ತಾಳಿ ಕಟ್ಟುವ ಶುಭ ವೇಳೆ, ಹಸೆಮಣೆ ಮೇಲೆ ಕುಳಿತ ವಧು ಮದುವೆ ಮಂಟಪದಲ್ಲಿ ಏನು ಮಾಡಿದಳು ನೋಡಿ! ವೈರಲ್ ವಿಡಿಯೋ ಇಲ್ಲಿದೆ

ಮದುವೆಯ ದಿನದಂದು ವಧು ಮತ್ತು ವರರು ಒಟ್ಟಿಗೆ ಹಸೆಮಣೆ ಮೇಲೆ ಕುಳಿತು ಅನೇಕ ಶಾಸ್ತ್ರಗಳನ್ನು ಪೂರೈಸಬೇಕಾಗುತ್ತದೆ. ಮುಖ್ಯವಾಗಿ ಬಹುತೇಕ ಸಮಯ ವಧು ಮತ್ತು ವರರು ವಿವಾಹ ಸಮಾರಂಭದ ಅಂತ್ಯದವರೆಗೆ ಉಪವಾಸ ಮಾಡಬೇಕಾಗುತ್ತದೆ. ಆದರೆ ಹಶಿವಿಗೆ...

ತಾಳಿ ಕಟ್ಟುವ ಶುಭ ವೇಳೆ, ಹಸೆಮಣೆ ಮೇಲೆ ಕುಳಿತ ವಧು ಮದುವೆ ಮಂಟಪದಲ್ಲಿ ಏನು ಮಾಡಿದಳು ನೋಡಿ! ವೈರಲ್ ವಿಡಿಯೋ ಇಲ್ಲಿದೆ
ಹಸೆಮಣೆ ಮೇಲೆ ಕುಳಿತ ವಧು ಮದುವೆ ಮಂಟಪದಲ್ಲಿ ಏನು ಮಾಡಿದಳು ನೋಡಿ
Follow us
ಸಾಧು ಶ್ರೀನಾಥ್​
|

Updated on: Mar 13, 2023 | 4:16 PM

ತಾಳಿ ಕಟ್ಟುವ ಶುಭ ವೇಳೆ (wedding), ಹಸೆಮಣೆ ಮೇಲೆ ಕುಳಿತ ವಧು ಮದುವೆ ಮಂಟಪದಲ್ಲಿ ಏನು ಮಾಡಿದಳು ನೋಡಿ! ವಿಡಿಯೋ ವೈರಲ್ ಆಗಿದ್ದು ಮದುಮಗಳು ಮಾಡಿದ ಕೆಲಸಕ್ಕೆ ಎಲ್ಲರೂ ಬೆರಗಾಗಿದ್ದಾರೆ! ತಾಳಿ ಕಟ್ಟುವ ಶುಭ ವೇಳೆ, ಹಸೆಮಣೆ ಮೇಲೆ ಕುಳಿತ ವಧು ಮದುವೆ ಮಂಟಪದಲ್ಲಿ (choultry) ಏನು ಮಾಡಿದಳು ನೋಡಿ! ವಿಡಿಯೋ ವೈರಲ್ ಆಗಿದ್ದು ಮದುಮಗಳು ಮಾಡಿದ ಕೆಲಸಕ್ಕೆ ಎಲ್ಲರೂ ಬೆರಗಾಗಿದ್ದಾರೆ! ಈ ಸಮಯದಲ್ಲಿ ಪುರೋಹಿತರು ಮಂತ್ರಗಳ ಪಠಿಸುವುದನ್ನು ಕಾಣಬಹುದು. ವಧು (Bride) ಮತ್ತು ವರನ (Bridegroom) ಕಡೆಯ ಕುಟುಂಬ ಸದಸ್ಯರು ಸಹ ವಿಡಿಯೋದಲ್ಲಿ ಕಂಡುಬರುತ್ತಾರೆ.

ಸೋಷಿಯಲ್ ಮೀಡಿಯಾದಲ್ಲಿ ಹಲವು ವೈವಿಧ್ಯಮಯ ವಿಡಿಯೋಗಳು ವೈರಲ್ ಆಗುತ್ತಿವೆ. ಮದುವೆಗೆ ಸಂಬಂಧಿಸಿದ ವೀಡಿಯೋಗಳು ಒಂದು ಕಡೆಯದ್ದಾದರೆ ಪ್ರಾಣಿಗಳು, ಹಾವುಗಳಿಗೆ ಸಂಬಂಧಿಸಿದ ವಿಡಿಯೋಗಳು ಸಹ ಕ್ಷಿಪ್ರವಾಗಿ ವೈರಲ್ ಆಗುತ್ತಿವೆ. ತಾಜಾ ಪ್ರಕರಣದಲ್ಲಿ ಮದುವೆ ಮಂಟಪದಲ್ಲಿ ವಧು ಮಾಡಿದ ಕೆಲಸವೊಂದು ವೈರಲ್ ಆಗಿದೆ. ವಧುವಿನ ಅತಿರೇಕದ ಕೃತ್ಯದಿಂದಾಗಿ ವೈರಲ್ ಆದ ಮದುವೆಯ ವಿಡಿಯೋ ವೈರಲ್ ಆಗಿದೆ. ಮದುವೆ ಸಮಾರಂಭ ನಡೆಯುತ್ತಿ ಸಮಯದಲ್ಲೇ ವದು ನಿದ್ದೆಗೆ ಜಾರಿಬಿಟ್ಟಿದ್ದಾಳೆ. ಸದ್ಯ ಅದೇ ವಿಡಿಯೋ ಸಖತ್ ಸದ್ದು ಮಾಡುತ್ತಿದೆ. ನಿಜವಾಗಿ ಏನಾಯಿತು ಎಂಬುದರ ಸಂಪೂರ್ಣ ವಿವರಗಳಿಗೆ ಹೋದರೆ..

ಮದುವೆಯ ದಿನದಂದು ವಧು ಮತ್ತು ವರರು ಒಟ್ಟಿಗೆ ಹಸೆಮಣೆ ಮೇಲೆ ಕುಳಿತು ಅನೇಕ ಶಾಸ್ತ್ರಗಳನ್ನು ಪೂರೈಸಬೇಕಾಗುತ್ತದೆ. ಇದನ್ನು ನಾನಾ ಸಂಪ್ರದಾಯದಲ್ಲಿ ನಾನಾ ರೀತಿಯಲ್ಲಿ ವಿಭಿನ್ನವಾಗಿ ಮಾಡಲಾಗುತ್ತದೆ. ಒಂದು ವಿಷಯದಲ್ಲಿ ಮುಖ್ಯವಾಗಿ ಬಹುತೇಕ ಸಮಯ ವಧು ಮತ್ತು ವರರು ವಿವಾಹ ಸಮಾರಂಭದ ಅಂತ್ಯದವರೆಗೆ ಉಪವಾಸ ಮಾಡಬೇಕಾಗುತ್ತದೆ. ಹಶಿವಿಗೆ ನಿದ್ದೆ ಬಂದು ವಧು ಅಥವಾ ವರರು ಆಗಾಗ್ಗೆ ಆಕಳಿಸುವುದನ್ನು ಕಾಣಬಹುದು. ಇಲ್ಲಿ ನಡೆಯುತ್ತಿರುವ ಮದುವೆಯೊಂದರಲ್ಲೂ ಇಂತಹದೊಂದು ತಮಾಷೆಯ ದೃಶ್ಯ ಕಂಡು ಬಂದಿದೆ.

ಈ ವೀಡಿಯೊವನ್ನು Instagram ನಲ್ಲಿ ಹಂಚಿಕೊಳ್ಳಲಾಗಿದೆ. ವೀಡಿಯೋದಲ್ಲಿ ವಧು-ವರರು ಮದುವೆ ಮಂಟಪದಲ್ಲಿ ಕುಳಿತು ಪೂಜೆ ಸಲ್ಲಿಸುತ್ತಿರುವುದು ಕಂಡು ಬಂದಿದೆ. ಈ ಸಮಯದಲ್ಲಿ ಪುರೋಹಿತರು ಸಹ ಮಂತ್ರಗಳ ಪಠಿಸುವುದನ್ನು ಕಾಣಬಹುದು. ವಧು ಮತ್ತು ವರನ ನಡುವೆ ಕೆಲವು ಕುಟುಂಬ ಸದಸ್ಯರು ಸಹ ಕಂಡುಬರುತ್ತಾರೆ.

ಈ ಹಂತದಲ್ಲಿ ವಧು ದಣಿದಂತೆ ಕಾಣುತ್ತದೆ. ಆಕೆ ನಿಧಾನವಾಗಿ ನಿದ್ದೆಗೆ ಜಾರುವುದು ಕಂಡುಬರುತ್ತದೆ. ಸುತ್ತಮುತ್ತ ಇದ್ದ ಬಂಧುಮಿತ್ರರು ಇದನ್ನು ಗಮನಿಸಿಲ್ಲವಾದರೂ ಮದುವೆ ವೀಡಿಯೊ ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿ ವಧು ಮಲಗಿದ್ದನ್ನು ನೋಡಿದ್ದಾನೆ. ಅದನ್ನು ವಿಡಯೋ ರೆಕಾರ್ಡ್​ ಮಾಡುತ್ತಲೇ ಆತ, ವಧುವನ್ನು ಎಚ್ಚರಗೊಳಿಸುವಂತೆ ವರನಿಗೆ ಹೇಳುತ್ತಾನೆ. ಆ ಬಳಿಕ ವರ, ತನ್ನ ನೂತನ ವಧುವನ್ನು ಆತ ಎಬ್ಬಿಸುತ್ತಾನೆ. ಆ ಇಡೀ ಪ್ರಕ್ರಿಯೆಯನ್ನೊಳಗೊಂಡ ವಿಡಿಯೋ ಇದೀಗ ವೈರಲ್ ಆಗಿದೆ.

Also Read:

ನಿದ್ರಾಹೀನತೆ: ಮಧ್ಯರಾತ್ರಿಯಾದರೂ ನಿದ್ರೆ ಬರುತ್ತಿಲ್ಲವೇ? ಈ ಸರಳ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ, ತಕ್ಷಣವೇ ನಿದ್ದೆ

ವರನು ತನ್ನ ಕೈಯಿಂದ ವಧುವನ್ನು ಎಬ್ಬಿಸುತ್ತಿದ್ದಂತೆ ವಧು ಎಚ್ಚರಗೊಳ್ಳುತ್ತಾಳೆ. ಎಚ್ಚರವಾದಾಗ ಸುತ್ತಲೂ ನೋಡಿ ನಗತೊಡಗಿದಳು. ಅವಳ ಕಣ್ಣುಗಳಲ್ಲಿ ನಿದ್ರಾದೇವಿ ಇನ್ನೂ ಸ್ಥಾಪಿತವಾಗಿರುವುದು ಗೋಚರವಾಗುತ್ತದೆ. ಕಣ್ಣು ಕೆಂಪಗೆ ಇರುವುದು ಕಂಡುಬರುತ್ತದೆ. ಈ ಸಂಪೂರ್ಣ ದೃಶ್ಯವನ್ನು ವೀಡಿಯೋಗ್ರಾಫರ್ ಚಿತ್ರೀಕರಿಸಿದ್ದು ವಿಡಿಯೋ ವೈರಲ್ ಆಗಿದೆ. ಸರಿ ಇಂತಹ ದೃಸ್ಯ ಕಣ್ಣಿಗೆ ಬಿದ್ದಿದ್ದೆ ಸಾಮಾಜಿಕ ಜಾಲತಾಣದ ಬಳಕೆದಾರರು ನಾನಾ ಕಮೆಂಟುಗಳನ್ನು ಹಾಕಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ