ಅಪರಾಧಿಯ ಹೆಸರು, ಜನ್ಮ ದಿನಾಂಕವನ್ನು ಹಂಚಿಕೊಂಡಿದ್ದ ವ್ಯಕ್ತಿಯನ್ನು 10 ವರ್ಷ ಏರ್‌ಲೈನ್‌ನಿಂದ ನಿಷೇದಿಸಿದ ಈಸಿಜೆಟ್!
ಲಿವರ್‌ಪೂಲ್‌ನ ಯುವಕನೊಬ್ಬ ತನ್ನ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳುವ ಮುನ್ನ ಈಜಿಜೆಟ್ ಏರ್‌ಲೈನ್‌ನಿಂದ 10 ವರ್ಷಗಳ ಕಾಲ ಆತನನ್ನು ನಿಷೇಧಿಸಲಾಗಿದೆ ಎಂಬುದು ತಿಳಿದುಕೊಂಡನು
ಲಿವರ್‌ಪೂಲ್‌ನ (Liverpool) ಯುವಕನೊಬ್ಬ ತನ್ನ ಸ್ನೇಹಿತರೊಂದಿಗೆ ಪ್ರವಾಸಕ್ಕೆ (Trip) ತೆರಳುವ ಮುನ್ನ ಈಜಿಜೆಟ್ (Easyjet) ಏರ್‌ಲೈನ್‌ನಿಂದ 10 ವರ್ಷಗಳ ಕಾಲ ಆತನನ್ನು ನಿಷೇಧಿಸಲಾಗಿದೆ ಎಂಬುದು ತಿಳಿದುಕೊಂಡನು . 21 ವರ್ಷದ ಕೀರನ್ ಹ್ಯಾರಿಸ್ ಮೇ, 25 ರಂದು ಸ್ಪೇನ್‌ನ ಅಲಿಕಾಂಟೆಗೆ ತೆರಳಲು ಫ್ಲೈಟ್ ಬುಕ್ ಮಾಡಿದ್ದರು, ಆದರೆ ಅವರ ಪ್ರಯಾಣದ ಒಂದು ದಿನ ಮೊದಲು ಅವರನ್ನು ಏರ್‌ಲೈನ್‌ನಿಂದ ನಿಷೇಧಿಸಲಾಗಿದೆ ಎಂದು ತಿಳಿಸಲಾಯಿತು, ಇದಕ್ಕೆ ಕಾರಣ ಅವರ ಹೆಸರು ಮತ್ತು ಜನ್ಮ ದಿನಾಂಕ.
ತನ್ನ ಪ್ರಯಾಣದ ಹಿಂದಿನ ದಿನ ವಿಮಾನಯಾನ ಸಂಸ್ಥೆ ಇಮೇಲ್ ಕಳುಹಿಸಿದಾಗ ಕೀರನ್ ಹ್ಯಾರಿಸ್ ಆಘಾತಕ್ಕೊಳಗಾಗಿದ್ದರು. ಈ ಹಿಂದೆ ಅವರ ಕೆಟ್ಟ ನಡವಳಿಕೆಯಿಂದಾಗಿ ಕೀರನ್ ಅವರು “15/03/2031 ರವರೆಗೆ ಅಂದರೆ 10 ವರ್ಷಗಳ ಕಾಲ ನೊ-ಫ್ಲೈ ಮಂಜೂರಾತಿಯನ್ನು” ಸ್ವೀಕರಿಸಿದ್ದಾರೆ ಎಂದು ಇಮೇಲ್ ತಿಳಿಸಿತು.
ದಿ ಮಿರರ್ ಪ್ರಕಾರ, ಈ ಹಿಂದೆ ಅದೇ ಹೆಸರು ಮತ್ತು ಜನ್ಮ ದಿನಾಂಕ ಹೊಂದಿದ್ದ ಯುವಕನೊಬ್ಬ ತನ್ನ ಪ್ರಯಾಣದಲ್ಲಿ ಕೆಟ್ಟದಾಗಿ ನಡೆದುಕೊಂಡಿದ್ದ. ಇವರಿಬ್ಬರ ಹೆಸರು ಮತ್ತು ಜನ್ಮ ದಿನಾಂಕ ಒಂದೇ ಆಗಿದ್ದರಿಂದ ಫ್ಲೈಟ್ ಸಿಬಂಧಿಗಳು ತಪ್ಪಿ ಇವರನ್ನು ಆರೋಪಿ ಎಂದು ಪರಿಗಣಿಸಿದ್ದರು. 2021 ರಲ್ಲಿ ಈಸಿಜೆಟ್ ಫ್ಲೈಟ್‌ನಲ್ಲಿ ಕುಡಿದು ಆ ನಿಂದನೀಯವಾಗಿ ವರ್ತಿಸಿದ್ದಕ್ಕಾಗಿ 12 ವಾರಗಳ ಜೈಲು ಶಿಕ್ಷೆಗೆ ಗುರಿಯಾದ ಹುಡುಗ ನಾನು ಎಂದು ಏರ್‌ಲೈನ್ ತಿಳಿದುಕೊಂಡಿತ್ತು ಎಂದು ವ್ಯಕ್ತಿ ಹೇಳಿಕೊಂಡಿದ್ದಾನೆ.
ಕೆಲವು ಸಮಯದ ನಂತರ ಗುರುತನ್ನು ದೃಢೀಕರಿಸಲು EasyJet ತನ್ನ ಪಾಸ್‌ಪೋರ್ಟ್‌ನ ಚಿತ್ರವನ್ನು ವಿನಂತಿಸಿದೆ ಎಂದು ಕೀರನ್ ತಿಳಿಸಿದರು ಮತ್ತು ಅಂತಿಮವಾಗಿ ಆಕಸ್ಮಿಕ ನಿಷೇಧವನ್ನು ತೆಗೆದುಹಾಕಿತು. ಸಮಸ್ಯೆಯನ್ನು ಅಂತಿಮವಾಗಿ ಪರಿಹರಿಸಲಾಗಿದ್ದರೂ, “ಒತ್ತಡದ” ಅನುಭವದಿಂದಾಗಿ ಈಸಿಜೆಟ್‌ನೊಂದಿಗೆ ಮತ್ತೆ ಯಾವತ್ತೂ ಹಾರಾಡಲು ಇಚ್ಛಿಸುವುದಿಲ್ಲ ಎಂದು ಕೀರನ್ ಹೇಳಿಕೊಂಡಿದ್ದಾರೆ.
ಅವರು ಅಪರಾಧಿ ಎಂದು ತಪ್ಪಾಗಿ ಗ್ರಹಿಸಿರುವುದು ಇದೇ ಮೊದಲಲ್ಲ- ಕಳೆದ ವರ್ಷ ಮೆಟ್ರೋಪಾಲಿಟನ್ ಪೊಲೀಸರು ತನ್ನನ್ನು ತಪ್ಪಾಗಿ ಗುರುತಿಸಿದ ನಂತರ ಬುಲೆಟ್ ಪ್ರೂಫ್ ವೆಸ್ಟ್ ಧರಿಸಿ ತನ್ನ ಮನೆಗೆ ನುಗ್ಗಿದರು ಎಂದು ಅವರು ಹೇಳುತ್ತಾರೆ. ಈ ವ್ಯಕ್ತಿಯ ಫೋಟೋ ಸಹಿತ ಸುದ್ದಿ ಲೇಖನಗಳು ಪ್ರಕಟವಾಗಿದ್ದು, ಅದು ನಾನಲ್ಲ ಎಂದು ನೀವು ನೋಡಬಹುದು ಎಂದು ಅವರು ಹೇಳಿದರು.
ಇದನ್ನೂ ಓದಿ: ಪಶ್ಚಿಮ ಬಂಗಾಳದ ಕಲಾಶಿಕ್ಷಕಿಯ ಕೈಚಳವನ್ನೊಮ್ಮೆ ನೋಡಿ
“ಕಳೆದ ಬೇಸಿಗೆಯಲ್ಲಿ ಪೊಲೀಸರು ನನ್ನ ಮನೆಗೆ ಬಂದು ನನ್ನನ್ನು ಪ್ರಶ್ನಿಸಲು ಪ್ರಯತ್ನಿಸಿದರು. ಅದು ತುಂಬಾ ಗಂಭೀರವಾಗಿತ್ತು ಆದರೆ ಐದು ಅಥವಾ ಹತ್ತು ನಿಮಿಷಗಳಲ್ಲಿ ಅದು ನಾನಲ್ಲ ಎಂದು ಅವರಿಗೆ ತಿಳಿಯಿತು. ಇದು ಹೀಗೇ ಮುಂದುವರಿದರೆ ನಾನು ನನ್ನ ಹೆಸರನ್ನು ಬದಲಾಯಿಸಬೇಕು ನಾನು ಯೋಚಿಸುತ್ತಿದ್ದೇನೆ.” ಎಂದು ತಮ್ಮ ಕಷ್ಟವನ್ನು ಮಾಧ್ಯಮದ ಜೊತೆ ಹಂಚಿಕೊಂಡರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ