Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸಿಐಎಸ್ಎಫ್ ಭದ್ರತಾ ಪಡೆಯ ಶ್ವಾನಕ್ಕೆ ಬೀಳ್ಕೊಡುಗೆ: ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದ ಈ ವೀಡಿಯೊ

ಸಿಐಎಸ್ಎಫ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂರು ಪೋಲಿಸ್ ನಾಯಿಗಳು, ಸತತ 8 ವರ್ಷಗಳ ಕಾಲ ಸೇವೆ ಸಲ್ಲಿಸಿ ಇತ್ತೀಚಿಗೆ ನಿವೃತ್ತಿ ಹೊಂದಿವೆ. ಶ್ವಾನಗಳ ವರ್ಷಗಳ ಸೇವೆಯನ್ನು ಶ್ಲಾಘಿಸಲು, ಸಿಐಎಸ್ಎಫ್ ಸಿಬ್ಬಂದಿಗಳು ದೆಹಲಿಯಲ್ಲಿ ಅದ್ಧೂರಿ ಬೀಳ್ಕೊಡುಗೆ ಕಾರ್ಯಕ್ರವನ್ನು ಏರ್ಪಡಿಸಿದ್ದರು. ಭದ್ರತಾಪಡೆಯ ಶ್ವಾನಗಳ ಬೀಳ್ಕೊಡುಗೆಯ ಸಮಾರಂಭದ ಭಾವನಾತ್ಮಕ ವೀಡಿಯೊವನ್ನು ಸುದ್ದಿ ಸಂಸ್ಥೆ ಎ.ಎನ್.ಐ ಟ್ವಿಟರ್ ನಲ್ಲಿ ಹಂಚಿಕೊಂಡಿದೆ.

Viral Video: ಸಿಐಎಸ್ಎಫ್ ಭದ್ರತಾ ಪಡೆಯ ಶ್ವಾನಕ್ಕೆ ಬೀಳ್ಕೊಡುಗೆ: ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದ ಈ ವೀಡಿಯೊ
ವೈರಲ್​​ ವೀಡಿಯೊ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 01, 2023 | 5:00 PM

ನಾಯಿಗಳು ಮನುಷ್ಯರ ಉತ್ತಮ ಸ್ನೇಹಿತ. ಇನ್ನೂ ಜರ್ಮನ್ ಶೆಫರ್ಡ್ ತಳಿಯಂತಹ ಶ್ವಾನಗಳಿಗೆ ತರಬೇತಿಯನ್ನು ನೀಡಿ ಅವುಗಳನ್ನು ಭದ್ರತಾ ಪಡೆಗಳೊಂದಿಗೆ ಸೇವೆ ಸಲ್ಲಿಸಲು ಆಯೋಜಿಸಲಾಗುತ್ತದೆ. ದೇಶ ರಕ್ಷಣೆಗಾಗಿ ಭದ್ರತಾ ಪಡೆಗಳೊಂದಿಗೆ ಕಾರ್ಯನಿರ್ವಹಿಸುವ ಈ ಶ್ವಾನಗಳು ಪ್ರಾಣಕ್ಕೆ ಕುತ್ತು ತರುವಂತಹ ಬಾಂಬ್ ಗಳ ಇರುವಿಕೆಯ ಸುಳಿವನ್ನು ಪತ್ತೆ ಮಾಡಿ ಅನೇಕರ ಜೀವಗಳನ್ನು, ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ರಕ್ಷಿಸಿರುವ ಅದೆಷ್ಟೋ ಉದಾಹರಣೆಗಳಿವೆ. ಅಂತೆಯೇ ಸಿಐಎಸ್ಎಫ್ (ಕೇಂದ್ರ ಕೈಗಾರಿಕ ಭದ್ರತಾ ಪಡೆ) ನಲ್ಲಿ ಸತತ 8 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಿಷ್ಟಾವಂತ ಮೂರು ಪೋಲಿಸ್ ನಾಯಿಗಳು ಇತ್ತೀಚಿಗೆ ತಮ್ಮ ಸೇವೆಗೆ ನಿವೃತ್ತಿಯನ್ನು ಹೊಂದಿದ್ದು, ಅವುಗಳ ಅದ್ಧೂರಿ ಬೀಳ್ಕೊಡುಗೆ ಕಾರ್ಯಕ್ರಮದ ಭಾವನಾತ್ಮಕ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿದೆ. ಶ್ವಾನಗಳ ನಿಸ್ವಾರ್ಥ ಸೇವೆಗಾಗಿ ಅವುಗಳಿಗೆ ಅಭಿನಂದನೆಯ ಮಹಾಪೂರವೇ ಹರಿದುಬಂದಿದೆ.

ಸಿಐಎಸ್ಎಫ್​​​​ನ ಮೂರು ಪೋಲಿಸ್ ಶ್ವಾನಗಳಾದ ರಾಕಿ, ರೋಮಿಯೋ ಮತ್ತು ಡಿಎಂಆರ್ಸಿ ಘಟಕದ ಸೋನಿ ಎಂಟು ವರ್ಷಗಳಿಗೂ ಹೆಚ್ಚು ಕಾಲ ಸೇವೆಯನ್ನು ಪೂರ್ಣಗೊಳಿಸಿದ ನಂತರ ಅವುಗಳಿಗೆ ಇದೇ ಬುಧವಾರದಂದು ನಿವೃತ್ತಿಯನ್ನು ಘೋಷಿಸಲಾಯಿತು. ಸಿಐಎಸ್ಎಫ್ (ಕೇಂದ್ರ ಕೈಗಾರಿಕ ಭದ್ರತಾ ಪಡೆ) ನಲ್ಲಿ ಸಮರ್ಪಿತ ಸೇವೆಗಾಗಿ ಮತ್ತು ಈ ಶ್ವಾನಗಳು ಪ್ರದರ್ಶಿಸಿದ ವರ್ಷಗಳ ಪರಿಶ್ರಮ, ನಿಷ್ಠೆಯನ್ನು ಶ್ಲಾಘಿಸಲು ಹಾಗೂ ಅವುಗಳ ನಿಸ್ವಾರ್ಥ ಸೇವೆಗೆ ಗೌರವ ಸಲ್ಲಿಸುವ ಸಲುವಾಗಿ ದೆಹಲಿಯಲ್ಲಿ ಸಿಐಎಸ್ಎಫ್ ಸಿಬ್ಬಂದಿ ವರ್ಗ ಭವ್ಯವಾದ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಿದ್ದರು. ಆದರೆ ಸೋನಿ ಎಂಬ ಜರ್ಮನ್ ಶೆಫರ್ಡ್ ನಾಯಿ ಅನಾರೋಗ್ಯದ ಕಾರಣದಿಂದ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಎಂದು ಎಎನ್ಐ ಟ್ವಿಟರ್ ನಲ್ಲಿ ಬರೆದುಕೊಂಡಿದೆ.

ಸುದ್ದಿ ಸಂಸ್ಥೆ ಎಎನ್ಐ ಟ್ವಿಟರ್​​​ನಲ್ಲಿ ಹಂಚಿಕೊಂಡಿರುವ ಈ ವಿಶೇಷ ವೀಡಿಯೋ ಬೀಳ್ಕೊಡುಗೆ ಸಮಾರಂಭದ ಹೃದಯಸ್ಪರ್ಶಿ ಕ್ಷಣಗಳನ್ನು ಸೆರೆ ಹಿಡಿದಿದೆ. ರೆಡ್ ಕಾರ್ಪೇಟ್ ಮೇಲೆ ಶ್ವಾನಗಳನ್ನು ಗೌರವಾನ್ವಿತವಾಗಿ ಕರೆತಂದು ಅವುಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸುವ ಭಾವನಾತ್ಮಕ ಸನ್ನಿವೇಶವನ್ನು ವೀಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ:Viral Video : ಎರಡನೇ ಕ್ಲಾಸಿನ ಮಕ್ಕಳ ‘ಭೇಲ್​ಪುರಿ’ಗೆ 10 ಮಿಲಿಯನ್​ ನೆಟ್ಟಿಗರು ಫಿದಾ

ಮೇ 31 ರಂದು ಹಂಚಿಕೊಳ್ಳಲಾದ ಈ ವೀಡಿಯೋ ಕೇವಲ ಒಂದೇ ದಿನದಲ್ಲಿ 304.7 ಸಾವಿರ ವೀಕ್ಷಣೆಗಳನ್ನು ಮತ್ತು 3,249 ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಶ್ವಾನಗಳ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿ ಟ್ವಿಟರ್ ಬಳಕೆದಾರರು ಕಮೆಂಟ್ ಗಳ ಮೂಲಕ ತಮ್ಮ ಅಭಿನಂದನೆಗಳನ್ನು ತಿಳಿಸಿದ್ದಾರೆ. ಒಬ್ಬ ಬಳಕೆದಾರರು ‘ಹೃದಯಸ್ಪರ್ಶಿ ಸಮಾರಂಭ’ ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ನಿಮ್ಮ ರಾಷ್ಟ್ರ ಸೇವೆಗೆ ಧನ್ಯವಾದಗಳು ರಾಕಿ, ಸೋನಿ, ರೋಮಿಯೋ’ ಎಂದು ಹೇಳಿದ್ದಾರೆ ಮತ್ತೊಬ್ಬ ಬಳಕೆದಾದರು ‘ನೀವು ಕನಿಷ್ಠ ಪಕ್ಷ ಸೋನಿಯ ಭಾವಚಿತ್ರವನ್ನಾದರೂ ಪೋಸ್ಟ್ ಮಾಡಬೇಕಾಗಿತ್ತು ಎಂದು ಬರೆದುಕೊಂಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್