Sign In

By signing in or creating an account, you agree with Associated Broadcasting Company's Terms & Conditions and Privacy Policy.

100 ದಿನ ಕೇವಲ ಮೆಕ್‌ಡೊನಾಲ್ಡ್​ ಮೀಲ್ ಸೇವಿಸಿ 26 ಕೆಜಿ ತೂಕ ಕಳೆದುಕೊಂಡ ಕೆವಿನ್!

ಸಾಮಾನ್ಯವಾಗಿ ತೂಕ ಇಳಿಸಲು ಜಂಕ್ ತಿಂಡಿ ತಿನ್ನಬಾರದು ಎಂದು ಹೇಳುತ್ತಾರೆ, ಆದರೆ ಕೆವಿನ್ ಯಾರು ಊಹಿಸದಂತ ಚಾಲೆಂಜ್ ಅಲ್ಲಿ ಪಾಲ್ಗೊಂಡು ಬರೋಬ್ಬರಿ 26 ಕಿಜಿ ತೂಕ ಇಳಿಸಿದ್ದಾರೆ.

100 ದಿನ ಕೇವಲ ಮೆಕ್‌ಡೊನಾಲ್ಡ್​ ಮೀಲ್ ಸೇವಿಸಿ 26 ಕೆಜಿ ತೂಕ ಕಳೆದುಕೊಂಡ ಕೆವಿನ್!
ಕೆವಿನ್
Follow us
ನಯನಾ ಎಸ್​ಪಿ
|

Updated on: Jun 03, 2023 | 1:57 PM

ಅಮೆರಿಕಾದ ನ್ಯಾಶ್‌ವಿಲ್ಲೆಯ (Nashville) 57 ವರ್ಷದ ಕೆವಿನ್ ಮ್ಯಾಗಿನ್ನಿಸ್, ತಮ್ಮ ಅಸಾಂಪ್ರದಾಯಿಕ ತೂಕ ನಷ್ಟ ಪ್ರಯಾಣದಿಂದ (unconventional weight loss journey) ರಾಷ್ಟ್ರೀಯ ಗಮನ ಸೆಳೆದರು. ಸಾಮಾನ್ಯವಾಗಿ ತೂಕ ಇಳಿಸಲು ಜಂಕ್ ತಿಂಡಿ ತಿನ್ನಬಾರದು ಎಂದು ಹೇಳುತ್ತಾರೆ, ಆದರೆ ಕೆವಿನ್ ಯಾರು ಊಹಿಸದಂತ ಚಾಲೆಂಜ್ ಅಲ್ಲಿ ಪಾಲ್ಗೊಂಡು ಬರೋಬ್ಬರಿ 26 ಕಿಜಿ ತೂಕ ಇಳಿಸಿದ್ದಾರೆ. 108 ಕೆಜಿಯಿಂದ ಪ್ರಾರಂಭಿಸಿ, ಮ್ಯಾಗಿನ್ನಿಸ್ ಸತತ 100 ದಿನಗಳವರೆಗೆ ಮೆಕ್‌ಡೊನಾಲ್ಡ್​ಸ್ ಊಟವನ್ನು ಮಾತ್ರ ಸೇವಿಸುವ ವಿಶಿಷ್ಟ ಸವಾಲನ್ನು ಪ್ರಾರಂಭಿಸಿದರು.

ಆಹಾರದ ಅಸಾಂಪ್ರದಾಯಿಕ ಸ್ವಭಾವದ ಹೊರತಾಗಿಯೂ, ಕೆವಿನ್ 26 ಕೆಜಿ ತೂಕ ಇಳಿಸುವುದರಲ್ಲಿ ಯಶಸ್ವಿಯಾದರು ಜೊತೆಗೆ ವ್ಯಾಪಕವಾದ ಆನ್‌ಲೈನ್ ಮೆಚ್ಚುಗೆಯನ್ನು ಗಳಿಸಿದರು.

View this post on Instagram

A post shared by @bigmaccoaching

ಮ್ಯಾಗಿನ್ನಿಸ್ ಅವರು NBC ಯ ಟುಡೇ ಶೋ ಜೊತೆಗಿನ ಸಂದರ್ಶನದಲ್ಲಿ ತಮ್ಮ ತೂಕ ನಷ್ಟ ಪ್ರಯಾಣದ ಕುರಿತು ಮಾತನಾಡಿದರು, ಭಾಗ ನಿಯಂತ್ರಣದ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ಅವರು ಪ್ರತಿ ಮೆಕ್‌ಡೊನಾಲ್ಡ್ಸ್ ಊಟದಲ್ಲಿ ಅರ್ಧದಷ್ಟು ಮಾತ್ರ ಸೇವಿಸಿ, ಅವರ ಕ್ಯಾಲೋರಿ ಸೇವನೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದ್ದರು.

ಕೆವಿನ್ ಸೋಡಾ ಕುಡಿಯುವುದನ್ನು ನಿಲ್ಲಿಸಿ ನೀರನ್ನು ಸೇವಿಸಲು ಪ್ರಾರಂಭಿಸಿದರು, ಆಲ್ಕೋಹಾಲ್ ಮತ್ತು ತಿಂಡಿಗಳನ್ನು ತ್ಯಜಿಸಿದರು ಮತ್ತು ಊಟದ ನಡುವೆ ಹಸಿವನ್ನು ನಿಭಾಯಿಸುವ ಸವಾಲನ್ನು ಸ್ವೀಕರಿಸಿದರು.

ಮ್ಯಾಗಿನ್ನಿಸ್ ಅವರ ಪ್ರಯತ್ನಗಳು ದೈಹಿಕ ರೂಪಾಂತರ ಮತ್ತು ಕೊಲೆಸ್ಟ್ರಾಲ್ ಮಟ್ಟ ಸುಧಾರಿಸಲು ಕಾರಣವಾಯಿತು. ಅವರ ಟ್ರೈಗ್ಲಿಸರೈಡ್ ಮಟ್ಟಗಳು 205 ಪಾಯಿಂಟ್‌ಗಳಷ್ಟು ಕಡಿಮೆಯಾಯಿತು ಮತ್ತು ಕೊಲೆಸ್ಟ್ರಾಲ್ 65 ರಷ್ಟು ಕಡಿಮೆಯಾಯಿತು. ಈ ಬದಲಾವಣೆಗಳು ವಿಶೇಷವಾಗಿ ಗಮನಾರ್ಹವಾದವು, ಏಕೆಂದರೆ ಮ್ಯಾಗಿನ್ನಿಸ್ ಈ ಹಿಂದೆ ಮಧುಮೇಹದಿಂದ ಬಳಲುತ್ತಿದ್ದರು ಆದರೆ ಈಗ ಮಧುಮೇಹ ಕಂಟ್ರೋಲ್​ನಲ್ಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಈ ದೇಶದಲ್ಲಿ ನಡೆಯಲಿದೆ ಸೆಕ್ಸ್​ ಚಾಂಪಿಯನ್​ಶಿಪ್​; 16 ಹಂತ, ದಿನಕ್ಕೆ ಒಂದು ಗಂಟೆ ಪರ್ಫಾರ್ಮೆನ್ಸ್ ಕಡ್ಡಾಯ

ಕೆವಿನ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಾಥಮಿಕವಾಗಿ ಟಿಕ್‌ಟಾಕ್‌ನಲ್ಲಿ ತಮ್ಮ ಪ್ರಗತಿಯನ್ನು ದಾಖಲಿಸಿದ್ದಾರೆ. ಮೆಕ್‌ಡೊನಾಲ್ಡ್ಸ್-ಮಾತ್ರ ಆಹಾರದ ಚಾಲೆಂಜ್ ನಲ್ಲಿ ಕೆವಿನ್ ಪತ್ನಿಯು ಸೇರಲು ಮುಂದಾಗಿದ್ದಾರೆ. ಇದರ ಪರಿಣಾಮವಾಗಿ ಅವರು ದಿನ 65ರ ಹೊತ್ತಿಗೆ 18 ಪೌಂಡ್‌ಗಳನ್ನು ಕಳೆದುಕೊಂಡಿರುವುದು ವರದಿಯಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ