Viral Video: ಹೀಗೊಂದು ‘ಕೋಳಿಹೃದಯ’ ರಚಿಸುವುದು ಹೇಗೆಂದು ನಿಮಗೆ ಗೊತ್ತೆ?
Chicken : ಈತನಕ ಈ ವಿಡಿಯೋ ಅನ್ನು 2.6 ಲಕ್ಷಕ್ಕಿಂತಲೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. ಇಂಥಾ ಐಡಿಯಾ ಎಲ್ಲಿಂದ ತಂದ್ಯೋ ಮಾರಾಯಾ, ನಿಜಕ್ಕೂ ನಿನಗೆ ನೊಬೆಲ್ ಅವಾರ್ಡ್ ಕೊಡಬೇಕೋ ಎಂದು ಕಾಲೆಳೆಯುತ್ತಿದ್ದಾರೆ ಅವರು.
Heart : ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವದ (Independence Day) ಸಂದರ್ಭದಲ್ಲಿ ದೆಹಲಿಯ ಕೆಂಪು ಕೋಟೆಯ ಮೈದಾನದಲ್ಲಿ ವಿದ್ಯಾರ್ಥಿಗಳು, ಯೋಧರುಗಳು ಪ್ರದರ್ಶನಗಳಲ್ಲಿ ವಿವಿಧ ಲಾಂಛನ, ಆಕಾರ, ಅಕ್ಷರ ಇತ್ಯಾದಿಗಳನ್ನು ರಚಿಸುವುದನ್ನು ನೋಡಿದ್ದೀರಿ. ಆದರೆ ಪ್ರಾಣಿಗಳು? ಮನೆಯಲ್ಲಿ ಸಾಕಿದ ನಾಯಿ ಬೆಕ್ಕು (Cat and Dog) ಎಷ್ಟು ಹೊತ್ತು ನೀವು ಹೇಳಿದ ಹಾಗೆ ಕೇಳುತ್ತವೆ? ಅಂಥದ್ದರಲ್ಲಿ ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಇಷ್ಟೊಂದು ಕೋಳಿಗಳು ಹೃದಯದ ಆಕಾರವನ್ನು ರಚಿಸಲು ಯಾವ ವಿಶ್ವವಿದ್ಯಾಲಯದಲ್ಲಿ ತರಬೇತಿ ಪಡೆದಿದ್ದವು? ಇವುಗಳನ್ನು ಹೀಗೆ ಪಳಗಿಸಿದ ಮಹಾನ್ ಶಿಕ್ಷಕ ಯಾರು? ಬನ್ನಿ ಕೇಳೋಣ.
View this post on Instagram ಇದನ್ನೂ ಓದಿ
‘ತುಂಬಾ ಸಿಂಪಲ್ ಇದೆ ಕಣ್ರೀ, ಹೀಗೆ ಈ ಮೂಟೇಲಿ ತಂದಿದ್ದು ಏನು ಅನ್ಕೊಂಡ್ರಿ ಮತ್ತೆ? ಕಾಳು! ಕಾಳು ಹಾಕಿದ್ರೆ ಯಾವ ಹಕ್ಕಿನೂ ಹತ್ರ ಬರ್ತವೆ. ಮೂಟೇಲಿರೋ ಕಾಳು ಸುರೀತಿದ್ದಂಗೆ ಹೃದಯ ಅಂಗಂಗೆ ಎಂಗ್ ಅರಳ್ಕೊಳ್ಳತ್ತೆ ನೋಡಿ. ಇದಕ್ಕೆ ಸ್ವಲ್ಪ ತಲೆ ಬೇಕು, ಜೀವನಪಿರುತಿ ಬೇಕು. ಕೋಳಿ ಸಾಕೋದನ್ನಾ ಒಂದ್ ಕೆಲ್ಸಾ ಅಂತ ಅನ್ಕೊಳ್ದೆ ಆಟದ ಥರಾ ನೋಡ್ದಾಗ ಅನ್ಕೊಂಡಿದ್ದೆಲ್ಲಾ ಕಣ್ ಬಿಟ್ ಕಣ್ ತೆಗೆಯೋದ್ರೊಳಗೆ ಆಗೋಯ್ತದೆ’ ಹೀಗಂತ ಮೇಲೆ ವಿಡಿಯೋದಲ್ಲಿಯೋ ವಯ್ಯ ಹೇಳಿದ್ದು ನಿಮಗೆಲ್ಲ ಕೇಳಿರಬಹುದು(!?)
ಇದನ್ನೂ ಓದಿ : Viral Video: ನಿವೃತ್ತಿಯಾಯಿತೆಂದು ನಿನ್ನನ್ನು ತೊರೆಯುವುದು ಅಷ್ಟು ಸುಲಭವೇ?
ಈತನಕ ಈ ವಿಡಿಯೋ ಅನ್ನು 2.6 ಲಕ್ಷಕ್ಕಿಂತಲೂ ಹೆಚ್ಚು ಜನ ನೋಡಿದ್ದಾರೆ. ಇಂಥಾ ಐಡಿಯಾ ಎಲ್ಲಿಂದ ತಂದ್ಯೋ ಮಾರಾಯಾ, ಅದರಲ್ಲೂ ಪಟಕ್ಕನೆ ಹಾರಿ ಹೋಗುವ ಕೋಳಿಗಳನ್ನು ನೀನು ಹೀಗೆಲ್ಲ ಹಿಡಿದು ಹಾಕಿದೀಯಲ್ಲ! ನಿಜಕ್ಕೂ ನಿನಗೆ ನೊಬೆಲ್ ಅವಾರ್ಡ್ ಕೊಡಬೇಕೋ ಎಂದು ಕಾಲೆಳೆಯುತ್ತಿದ್ದಾರೆ. ಇದು ರೀಲ್ಸ್ ಜಮಾನಾ, ತಲೆ ಓಡಿಸದಿದ್ದರೆ ವ್ಯೂವ್ಸ್ ಬರಲ್ಲ. ವ್ಯೂವ್ಸ್ ಬರದಿದ್ರೆ ಹೊಟ್ಟೆ ತುಂಬಲ್ಲ ಎಂದು ಅನೇಕರು ತಮಾಷೆ ಮಾಡುತ್ತಿದ್ದಾರೆ.
ಇದನ್ನೂ ಓದಿ : Viral: ನಾನಿದನ್ನು ಪ್ರೀತಿಸುತ್ತಿದ್ದೇನೆ; ಎಂದ ಭಾರತದ ಹೊಸ ಕಾಲ್ಪನಿಕ ಕ್ಯೂಟ್ ಅಳಿಯ ಮಸ್ಕ್
ಹೀಗೆಯೇ ಹುಲಿ, ಆನೆ, ಕಾಡೆಮ್ಮೆಗಳಿಂದ ಹೃದಯ ಕಟ್ಟಲು ಸಾಧ್ಯವೆ? ಯಾರಾದರೂ ಈ ಚಾಲೇಂಜಿಗೆ ಒಪ್ಪುತ್ತೀರಾದರೆ ಅದಕ್ಕೆ ಬೇಕಾದ ಆಹಾರವನ್ನು ನಾನು ಪ್ರಾಯೋಜಿಸುತ್ತೇನೆ ಎಂದು ನೆಟ್ಟಿಗರೊಬ್ಬರು ಭಯಂಕರ ಸವಾಲನ್ನು ಹಾಕಿದ್ದಾರೆ!
ನೀವೇನಾದರೂ ಭಾಗವಹಿಸುತ್ತೀರೇನು ಮತ್ತೆ ಈ ಸವಾಲಿನಲ್ಲಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:40 pm, Sat, 3 June 23