Viral Video: ಇಡೀ ಕಲ್ಲಂಗಡಿಯನ್ನು ಕರಿದ ಭೂಪ; ತಲೆ ಕೆರೆದುಕೊಳ್ಳುತ್ತಿರುವ ನೆಟ್​ಮಂದಿ

Watermelon : ಈ ರೀಲ್​ಮಂದಿ ಪ್ರಚಾರಕ್ಕಾಗಿ ಏನೇನೆಲ್ಲ ಪಾಕಪ್ರಯೋಗಗಳನ್ನು ಮಾಡುತ್ತದೆ ಎನ್ನುವುದನ್ನು ನೋಡುತ್ತಲೇ ಇದ್ದೀರಿ. ಆದರೆ ದಯವಿಟ್ಟು ಈ ವಿಡಿಯೋದಲ್ಲಿರುವಂಥ ಅಪಾಯಕಾರೀ ಪ್ರಯೋಗವನ್ನಂತು ಯಾರೂ ಮಾಡಬೇಡಿ!

Viral Video: ಇಡೀ ಕಲ್ಲಂಗಡಿಯನ್ನು ಕರಿದ ಭೂಪ; ತಲೆ ಕೆರೆದುಕೊಳ್ಳುತ್ತಿರುವ ನೆಟ್​ಮಂದಿ
ಕಲ್ಲಂಗಡಿಯನ್ನು ಎಣ್ಣೆಯಲ್ಲಿ ಕರಿದು ತಿನ್ನುತ್ತಿರುವ ಈ ಭೂಪ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jun 03, 2023 | 3:32 PM

Kitchen Hacks : ಒಂದೊಂದು ಹಣ್ಣು ತಿನ್ನುವಾಗಲೂ ಅದರ ಸ್ವಾದವನ್ನು ಅನುಭವಿಸುತ್ತ ಪ್ರಕೃತಿಯ ಈ ಕೊಡುಗೆಯ ಬಗ್ಗೆ ಅಚ್ಚರಿ ಪಡುತ್ತಿರುತ್ತೇವಲ್ಲ? ಆಯಾ ಬಣ್ಣ, ಆಯಾ ರುಚಿ, ಪೋಷಕಾಂಶ… ಹೀಗೆ ಯೋಚಿಸುತ್ತಾ ಹೋದರೆ ಅದ್ಭುತವಲ್ಲದೆ ಇನ್ನೇನು ಎನ್ನಿಸತೊಡಗುತ್ತದೆ. ಸಾಮಾನ್ಯವಾಗಿ ಹಣ್ಣುಗಳನ್ನು ಬೇಕ್ ಮಾಡುವುದು ಬೇಕರಿ ತಿನಿಸುಗಳನ್ನು ಮಾಡುವಾಗ. ಆದರೆ ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಈ ಭೂಪ ದೊಡ್ಡ ಕಲ್ಲಂಗಡಿ (watermelon) ಹಣ್ಣನ್ನು ಇಡಿಯಾಗಿ ಎಣ್ಣೆಯಲ್ಲಿ ಕರೆದಿದ್ದಾನೆ!

ಸುಮಾರು 3 ನಿಮಿಷದ ಈ ವಿಡಿಯೋ ಮೂಲಕ ಈ ಮನುಷ್ಯ ಜಗತ್ತಿಗೆ ಏನನ್ನು ತಿಳಿಯಪಡಿಸಲು ಹೊರಟಿದ್ದಾನೆ? ಇವನ ಈ ಪಾಕಪ್ರಯೋಗ ಎಷ್ಟು ಅನಾರೋಗ್ಯಕರ ಮತ್ತು ಅಪಾಯಕಾರಿಯಿಂದ ಕೂಡಿದೆ. ಬೇಸಿಗೆಯ ಹಣ್ಣುಗಳನ್ನು ಹೀಗೆ ಕೊತಕೊತ ಕುದಿಯುವ ಎಣ್ಣೆಯಲ್ಲಿ ಇಡಿಯಾಗಿ ಕರಿದು ತಿನ್ನುತ್ತಾನಲ್ಲ! ಇವನಿಗೆ ಏನು ಹೇಳುವುದು?

ಇದನ್ನೂ ಓದಿ : Viral Video: ಇದನ್ನು ಆಸ್ಕರ್​ಗೆ ಕಳಿಸಬೇಕಿತ್ತು! ನೆಟ್ಟಿಗರ ಒಕ್ಕೊರಲಿನ ದನಿ

ಹೀಗೆ ಎಣ್ಣೆಯಲ್ಲಿ ಕರಿಯುವುದರಿಂದ ಹಣ್ಣು ಗರಿಗರಿಯಾಗುತ್ತದೆ ಎಂದು ಬೇರೆ ಹೇಳಿದ್ದಾನೆ ಈತ. ಗರಿಗರಿ ಹೋಗಲಿ ಆದರೆ ಅವನು ದೊಡ್ಡ ಕಲ್ಲಂಗಡಿಯನ್ನು ಅಷ್ಟೊಂದು ಎಣ್ಣೆಯಲ್ಲಿ ಕರಿಯುವುದನ್ನು ನೋಡುವುದಕ್ಕೆ ಭಯವಾಗುತ್ತಿತ್ತು. ನೆಟ್ಟಿಗರಂತೂ ರೊಚ್ಚಿಗೆದ್ದು ಇವನ ತಲೆಯನ್ನು ಕಲ್ಲಂಗಡಿ ಹಣ್ಣಿನಿಂದ ಒಡೆಯಬೇಕು ಎನ್ನುತ್ತಿದ್ದಾರೆ.

ಇದನ್ನೂ ಓದಿ : Viral Video: ಓನು ಬಂಗಾರಾ ಓನು ಪುಟ್ಟಾ, ಈ ವೀಕೆಂಡ್​ ಎಲ್ಲಿ ಹೋಗೋಣ?

ಬೇಸಿಗೆಯಲ್ಲಿ ಹಣ್ಣು ತಿನ್ನುವುದೇ ಹೊಟ್ಟೆ ತಂಪಗಿರಲೆಂದು. ಆದರೆ ಇವ ಇಷ್ಟು ದೊಡ್ಡ ಹಣ್ಣನ್ನು ಕರಿದು ತಿನ್ನುತ್ತಿದ್ದಾನೆಂದರೆ ಖಂಡಿತ ಇವನಿಗೆ ಹುಚ್ಚು ಹಿಡಿದಿದೆ. ನಾನು ನನ್ನ ಮೂರು ನಿಮಿಷವನ್ನು ಹಾಳು ಮಾಡಿಕೊಂಡೆ. ಇಷ್ಟು ದಿನ ನೋಡಿದ ಕಿಚನ್​ ಹ್ಯಾಕ್​ ವಿಡಿಯೋಗಳಲ್ಲಿ ಇದು ಅತ್ಯಂತ ಅಪಾಯಕಾರಿ ಅಂತೆಲ್ಲ ಪ್ರತಿಕ್ರಿಯಿಸುತ್ತಿದ್ದಾರೆ. ನೀವೇನಂತೀರಿ?

(ವಿ. ಸೂ : ನೀವಂತೂ ಇಂಥ ಪ್ರಯೋಗಗಳನ್ನು ಅಪ್ಪಿತಪ್ಪಿಯೂ ಮಾಡಬೇಡಿ. ಇದು ಅತ್ಯಂತ ಅಪಾಯಕಾರಿ)

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:25 pm, Sat, 3 June 23

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು