Viral News: ಕಿಡ್ನಿ-ಲಿವರ್ ಮಾರಾಟಕ್ಕಿದೆ ಎಂದು ಪೋಸ್ಟರ್​​ ಹಾಕಿದ ಕೇರಳ ವ್ಯಕ್ತಿ, ಹಿಂದಿನ ಕಾರಣವೇನು?

ಕಿಡ್ನಿ-ಲಿವರ್ ಮಾರಾಟಕ್ಕಿದೆ ಎಂದು ಕೇರಳದ ವ್ಯಕ್ತಿಯೊಬ್ಬರು ಪೋಸ್ಟರ್​​ ಹಾಕಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆರಂಭದಲ್ಲಿ ಇದು ಚೇಷ್ಟೆ ಎಂದು ಜನರು ಭಾವಿಸಿದ್ದರು,

Viral News: ಕಿಡ್ನಿ-ಲಿವರ್ ಮಾರಾಟಕ್ಕಿದೆ ಎಂದು ಪೋಸ್ಟರ್​​ ಹಾಕಿದ ಕೇರಳ ವ್ಯಕ್ತಿ, ಹಿಂದಿನ ಕಾರಣವೇನು?
ಕಿಡ್ನಿ-ಲಿವರ್ ಮಾರಾಟಕ್ಕಿದೆ ಪೋಸ್ಟರ್
Follow us
ನಯನಾ ರಾಜೀವ್
|

Updated on:Mar 13, 2023 | 9:01 AM

ಕಿಡ್ನಿ-ಲಿವರ್ ಮಾರಾಟಕ್ಕಿದೆ ಎಂದು ಕೇರಳದ ವ್ಯಕ್ತಿಯೊಬ್ಬರು ಪೋಸ್ಟರ್​​ ಹಾಕಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆರಂಭದಲ್ಲಿ ಇದು ಚೇಷ್ಟೆ ಎಂದು ಜನರು ಭಾವಿಸಿದ್ದರು, ಜೊತೆಗೆ ಕೆಲವರು ಸರ್ಕಾರವನ್ನು ಗುರಿಯಾಗಿಸಲು ಇಂತಹ ಪೋಸ್ಟರ್ ಹಾಕಿದ್ದಾರೆ ಎಂದು ಭಾವಿಸಿದ್ದರು. ಪೋಸ್ಟರ್‌ನಲ್ಲಿ ಎರಡು ಮೊಬೈಲ್ ಸಂಖ್ಯೆಗಳನ್ನು ಸಹ ನೀಡಲಾಗಿದೆ. ಅದಕ್ಕೆ ಕರೆ ಮಾಡಿದಾಗ ಸುದ್ದಿ ನಿಜವೆಂದು ತಿಳಿದುಬಂದಿತ್ತು.

ಈ ಆಘಾತಕಾರಿ ಪ್ರಕರಣ ತಿರುವನಂತಪುರದ ಮಣಕಾಡು ಪುಥೇನ್ ರಸ್ತೆ ಪ್ರದೇಶದಲ್ಲಿ ನಡೆದಿದೆ. ಸುದ್ದಿ ಸಂಸ್ಥೆ ಐಎಎನ್ಎಸ್ ಪ್ರಕಾರ, ಈ ಪ್ರದೇಶದಲ್ಲಿ ವಾಸಿಸುವ 50 ವರ್ಷದ ಸಂತೋಷ್ ಕುಮಾರ್ ಅವರು ಕಿಡ್ನಿ ಮತ್ತು ಲಿವರ್ ಮಾರಾಟಕ್ಕಿದೆ ಎಂದು ಪೋಸ್ಟರ್​ ಹಾಕಿದ ವ್ಯಕ್ತಿ.

ಮತ್ತಷ್ಟು ಓದಿ: Albino Fawn: ಅಪರೂಪದ ಬಿಳಿ ಬಣ್ಣದ ಜಿಂಕೆ ಪತ್ತೆ, ವೈರಲ್​ ಪೋಟೋ ಇಲ್ಲಿದೆ ನೋಡಿ

ಹಣ್ಣಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಗೋಣಿಚೀಲ ಎತ್ತುವ ವೇಳೆ ಬೆನ್ನಿಗೆ ಪೆಟ್ಟು ಬಿದ್ದಿತ್ತು. ನಂತರ ಚಿಕಿತ್ಸೆಗೆ ಒಳಗಾಗಬೇಕಾಯಿತು, ಇರುವ ಹಣವೆಲ್ಲಾ ಖಾಲಿಯಾಗಿತ್ತು, ತಮ್ಮ ಕುಟುಂಬಕ್ಕೆ ಸೇರಿದ ಜಮೀನು ಮನಕೋಡು ಜಂಕ್ಷನ್ ಬಳಿ ಇದ್ದು ಅದರಲ್ಲಿ ಒಂದು ಭಾಗವನ್ನು ಮಾರಾಟ ಮಾಡಲು ಬಯಸಿದ್ದೆ, ಆದರೆ ಜಮೀನಿನ ವಿಚಾರದಲ್ಲಿ ಅಣ್ಣನೊಂದಿಗೆ ಜಗಳವಾಗಿತ್ತು. ಆಸ್ತಿ ತಾಯಿಯ ಹೆಸರಿನಲ್ಲಿದ್ದು, ಆರು ಮಂದಿ ಒಡಹುಟ್ಟಿದವರಿಗೆ ಹಂಚಿಕೆ ಮಾಡಲಾಗಿದೆ ಎಂದು ಸಂತೋಷ್ ಸಹೋದರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮತ್ತಷ್ಟು ಓದಿ:ವೈದ್ಯರನ್ನೇ ಬೆಚ್ಚಿ ಬೀಳಿಸಿತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯ ಸ್ಕ್ಯಾನಿಂಗ್​ ರಿಪೋರ್ಟ್

ತನ್ನ ಹೆಂಡತಿ ಮಕ್ಕಳಿಗೆ ಟ್ಯೂಷನ್ ಹೇಳುತ್ತಿದ್ದಳು ಆದರೆ ಕೊರೊನಾ ನಂತರ ಅದೂ ನಿಂತುಹೋಯಿತು. ಈಗ ನಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ದೇಹದ ವಿವಿಧ ಭಾಗಗಳನ್ನು ಮಾರಾಟ ಮಾಡದೆ ಬೇರೆ ದಾರಿ ಇಲ್ಲ ಎಂದು ಹೇಳಿದ್ದಾರೆ.

ವ್ಯಕ್ತಿ ಹಾಕಿರುವ ಪೋಸ್ಟರ್ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಿತ್ರವನ್ನು ಹಂಚಿಕೊಳ್ಳುವಾಗ ಅನೇಕರು ವ್ಯಕ್ತಿಯ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುತ್ತಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:01 am, Mon, 13 March 23

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು