Viral Video: ತುಂಬುಗರ್ಭಿಣಿ ಅಥ್ಲೀಟ್​ ವರ್ಕೌಟ್; ನೆಟ್ಟಿಗರ ಪ್ರತಿಕ್ರಿಯೆ ಅಕ್ಷಮ್ಯ

Pregnant : ಕಾಮನ್​ ವೆಲ್ಥ್​ ಗೇಮ್ಸ್​ನಲ್ಲಿ ಬಂಗಾರದ ಪದಕ ಗೆದ್ದ ಟಿಯಾ ಕ್ಲೇರ್​ ಟೂಮೀ ಹೆರಿಗೆಗೆ ಎರಡು ವಾರವಿರುವಾಗ ಮಾಡಿದ ವಿಡಿಯೋಗಳು ಇಲ್ಲಿವೆ. ಇವುಗಳೊಂದಿಗೆ ಆಕೆಯ ಮುದ್ಧಾದ ಹೆಣ್ಣುಮಗುವನ್ನೂ ನೋಡಿ.

Viral Video: ತುಂಬುಗರ್ಭಿಣಿ ಅಥ್ಲೀಟ್​ ವರ್ಕೌಟ್; ನೆಟ್ಟಿಗರ ಪ್ರತಿಕ್ರಿಯೆ ಅಕ್ಷಮ್ಯ
ಆಸ್ಟ್ರೇಲಿಯಾದ ಅಥ್ಲೀಟ್​ ಟಿಯಾ ಕ್ಲೇರ್​ ಟೂಮಿ ಓರ್ (Tia Clair Toomey Orr video)
Follow us
|

Updated on:Jun 01, 2023 | 4:17 PM

Commonwealth Games Gold Medalist : ಕಾಮನ್​ ವೆಲ್ಥ್​ ಗೇಮ್ಸ್​ನಲ್ಲಿ ಬಂಗಾರದ ಪದಕ ಗೆದ್ದ ಟಿಯಾ ಕ್ಲೇರ್​ ಟೂಮೀ ಆರ್​ (Tia Clair Toomey Orr) ಆಸ್ಟ್ರೇಲಿಯನ್ ವೇಟ್‌ಲಿಫ್ಟರ್ ಮತ್ತು ಕ್ರಾಸ್‌ಫಿಟ್ ಗೇಮ್ಸ್ ಅಥ್ಲೀಟ್. 2022 ಕ್ರಾಸ್‌ಫಿಟ್ ಗೇಮ್ಸ್‌ನಲ್ಲಿ ಸತತ ಆರು ಬಾರಿ ಪ್ರಶಸ್ತಿಯನ್ನು ಗೆದ್ದಿದ್ದಾಳೆ. ಇಷ್ಟೇ ಅಲ್ಲ ಕ್ರೀಡಾ ಇತಿಹಾಸದಲ್ಲಿ ಇತರೇ ಕ್ರೀಡಾಪಟುಗಳಿಗಿಂತ ಹೆಚ್ಚಿನ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾಳೆ. ಈಕೆ ಹೆರಿಗೆಗೆ ಎರಡು ವಾರ ಇರುವಾಗ ವರ್ಕೌಟ್ ಮಾಡುತ್ತಿದ್ದ ವಿಡಿಯೋ ಇಲ್ಲಿವೆ.

View this post on Instagram
ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

A post shared by Tia-Clair Toomey-Orr (@tiaclair1)

ಆದರೆ ಬಹಳ ಬೇಸರದ ಸಂಗತಿ ಎಂದರೆ ನೆಟ್ಟಿಗರು ಅಸಭ್ಯವಾಗಿ ಈ ವಿಡಿಯೋಗೆ ಪ್ರತಿಕ್ರಿಯಿಸಿರುವುದು. ಈಕೆ ತನ್ನಷ್ಟಕ್ಕೆ ತಾನೇ ಗರ್ಭಿಣಿಯಾಗಿದ್ದಾಳೆಂಬ ಗಾಳಿ ಸುದ್ದಿ ಇದೆ. ಈಕೆ ಹೀಗೆ ವರ್ಕೌಟ್ ಮಾಡುವುದರಿಂದ ಈಕೆಗೆ ಹುಟ್ಟುವ ಮಗು ವಿಕಾರವಾಗಿ ಕಾಣುತ್ತದೆ. ಎಂಥ ಅಜಾಗರೂಕಳು ಈಕೆ… ಅಂತೆಲ್ಲ ಪ್ರತಿಕ್ರಿಯಿಸಿದ್ದಾರೆ. ಯಾಕೆ ಇಷ್ಟೊಂದು ಹಗೂರವಾಗಿ ಮಾತನಾಡುತ್ತಿದ್ದೀರಿ? ತಾನು ಗರ್ಭಿಣಿ ಎಂದು ತಿಳಿದ ಕೂಡಲೇ ಆಕೆ ತನ್ನ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆಯಂತೆ ಮುನ್ನಡೆಯುವುದಿಲ್ಲವೆ? ಎಂದು ಒಬ್ಬರು ಕೇಳಿದ್ದಾರೆ.

ನಿಮ್ಮ ಈ ಪೋಸ್ಟ್​ ನೋಡಿ ಧೈರ್ಯಶಾಲೀ ಎಂದು ಜನರು ನಿಮ್ಮನ್ನು ಹೊಗಳಲಿ ಎಂದೆಲ್ಲ ಹೀಗೆ ಮಾಡುತ್ತಿದ್ದೀರೇ? ಇದು ಮಗುವಿಗೆ ತುಂಬಾ ಅಪಾಯಕಾರಿ, ಖಂಡಿತ ನೀವು ಮಗುವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ವ್ಯೂವ್ಸ್​ ಪಡೆಯಲು ಇಂಥ ಪೋಸ್ಟ್​​ಗಳನ್ನು ಹಾಕುವುದನ್ನು ಬಿಡಿ ಎಂದು ಮತ್ತೊಬ್ಬರು ಬುದ್ಧಿಮಾತು ಹೇಳಿದ್ದಾರೆ. ಟಿಯಾ ಕ್ಲೇರ್ ಮೇ 9ರಂದು ವಿಲ್ಲೋ ಕ್ಲೇರ್ ಆರ್ (Willow Clair Orr) ಎಂಬ​ ಮುದ್ದಾದ ಹೆಣ್ಣುಮಗುವಿಗೆ ಜನ್ಮಕೊಟ್ಟಿದ್ದಾಳೆ. ತನ್ನ ಬದುಕನ್ನು ಸುಂದರಗೊಳಿಸಿದ ಮಗಳು ಮತ್ತು ಪತಿ ಶೇನ್​ ಓರ್ (Shane Orr) ಗೆ ಧನ್ಯವಾದ ತಿಳಿಸಿದ್ಧಾಳೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಈಕೆ ಹೀಗೆ ಇಂಥ ಸಂದರ್ಭದಲ್ಲಿ ಅಜಾಗರೂಕತೆಯಿಂದ ವರ್ತಿಸಲು ಸಾಧ್ಯವೆ? ಸಾಮಾಜಿಕ ಜಾಲತಾಣಿಗರು ಇಂಥ ದಿಟ್ಟೆಯ ವಿಷಯದಲ್ಲಿಯೂ ಅವಳ ವೈಯಕ್ತಿಕ ಜೀವನ ಮತ್ತು ಅವಳ ಆತ್ಮವಿಶ್ವಾಸವನ್ನು ಅವಮಾನಗೊಳಿಸಿರುವುದು ಅತ್ಯಂತ ಹೇಯಕರ ಸಂಗತಿ.

ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ  

Published On - 4:06 pm, Thu, 1 June 23

ತಾಜಾ ಸುದ್ದಿ
ಅಮ್ಮ ನನ್ನನ್ನು ಒಂಟಿಯಾಗಿಸಿ ಹೋಗಿಬಿಟ್ಟಳು! ವಿನೋದ್ ರಾಜ್ ಆಕ್ರಂದನ
ಅಮ್ಮ ನನ್ನನ್ನು ಒಂಟಿಯಾಗಿಸಿ ಹೋಗಿಬಿಟ್ಟಳು! ವಿನೋದ್ ರಾಜ್ ಆಕ್ರಂದನ
ಸರ್ವವಸ್ವವೇ ಆಗಿದ್ದ ತಾಯಿ ಅಗಲಿಕೆ: ವಿನೋದ್ ರಾಜ್ ದುಃಖತಪ್ತ ಮಾತುಗಳು
ಸರ್ವವಸ್ವವೇ ಆಗಿದ್ದ ತಾಯಿ ಅಗಲಿಕೆ: ವಿನೋದ್ ರಾಜ್ ದುಃಖತಪ್ತ ಮಾತುಗಳು
ಪ್ರತಿಭಟನೆಗೆ ಅಡ್ಡಿಪಡಿಸುವ ಪೊಲೀಸರು ನಮಗೆ ಅನ್ನ ನೀಡುತ್ತಾರೆಯೇ? ಶಾಲಾ ಬಾಲಕ
ಪ್ರತಿಭಟನೆಗೆ ಅಡ್ಡಿಪಡಿಸುವ ಪೊಲೀಸರು ನಮಗೆ ಅನ್ನ ನೀಡುತ್ತಾರೆಯೇ? ಶಾಲಾ ಬಾಲಕ
ತಾಳಿ ಕಟ್ಟಿಸಿಕೊಳ್ಳಲು ಒಲ್ಲೆನೆಂದ ಯುವತಿಗೆ ರೂ. 4.70 ಲಕ್ಷ ವಧುದಕ್ಷಿಣೆ?
ತಾಳಿ ಕಟ್ಟಿಸಿಕೊಳ್ಳಲು ಒಲ್ಲೆನೆಂದ ಯುವತಿಗೆ ರೂ. 4.70 ಲಕ್ಷ ವಧುದಕ್ಷಿಣೆ?
ಬೆಂಗಳೂರಲ್ಲಿ ಅನಾಮತ್ತಾಗಿ ಉರುಳಿದ ಸೆಲ್ ಪೋನ್ ಟವರ್, ಪ್ರಾಣಹಾನಿ ಇಲ್ಲ
ಬೆಂಗಳೂರಲ್ಲಿ ಅನಾಮತ್ತಾಗಿ ಉರುಳಿದ ಸೆಲ್ ಪೋನ್ ಟವರ್, ಪ್ರಾಣಹಾನಿ ಇಲ್ಲ
ಸಿದ್ದರಾಮಯ್ಯ ಸಿಎಂ ಆದರೆ ಬರ ಯಡಿಯೂರಪ್ಪ ಆದರೆ ಅತಿವೃಷ್ಟಿ: ಜ್ಞಾನೇಂದ್ರ
ಸಿದ್ದರಾಮಯ್ಯ ಸಿಎಂ ಆದರೆ ಬರ ಯಡಿಯೂರಪ್ಪ ಆದರೆ ಅತಿವೃಷ್ಟಿ: ಜ್ಞಾನೇಂದ್ರ
ಉಡುಪಿ ಕಾರ್ಟೂನ್ ಹಬ್ಬಕ್ಕೆ ವಿಭಿನ್ನವಾಗಿ ಶುಭ ಕೋರಿದ ಮರಳು ಶಿಲ್ಪ ಕಲಾವಿದ
ಉಡುಪಿ ಕಾರ್ಟೂನ್ ಹಬ್ಬಕ್ಕೆ ವಿಭಿನ್ನವಾಗಿ ಶುಭ ಕೋರಿದ ಮರಳು ಶಿಲ್ಪ ಕಲಾವಿದ
ಬೆಂಗಳೂರಿನಲ್ಲಿ ಕಟ್ಟಡ ಸಹಿತ ಧರೆಗುರುಳಿದ ಮೊಬೈಲ್ ಟವರ್, ವಿಡಿಯೋ ಇಲ್ಲಿದೆ
ಬೆಂಗಳೂರಿನಲ್ಲಿ ಕಟ್ಟಡ ಸಹಿತ ಧರೆಗುರುಳಿದ ಮೊಬೈಲ್ ಟವರ್, ವಿಡಿಯೋ ಇಲ್ಲಿದೆ
ಬಿಗ್ ಬಾಸ್​ನಲ್ಲಿ ಹದಗೆಟ್ಟಿತು ವರ್ತೂರು ಸಂತೋಷ್​-ತನಿಷಾ ಫ್ರೆಂಡ್​ಶಿಪ್
ಬಿಗ್ ಬಾಸ್​ನಲ್ಲಿ ಹದಗೆಟ್ಟಿತು ವರ್ತೂರು ಸಂತೋಷ್​-ತನಿಷಾ ಫ್ರೆಂಡ್​ಶಿಪ್
ಯಡಿಯೂರಪ್ಪರನ್ನು ಟೀಕಿಸುವ ನೈತಿಕತೆ ಬಸನಗೌಡ ಪಾಟೀಲ್ ಗಿಲ್ಲ: ರೇಣುಕಾಚಾರ್ಯ
ಯಡಿಯೂರಪ್ಪರನ್ನು ಟೀಕಿಸುವ ನೈತಿಕತೆ ಬಸನಗೌಡ ಪಾಟೀಲ್ ಗಿಲ್ಲ: ರೇಣುಕಾಚಾರ್ಯ