ತಲಾಖ್ ಕುರಿತು ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡಿದ ಪತ್ನಿ, ರಿಯಲ್ ಆಗಿಯೇ ತಲಾಖ್ ನೀಡಿದ ಪತಿ
ಇನ್ಸ್ಟಾಗ್ರಾಂನಲ್ಲಿ ನಮ್ಮ ಜೀವನದಲ್ಲಿ ದಿನನಿತ್ಯ ನಡೆಯುವ ವಿಷಯಗಳ ಕುರಿತು ಅನೇಕ ರೀಲ್ಸ್ಗಳನ್ನು ನಾವು ನೋಡುತ್ತೇವೆ.
ಇನ್ಸ್ಟಾಗ್ರಾಂ(Instagram)ನಲ್ಲಿ ನಮ್ಮ ಜೀವನದಲ್ಲಿ ದಿನನಿತ್ಯ ನಡೆಯುವ ವಿಷಯಗಳ ಕುರಿತು ಅನೇಕ ರೀಲ್ಸ್ಗಳನ್ನು ನಾವು ನೋಡುತ್ತೇವೆ. ಹಾಗೆಯೇ ಇಲ್ಲಿ ಮುಸ್ಲಿಂ ಮಹಿಳೆಯೊಬ್ಬರು ತಲಾಖ್(Talaq) ಕುರಿತು ರೀಲ್ಸ್ ಮಾಡಿದ್ದು, ಆಕೆಯ ಪತಿ ನಿಜವಾಗಿಯೂ ತಲಾಖ್ ನೀಡಿರುವ ಘಟನೆ ನಡೆದಿದ್ದು, ಆತನ ವಿರುದ್ಧ ದೂರು ದಾಖಲಾಗಿದೆ. ತನ್ನ ಪತಿ ಮೊದಲು ಇನ್ಸ್ಟಾಗ್ರಾಂ ರೀಲ್ ಅನ್ನು ಅಳಿಸಲು ಪ್ರಯತ್ನಿಸಿದರು ಮತ್ತು ಕೊಲೆ ಬೆದರಿಕೆ ಹಾಕಿದರು ಎಂದು ಮಹಿಳೆ ಆರೋಪಿಸಿದ್ದಾರೆ. ಮಹಿಳೆ ತನ್ನ ಪತಿ ಹಾಗೂ ಅತ್ತೆಯ ಮೇಲೂ ವರದಕ್ಷಿಣೆ ಕಿರುಕುಳದ ಆರೋಪ ಹೊರಿಸಿದ್ದಾರೆ.
ಅನಾರೋಗ್ಯದ ಕಾರಣದಿಂದಾಗಿ ಈ ವರ್ಷ ಫೆಬ್ರವರಿಯಲ್ಲಿ ರುಖ್ಸಾರ್ ಅವರು ತಮ್ಮ ತಂದೆಯ ಮನೆಗೆ ಹೋಗಿದ್ದರು. ಅಲ್ಲೇ ಉಳಿದುಕೊಂಡರು, ಏಪ್ರಿಲ್ ತಿಂಗಳಲ್ಲಿ ಅವರು ಇನ್ಸ್ಟಾಗ್ರಾಂನಲ್ಲಿ ಮುತಕೀನ್ ಅವರೊಂದಿಗೆ ಇದ್ದ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. ಇದರಿಂದ ಸಿಟ್ಟಿಗೆದ್ದ ಮುತಕೀಮ್ ಪತ್ನಿಗೆ ಕರೆ ಮಾಡಿ ಕೂಡಲೇ ವಿಡಿಯೋ ಡಿಲೀಟ್ ಮಾಡಲು ಹೇಳಿದ್ದ, ಇದಕ್ಕೆ ಆಕೆ ಒಪ್ಪಿರಲಿಲ್ಲ ಬಳಿಕ ತಲಾಖ್ ನೀಡಿದ್ದಾರೆ.
ಮತ್ತಷ್ಟು ಓದಿ: ಮಂಗಳೂರಿನಲ್ಲಿ ಬೆಳಕಿಗೆ ಬಂದ ತ್ರಿವಳಿ ತಲಾಖ್ ಕೇಸ್ ಮದ್ವೆಯಾದ ಆರೇ ತಿಂಗಳಲ್ಲಿ ಮಾರಣಾಂತಿಕ ಹಲ್ಲೆ ನಡೆಸಿ ಪತ್ನಿಗೆ ತಲಾಖ್
ರುಖ್ಸಾರ್ ಮುತಕೀಮ್ ಮನೆಗೆ ಹೋಗಿದ್ದಾರೆ ಆದರೆ ಪ್ರವೇಶವನ್ನು ನಿರಾಕರಿಸಿದ್ದಾರೆ, ಇಬ್ಬರ ಜಗಳವನ್ನು ಪರಿಹರಿಸಲು ಕುಟುಂಬದವರು ವಾರಗಟ್ಟಲೆ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಪೊಲೀಸರು ಈಗ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ