Viral Video: ನಿವೃತ್ತಿಯಾಯಿತೆಂದು ನಿನ್ನನ್ನು ತೊರೆಯುವುದು ಅಷ್ಟು ಸುಲಭವೇ?

Bus Driver : 'ಈ ವೃತ್ತಿಗೆ ಬಂದಮೇಲೆ ನಾನು ಮದುವೆಯಾದೆ, ಕುಟುಂಬ ಕಟ್ಟಿಕೊಂಡೆ, ಸಮಾಜದಲ್ಲಿ ಸ್ಥಾನಮಾನ ಪಡೆದುಕೊಂಡೆ. ಎಲ್ಲವೂ ನಿನ್ನಿಂದಲೇ. 30 ವರ್ಷದ ನಿನ್ನೊಂದಿಗಿನ ಬಂಧವನ್ನು ಈಗ ಹೇಗೆ ಮುರಿದುಕೊಳ್ಳಲಿ?'

Viral Video: ನಿವೃತ್ತಿಯಾಯಿತೆಂದು ನಿನ್ನನ್ನು ತೊರೆಯುವುದು ಅಷ್ಟು ಸುಲಭವೇ?
ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆಯಿಂದ ನಿವೃತ್ತಿಗೊಂಡ ಮುತುಪಾಂಡಿ ತನ್ನ ಆಪ್ತಮಿತ್ರನನ್ನು ಅಪ್ಪಿಕೊಂಡ ಸಂದರ್ಭ. (ಸೌಜನ್ಯ : ದಿ ಸೌತ್​ ಫಸ್ಟ್)
Follow us
| Edited By: ಶ್ರೀದೇವಿ ಕಳಸದ

Updated on:Jun 02, 2023 | 4:00 PM

Driver : ಯಾರು ಈ ಕೆಲಸ ಮಾಡುತ್ತಾರೆ, ದಿನವೂ ಇದೇ ಆಯಿತು. ಮೂರಕ್ಕೆ ಇಳೀಲಿಲ್ಲ ಆರಕ್ಕೆ ಏರಲಿಲ್ಲ ಎಂದು ಗೊಣಗುಟ್ಟುತ್ತಲೇ ಕೆಲಸ ಮಾಡುವ ಅನೇಕರು ನಮ್ಮ ಸುತ್ತಮುತ್ತಲಿದ್ದಾರೆ. ಅಂಥವರ ಮಧ್ಯೆಯೇ ಸಿಕ್ಕ ಕೆಲಸವನ್ನು ಕಣ್ಣಿಗೊತ್ತಿಕೊಂಡು ಮಾಡುವ ಕೆಲವರೂ ನಮ್ಮ ನಡುವೆ ಇದ್ದಾರೆ. ಆದರೆ ಈ ಕೆಲಸದಿಂದಲೇ ಜೀವನ ಸಾರ್ಥಕವಾಯಿತು ಎಂದುಕೊಳ್ಳುವ ವಿರಳರೂ ಇದ್ದಾರೆ. ಅಂಥ ವ್ಯಕ್ತಿಯೊಬ್ಬರ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಇದರಲ್ಲಿ ತಮಿಳುನಾಡಿನ (Tamilnadu) ಬಸ್ ಚಾಲಕ ಯಾಕೆ ಹೀಗೆ ಬಸ್​ ಅನ್ನು ಅಪ್ಪಿಕೊಂಡು ಅಳುತ್ತಿರುವುದು?

ಈ ಮೇಲಿನ ವಿಡಿಯೋ ಅನ್ನು ‘ದಿ ಸೌತ್​ ಫಸ್ಟ್​​’ (The South First) ಟ್ವೀಟ್ ಮಾಡಿದೆ. ನಿವೃತ್ತಿ ಎಂದರೆ ಕೆಲವರಿಗೆ ಬಿಡುಗಡೆ ಇನ್ನೂ ಕೆಲವರಿಗೆ ಬೇಸರ. ಆದರೆ ಮಧುರೈನ ಮುತುಪಾಂಡಿ ಅವರಿಗೆ ಮಾತ್ರ ಇದು ಅತ್ಯಂತ ದುಃಖವನ್ನುಂಟು ಮಾಡಿರುವ ಸಂದರ್ಭ. 30 ವರ್ಷಗಳ ತನಕ ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆ (Tamil Nadu State Transport Corporation)ಯಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸಿದ ಇವರು ಮೇ 31ರಂದು ನಿವೃತ್ತಿಗೊಂಡಿದ್ದಾರೆ. ವಿಡಿಯೋ ನೋಡಿದೊಡನೆ ವೃತ್ತಿಯ ಬಗೆಗೆ ಇವರು ಇಟ್ಟುಕೊಂಡಿದ್ದ ಶ್ರದ್ಧೆ, ಗೌರವ ನಿಮ್ಮ ಅನುಭವಕ್ಕೆ ಬಂದಿರಲು ಸಾಕು.

ಇದನ್ನೂ ಓದಿ : Viral: ನನ್ನ ಆತ್ಮ ಪ್ಲಾಸ್ಟಿಕ್​ನಿಂದ ಮಾಡಲ್ಪಟ್ಟಿಲ್ಲ; 8 ವರ್ಷದ ಬಾಲಕಿಯ ಮೊದಲ ಕವನ

ಬಸ್​ ನಂಬರ್​ 31A ಕಳೆದ 30 ವರ್ಷಗಳಿಂದ ಇವರ ಆಪ್ತಮಿತ್ರ. ತಮಿಳುನಾಡಿನ ಅನುಪ್ಪಾನದಿಯಿಂದ (Anuppanadi) ಮಹಾಲಕ್ಷ್ಮೀನಗರಕ್ಕೆ (Mahalakshmi Nagar) ಇವನೊಂದಿಗೆ ಚಲಿಸಿದರು. ಬದುಕಿನ ಎಲ್ಲಾ ಸಂದರ್ಭಗಳಿಗೂ, ಸನ್ನಿವೇಶಗಳಿಗೂ ಈತ ಜೊತೆಗಾರನಾಗುತ್ತ ಹೋದ. ‘ಈ ವೃತ್ತಿಗೆ ಬಂದಮೇಲೆ ನಾನು ಮದುವೆಯಾದೆ, ಕುಟುಂಬ ಕಟ್ಟಿಕೊಂಡೆ, ಸಮಾಜದಲ್ಲಿ ಸ್ಥಾನಮಾನ ಪಡೆದುಕೊಂಡೆ. ಎಲ್ಲವೂ ಇವನಿಂದಲೇ. ಈಗ ಹೇಗೆ ಇವನನ್ನು ಬಿಟ್ಟು ಹೋಗುವುದು’ ಎಂದು ದೈತ್ಯದೇಹಿ ಮಿತ್ರನನ್ನು ತಬ್ಬಿಕೊಂಡು ಕಣ್ಣೀರಾಗಿದ್ದಾರೆ ಮುತುಪಾಂಡಿ.

ಇದನ್ನೂ ಓದಿ : Viral: ಗ್ರಾಹಕರ ಹೂಕುಂಡವೇನೋ ಒಡೆಯಿತು, ಡೆಲಿವರಿ ಸಿಬ್ಬಂದಿ ಮುಂದೇನು ಮಾಡಿದ?

ಮುತುಪಾಂಡಿಯ ಕಾಯಕನಿಷ್ಠೆಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ನಿಮ್ಮ ಜೀವನವನ್ನು ಉತ್ತಮಗೊಳಿಸಿದ ಸಂಗತಿಗಳ ಬಗ್ಗೆ ಕೃತಜ್ಞರಾಗಿರಿ. ತನ್ನ ವೃತ್ತಿ, ವಾಹನದ ಬಗ್ಗೆ ಇಷ್ಟೊಂದು ಪ್ರೀತಿ ಇಟ್ಟುಕೊಂಡಿದ್ದ ಮುತುಪಾಂಡಿಯ ನಿವೃತ್ತಿ ಜೀವನ ಕ್ಷೇಮವಾಗಿರಲಿ. ಈ ಟ್ವೀಟ್ ಅನ್ನು ಆನಂದ್​ ಮಹೀಂದ್ರಾ ಅವರ ಕಣ್ಣಿಗೆ ಬೀಳದಿರಲಿ… ಅಂತೆಲ್ಲ ಪ್ರತಿಕ್ರಿಯಿಸಿದ್ದಾರೆ ಜನರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:43 pm, Fri, 2 June 23

ತಾಜಾ ಸುದ್ದಿ
ಅಮ್ಮ ನನ್ನನ್ನು ಒಂಟಿಯಾಗಿಸಿ ಹೋಗಿಬಿಟ್ಟಳು! ವಿನೋದ್ ರಾಜ್ ಆಕ್ರಂದನ
ಅಮ್ಮ ನನ್ನನ್ನು ಒಂಟಿಯಾಗಿಸಿ ಹೋಗಿಬಿಟ್ಟಳು! ವಿನೋದ್ ರಾಜ್ ಆಕ್ರಂದನ
ಸರ್ವವಸ್ವವೇ ಆಗಿದ್ದ ತಾಯಿ ಅಗಲಿಕೆ: ವಿನೋದ್ ರಾಜ್ ದುಃಖತಪ್ತ ಮಾತುಗಳು
ಸರ್ವವಸ್ವವೇ ಆಗಿದ್ದ ತಾಯಿ ಅಗಲಿಕೆ: ವಿನೋದ್ ರಾಜ್ ದುಃಖತಪ್ತ ಮಾತುಗಳು
ಪ್ರತಿಭಟನೆಗೆ ಅಡ್ಡಿಪಡಿಸುವ ಪೊಲೀಸರು ನಮಗೆ ಅನ್ನ ನೀಡುತ್ತಾರೆಯೇ? ಶಾಲಾ ಬಾಲಕ
ಪ್ರತಿಭಟನೆಗೆ ಅಡ್ಡಿಪಡಿಸುವ ಪೊಲೀಸರು ನಮಗೆ ಅನ್ನ ನೀಡುತ್ತಾರೆಯೇ? ಶಾಲಾ ಬಾಲಕ
ತಾಳಿ ಕಟ್ಟಿಸಿಕೊಳ್ಳಲು ಒಲ್ಲೆನೆಂದ ಯುವತಿಗೆ ರೂ. 4.70 ಲಕ್ಷ ವಧುದಕ್ಷಿಣೆ?
ತಾಳಿ ಕಟ್ಟಿಸಿಕೊಳ್ಳಲು ಒಲ್ಲೆನೆಂದ ಯುವತಿಗೆ ರೂ. 4.70 ಲಕ್ಷ ವಧುದಕ್ಷಿಣೆ?
ಬೆಂಗಳೂರಲ್ಲಿ ಅನಾಮತ್ತಾಗಿ ಉರುಳಿದ ಸೆಲ್ ಪೋನ್ ಟವರ್, ಪ್ರಾಣಹಾನಿ ಇಲ್ಲ
ಬೆಂಗಳೂರಲ್ಲಿ ಅನಾಮತ್ತಾಗಿ ಉರುಳಿದ ಸೆಲ್ ಪೋನ್ ಟವರ್, ಪ್ರಾಣಹಾನಿ ಇಲ್ಲ
ಸಿದ್ದರಾಮಯ್ಯ ಸಿಎಂ ಆದರೆ ಬರ ಯಡಿಯೂರಪ್ಪ ಆದರೆ ಅತಿವೃಷ್ಟಿ: ಜ್ಞಾನೇಂದ್ರ
ಸಿದ್ದರಾಮಯ್ಯ ಸಿಎಂ ಆದರೆ ಬರ ಯಡಿಯೂರಪ್ಪ ಆದರೆ ಅತಿವೃಷ್ಟಿ: ಜ್ಞಾನೇಂದ್ರ
ಉಡುಪಿ ಕಾರ್ಟೂನ್ ಹಬ್ಬಕ್ಕೆ ವಿಭಿನ್ನವಾಗಿ ಶುಭ ಕೋರಿದ ಮರಳು ಶಿಲ್ಪ ಕಲಾವಿದ
ಉಡುಪಿ ಕಾರ್ಟೂನ್ ಹಬ್ಬಕ್ಕೆ ವಿಭಿನ್ನವಾಗಿ ಶುಭ ಕೋರಿದ ಮರಳು ಶಿಲ್ಪ ಕಲಾವಿದ
ಬೆಂಗಳೂರಿನಲ್ಲಿ ಕಟ್ಟಡ ಸಹಿತ ಧರೆಗುರುಳಿದ ಮೊಬೈಲ್ ಟವರ್, ವಿಡಿಯೋ ಇಲ್ಲಿದೆ
ಬೆಂಗಳೂರಿನಲ್ಲಿ ಕಟ್ಟಡ ಸಹಿತ ಧರೆಗುರುಳಿದ ಮೊಬೈಲ್ ಟವರ್, ವಿಡಿಯೋ ಇಲ್ಲಿದೆ
ಬಿಗ್ ಬಾಸ್​ನಲ್ಲಿ ಹದಗೆಟ್ಟಿತು ವರ್ತೂರು ಸಂತೋಷ್​-ತನಿಷಾ ಫ್ರೆಂಡ್​ಶಿಪ್
ಬಿಗ್ ಬಾಸ್​ನಲ್ಲಿ ಹದಗೆಟ್ಟಿತು ವರ್ತೂರು ಸಂತೋಷ್​-ತನಿಷಾ ಫ್ರೆಂಡ್​ಶಿಪ್
ಯಡಿಯೂರಪ್ಪರನ್ನು ಟೀಕಿಸುವ ನೈತಿಕತೆ ಬಸನಗೌಡ ಪಾಟೀಲ್ ಗಿಲ್ಲ: ರೇಣುಕಾಚಾರ್ಯ
ಯಡಿಯೂರಪ್ಪರನ್ನು ಟೀಕಿಸುವ ನೈತಿಕತೆ ಬಸನಗೌಡ ಪಾಟೀಲ್ ಗಿಲ್ಲ: ರೇಣುಕಾಚಾರ್ಯ