AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋತಿಯಮ್ಮನೊಂದಿಗೆ ಮರಿಬಾತುಕೋಳಿಗಳು; ಮಕ್ಕಳ ದಿನಾಚರಣೆಗೆ ವಿಶೇಷ ವಿಡಿಯೋ

Children’s Day : ಮಮತಾಮಯಿಗೆ ಯಾವ ಮಕ್ಕಳಾದರೇನು? ಅದೊಂದು ಅನುಭೂತಿ. ಐಎಫ್​ಎಸ್​ ಅಧಿಕಾರಿ ಸುಸಾಂತ ನಂದಾ ಹಂಚಿಕೊಂಡಿರುವ ಈ ವಿಡಿಯೋ ನೋಡಿ.

ಕೋತಿಯಮ್ಮನೊಂದಿಗೆ ಮರಿಬಾತುಕೋಳಿಗಳು; ಮಕ್ಕಳ ದಿನಾಚರಣೆಗೆ ವಿಶೇಷ ವಿಡಿಯೋ
Bureaucrat Shares Adorable Video On Children's Day.
TV9 Web
| Edited By: ಶ್ರೀದೇವಿ ಕಳಸದ|

Updated on:Nov 14, 2022 | 3:36 PM

Share

Viral Video : ಇಂದು ಮಕ್ಕಳ ದಿನಾಚರಣೆ. ಐಎಫ್​ಎಸ್​ ಅಧಿಕಾರಿ ಸುಸಾಂತ ನಂದಾ ಟ್ವಿಟರ್​ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ ಐದು ಬಾತುಕೋಳಿ ಮರಿಗಳನ್ನು ಕೋತಿಯೊಂದು ತನ್ನ ಮಕ್ಕಳಂತೆಯೇ ಕಾಣುತ್ತಿದೆ. ಎಳೆಹುಲ್ಲಿನ ಮೇಲೆ ಆಟವಾಡುತ್ತ, ನೆಗೆದಾಡುತ್ತ, ಆರಾಮ ತೆಗೆದುಕೊಳ್ಳುತ್ತ ಒಂದಕ್ಕೊಂದು ಎಷ್ಟೊಂದು ಅನ್ಯೋನ್ಯವಾಗಿ ಉಲ್ಲಾಸಮಯವಾಗಿವೆಯಲ್ಲ? ನೋಡಿ ಈ ವಿಡಿಯೋ.

23 ಸೆಕೆಂಡಿನ ಈ ವಿಡಿಯೋ ನಿಮ್ಮನ್ನು ಮುದಗೊಳಿಸದೇ ಇರಲಾರದು. ಈ ತನಕ ಈ ವಿಡಿಯೋ ಅನ್ನು 27,000ಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ. 1,700ಕ್ಕಿಂತಲೂ ಹೆಚ್ಚು ಜನ ಇದನ್ನು ಇಷ್ಟಪಟ್ಟಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಎಂಥ ಅದ್ಭುತವಾದ ದೃಶ್ಯವಿದು. ಇದನ್ನು ಹಂಚಿಕೊಂಡ ನಿಮಗೆ ಧನ್ಯವಾದ ಎಂದಿದ್ದಾರೆ. ಇಂಥ ಮುಗ್ಧ ಜೀವಗಳನ್ನು ಪ್ರಕೃತಿ ಪೊರೆಯಲಿ ಎಂದಿದ್ದಾರ ಎನ್ನೊಬ್ಬರು. ಈ ವಿಡಿಯೋ ಒಂದು ಥೆರಪಿಯಂತೆ ಭಾಸವಾಗುತ್ತಿದೆ. ನೋಡುತ್ತಿದ್ದಂತೆ ಎಂಥ ಆಹ್ಲಾದಕರ ಅನುಭವವಾಗುತ್ತಿದೆ. ಇದನ್ನು ವಿಡಿಯೋ ಮಾಡಿದವರಿಗೆ ಧನ್ಯವಾದ ಎಂದಿದ್ದಾರೆ ಮಗದೊಬ್ಬರು.

ಮಕ್ಕಳ ದಿನದಂದು ನಿಮ್ಮೊಳಗಿನ ಮಗುವಿಗೂ ಮತ್ತು ಮಕ್ಕಳಿಗೂ ಈ ವಿಡಿಯೋ ತೋರಿಸಿ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 3:35 pm, Mon, 14 November 22

Follow Us
TV9 Web
TV9 Web

TV9 Kannada

Read More
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!