Viral Video: ಕಪ್ಪಾ ಕ್ಲಾಸಿಕಲ್​ ವಿಥ್ ಕಾಫಿ ಗ್ಲಾಸ್​; 5 ಲಕ್ಷ ಜನರು ಮೆಚ್ಚಿದ ಈ ರೀಲ್ಸ್

Music Reels : ಗಾಯಕರಾದ ಆ್ಯಬಿ ವಿ ಮತ್ತು ಅಂತರಾ ನಂದಿ ಜನಸಾಮಾನ್ಯರಿಗೆ ಶಾಸ್ತ್ರೀಯ ಸಂಗೀತದ ರುಚಿಯನ್ನು ಹೀಗೆ ಉಣಬಡಿಸಲು ಪ್ರಯತ್ನಿಸಿದ್ದಾರೆ. ಹಾಗಾದರೆ ಏನಿದು ಕಪ್ಪಾ ಕ್ಲಾಸಿಕಲ್​? ಲಕ್ಷಗಟ್ಟಲೆ ಜನರು ಮರುಳಾಗುವಂಥದ್ದು ಏನಿದೆ?

Viral Video: ಕಪ್ಪಾ ಕ್ಲಾಸಿಕಲ್​ ವಿಥ್ ಕಾಫಿ ಗ್ಲಾಸ್​; 5 ಲಕ್ಷ ಜನರು ಮೆಚ್ಚಿದ ಈ ರೀಲ್ಸ್
CUPPA Classical Reel ಪ್ರಸ್ತುಪಡಿಸುತ್ತಿರುವ ಗಾಯಕರಾದ ಆ್ಯಬಿ ವಿ ಮತ್ತು ಆಂತರಾ ನಂದಿ
Follow us
ಶ್ರೀದೇವಿ ಕಳಸದ
|

Updated on:Jun 06, 2023 | 3:42 PM

Classical Music : ಶಾಸ್ತ್ರೀಯ ಸಂಗೀತವಾ, ಈಗ್ಯಾರು ಕೇಳ್ತಾರೆ? ಎಂದು ಮೂಗು ಮುರಿಯುತ್ತಿದ್ದವರಿಗೆಲ್ಲ ಸಿನೆಮಾ ಸಂಗೀತದ ಮೂಲಕ ಅಷ್ಟಷ್ಟೇ ರುಚಿಯುಣ್ಣಿಸಿದ ಕೀರ್ತಿ ಕಲಾವಿದ ಆ್ಯಬಿ ವೆಂಕಟಾಚಲಮ್​ (Abby V) ಅವರಿಗೆ ಸಲ್ಲುತ್ತದೆ. ಹಾಗೆಯೇ ಕೊರೊನಾ ಸಮಯದಲ್ಲಿ ದೇಶದ ವಿವಿಧ ಭಾಷೆಗಳ ಹಾಡುಗಳು ಮತ್ತು ಸಿನೆಮಾ ಗೀತೆಗಳನ್ನು ಬಾಲ್ಕನಿ ಕಾನ್ಸರ್ಟ್​ಗಳ ಮೂಲಕ ಪ್ರಸ್ತುಪಡಿಸಿದ ಹಿರಿಮೆ ನಂದಿ ಸಿಸ್ಟರ್ಸ್​ಗೆ ಸಲ್ಲುತ್ತದೆ. ಸಾಮಾಜಿಕ ಜಾಲತಾಣಗಲ್ಲಿರುವ ಸಂಗೀತ ಪ್ರಿಯರಿಗೆ ಆ್ಯಬಿ ವಿ, ಅಂತರಾ ನಂದಿ ಮತ್ತು ಅಂಕಿತಾ ನಂದಿ (Antara Nandy) ಚಿತರಪರಿಚಿತರು. ಈ ಅಕ್ಕತಂಗಿಯರ ಪೈಕಿ ಅಂತರಾ ನಂದಿ ಮತ್ತು ಆ್ಯಬಿ ವಿ ಇತ್ತೀಚಿನ ದಿನಗಳಲ್ಲಿ ಎರಡು ಶಾಸ್ತ್ರೀಯ ಸಂಗೀತದ ರೀಲ್​ಗಳ ಮೂಲಕ ಸುದ್ದಿಯಲ್ಲಿದ್ದಾರೆ.

ಇದನ್ನೂ ಓದಿ
Image
Literature: ನೆರೆನಾಡ ನುಡಿಯೊಳಗಾಡಿ; ‘ಈಗಲೇ ರಿಕಾರ್ಡ್ ಹಚ್ಚಬಾರದು, ಇನ್ನೂ ಅಪ್ಪನ ಖತಮು ಮುಗಿದಿಲ್ಲ’
Image
Literature : ನೆರೆನಾಡ ನುಡಿಯೊಳಗಾಡಿ; ಬಿಎಂ ಶರ್ಮಾ ಅನುವಾದಿಸಿದ ರಾಹುಲ ಸಾಂಕೃತ್ಯಾಯನ ಕಥೆ ‘ನಿಶಾ‘
Image
Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ
Image
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’
View this post on Instagram

A post shared by Abby V (@abbyvofficial)

ಏಳೆಂಟು ವರ್ಷಗಳ ಹಿಂದೆ ಅಸ್ಸಾಮ್​ ಮೂಲದ ಇಬ್ಬರು ಪುಟ್ಟ ಹುಡುಗಿಯರು ಪ್ಲಾಸ್ಟಿಕ್​ ಗ್ಲಾಸ್​ಗಳಿಂದ ಚಮತ್ಕಾರಿಕವಾಗಿ ತಾಳವಾದ್ಯಲಯವನ್ನು ಸೃಷ್ಟಿಸಿ ಹಾಡುತ್ತಿರುವ ವಿಡಿಯೋಗಳನ್ನು ನೋಡಿದ ನೆನಪು ನಿಮಗಿರಬಹುದು. ಆ ಹುಡುಗಿಯರಲ್ಲಿ ಒಬ್ಬಾಕೆಯೇ ಈ ವಿಡಿಯೋದಲ್ಲಿರುವ ಅಂತರಾ. ಹಿನ್ನೆಲೆ ಗಾಯಕಿಯಾಗಿ ಹೊಮ್ಮಿರುವ ಈಕೆ ಇತ್ತೀಚೆಗೆ ಪೊನ್ನಿಯಿನ್​ ಸೆಲ್ವನ್​ (ಪಿಎಸ್​1) ಚಿತ್ರದ ಅಲೈಕಾದಲ್ ಹಾಡನ್ನು ಎ.ಆರ್​. ರೆಹಮಾನ್​ ಅವರೊಂದಿಗೆ ಹಾಡಿದ್ದಾರೆ.

ಇದನ್ನೂ ಓದಿ : Viral Video: ಬನ್ನೇರುಘಟ್ಟದಲ್ಲಿ ಚಿರತೆಮರಿಗಳಿಗೆ ಮರುಜೀವ ಕೊಡುತ್ತಿರುವ ಸಾವಿತ್ರಮ್ಮ

ಇನ್ನು ದಕ್ಷಿಣ ಭಾರತದ ಮೂಲದವರಾದ ಆ್ಯಬಿ ವಿ ನೆಲೆಸಿರುವುದು ಕೆನಡಾದಲ್ಲಿಯೇ ಆದರೂ ಅವರ ದೇಹ ಮನಸ್ಸು ಎಲ್ಲವೂ ಭಾರತದಲ್ಲಿಯೇ. ಕರ್ನಾಟಕ, ಹಿಂದೂಸ್ತಾನಿ, ಪಾಶ್ಚಾತ್ಯ, ಸಿನೆಮಾ ಸಂಗೀತ ಹೀಗೆ ಯಾವ ಪ್ರಕಾರದ ಸಂಗೀತಕ್ಕೂ ನ್ಯಾಯ ಒದಗಿಸುವಂಥ ಕಂಠ ಸಾಮರ್ಥ್ಯ, ಕಲ್ಪನಾ ವಿನ್ಯಾಸ ಮತ್ತು ಭಾಷಾ​ಚಾತುರ್ಯ ಇವರಿಗಿದೆ. ಇವರು ತನ್ನ ತಂದೆಯೊಂದಿಗೆ ಮಾಡಿರುವ ರೀಲ್​​ಗಳನ್ನು ನೋಡಿಯೇ, ಕೇಳಿಯೇ ಅನುಭವಿಸಬೇಕು.

View this post on Instagram

A post shared by Antara Nandy (@antara_nandy)

ಈ ಹಿಂದೆಯೂ ಆ್ಯಬಿ ಮತ್ತು ಅಂತರಾ ”ಅಲಬೇಲಾ ಸಾಜನ ಘರ ಆಯೋರೆ” ರೀಲ್ಸ್​ ಮಾಡಿ ಸಂಗೀತ ರಸಿಕರನ್ನು ಹುಚ್ಚೆಬ್ಬಿಸಿದ್ದರು.  ಇದೀಗ ಕರ್ನಾಟಕಿಯ ಧನಾಶ್ರೀ ರಾಗದಲ್ಲಿ ತಿಲ್ಲಾನವನ್ನು ಪ್ರಸ್ತುಪಡಿಸಿ ಕೇಳುಗರಲ್ಲಿ ಸಂಚಲನ ಮೂಡಿಸಿದ್ದಾರೆ. ಅಷ್ಟೇ ಅಲ್ಲ ಒಂದು ವಾರದ ನಂತರ ಹಿಂದೂಸ್ತಾನಿಯ ಬಿಹಾಗ ರಾಗದ ”ಲಠ ಉಲಝೀ” ಚೀಝ್​ ಪ್ರಸ್ತುಪಡಿಸಿ ತಾನುಗಳ ಹರಿವಿನಲ್ಲಿ ರಸಿಕರನ್ನು ಮಿಂದೇಳಿಸಿದ್ದಾರೆ. ಈ ಎರಡೂ ರೀಲ್ಸ್​ಗಳಲ್ಲಿ ಕಾಫಿ ಗ್ಲಾಸ್ ಮತ್ತು ಪ್ಲಾಸ್ಟಿಕ್​ ಗ್ಲಾಸ್​ಗಳನ್ನು ತಾಳವಾದ್ಯ ಪರಿಕರಗಳಂತೆ ಉಪಯೋಗಿಸಿದ್ದರಿಂದ ”ಕಪ್ಪಾ ಕ್ಲಾಸಿಕಲ್” ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.

View this post on Instagram

A post shared by Abby V (@abbyvofficial)

ಈ ಮೇಲಿನ ರೀಲ್​ ಗಮನಿಸಿ, ಖ್ಯಾತ ಕರ್ನಾಟಕ ಸಂಗೀತ ಕಲಾವಿದೆ ಸುಧಾ ರಘುನಾಥನ್​ ಮತ್ತು ಆ್ಯಬಿ ಕಿರಾಣಿ ಅಂಗಡಿಗೆ ಸಾಮಾನುಗಳನ್ನು ಸಂಗೀತದ ಮೂಲಕ ಆರ್ಡರ್ ಮಾಡಿದ್ದಾರೆ. ಶಾಸ್ತ್ರೀಯ ಸಂಗೀತವೆಂದರೆ ಕೆಲವರ ಸ್ವತ್ತು ಮಾತ್ರ ಎನ್ನುವ ಪರಂಪರಾಗತ ನಂಬಿಕೆಯನ್ನು ಆ್ಯಬಿ ಹೀಗೆ ಇಂಥ ಪ್ರಯೋಗಗಳ ಮೂಲಕ ಮುರಿಯುತ್ತ  ಜನಸಾಮಾನ್ಯರಲ್ಲಿ ಶಾಸ್ತ್ರಿಯ ಸಂಗೀತದ ಬಗ್ಗೆ ಆಸಕ್ತಿ ಹುಟ್ಟಿಸುವ ಪ್ರಯತ್ನ ಮಾಡುತ್ತಿರುತ್ತಾರೆ. ಸಂಗೀತವನ್ನೇ ಉಸಿರಾಡುತ್ತ ವಿನಯವನ್ನೇ ಮೈವೆತ್ತಿರುವ ಈ ಸೃಜನಶೀಲ ಹುಡುಗನಿಗೆ ಬಾಲಿವುಡ್ ಸಂಗೀತ ಕ್ಷೇತ್ರದಲ್ಲಿ ಯಾಕಿನ್ನೂ ಪ್ರವೇಶ ಸಿಕ್ಕಿಲ್ಲ ಎನ್ನುವುದು ಮಾತ್ರ ಯಕ್ಷಪ್ರಶ್ನೆ. ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:35 pm, Tue, 6 June 23

ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ