Beauty Tips; ನಿಮ್ಮ ತ್ವಚೆಯ ರಕ್ಷಣೆಗಾಗಿ ಬಳಸುವ ಫೇಸ್ ಮಾಸ್ಕ್‌ಗಳು ನಿಜವಾಗಿಯೂ ಪ್ರಯೋಜನಕಾರಿಯೇ? ಇಲ್ಲಿವೆ ಸಲಹೆಗಳು
ಫೇಸ್ ಮಾಸ್ಕ್‌ಗಳಲ್ಲಿ ರಾಸಾಯನಿಕಗಳನ್ನು ಬಳಸುವುದ್ದರಿಂದ ಆದಷ್ಟು ನಿಯಮಿತವಾಗಿ ಬಳಸಿ. ಇದರಿಂದ ಆರೋಗ್ಯಕರ ತ್ವಚೆಯನ್ನು ಪಡೆಯಬಹುದು ಎಂದು ಚರ್ಮರೋಗ ತಜ್ಞ ಡಾ ಮಾನಸಿ ಶಿರೋಲಿಕರ್ ಸಲಹೆ ನೀಡುತ್ತಾರೆ.
ಇಂದಿನ ಒತ್ತಡದ ಜೀವನದಲ್ಲಿ ಅತಿಯಾದ ಚಿಂತೆ, ಧೂಳು, ಮಾಲಿನ್ಯಗಳಿಂದ ನಿಮ್ಮ ತ್ವಚೆಯನ್ನು, ಮುಖದ ಕಾಂತಿಯನ್ನು ಹೆಚ್ಚಿಸಲು ಪ್ರತಿದಿನ ಫೇಸ್ ಮಾಸ್ಕ್‌ಗಳನ್ನು ಬಳಸುವುದು ಸಾಮಾನ್ಯ. ಆದರೆ ಫೇಸ್ ಮಾಸ್ಕ್‌ಗಳಲ್ಲಿ ರಾಸಾಯನಿಕಗಳನ್ನು ಬಳಸುವುದ್ದರಿಂದ ಆದಷ್ಟು ನಿಯಮಿತವಾಗಿ ಬಳಸಿ. ಇದರಿಂದ ಆರೋಗ್ಯಕರ ತ್ವಚೆಯನ್ನು ಪಡೆಯಬಹುದು ಎಂದು ಚರ್ಮರೋಗ ತಜ್ಞ ಡಾ ಮಾನಸಿ ಶಿರೋಲಿಕರ್ ಸಲಹೆ ನೀಡುತ್ತಾರೆ.
ಮುಲ್ತಾನಿ ಮಿಟ್ಟಿ ಮತ್ತು ಹಳದಿ ಚಂದನ, ಬೆಸನ್‌ನಂತಹ ಸಾಮಾನ್ಯ ತ್ವಚೆಗೆ ಆರೋಗ್ಯವನ್ನು ನೀಡುವ ಪೇಸ್ಟ್‌ಗಳನ್ನು ಬಳಸುವುದ್ದರಿಂದ ನಿಮ್ಮ ತ್ವಚೆಯ ಸಮಸ್ಯೆಗೆ ಪರಿಹಾರ ಪಡೆಯಲು ಸಾಧ್ಯವಿದೆ. ಒತ್ತಡದ ದಣಿದ ದಿನದ ನಂತರ ತ್ವಚೆಯ ಹೊಳಪಿಗಾಗಿ ಇದನ್ನು ಬಳಸುವುದರಿಂದ ತ್ವಚೆಗೆ ಹೈಡ್ರೇಟಿಂಗ್ ಮತ್ತು ಮತ್ತು ಉತ್ತಮ ಆರೋಗ್ಯವನ್ನು ನೀಡುತ್ತದೆ.
ಮುಲ್ತಾನಿ ಮಿಟ್ಟಿ ಒಳಗೊಂಡಿರುವಂತೆ ಇತರ ಮಣ್ಣಿನ ಫೇಸ್ ಮಾಸ್ಕ್, ಶೀಟ್ ಮಾಸ್ಕ್‌ಗಳು ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಂತೆ ಹಲವಾರು ರೀತಿಯ ಮತ್ತು ಫೇಸ್ ಮಾಸ್ಕ್‌ಗಳು ಮಾರ್ಕೆಟ್ ನಲ್ಲಿ ಲಭ್ಯವಿರುವುದರಿಂದ ಅತ್ಯುತ್ತಮವಾದದನ್ನು ಆಯ್ಕೆ ಮಾಡುವುದು ನಿಮ್ಮ ತ್ವಚೆಗೆ ಉತ್ತಮವಾಗಿದೆ.
ಚಾರ್ಕೋಲ್ ಫೇಸ್ ಮಾಸ್ಕ್‌ಗಳನ್ನು ಬಹಳಷ್ಟು ಜನ ತ್ವಚೆಗೆ ಉತ್ತಮ ಎಂದು ನಂಬಿ ಬಳಕೆ ಮಾಡಿದರೂ ಅವುಗಳ ಪರಿಣಾಮವನ್ನು ಪರೀಕ್ಷಿಸುವ ಯಾವುದೇ ವೈಜ್ಞಾನಿಕ ಅಧ್ಯಯನಗಳು ಅಥವಾ ಪುರಾವೆಗಳಿಲ್ಲ. ಇಂದು ಅತಿಯಾಗಿ ಬಳಕೆ ಮಾಡುವ ಶೀಟ್ ಮಾಸ್ಕ್‌ಗಳು ತ್ವಚೆಗೆ ಚಿಕಿತ್ಸೆ ನೀಡುವ ಬದಲು ತ್ವಚೆಯನ್ನು ಹೆಚ್ಚಾಗಿ ಒಣಗುವಂತೆ ಮಾಡುತ್ತದೆ. ಕಾಲ ನಂತರದಲ್ಲಿ ಇದು ತ್ವಚೆಯ ಮೇಲೆ ಪರಿಣಾಮ ಬೀರಬಹುದು ಎಂದು ಹೇಳುತ್ತಾರೆ.
ಇಂದು ಅನೇಕ ತ್ವಚೆಗೆ ಸಂಬಂಧಪಟ್ಟ ಬ್ರ್ಯಾಂಡ್‌ಗಳು ಸ್ಲೀಪಿಂಗ್ ಮಾಸ್ಕ್‌ಗಳನ್ನು ತಯಾರಿಸುತ್ತವೆ. ಇದನ್ನು ಬಳಕೆ ಮಾಡುವುದು ಉತ್ತಮ. ಯಾಕೆಂದರೆ ಇದು ನಿಮ್ಮ ತ್ವಚೆಯ ತೇವಾಂಶವನ್ನು ಲಾಕ್ ಮಾಡುತ್ತದೆ ಮತ್ತು ಹೈಡ್ರೀಟ್ ಮಾಡಲು ಸಹಕಾರಿಯಾಗಿದೆ. ಜೊತೆಗೆ ತೇವಾಂಶ ಮತ್ತು ಕೊಬ್ಬಿದ ಚರ್ಮಕ್ಕೆ ಉತ್ತಮ ಎಂದು ಇವರು ಹೇಳುತ್ತಾರೆ.
ತ್ವಚೆಯು ಹೊಳಪಿನಿಂದ ಕಾಣಲು ನೀವು ಬಯಸಿದರೆ, ನೀವು ರಾತ್ರಿಯ ಎಕ್ಸ್‌ಫೋಲಿಯೇಟಿಂಗ್ ಮಾಸ್ಕ್ ಬಳಸಿ. ಇದು ಚರ್ಮವನ್ನು ರಕ್ಷಿಸಲು ಸಹಾಯ ಮಾಡುವ AHA ಅಥವಾ BHAಗಳಂತಹ ಎಕ್ಸ್‌ಫೋಲಿಯೇಟಿಂಗ್ ಪದಾರ್ಥಗಳನ್ನು ಒಳಗೊಂಡಿರುತ್ತದೆ ಮತ್ತು ಕೆಲವೇ ವಾರಗಳಲ್ಲಿ ಗ್ಲೋ ಪಡೆಯಲು ಸಾಧ್ಯ. ಇದು ತ್ವಚೆಯನ್ನು ಆಳವಾಗಿ ಸ್ವಚ್ಛಗೊಳಿಸಿ, ಮೊಡವೆಗಳನ್ನು ಉಂಟುಮಾಡುವ ಮುಖದ ಮೇಲಿನ ರಂಧ್ರಗಳನ್ನು ಮುಚ್ಚಿಹಾಕಲು ಸಹಾಯಕವಾಗಿದೆ ಎಂದು ಸಲಹೆ ನೀಡುತ್ತಾರೆ.
ಅಲ್ಲದೆ, ನೀವು ಚರ್ಮರೋಗ ವೈದ್ಯರನ್ನು ಸಂಪರ್ಕಿಸಿ ಕೆಮಿಕಲ್ ಪೀಲ್ ಚಿಕಿತ್ಸೆ ಮಾಡಿದರೂ ಉತ್ತಮ. ಇದು ಕೂಡ ಒಂದು ರೀತಿಯ ಫೇಸ್ ಮಾಸ್ಕ್ ಆಗಿದ್ದು, ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳನ್ನು ಸುಧಾರಿಸುವುದು, ಮೊಡವೆಗಳು ಮತ್ತು ಮೊಡವೆಗಳ ಗಾಯಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುವುದು. ಹೈಪರ್‌ಪಿಗ್ಮೆಂಟೇಶನ್ ಮತ್ತು ಚರ್ಮದ ಟೋನ್‌ಗಳನ್ನು ಸಹ ಹೊರಹಾಕಲು ಇದು ಸಹಾಯಕವಾಗಿದೆ.
ಇದನ್ನು ಓದಿ: Health Tips: ಹಬ್ಬಗಳ ಸಡಗರದ ಮಧ್ಯೆ ನಿಮ್ಮ ಆರೋಗ್ಯ ಕಡೆಗಣಿಸದಿರಿ ಇಲ್ಲಿದೆ ಪಾಲಿಸಬೇಕಾದ ಪ್ರಮುಖ 5 ಯೋಗಾಸನಗಳು
ಆದಾಗ್ಯೂ, ನಿಮ್ಮ ಚರ್ಮದ ಅಂದರೆ ಮುಖಕ್ಕೆ ಮಾತ್ರವಲ್ಲದೆ, ಚರ್ಮದ ಎಲ್ಲಾ ಪ್ರಕಾರಗಳಿಗೂ ಬೇಕಾಗುವ ಎಲ್ಲಾ ರೀತಿಯ ಸಲಹೆಗಳಿಗೆ ಚರ್ಮಶಾಸ್ತ್ರಜ್ಞರನ್ನು ಸಂಪರ್ಕಿಸುವುದು ಅಗತ್ಯವಾಗಿದೆ. ಎಕೆಂದರೆ ಇಂದು ಸಾಕಷ್ಟು ಜನರು ಜಾಹೀರಾತುಗಳಿಗೆ ಮಾರು ಹೋಗಿ ಸಮಸ್ಯೆಯನ್ನು ತಂದುಕೊಳ್ಳುವ ಕಾರಣ ಜಾಗರೂಕರಾಗಿರುವುದು ಅಗತ್ಯ ಎಂದು ಸಲಹೆ ನೀಡುತ್ತಾರೆ.
(ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.)
Published On - 6:50 pm, Thu, 27 October 22