Viral Video: ಆದಿಪುರುಷ್​; ಪ್ರತಿ ಪ್ರದರ್ಶನದಲ್ಲೂ ಹನುಮಂತನಿಗಾಗಿ ಒಂದು ಸೀಟು ಕಾಯ್ದಿರಿಸಿ!

Adipurush: ಒಮ್ಮೆಯಲ್ಲ ಎರಡು ಸಲ ಅಲ್ಲ, ಪ್ರಪಂಚದಾದ್ಯಂತ ಪ್ರತಿ ಪ್ರದರ್ಶನಕ್ಕೂ ಬಂದು ಕೂತು ಇಂಥಾ ಸಿನೆಮಾ ನೋಡಬೇಕೆಂದರೆ ಹನುಮನಿಗೆಂಥ ಗ್ರಹಚಾರ ಬಡಿದಿರಬೇಡ? ಇದೆಂಥಾ ಭಕ್ತಿ? ವಿಡಿಯೋ ನೋಡಿ ನೀವೇ ಹೇಳಿ.

Viral Video: ಆದಿಪುರುಷ್​; ಪ್ರತಿ ಪ್ರದರ್ಶನದಲ್ಲೂ ಹನುಮಂತನಿಗಾಗಿ ಒಂದು ಸೀಟು ಕಾಯ್ದಿರಿಸಿ!
ಆದಿಪುರುಷ್ ತಂಡ
Follow us
|

Updated on:Jun 07, 2023 | 3:57 PM

Hanuman : ರಾವಣನ ಒಡ್ಡೋಲಗದಲ್ಲಿ ಪೀಠ ಸಿಗದಿದ್ದಾಗ ತನ್ನ ಬಾಲವನ್ನೇ ಎತ್ತರೆತ್ತರ ಸುರುಳಿ ಸುತ್ತಿ ಅದರ ಮೇಲೆ ರಾವಣನೆದುರು ಅವನಿಗೂ ಎತ್ತರಕ್ಕೆ ಕೂತ ರಾಮದೂತ ಹನುಮನಿಗೆ ಚಿತ್ರಮಂದಿರಗಳಲ್ಲಿ ಸೀಟೊಂದನ್ನು ಕಾಯ್ದಿರಿಸಬೇಕೆಂಬ ಅಹವಾಲು ಬಂದಿದೆ. ಇದೆಂಥಾ ವಿಚಿತ್ರ? ಎಂಥಾ ಉದ್ಧಟತನ ಅನ್ನುತ್ತೀರಾ? ಕಣ್ತುಂಬಾ ನೀರು ತುಂಬಿಕೊಂಡು ಬಿಕ್ಕುತ್ತಾ ಈ ಮನವಿ ಸಲ್ಲಿಸಿದವರು ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ “ಆದಿಪುರುಷ್” (Adipurush) ಎಂಬ ಚಿತ್ರದ ನಿರ್ದೇಶಕ ಓಂ ರಾವುತ್ (Om Raut). ನೆರೆದ ಸಭೆಯಲ್ಲಿ ಈ ಅತಿಭಾವುಕತೆಯ ಕ್ಷಣಕ್ಕೆ ಸಾಕ್ಷಿಯಾದ ಜನರು ಹಾಗೂ ಇದರ ವಿಡಿಯೋವನ್ನು ನಂತರ ನೋಡಿದವರಲ್ಲಿ ಕೆಲವರು ಹರ್ಷೋದ್ಗಾರದಿಂದ ಉನ್ಮತ್ತರಾಗಿದ್ದರೆ ಉಳಿದವರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

“ನಮ್ಮ ತಾಯಿ ಯಾವಾಗಲೂ ಹೇಳುತ್ತಿದ್ದರು, ರಾಮಾಯಣದ ಪ್ರದರ್ಶನ ಎಲ್ಲೇ ನಡೆದರೂ ಸಾಕ್ಷಾತ್ ಹನುಮಾನ್ ಅಲ್ಲಿಗೆ ಬಂದು ಆಟ ನೋಡುತ್ತಾನೆ. ಆದ್ದರಿಂದ ಪ್ರಪಂಚಾದ್ಯಂತ ಆದಿಪುರುಷ್ ಸಿನೆಮಾದ ಪ್ರತಿ ಚಿತ್ರಮಂದಿರದ ಪ್ರತಿ ಪ್ರದರ್ಶನದಲ್ಲೂ ಅವನಿಗಾಗಿ ಒಂದು ಸೀಟು ಕಾದಿರಿಸಬೇಕೆಂದು ನಾನು ನಮ್ಮ ನಿರ್ಮಾಪಕರು ಹಾಗೂ ವಿತರಕರಿಗೆ ವಿನಂತಿಸುತ್ತೇನೆ,” ಎಂದು ಗದ್ಗದಿತ ಧ್ವನಿಯಲ್ಲಿ ಹೇಳುತ್ತ ಕೊನೆಗೆ ಅತ್ತೇಬಿಟ್ಟ ರಾವುತ್ ಅವರನ್ನು ವೇದಿಕೆಯ ಮೇಲಿದ್ದ ನಾಯಕನಟ ಪ್ರಭಾಸ್ (Prabhas) ಹಾಗೂ ನಿರ್ಮಾಪಕರು ಸಮಾಧಾನಿಸಿದ್ದನ್ನು ನೀವಿಲ್ಲಿ ನೋಡಬಹುದು. ಸೂಕ್ಷ್ಮವಾಗಿ ಗಮನಿಸಿದರೆ ವೇದಿಕೆಯ ಮೇಲಿದ್ದವರ ಮುಖದ ಮೇಲೆ ಗೊಂದಲ ಹಾಗೂ ತೆಳುಹಾಸ ಕಾಣುತ್ತದೆ.

ಇದನ್ನೂ ಓದಿ : Viral Video: ಭಜ್ಜಿಯ ಅಜ್ಜನಲ್ಲರಳಿರುವ ನಗುವಿಗೆ ಬೆಲೆ ಎಷ್ಟೆಂದು ತಿಳಿದಿದೆಯೇ?; ಕಲಾವಿದನಿಗೆ ಶಭಾಷ್​ ಎಂದ ನೆಟ್ಟಿಗರು

ಇದಕ್ಕೆ ಒಂದಷ್ಟು ಜನ ಅಷ್ಟೇ ಭಾವುಕರಾಗಿ ಪ್ರತಿಕ್ರಿಯಿಸಿದ್ದರೂ ಹಲವರು “ಇದೆಂಥಾ ಗಿಮಿಕ್, ಕೆಟ್ಟ ಮಾರ್ಕೆಟಿಂಗ್ ತಂತ್ರ,” ಎಂದಿದ್ದಾರೆ. “ಮೊದಲ ದಿನದ ನಂತರ ಬಹುತೇಕ ಸೀಟುಗಳು ಖಾಲಿಯೇ ಇರುತ್ತವೆ, ಚಿಂತೆ ಬೇಡ,” “ಅರ್ಧ ಚಿತ್ರಮಂದಿರ ಖಾಲಿಯೇ ಇರುತ್ತದೆ ಬಿಡಯ್ಯ, ಆಗ ನೀನು ನಿಜಕ್ಕೂ ಅಳುತ್ತೀ,” “ಆಂಜನೇಯ ಈ ಚಿತ್ರದ ಟ್ರೇಲರ್ ಏನಾದರೂ ನೋಡಿದ್ದರೆ ಇತ್ತ ಮುಖ ಕೂಡ ಹಾಕುವುದಿಲ್ಲ,” ಮೊದಲಾಗಿ ಗೇಲಿ ಮಾಡಿದ್ದಾರೆ.

ಇದನ್ನೂ ಓದಿ : Viral Video: ಕಲ್ಲಂಗಡಿ ಆಯ್ಕೆಯಲ್ಲಿ ಎತ್ತಿದ ಕೈ ನನ್ನ ಹೆಂಡತಿ; ಹೆಮ್ಮೆಪಡುತ್ತಿರುವ ಗಂಡ!

ಒಮ್ಮೆಯಲ್ಲ ಎರಡು ಸಲ ಅಲ್ಲ, ಎಲ್ಲೆಡೆ ಪ್ರತಿ ಶೋಗೂ ಬಂದು ಕೂತು ಇಂಥಾ ಸಿನೆಮಾ ನೋಡಬೇಕೆಂದರೆ ಹನುಮನಿಗೆಂಥ ಗ್ರಹಚಾರ ಬಡಿದಿರಬೇಡ? ಇದೆಂಥಾ ಭಕ್ತಿ? ನೀವೇ ಹೇಳಿ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:38 pm, Wed, 7 June 23