Optical illusion: ಈ ಬಂಡೆ ಗಾಳಿಯಲ್ಲಿ ತೇಲುತ್ತಿದೆಯೇ ಅಥವಾ ನೀರಿನಲ್ಲಿ ತೇಲುತ್ತಿದೆಯೇ? ಕಂಡುಹಿಡಿಯಿರಿ ನೋಡಾ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಆಪ್ಟಿಕಲ್ ಇಲ್ಯೂಷನ್​​​​​ನಲ್ಲಿ ಬಂಡೆಯು ನೀರಿನಲ್ಲಿ ತೇಲುತ್ತಿದೆಯಾ ಅಥವಾ ಆಕಾಶದಲ್ಲಿ ತೇಲುತ್ತಿದೆಯಾ. ಸರಿಯಾದ ಉತ್ತರ ಯಾವುದು ಎಂದು ಕಂಡುಹಿಡಿಯಬಹುದೇ?

Optical illusion: ಈ ಬಂಡೆ ಗಾಳಿಯಲ್ಲಿ ತೇಲುತ್ತಿದೆಯೇ ಅಥವಾ ನೀರಿನಲ್ಲಿ ತೇಲುತ್ತಿದೆಯೇ? ಕಂಡುಹಿಡಿಯಿರಿ ನೋಡಾ
ವೈರಲ್​​ ಫೋಸ್ಟ್
Follow us
ಅಕ್ಷಯ್​ ಪಲ್ಲಮಜಲು​​
|

Updated on: Jun 06, 2023 | 10:16 AM

ಆಪ್ಟಿಕಲ್ ಇಲ್ಯೂಷನ್ ಇತ್ತೀಚಿನ ಸಾಮಾಜಿಕ ಮಾಧ್ಯಮದ ಟ್ರೆಂಡ್ ಆಗಿದೆ. ಜನರ ಗಮನ ಮತ್ತು ಮನಸ್ಸು ಚಂಚಲವಾಗಿರುವ ಈ ಯುಗದಲ್ಲಿ ಈ ಆಪ್ಟಿಕಲ್ ಇಲ್ಯೂಷನ್​​​​ಗಳು ನಮ್ಮ ಗಮನವನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಇವುಗಳು ನಮ್ಮ ಗ್ರಹಿಕೆಗೆ ಸವಾಲು ಹಾಕುವ ಮತ್ತು ನಮ್ಮ ವೀಕ್ಷಣಾ ಸಾಮರ್ಥ್ಯಗಳನ್ನು ಪರೀಕ್ಷೆಗೆ ಒಳಡಿಸುವ ಒಂದು ವಿಧವಾದ ದೃಶ್ಯಗಳಾಗಿವೆ. ಅದು ನಮ್ಮನ್ನು ಒಮ್ಮೆಲೆ ಗೊಂದಲಕ್ಕೀಡು ಮಾಡುತ್ತವೆ ಮತ್ತು ವಾಸ್ತವದೊಂದಿಗೆ ಹೊಂದಿಕೆಯಾಗದ ವಿಷಯಗಳು ಕಣ್ಣಿಗೆ ಕಾಣಿಸುವಂತೆ ಮಾಡುತ್ತವೆ. ನಾವು ಏನನ್ನಾದರೂ ಕಲಿಯಲು ಮತ್ತು ನಮ್ಮ ಕಣ್ಣಿನ ಜೊತೆಗೆ ಆಲೋಚನಾ ಶಕ್ತಿಯನ್ನು ತೀಕ್ಷ್ಣಗೊಳಿಸಲು ಈ ರೀತಿಯ ಚಿತ್ರಗಳು ಸಹಾಯಕವಾಗಿದೆ. ಅಲ್ಲದೆ ಆಪ್ಟಿಕಲ್ ಇಲ್ಯೂಷನ್ ಆಟಗಳು ಒತ್ತಡ ಮತ್ತು ಆತಂಕವನ್ನು ಸಹ ನಿವಾರಿಸಲು ಸಹಾಯ ಮಾಡುತ್ತವೆ. ಇಂತಹ ಹಲವು ಪೋಸ್ಟ್​​​ಗಳನ್ನು ನೀವು ಸಾಮಾಜಿಕ ಜಾಲತಾಣದಲ್ಲಿ ನೋಡಿರಬಹುದು. ಇದೇ ರೀತಿಯ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಚಿತ್ರದಲ್ಲಿ ಸಣ್ಣ ಬಂಡೆ ಕಲ್ಲೊಂದು ಗಾಳಿಯಲ್ಲಿ ತೇಲಾಡುತ್ತಿದೆಯೋ ಅಥವಾ ನೀರಿನಲ್ಲಿ ತೇಲುತ್ತಿದೆಯೇ ಎಂದು ನೋಡುಗರನ್ನು ಗೊಂದಲಕ್ಕೀಡು ಮಾಡಿದೆ.

ಆಪ್ಟಿಕಲ್ ಇಲ್ಯೂಷನ್ ನಮ್ಮ ಮನಸ್ಸನ್ನು ಹೇಗೆ ಗೊಂದಲಿಸುತ್ತವೆ ಎಂಬುದಕ್ಕೆ ವೈರಲ್ ಆಗಿರುವ ಈ ಫೋಟೊ ಒಂದು ಉದಾಹರಣೆಯಾಗಿದೆ. ಈ ಚಿತ್ರವನ್ನು ಮೆಸ್ಸಿಮೊ (@Rainmaker1973) ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಫೋಟೊದಲ್ಲಿ ಮೊದಲು ನೀವು ಗಾಳಿಯಲ್ಲಿ ತೇಲುತ್ತಿರುವ ಬಂಡೆಯನ್ನು ಕಾಣಬಹುದು. ಆದರೆ ಮತ್ತೊಮ್ಮೆ ಸೂಕ್ಷ್ಮವಾಗಿ ಗಮನಿಸಿದಾಗ ಬಂಡೆಯು ನೀರಿನಲ್ಲಿ ತೇಲುತ್ತಿದೆಯೇ ವಿನಃ ಗಾಳಿಯಲ್ಲಿ ಸುಳಿದಾಡುತ್ತಿಲ್ಲ ಎಂಬುದನ್ನು ಗಮನಿಸಬಹುದು.

ಇದನ್ನೂ ಓದಿ:Optical Illusion: ಮಂಡೇ ಬ್ಲ್ಯೂಸ್​​ನಿಂದ ಹೊರಬರೋದಕ್ಕೆ ನಿಮ್ಮ ಕಣ್ಣುಗಳಿಗೆ ಕೆಲಸ ಕೊಡಿ

ಟ್ವಿಟರ್​​​ನಲ್ಲಿ ವೈರಲ್ ಆಗಿರುವ ಈ ಪೋಸ್ಟ್ 12.3 ಮಿಲಿಯಲ್ ವೀಕ್ಷಣೆಗಳನ್ನು ಹಾಗೂ 82.3 ಸಾವಿರ ಲೈಕ್ಸ್​​​ಗಳನ್ನು ಪಡೆದುಕೊಂಡಿದೆ. ಇನ್ನು ಕಮೆಂಟ್ ವಿಭಾಗದಲ್ಲಿ ಹಲವರು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾರರು ಆಷ್ಟಿಕಲ್ ಇಲ್ಯೂಷನ್​​​​ಗಳು ಮನಸ್ಸನ್ನು ಕೇಂದ್ರೀಕೃತಗೊಳಿಸುತ್ತವೆ ಮತ್ತು ಆಕರ್ಷಕವಾಗಿರುತ್ತವೆ’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ‘ನಾನು ನೀರಿನಲ್ಲಿರುವ ಬಂಡೆಯನ್ನು ನೋಡಿದೆ’ ಎಂದು ಹೇಳಿದ್ದಾರೆ. ಇನ್ನು ಅನೇಕರು ಈ ಬಂಡೆಯು ನೀರಿನಲ್ಲಿ ತೇಲುತ್ತಿದೆಯೇ ಹೊರತು ಗಾಳಿಯಲ್ಲಿ ಸುಳಿದಾಡುತ್ತಿಲ್ಲ ಎಂಬುದನ್ನು ಅರಿತುಕೊಳ್ಳಲು ಆಪ್ಟಿಕಲ್ ಭ್ರಮೆಯನ್ನು ದೀರ್ಘಕಾಲ ನೋಡಬೇಕಾಯಿತು ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ