AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಹೇ ಮನುಜಾ, ನಮ್ಮನ್ನು ನೋಡಿ ಕಲಿ ಮಾಡಿ ನಲಿ!

Ducklings : ಮಕ್ಕಳನ್ನು ಹಿಂದೆ ಬಿಟ್ಟು ತಾಯಿ ಸಾಗಬಾರದು. ತಾಯಿ ಮುಂದೆ ಸಾಗಿದ್ದಕ್ಕೇ ಮಕ್ಕಳು ಹಿಂಬಾಲಿಸಿದ್ದು... ನೆಟ್ಟಿಗರು ಜಗಳಕ್ಕಿಳಿದಿದ್ದಾರೆ. ಆದರೆ ಈ ಬಾತುಗಳು ಜಲಪಾತಕ್ಕಿಳಿದ ಮೇಲೆ ಏನು ಮಾಡಿವೆ ಎಂಬುದನ್ನು ನೀವು ನೋಡಿದರೆ...

Viral Video: ಹೇ ಮನುಜಾ, ನಮ್ಮನ್ನು ನೋಡಿ ಕಲಿ ಮಾಡಿ ನಲಿ!
ಅಯ್ಯೋ ನನ್ನ ಕೂಸೇ... ಬಿದ್ದುಬಿಟ್ಟಿಯೇನು? ನಾವೂ ಬಂದೆವು ಇರು...
Follow us
ಶ್ರೀದೇವಿ ಕಳಸದ
|

Updated on:Jun 06, 2023 | 5:19 PM

Duck : ಒಂದು ಕುರಿ ಬ್ಯಾ ಎಂದರೆ ಎಲ್ಲವೂ ಬ್ಯಾ… ಅಜ್ಜ ಅಜ್ಜಿಯ ಕಾಲದಿಂದಲೂ ಇದನ್ನು ಕೇಳುತ್ತಲೇ ಬಂದಿದ್ದೇವೆ. ಇದರರ್ಥ ಒಂದು ಏನು ಮಾಡುತ್ತದೆಯೋ ಎಲ್ಲವೂ ಅದನ್ನೇ ಹಿಂಬಾಲಿಸುವುದು. ಇದು ಕುರಿಗಳಿಗೆ ಮಾತ್ರ ಅನ್ವಯವಲ್ಲ ಈಗ ಈ ಬಾತುಕೋಳಿಗಳಿಗೂ. ಕುಟುಂಬ ಸಮೇತ ವಿಹಾರಕ್ಕೆ ಹೊರಟ ಈ ಬಾತುಗುಂಪು ಒಂದು ಜಲಪಾತದ ಬಳಿ ಬರುತ್ತದೆ. ಅವುಗಳಲ್ಲಿ ಒಂದು ಸೆಳವಿಗೆ ಸಿಕ್ಕು ಕಾಲು ಜಾರಿ ಪ್ರಪಾತದಲ್ಲಿರುವ ನೀರಿಗೆ ಬೀಳುತ್ತದೆ. ಮುಂದೇನಾಗುತ್ತದೆ?

ಅಯ್ಯೋ ಬಿದ್ದೇ ಹೋದ್ಯಲ್ಲೋ ಎಂದುಕೊಂಡ ಅಮ್ಮ ಬಾತು ತಾನೂ ಜಲಪಾತದ ಹರಿವಿಗೆ ಕಾಲು ಕೊಡುತ್ತದೆ. ಅದು ಸುಯ್ಯನೇ ಜಾರಿ ಬೀಳುತ್ತಿದ್ದಂತೆ ಉಳಿದೆಲ್ಲ ಮರಿಗಳೂ ಅಮ್ಮನನ್ನು ಹಿಂಬಾಲಿಸುತ್ತವೆ. ಇದೊಳ್ಳೆ ಫಾಲೋವರ್ಸ್​ ಕಥೆಯಾಯಿತಲ್ಲ ಎಂದು ನೆಟ್​ಮಂದಿ ಬಗೆಬಗೆಯಲ್ಲಿ ಪ್ರತಿಕ್ರಿಯಿಸುತ್ತಿದೆ.

ಇದನ್ನೂ ಓದಿ : Viral Video: ಕಲ್ಲಂಗಡಿ ಆಯ್ಕೆಯಲ್ಲಿ ಎತ್ತಿದ ಕೈ ನನ್ನ ಹೆಂಡತಿ; ಹೆಮ್ಮೆಪಡುತ್ತಿರುವ ಗಂಡ!

ರಾಜಕೀಯ ನಾಯಕರುಗಳೇ ಈ ಬಾತುಕೋಳಿ ಸಂಸಾರವನ್ನು ನೋಡಿ ಸ್ವಲ್ಪ ಬುದ್ಧಿ ಕಲಿಯಿರಿ. ಪ್ರೀತಿ, ಒಗ್ಗಟ್ಟು, ವಿಶ್ವಾಸ, ನಿಷ್ಠೆ ಎಂದರೆ ಏನೆಂದು. ಇದು ಎಂಥ ಭಾವನಾತ್ಮಕವಾದ ವಿಡಿಯೋ. ಮನುಷ್ಯ ಶಬ್ದಗಳಲ್ಲಿಯೂ ಹೇಳಲಾಗದ್ದನ್ನು ಪ್ರಕೃತಿ ಹೀಗೆ ನಿರೂಪಿಸಿ ತೋರಿಸುತ್ತದೆ… ಅಂತೆಲ್ಲ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ಧಾರೆ.

ಇದನ್ನೂ ಓದಿ : Viral Video: ಬನ್ನೇರುಘಟ್ಟದಲ್ಲಿ ಚಿರತೆಮರಿಗಳಿಗೆ ಮರುಜೀವ ಕೊಡುತ್ತಿರುವ ಸಾವಿತ್ರಮ್ಮ 

ಮೊದಲು ಅಯ್ಯೋ ಎನ್ನಿಸುತ್ತದೆ. ನಂತರ ಅಳು ಬರುತ್ತದೆ. ಆಮೇಲೆ ಅಚ್ಚರಿಯಾಗುತ್ತದೆ. ಕೊನೆಯಲ್ಲಿ ಖುಷಿಯಾಗುತ್ತದೆ ಎಂದು ಈ ವಿಡಿಯೋದ ಹಂತಗಳನ್ನು ಗಮನಿಸುತ್ತಾ ತಮಗಾದ ಭಾವಸಂಚಲವನ್ನು ವ್ಯಕ್ತಪಡಿಸಿದ್ದಾರೆ ಒಬ್ಬರು. ಇದು ಅಪರಾಧ, ಈ ವಿಡಿಯೋ ಅನ್ನು ಡಿಲೀಟ್ ಮಾಡಿ ಎಂದು ಮತ್ತೊಬ್ಬರು ದನಿ ಎತ್ತಿದ್ದಾರೆ. ಇದೆಂಥಾ ತಾಯಿಬಾತು, ಮಕ್ಕಳನ್ನು ಹಿಂದೆ ಬಿಟ್ಟು ಹಾರಿದ್ದಾಳೆ, ಎಂದೂ ಮಕ್ಕಳನ್ನು ಮುಂದಿಟ್ಟುಕೊಂಡೇ ಸಾಗಬೇಕು ಎಂದು ಮಗದೊಬ್ಬರು ಹೇಳಿದ್ದಾರೆ. ಅಂದರೆ ಮೊದಲು ಮಕ್ಕಳನ್ನು ಆಳಕ್ಕೆ ತಳ್ಳಿ ಮುಂದೇನಾಗುತ್ತದೆ ಎಂದು ತಾಯಿಬಾತು ನೋಡಬೇಕಾ? ಎಂದು ಪ್ರತಿಯಾಗಿ ಹಲವರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನೀವೇನು ಹೇಳುತ್ತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:11 pm, Tue, 6 June 23