Viral Story: ಮದುವೆಯಾದ ಮರುದಿನವೇ ಸರ್ಕಾರಿ ನೌಕರಿ ಕಳೆದುಕೊಂಡ ವರ
ಎಲ್ಲರಿಗೂ ತಮ್ಮ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕೆನ್ನುವ ಆಸೆ ಇರುತ್ತದೆ, ಅದರಲ್ಲೂ ವರ ಸರ್ಕಾರಿ ನೌಕರಿಯಲ್ಲಿದ್ದರೆ ಇನ್ನೂ ಸ್ವಲ್ಪ ಹೆಚ್ಚೇ ಖರ್ಚು ಮಾಡಿ ಮದುವೆಮಾಡುತ್ತಾರೆ.
ಎಲ್ಲರಿಗೂ ತಮ್ಮ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕೆನ್ನುವ ಆಸೆ ಇರುತ್ತದೆ, ಅದರಲ್ಲೂ ವರ ಸರ್ಕಾರಿ ನೌಕರಿಯಲ್ಲಿದ್ದರೆ ಇನ್ನೂ ಸ್ವಲ್ಪ ಹೆಚ್ಚೇ ಖರ್ಚು ಮಾಡಿ ಮದುವೆಮಾಡುತ್ತಾರೆ. ಯಾಕೆಂದರೆ ಸರ್ಕಾರಿ ನೌಕರಿ ಇದ್ದರೆ ಕೆಲಸ ಹೋಗುವ ತಲೆಬಿಸಿಯಿಲ್ಲ ಎಂದು. ಇದೇ ರೀತಿಯ ಆಸೆಯನ್ನು ಈ ಕುಟುಂಬ ಕೂಡ ಹೊಂದಿತ್ತು.
ಆದರೆ ಮದುವೆಯಾಗಿ ಎರಡೇ ದಿನಕ್ಕೆ ವ್ಯಕ್ತಿಯೊಬ್ಬ ತನ್ನ ಸರ್ಕಾರಿ ನೌಕರಿಯನ್ನು ಕಳೆದುಕೊಂಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ತಮ್ಮ ಕುಟುಂಬದ ಮಗಳು ಸರ್ಕಾರಿ ನೌಕರಿಯಲ್ಲಿರುವವರನ್ನು ಮದುವೆಯಾಗಿದ್ದಾಳೆ ಎಂದು ಸಹಜವಾಗಿಯೇ ಕುಟುಂಬದವರು ಸಂತಸ ಪಟ್ಟಿದ್ದರು. ಆದರೆ ಕುಟುಂಬದವರ ಸಂತೋಷ ಹೆಚ್ಚು ದಿನ ಉಳಿಯಲಿಲ್ಲ, ವರನ ಹೆಸರು ಪ್ರಣವ್ ರಾಯ್ ಅವರು 2017 ರಿಂದ ಜಲ್ಪೈಗುರಿಯ ರಾಜ್ದಂಗ್ ಕೆಂಡಾ ಮೊಹಮ್ಮದ್ ಹೈಸ್ಕೂಲ್ನಲ್ಲಿ ಕೆಲಸ ಮಾಡುತ್ತಿದ್ದರು.
ಮತ್ತಷ್ಟು ಓದಿ:ಯುವಕರೇ ನಾಚಿ ನೀರಾಗುವಂತೆ ಜಿಮ್ನಲ್ಲಿ ಫಿಟ್ನೆಸ್ ಮೆಂಟೇನ್ ಮಾಡುತ್ತಿರುವ 103ರ ವಯಸ್ಸಿನ ಅಜ್ಜಿ
ಇಬ್ಬರೂ ಆಡಂಬರದಲ್ಲಿ ಮದುವೆಯಾದರು. ಆದರೆ ಅದೇ ದಿನ ನ್ಯಾಯಾಲಯ ಮಹತ್ವದ ತೀರ್ಪು ನೀಡಿ 842 ಶಿಕ್ಷಕರ ನೇಮಕಾತಿ ರದ್ದುಪಡಿಸಿ ಆದೇಶ ಹೊರಡಿಸಿದೆ.
ಈ ಪಟ್ಟಿಯನ್ನು ಸಾರ್ವಜನಿಕಗೊಳಿಸಿದಾಗ ಅದರಲ್ಲಿ ಪ್ರಣವ್ ರಾಯ್ ಹೆಸರೂ ಇತ್ತು. ಕೆಲಸ ಕಳೆದುಕೊಂಡ ಸುದ್ದಿ ತಿಳಿದ ತಕ್ಷಣ ಮನೆಯಲ್ಲಿ ಬೇಸರ ಮಡುಗಟ್ಟಿದೆ.
ಅಷ್ಟರಲ್ಲಾಗಲೇ ಪ್ರಣವ್ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದವು. ಜನರು ವಿವಿಧ ಕಾಮೆಂಟ್‌ಗಳನ್ನು ಮಾಡಲು ಪ್ರಾರಂಭಿಸಿದರು. ಗುರುವಾರ ಮದುವೆಯಾದರು ಶುಕ್ರವಾರ ಕೆಲಸ ಹೋಯಿತು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ, ಆದರೆ ಇದ್ಯಾವುದಕ್ಕೂ ದಂಪತಿ ಅಥವಾ ಅವರ ಕುಟುಂಬದವರು ಪ್ರತಿಕ್ರಿಯಿಸಿಲ್ಲ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ