AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಗ್ರಾಹಕರ ಹೂಕುಂಡವೇನೋ ಒಡೆಯಿತು, ಡೆಲಿವರಿ ಸಿಬ್ಬಂದಿ ಮುಂದೇನು ಮಾಡಿದ?

Honesty : ಲೆಕ್ಕಕ್ಕೆ ಲೆಕ್ಕವನ್ನೂ ಮರೆತು ಬದುಕುತ್ತಿರುವ ಅನೇಕ ಉಕ್ಕಿನ ಎದೆಗಳಿಗೆ ಇಂಥ ಅನುಭವಗಳು ತಾಕಬೇಕಿದೆ. ನಿತ್ಯವೂ ಮೈಮುರಿದು ದುಡಿಯುವ ಪ್ರಾಮಾಣಿಕ, ಸಹೃದಯಿ ಜೋರ್ಡಾನ್​ನಂಥ ಅನೇಕರ ಭವಿಷ್ಯವು ಉಜ್ವಲವಾಗಬೇಕಿದೆ.

Viral: ಗ್ರಾಹಕರ ಹೂಕುಂಡವೇನೋ ಒಡೆಯಿತು, ಡೆಲಿವರಿ ಸಿಬ್ಬಂದಿ ಮುಂದೇನು ಮಾಡಿದ?
ಊಬರ್​ ಡ್ರೈವರ್​ ಪತ್ರ ಬರೆದಿಟ್ಟು ಕೊಟ್ಟ ಹೂಕುಂಡ
TV9 Web
| Edited By: |

Updated on:Jun 02, 2023 | 1:25 PM

Share

Delivery Boy : ಗ್ರಾಹಕರಿಗೆ ತಲುಪಿಸುವಾಗ ಅಕಸ್ಮಾತ್ ಆಗಿ ಈ ಹೂಕುಂಡ (Flower Pot) ಒಡೆದುಬಿಟ್ಟಿದೆ. ಆದರೆ ಡೆಲಿವರಿ ಸಿಬ್ಬಂದಿ ಎದೆ ಒಡೆದುಕೊಳ್ಳದೆ ಮತ್ತು ನೆಪ ಹೇಳಿ ನುಣುಚಿಕೊಳ್ಳದೆ ಅಥವಾ ಓಡಿಹೋಗದೆ ಸಹೃದಯದಿಂದ, ವಿಚಾರಪೂರ್ಣವಾಗಿ ವರ್ತಿಸಿದ್ದಾನೆ. ಈ ಮೂಲಕ ಮಿಲಿಯನ್​ಗಟ್ಟಲೆ ಜನರ ಮನಸ್ಸನ್ನು ಗೆದ್ದಿದ್ದಾನೆ. ಈ ಕುರಿತ ಟ್ವೀಟ್​ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್​ ಆದಾಗಿನಿಂದ ಈತನಕ ಎರಡೂವರೆ ಮಿಲಿಯನ್​ ಜನರು ಟ್ವೀಟ್​ ನೋಡಿದ್ದಾರೆ. ಸುಮಾರು 35,000 ಜನರು ಇದನ್ನು ಇಷ್ಟಪಟ್ಟಿದ್ದಾರೆ.

ಎಲಿ ಮ್ಯಾಕ್​ಕಾನ್​ ಎನ್ನುವವರು ಮೇ 28ರಂದು ಈ ಟ್ವೀಟ್ ಮಾಡಿದ್ದಾರೆ. ‘ನನ್ನ ಗಂಡ ರಾತ್ರಿ ಊಟಕ್ಕಾಗಿ ಆರ್ಡರ್​ ಮಾಡಿದ್ದರು. ಸಿಬ್ಬಂದಿ ಡೆಲಿವರಿಗೆ ಬಂದಾಗ ನಮ್ಮ ಅಂಗಳದಲ್ಲಿದ್ದ ಸುಂದರವಾದ ಹೂಕುಂಡ ಅಕಸ್ಮಾತ್ ಆಗಿ ತಾಗಿ ಒಡೆದುಹೋಯಿತು. ಈ ಪ್ರಮಾದಕ್ಕೆ ಕ್ಷಮೆ ಯಾಚಿಸಲು ಆತ ನಮ್ಮನ್ನು ಕೂಗಿದ. ಅಷ್ಟೇ ಅಲ್ಲ ಅದಕ್ಕೆ ತಗಲುವ ಹಣವನ್ನು ಕೊಡಲು ಮುಂದಾದ. ಆಗ ನನ್ನ ಗಂಡ, ಇರಲಿ ಇದು ಯಾರಿಂದಲೂ ಸಹಜವಾಗಿ ಆಗುವಂಥದ್ದು ಎಂದು ಹೇಳಿದ್ದಾರೆ.’ ಎಂದಿದ್ದಾರೆ ಎಲಿ.

ಇದನ್ನೂ ಓದಿ : Viral: ದಿನಕ್ಕೆ ರೂ. 70 ಲಕ್ಷ ಶಾಪಿಂಗ್​ ಮಾಡುವುದೇ ಈ ಮಿಲಿಯನೇರ್​ ಗೃಹಿಣಿಯ ಹವ್ಯಾಸ

ಇದಾದ ನಂತರ ಮೇ 31ರಂದು ಇದೇ ಪೋಸ್ಟ್​ನ ಥ್ರೆಡ್​ನಲ್ಲಿ ಎಲಿ ಅಪ್​ಡೇಟ್ ಕೊಟ್ಟಿದ್ದಾರೆ. ಆ ಡೆಲಿವರಿ ಸಿಬ್ಬಂದಿ ಹೊಸ ಹೂಕುಂಡವನ್ನು ತಂದು ಅದರಡಿ ಹಸ್ತಾಕ್ಷರದಲ್ಲಿ ಒಂದು ಪತ್ರವನ್ನೂ ಬರೆದಿಟ್ಟು ಹೋಗಿದ್ದಾನೆ. ಹಾಗೆ ಹೋಗುವಾಗ ಅವನಿಗೆ ಹೇಳಿದೆ, ನೋಡು ಇದನ್ನು ನಾನು ಟ್ವೀಟ್ ಮಾಡಿದೆ ಮಿಲಿಯನ್​ಗಟ್ಟಲೆ ಜನ ನಿನ್ನ ಹೃದಯವಂತಿಕೆಯನ್ನು ಕೊಂಡಾಡಿದ್ದಾರೆ ಎಂದು ಹೇಳಿದೆ’ ಎಂದಿದ್ದಾರೆ ಎಲಿ.

ಇದನ್ನೂ ಓದಿ : Viral: ನನ್ನ ಆತ್ಮ ಪ್ಲಾಸ್ಟಿಕ್​ನಿಂದ ಮಾಡಲ್ಪಟ್ಟಿಲ್ಲ; 8 ವರ್ಷದ ಬಾಲಕಿಯ ಮೊದಲ ಕವನ

ಹೆಲೋ, ನಾನು ನಿಮ್ಮ ಊಬರ್ ಡ್ರೈವರ್, ಭಾನುವಾರ ಸಂಜೆ ನಾನು ನಿಮ್ಮ ಮನೆಗೆ ಡೆಲಿವರಿಗೆಂದು ಬಂದಾಗ ಅಕಸ್ಮಾತ್ ಆಗಿ ಕುಂಡವನ್ನು ಒಡೆದೆ. ಹಾಗಾಗಿ ಅದರ ಬದಲಾಗಿ ಈ ಕುಂಡವನ್ನು ನಿಮಗೆ ಕೊಡುತ್ತಿದ್ದೇನೆ. ಆದರೆ ಇದು ಉಡುಗೊರೆಯೂ ಅಲ್ಲ ಮತ್ತು ಯಾವುದೇ ಭಾವನಾತ್ಮಕ ಮಹತ್ವದಿಂದ ಕೂಡಿಲ್ಲ ಎಂದು ನಿಮಗನ್ನಿಸಬಹುದು ಎಂದು ಭಾವಿಸುತ್ತೇನೆ. ಮತ್ತಿದು ಇದು ಅಂಥಾ ಗುಣಮಟ್ಟದ್ದೇನಲ್ಲಆದರೂ ನೀವಿದನ್ನೂ ಉಪಯೋಗಿಸಿಕೊಳ್ಳಬಹುದು. ಇಂತಿ ಜೋರ್ಡಾನ್​.

ಓದಿದ ನಿಮ್ಮ ಮನಸ್ಸು ಮೃದುವಾಯಿತು ಅಲ್ಲವೆ? ಇಂಥ ಪ್ರಸಂಗಗಳು ನಿಮ್ಮನ್ನು ಎದುರುಗೊಂಡಿವೆಯೇ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:19 pm, Fri, 2 June 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ