ವಿಚಿತ್ರ ಯೋಗ-ರೋಗ: ಬಿಯರ್ ಕುಡಿಯುತ್ತಾ ಯೋಗ ಮಾಡಬೇಕಂತೆ! ಮೂರು ಸಿಪ್ಸ್-ಆರು ಆಸನಗಳು ಮಾಡಬೇಕಂತೆ! ಎಲ್ಲಿ ಗೊತ್ತಾ?
ಇನ್ನು ಬೀರ್ ಯೋಗ ಭಾಗ್ಯ! ಬಿಯರ್ ಕುಡಿಯುತ್ತಾ ಯೋಗ ಮಾಡಬೇಕಂತೆ! ಮೂರು ಸಿಪ್ಸ್-ಆರು ಆಸನಗಳು ಮಾಡಬೇಕಂತೆ! ಎಲ್ಲಿ ಗೊತ್ತಾ?
Beer yoga: ಯೋಗ ಎಂಬುದು ವಿಶ್ವ ಗುರುವಾಗಿ ಗುರುತಿಸಿಕೊಂಡಿರುವ ಭಾರತದ ಪ್ರಾಚೀನ ಕೊಡುಗೆಯಾಗಿದೆ. ಈ ಬಾರಿ ವಿಶ್ವ ಯೋಗ ದಿನ 2023 ಇದೇ ಜೂನ್ 21 ರಂದು ಬುಧವಾರ (International yoga day 2023) ನಡೆಯಲಿದೆ. ಈ ಮಧ್ಯೆ ಯೋಗದ ಪ್ರಾಬಲ್ಯ ಕಂಡುಕೊಂಡಿರುವ ಪಾಶ್ಚಾತ್ಯ ರಾಷ್ಟ್ರಗಳೂ ಸಹ ಯೋಗಾಭ್ಯಾಸದಲ್ಲಿ ಮುಳುಗಿದೆ. ಆದರೆ ಕೆಲವೊಂದು ರಾಷ್ಟ್ರಗಳು ಇನ್ನೂ ಒಂದು ಹೆಜ್ಜೆ ಮುಂದುವರಿದು ಯೋಗ ಮಾಡುವುದು ಎಲ್ಲರಿಗೂ, ಎಲ್ಲ ಕಾಲಕ್ಕೂ ಸಾಧ್ಯವಾಗುವಂತೆ ಪಟುಗಳ ಕೈಗೆ ಬಿಯರ್ ಡಬ್ಬಿ ಕೊಟ್ಟಿದೆ! ಕೈಯಲ್ಲಿ ಬಿಯರ್ ಟಿನ್ ಹಿಡಿದುಕೊಂಡು ಯೋಗ ಮಾಡುತ್ತಿರುವವರನ್ನು ನೋಡಿದರೆ ನಿಮಗೆ ಏನನ್ನಿಸುತ್ತದೆ? ಬಹುಶಃ ನೀವು ಅಂತಹ ಜನರನ್ನು ನೋಡಿದಾಗ ಮುಖ ಗಂಟಿಕ್ಕಬಹುದು ಅಥವಾ ತುಂಬಾ ಮುಜುಗರಕ್ಕೊಳಗಾಗಬಹುದು. ಆದರೆ ವಿದೇಶದಲ್ಲಿ ಇಂತಹ ವಿದ್ಯಮಾನಗಳು ನಡೆಯುತ್ತಿವೆ. ಯೋಗ ಮಾಡುವಾಗ ಒಂದು ಕೈಯಿಂದ ಬಿಯರ್ ಬಾಟಲಿಯನ್ನು ಹಿಡಿದಿಟ್ಟುಕೊಳ್ಳುವ ಅಭ್ಯಾಸವು ಇತ್ತೀಚೆಗೆ ಬಹಳ ಜನಪ್ರಿಯವಾಗಿದೆ. ಜನರು ಅದನ್ನು ಆನಂದಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬನ್ನಿ ಈ ವಿಚಿತ್ರ ಯೋಗದ ಬಗ್ಗೆ ವಿವರವಾಗಿ ತಿಳಿಯೋಣ.!
ನಮ್ಮ ದೇಹವು ಆರೋಗ್ಯವಾಗಿದ್ದರೆ ಮಾತ್ರವೇ ನಮ್ಮ ಮನಸ್ಸೂ ಕೂಡ ಸಂತೋಷವಾಗಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಗಂಭೀರ ಕಾಯಿಲೆಗಳು ಚಿಕ್ಕ ವಯಸ್ಸಿನಲ್ಲೇ ಜನರನ್ನು ಬಾಧಿಸಲು ಪ್ರಾರಂಭಿಸುತ್ತಿವೆ. ಇದಕ್ಕೆ ಬದಲಾದ ಆಹಾರ ಪದ್ಧತಿ ಮತ್ತು ಜೀವನಶೈಲಿಯೇ ದೊಡ್ಡ ಕಾರಣ ಎನ್ನುತ್ತಾರೆ ಆರೋಗ್ಯ ತಜ್ಞರು. ಇದನ್ನು ಸುಧಾರಿಸಲು ಜನರು ಯೋಗ ಮತ್ತು ವ್ಯಾಯಾಮವನ್ನು ತಮ್ಮ ದೈನಂದಿನ ದಿನಚರಿಯ ಭಾಗವಾಗಿಸುವುದು ಮುಖ್ಯವಾಗಿದೆ. ಯೋಗದಿಂದ ಎಲ್ಲಾ ರೋಗಗಳನ್ನು ನಿವಾರಿಸಬಹುದು.
ಇದರ ಪ್ರಾಮುಖ್ಯತೆ ಈಗ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಇದೆ. ಯೋಗ ಮಾಡಲು ಮನುಷ್ಯ ಮತ್ತು ಅವನ ಮನಸ್ಸು ಶಾಂತವಾಗಿರಬೇಕು. ಎಲ್ಲರಿಗೂ ಏಕಾಗ್ರತೆ ಗೊತ್ತು. ಆದರೆ ಯುವಕರಿಗೆ ಹಾಗೆ ಮಾಡುವುದು ಸ್ವಲ್ಪ ಕಷ್ಟ. ಯೋಗವು ಹವ್ಯಾಸವಾಗಿ ಪ್ರಾರಂಭವಾದರೂ, ಅವರು ಅದನ್ನು ದೀರ್ಘಕಾಲದವರೆಗೆ ಅಭ್ಯಾಸ ಮಾಡುವುದು ಕಷ್ಟ ಕಷ್ಟವಾಗುತ್ತದೆ.
ಯಾರಿಗುಂಟು ಯಾರಿಗಿಲ್ಲ ಬೀರ್ ಯೋಗ ಭಾಗ್ಯ!
ಅಂಥವರಿಗಾಗಿಯೇ ಬಿಯರ್ ಯೋಗ ಎಂಬ ಹೊಸ ಟ್ರೆಂಡ್ ಶುರುವಾಗಿದೆ. ಈ ಯೋಗದಲ್ಲಿ ಎರಡು ಗ್ಲಾಸ್ ಬಿಯರ್ ಹೊಟ್ಟೆಗೆ ಇಳಿಸಿ ಯೋಗ ಮಾಡಲಾಗುತ್ತದೆ. ಈ ಬಿಯರ್ ಯೋಗದ ಟ್ರೆಂಡ್ ಕೆಲವು ಸಮಯದಿಂದ ವಿದೇಶಗಳಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಡೆನ್ಮಾರ್ಕ್ ನ ರಾಜಧಾನಿ ಕೋಪನ್ ಹೆಗನ್ ನಲ್ಲಿ ರಸ್ತೆ ಬದಿಯಲ್ಲಿ ಕೆಲವರು ಯೋಗ ಮಾಡುತ್ತಿರುವ ವಿಡಿಯೋವನ್ನು ಎಎಫ್ ಪಿ ಸುದ್ದಿ ಸಂಸ್ಥೆ ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಆದರೆ ಈ ವಿಚಿತ್ರ ಯೋಗಕ್ಕೂ ಭಾರತದ ಸಾಂಪ್ರದಾಯಿಕ ಯೋಗಕ್ಕೂ ಒಂದು ವ್ಯತ್ಯಾಸವಿದೆ. ಅಂದರೆ.. ಇಲ್ಲಿ ಎಲ್ಲರೂ ಕೈಯಲ್ಲಿ ಬಿಯರ್ ಡಬ್ಬಿ ಹಿಡಿದಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಎಲ್ಲರೂ ಯೋಗ ಭಂಗಿಯಲ್ಲಿದ್ದಾರೆ. ಆದರೆ ಕೈಯಲ್ಲಿ ಬಿಯರ್ ಕ್ಯಾನ್ ಹಿಡಿದು ಕುಡಿಯುತ್ತಾ, ಯೋಗ ಮಾಡುತ್ತಿದ್ದಾರೆ.
VIDEO: Around 100 people gather to perform yoga by the Copenhagen harbour – cans of crisp, cold, refreshing beer in hand. The booze-fuelled class has been open for four years, and appears popular with its practitioners. pic.twitter.com/zM2kAlM9jg
— AFP News Agency (@AFP) June 2, 2023
ನಿನ್ನೆಯಷ್ಟೇ (ಜೂನ್ 2) ಪೋಸ್ಟ್ ಮಾಡಲಾದ ಈ ವೀಡಿಯೊ 76,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ನೆಟ್ಟಿಗರು ತಮ್ಮ ನಾನಾ ಭಂಗಿಗಳ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಇದನ್ನು ನೋಡಿ ಭಾರತೀಯ ಯುವಕರು ಡೆನ್ಮಾರ್ಕ್‌ಗೆ ಓಡಿ ಹೋದರೆ ಗತಿಯೇನು ಎಂದು ಒಬ್ಬರು ತಮಾಷೆಯಾಗಿ ಹೇಳಿದರೆ, ಮತ್ತೊಬ್ಬರು ಸಾಂಪ್ರದಾಯಿಕ ಯೋಗಕ್ಕಿಂತ ಇದು ಉತ್ತಮ ಎಂದು ಪ್ರತಿಕ್ರಿಯಿಸಿದ್ದಾರೆ. ಇದು ಭಾರತೀಯ ಸಂಪ್ರದಾಯದ ಅಣಕ ಎಂದೂ ಹೇಳಿದ್ದಾರೆ.
ಬಿಯರ್ ಯೋಗದ ಟ್ರೆಂಡ್ ವಿದೇಶಗಳಲ್ಲಿ ಬಹಳ ಜನಪ್ರಿಯವಾಗಿದೆ. ಮೊದಲು ಇದು ಜರ್ಮನಿಯಲ್ಲಿ ಜನಪ್ರಿಯವಾಯಿತು. ಆ ನಂತರ ಕ್ರಮೇಣ ಆಸ್ಟ್ರೇಲಿಯಾ ಮತ್ತು ಅಮೆರಿಕ ಕೂಡ ಈ ಟ್ರೆಂಡ್ ಅನುಸರಿಸಿದವು. ಆದರೆ ನಮ್ಮ ಭಾರತದಲ್ಲಿ ಗೊತ್ತಲ್ಲಾ… ಯೋಗ ಸಾಧಕರು ಯೋಗವನ್ನು ನಮ್ಮ ಸಂಸ್ಕೃತಿಯ ಪ್ರಕಾರವಂತೆ ಪ್ರತೀಕವಂತೆ ಭಾವಿಸುತ್ತಾರೆ. ಪ್ರಾಣಾಯಾಮವನ್ನು ಯೋಗ ಎಂದು ಪರಿಗಣಿಸುತ್ತಾರೆ. ಏಕೆಂದರೆ ಯೋಗ ಭಾರತದ ಪ್ರಾಚೀನ ನಾಗರಿಕತೆಯ ಭಾಗವಾಗಿದೆ. ನಮ್ಮ ಯೋಗದ ನಿಯಮಗಳು ಸಂಪೂರ್ಣವಾಗಿ ವಿಭಿನ್ನವಾಗಿವೆ. ಅದನ್ನು ಪಾಲಿಸುವುದೇ ಶ್ರೇಷ್ಠ ಎಂಬುದನ್ನು ಮರೆಯಬಾರದು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 8:48 pm, Sat, 3 June 23