Viral Video: ಕಲ್ಲಂಗಡಿ ಆಯ್ಕೆಯಲ್ಲಿ ಎತ್ತಿದ ಕೈ ನನ್ನ ಹೆಂಡತಿ; ಹೆಮ್ಮೆಪಡುತ್ತಿರುವ ಗಂಡ!

Watermelon : ಈತನಕ 12.2 ಮಿಲಿಯನ್​ ಜನರು ಈ ವಿಡಿಯೋ ನೋಡಿ ಬಿದ್ದುಬಿದ್ದು ನಕ್ಕಿದ್ದಾರೆ. ಈಗಲಾದರೂ ಮುಖ ಸಡಿಲಿಸೋ ಮಾರಾಯಾ ನಮಗೆಲ್ಲ ಶಾಕ್​ ಹೊಡೆದಂತಾಗುತ್ತಿದೆ ಎಂದು ಒಂದೇ ಸಮ ಬೆನ್ನು ಹತ್ತಿದ್ದಾರೆ ಈ ಗುಡಮಹಾಶಯನನ್ನು.

Viral Video: ಕಲ್ಲಂಗಡಿ ಆಯ್ಕೆಯಲ್ಲಿ ಎತ್ತಿದ ಕೈ ನನ್ನ ಹೆಂಡತಿ; ಹೆಮ್ಮೆಪಡುತ್ತಿರುವ ಗಂಡ!
ಕಲ್ಲಂಗಡಿಯನ್ನು ತಟ್ಟಿ ಪರೀಕ್ಷಿಸುತ್ತಿರುವ ಹೆಂಡತಿ. ಮನೆಗೆ ತಂದ ನಂತರ ಹೆಚ್ಚಿದ ಕಲ್ಲಂಗಡಿ ಬಣ್ಣ ಗಮನಿಸಿ ಎನ್ನುತ್ತಿರುವ ಗಂಡ.
Follow us
ಶ್ರೀದೇವಿ ಕಳಸದ
|

Updated on:Jun 06, 2023 | 4:36 PM

Husband and Wife : ಮೊನ್ನೆಯಷ್ಟೇ ದೊಡ್ಡದೊಂದು ಕಲ್ಲಂಗಡಿಯನ್ನು ಇಡಿಯಾಗಿ ಲೀಟರುಗಟ್ಟಲೆ ಎಣ್ಣೆಯಲ್ಲಿ ಕರಿದು ಗರಿಗರಿಯಾಗುವ ಕಲ್ಲಂಗಡಿ ಹಣ್ಣನ್ನು ನಿರೀಕ್ಷಿಸಿದ್ದ ಭೂಪನ ವಿಡಿಯೋ ನೋಡಿದ್ದಿರಿ. ಇದೀಗ ಮಾರುಕಟ್ಟೆಗೆ ಹೋಗಿ ಅಲ್ಲಿರುವ ಕಲ್ಲಂಗಡಿಗಳ (Watermelon) ನೆತ್ತಿ, ಬೆನ್ನು, ಹೊಟ್ಟೆ, ಮೈ, ಕೈಯನ್ನೆಲ್ಲ ನಾಲ್ಕಾರು ಬಾರಿ ತಟ್ಟಿ ತಟ್ಟಿ ತಟ್ಟಿ ಅಂತೂ  ಒಂದು ಕಲ್ಲಂಗಡಿ ಹಣ್ಣನ್ನು ಹೊತ್ತುಕೊಂಡು ಮನೆಗೆ ಬಂದ ಹೆಂಡತಿಯ ವಿಡಿಯೋ ವೈರಲ್ ಆಗುತ್ತಿದೆ. ಅರೆ, ಅದರಲ್ಲೇನಿದೆ ಮಜಾ ಎನ್ನುತ್ತಿದ್ದೀರೇ? ಕೊನೆಯಲ್ಲಿ ನಿಮಗೊಂದು ಪ್ರಶ್ನೆ ಇದೆ. ಮೊದಲು ಈ ಕೆಳಗಿನ ವಿಡಿಯೋ ನೋಡಿ.

ಕಲ್ಲಂಗಡಿಯ ಬಗ್ಗೆ ನನ್ನ ಹೆಂಡತಿಗಿರುವ ಜ್ಞಾನವನ್ನು ಗಮನಿಸಿರೋ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾನೆ ಈಕೆಯ ಗಂಡ. ಈತನಕ 12.2 ಮಿಲಿಯನ್​ ಜನರು ಈ ವಿಡಿಯೋ ನೋಡಿ ಬಿದ್ದುಬಿದ್ದು ನಕ್ಕಿದ್ದಾರೆ. ನಿಮಗೀಗಲೂ ನಗು ಬರಲಿಲ್ಲವಾ ಏನು ಮತ್ತೆ? ಹಾಗಿದ್ದರೆ ಅವರುಗಳ ಮಾಡಿದ ಪ್ರತಿಕ್ರಿಯೆಗಳನ್ನು ಓದಿ ಬಹುಶಃ ಒಂದು ಅಂದಾಜು ಬರಬಹುದು.

ಇದನ್ನೂ ಓದಿ : Viral Video: ಕಪ್ಪಾ ಕ್ಲಾಸಿಕಲ್​ ವಿಥ್ ಕಾಫಿ ಗ್ಲಾಸ್​; 5 ಲಕ್ಷ ಜನರು ಮೆಚ್ಚಿದ ಈ ರೀಲ್ಸ್ 

ಆಕೆ ಕಲ್ಲಂಗಡಿಯನ್ನು ತಟ್ಟಿ ತಟ್ಟಿ ಆರಿಸುವಾಗಿನ ಗಂಭೀರತೆಯನ್ನು ನೋಡಿ, ಬಹುಶಃ ಪರ್ಫೆಕ್ಟ್​ ಆಗಿರುವ ಹಣ್ಣನ್ನೇ ಆಯ್ಕೆ ಮಾಡಿಕೊಂಡಿರುತ್ತಾಳೆ ಎಂದುಕೊಂಡಿದ್ದೆ. ಗಂಡನಾದವನು ಅದು ಹೇಗೆ ನಗು ತಡೆದುಕೊಂಡಿದ್ದಾನೋ ಈ ವಿಡಿಯೋದಲ್ಲಿ, ಇವನಿಗೆ ಅಂತರಾಷ್ಟ್ರೀಯ ಮಟ್ಟದ ಬಹುಮಾನವನ್ನು ನೀಡಬೇಕು. ಇದು ಹಳದೀ ಕಲ್ಲಂಗಡಿ ಇರಬೇಕು ಎಂದು ನಾನೊಬ್ಬಳೇ ಹೇಳುತ್ತಿದ್ದೇನೇನೋ ಏನೋ… ಅಂತೆಲ್ಲ ಪ್ರತಿಕ್ರಿಯಿಸಿದ್ದಾರೆ ನೆಟ್​ಮಂದಿ.

ಇದನ್ನೂ ಓದಿ : Viral Video: ಪಶ್ಚಿಮ ಬಂಗಾಳದ ಕಲಾಶಿಕ್ಷಕಿಯ ಕೈಚಳವನ್ನೊಮ್ಮೆ ನೋಡಿ

ಅಯ್ಯೋ ನನಗೂ ಇಂಥ ಜಾಣ್ಮೆ ಇದೆ, ಅನೇಕ ಸಲ ನಾನೂ ಇಂಥ ಕಲ್ಲಂಗಡಿಗಳನ್ನು ಖರೀದಿಸಿದ್ದಿದೆ ಆಮೇಲೆ ಅದರ ಬಣ್ಣವನ್ನು ನೋಡಿ ಸಾಕಷ್ಟು ನಿರಾಶೆಗೊಂಡಿದ್ದೂ ಇದೆ. ಹಾಗಾಗಿ ನಾನು ಹೆಂಡತಿಯ ಪರ ಎಂದು ಒಬ್ಬರು ಹೇಳಿದ್ದಾರೆ. ಎರಡನೇ ಸಲ ತಟ್ಟಿ ನೋಡಿದಳಲ್ಲ, ಆ ಹಣ್ಣನ್ನು ಆಕೆ ಖರೀದಿಸಬೇಕಿತ್ತು, ಅದು ಪರ್ಫೆಕ್ಟ್​ ಶಬ್ದವನ್ನು ಹೊಮ್ಮಿಸಿತ್ತು ಎಂದು ಮತ್ತೊಬ್ಬರು ಹೇಳಿದ್ದಾರೆ.

ಈಗ ಹೇಳಿ, ಈ ಕಲ್ಲಂಗಡಿಯು ಹಣ್ಣಾದ ಮೇಲೆ ಹಳದಿಗೆ ತಿರುಗುವುದಿದೆಯೇ ಅಥವಾ ಕೆಂಪೇ? ಪ್ರತಿಕ್ರಿಯಿಸಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:32 pm, Tue, 6 June 23

ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ: ರಾಜಣ್ಣ
ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ: ರಾಜಣ್ಣ
ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಪ್ರತ್ಯೇಕವಾಗಿರಿಸಲಾಗಿದೆ: ಸತೀಶ್
ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಪ್ರತ್ಯೇಕವಾಗಿರಿಸಲಾಗಿದೆ: ಸತೀಶ್
ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಯಿಂದ ಭಯಗೊಂಡರೇ ಗವಿಯಪ್ಪ?
ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಯಿಂದ ಭಯಗೊಂಡರೇ ಗವಿಯಪ್ಪ?
ಆಶಯಗಳಿಗೆ ವಿರುದ್ಧವಾಗಿ ಪೇಜಾವರ ಶ್ರೀ ಸಂವಿಧಾನ ಬದಲಿಸಬೇಕೆನ್ನುತ್ತಾರೆ:ಸಿಎಂ
ಆಶಯಗಳಿಗೆ ವಿರುದ್ಧವಾಗಿ ಪೇಜಾವರ ಶ್ರೀ ಸಂವಿಧಾನ ಬದಲಿಸಬೇಕೆನ್ನುತ್ತಾರೆ:ಸಿಎಂ
ಬಸನಗೌಡ ಯತ್ನಾಳ್ ಸ್ವಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿದ್ದಾರೆ: ಯಡಿಯೂರಪ್ಪ
ಬಸನಗೌಡ ಯತ್ನಾಳ್ ಸ್ವಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿದ್ದಾರೆ: ಯಡಿಯೂರಪ್ಪ