Viral Video: ಎಚ್‌ಡಿಎಫ್‌ಸಿ ಆನ್‌ಲೈನ್ ಮೀಟಿಂಗ್ನಲ್ಲಿ ಉದ್ಯೋಗಿ ನಿಂದನೆ; ಅಧಿಕಾರಿ ಅಮಾನತು
Suspend : ಎಚ್‌ಡಿಎಫ್‌ಸಿ ಬ್ಯಾಂಕ್‌ನ (HDFC) ಆನ್‌ಲೈನ್ ಮೀಟಿಂಗ್ ನಡೆಯುತ್ತಿದ್ದಾಗ ಅಧಿಕಾರಿಯೊಬ್ಬರು ಉದ್ಯೋಗಿಗಳನ್ನು ನಿಂದಿಸಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
Viral: ಎಚ್‌ಡಿಎಫ್‌ಸಿ ಬ್ಯಾಂಕಿಂಗ್ ಮತ್ತು ವಿಮಾ ಸಂಬಂಧಿ (HDFC) ಉತ್ಪನ್ನಗಳ ಕುರಿತು ನಿರೀಕ್ಷಿತ ಗುರಿಯನ್ನು ಸಾಧಿಸದೇ ಇದ್ದ ಕಾರಣಕ್ಕಾಗಿ ಆನ್‌ಲೈನ್ ಮೀಟಿಂಗ್ನಲ್ಲಿ ಕಿರಿಯ ಉದ್ಯೋಗಿಗಳನ್ನು ಹಿರಿಯ ಅಧಿಕಾರಿಯೊಬ್ಬರು ನಿಂದಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಧಿಕಾರಿಯನ್ನು ಬ್ಯಾಂಕ್ ಅಮಾನತುಗೊಳಿಸಿದೆ. ಉದ್ಯೋಗಿಗಳೊಂದಿಗೆ ಅಗೌರವ ಮತ್ತು ಅಶಿಸ್ತಿನಿಂದ ನಡೆದುಕೊಂಡ ವಿಡಿಯೋ ಸಾಕ್ಷ್ಯದ ಆಧಾರದ ಮೇಲೆ ಸೋಮವಾರದಂದು ಕೊಲ್ಕತ್ತಾದಲ್ಲಿ ವಾಸಿಸುತ್ತಿರುವ ಹಿರಿಯ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
@HDFC_Bank Regional Branch Banking Head – Pushpal Roy at Kolkata threatening and abusing his team for not getting desired numbers. चाल चरित्र और चेहरा of the organisation. And they manage @GPTW_India awards. Legacy of #adityapuri Listen n RT. cc @VinayHDFCBank @ravisunHDFCBank pic.twitter.com/IxlzGftakY
ಇದನ್ನೂ ಓದಿ— Madanlal Dahariya (@MDahariya) June 5, 2023
ಮೇಲಿನ ಈ ವಿಡಿಯೋದಲ್ಲಿ ಕಿರಿಯ ಉದ್ಯೋಗಿಗಳ ಮೇಲೆ ಹಿರಿಯ ಅಧಿಕಾರಿಯು ಕೂಗಾಡಿರುವುದನ್ನು ಗಮನಿಸಬಹುದು. ಎಚ್‌ಡಿಎಫ್‌ಸಿ ಬ್ಯಾಂಕ್‌ನ ಕೊಲ್ಕತ್ತಾ ಶಾಖೆಯ ಕ್ಲಸ್ಟರ್ ಹೆಡ್ ಆಗಿದ್ದ ಪುಷ್ಪಲ್ ರಾಯ್ ಅಮಾನತುಗೊಂಡ ಅಧಿಕಾರಿ. ಬೆಂಗಾಲಿಯಲ್ಲಿ ಹೀಗೆ ಕೂಗಾಡಿದ್ದಾರೆ.
ಇದನ್ನೂ ಓದಿ : Viral Video: ಬನ್ನೇರುಘಟ್ಟದಲ್ಲಿ ಚಿರತೆಮರಿಗಳಿಗೆ ಮರುಜೀವ ಕೊಡುತ್ತಿರುವ ಸಾವಿತ್ರಮ್ಮ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸರ್ವೀಸ್ ಮ್ಯಾನೇಜರ್ ಅಜಯ್, ‘ಬ್ಯಾಂಕ್‌ನ ಮಾರ್ಗಸೂಚಿಗಳ ಪ್ರಕಾರ ಈ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಕೆಲಸದ ಸ್ಥಳದಲ್ಲಿಉದ್ಯೋಗಿಗಳನ್ನು ಅಗೌರವದಿಂದ ನಡೆಸಿಕೊಂಡ ಹಿನ್ನೆಲೆಯಲ್ಲಿ, ಪ್ರಾಥಮಿಕ ವಿಚಾರಣೆಯ ನಂತರವೇ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಿವರವಾದ ತನಿಖೆಯನ್ನೂ ಆರಂಭಿಸಲಾಗಿದೆ.’ ಎಂದು ಎನ್ಡಿಟಿವಿಗೆ ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ