಿಸುತ್ತದೆ.
  • ನಾಗಾಲ್ಯಾಂಡ್‌ನ ಬುಡಕಟ್ಟು ಸಮುದಾಯವೊಂದು ಯುದ್ಧದ ಸಂದರ್ಭದಲ್ಲಿ ತಮ್ಮ ಶಕ್ತಿಯನ್ನು ಸೂಚಿಸುವ ಸಲುವಾಗಿ ಮುಖದ ಮೇಲೆ ಹಚ್ಚೆ ಹಾಕಿಸಿಕೊಳ್ಳುತ್ತಿದ್ದರು.
  • ಗುಜರಾತಿನ ರಾಬರಿಸ್ ಮತ್ತು ಭರ್ವಾಡ್ಸ್ ಬುಡಕಟ್ಟು ತಮ್ಮ ವಿಸ್ತಾರವಾದ ಟ್ರಜ್ವಾ ಟ್ಯಾಟೂಗಳಿಗೆ ಹೆಸರುವಾಸಿಯಾಗಿದ್ದರು, ಇದು ಸೌಂದರ್ಯ ಮತ್ತು ಸಹಿಷ್ಣುತೆಯ ಸಂಕೇತವಾಗಿದೆ.

ಹಿಂದಿನ ಕಾಲದ ಹಚ್ಚೆಗಳು ಒಬ್ಬರ ಸಮುದಾಯದ ಗುರುತಾಗಿದ್ದು, ನಾನು ಯಾರು ಮತ್ತು ನಾನು ಎಲ್ಲಿಂದ ಬಂದಿದ್ದೇನೆ ಎಂದು ವಿವರಿಸುವಂತಹ ಕಲೆಯಾಗಿತ್ತು.

ಇದನ್ನು ಓದಿ: ಜೀವನದಲ್ಲಿ ಒಂಟಿಯಾದೇ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದೆಯೇ ಇಲ್ಲಿದೆ ಸಮಸ್ಯೆಗೆ ಸೂಕ್ತ ಸಲಹೆ

ಸಾಂಪ್ರದಾಯಿಕವಾಗಿ ಹಿಂದಿನ ಸಾಂಪ್ರದಾಯವನ್ನು ಬಿಂಬಿಸುವ ಹಚ್ಚೆಯು ವೇಗವಾಗಿ ಕಣ್ಮರೆಯಾಗುತ್ತಿವೆ. ತಮ್ಮ ಸಮುದಾಯದ ಹಚ್ಚೆ ಅಭ್ಯಾಸಗಳು ಏನೆಂದು ಇನ್ನೂ ಕೆಲವು ಸಮುದಾಯಗಳಿಗೆ ಮಾತ್ರ ತಿಳಿದಿವೆ. ಬದಲಾದ ಜೀವನ ಪದ್ದತಿಯಿಂದಾಗಿ ಕಲೆಗಳು ಕಣ್ಮರೆಯಾಗುತ್ತಿರುವುದು ವಿಪರ್ಯಾಸ. ಆದರೆ ಇಂದು ಹೊಸ ಆಯಾಮದೊಂದಿಗೆ ಈ ಹಚ್ಚೆಗಳು ಉದ್ಯಮವಾಗಿ ಬೆಳೆಯುತ್ತಿದೆ. ಇದು ದೇಹದ ಚರ್ಮಕ್ಕೆ ಎಷ್ಟು ಹಾನಿಕಾರಕ ಎಂಬುದನ್ನು ತಿಳಿಯಬೇಕಿದೆ.

Published On - 4:24 pm, Thu, 27 October 22

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ