Viral: ಇಂಥ ಟ್ವೀಟ್‌ಗೂ ಕೆಲವು ಬುದ್ಧಿಗೇಡಿಗಳು ಮತೀಯ ಬಣ್ಣ ಬಳಿದಿದ್ದಾರೆ

Artisans : 'ತಮ್ಮ ಅಪ್ಪನ ದುಡ್ಡಿನಲ್ಲಿ ಕೆಟ್ಟ ವಿನ್ಯಾಸದ ತಮ್ಮದೇ ‘ಬ್ರ್ಯಾಂಡ್' ಹೆಸರಿನ ಅಸಹ್ಯ ಟೀಶರ್ಟು ತಯಾರಿಸಿ ಮಾರುವ ಶ್ರೀಮಂತರ ಮಕ್ಕಳಿಗೆ ಸಾವಿರಾರು ರೂಪಾಯಿ ಬಡಿಯುವ ಬದಲು ಇಂಥ ಕಲಾವಿದರನ್ನು ಪೋಷಿಸುವುದು ಮೇಲು.'

Viral: ಇಂಥ ಟ್ವೀಟ್‌ಗೂ ಕೆಲವು ಬುದ್ಧಿಗೇಡಿಗಳು ಮತೀಯ ಬಣ್ಣ ಬಳಿದಿದ್ದಾರೆ
ಹೂಗ್ಲಿ ಜಿಲ್ಲೆಯ ಶಂಸುದ್ದೀನ್ ಶೇಖ್​ ತನ್ನ ಕುಟುಂಬದವು ಮಾಡಿದ ಎಂಬ್ರಾಯ್ಡರಿ ಬಟ್ಟೆಗಳೊಂದಿಗೆ
Follow us
ಶ್ರೀದೇವಿ ಕಳಸದ
|

Updated on:Jun 05, 2023 | 12:54 PM

West Bengal : ‘ತಮ್ಮ ಅಪ್ಪಂದಿರ ದುಡ್ಡಿನಲ್ಲಿ ಕೆಟ್ಟ ವಿನ್ಯಾಸದ ತಮ್ಮದೇ ‘ಬ್ರ್ಯಾಂಡ್’ನಡಿ (Brand) ಅಸಹ್ಯ ಟೀಶರ್ಟುಗಳನ್ನು ತಯಾರಿಸಿ ಮಾರುವ ಶ್ರೀಮಂತರ ಮಕ್ಕಳಿಗೆ ಸಾವಿರಾರು ರೂಪಾಯಿಗಳನ್ನು ಬಡಿಯುವ ಬದಲು ಇಂಥ ಕಲಾವಿದರನ್ನು ನಾವು ಪೋಷಿಸಬೇಕು. ಏಕೆಂದರೆ ಇವರ ಉತ್ಪನ್ನದ ಮೇಲೆ ನಾವು ಸಂಪೂರ್ಣ ಭರವಸೆಯನ್ನು ಇಡಬಹುದು.’ ಕುಸುರಿಕಲೆಯ ಬೆಡ್‌ಶೀಟ್‌ ಹಾಗೂ ಇನ್ನಿತರೇ ವಸ್ತುಗಳನ್ನು ಖರೀದಿಸಿದ ನೂರಾರು ಜನರು ಇವುಗಳ ಅಂದ, ಉಪಯುಕ್ತತೆ, ಬಾಳಿಕೆ, ಹಾಗೂ ಬೆಲೆಯ ಬಗ್ಗೆ ವಿಶ್ವಾಸ ತೋರಿ ಪ್ರತಿಕ್ರಿಯಿಸಿದ್ದಾರೆ. ನೋಡಿ ಈ ಟ್ವೀಟ್​

ಇವರು ಪಶ್ಚಿಮ ಬಂಗಾಲದ ಹೂಗ್ಲಿ ಜಿಲ್ಲೆಯ ಶಮ್ಸುದ್ದಿನ್ ಶೇಖ್. ದೆಹಲಿಯಲ್ಲಿ ಸೈಕಲ್ ಮೇಲೆ ಮನೆಮನೆಗೆ ತಿರುಗಿ ಸುಂದರ ಕುಸುರಿಯುಳ್ಳ ಬೆಡ್‌ಶೀಟ್‌ಗಳು, ಊಟದ ಮೇಜಿನ ಕವರುಗಳು ಹಾಗೂ ಇತರೇ ನಿತ್ಯುಪಯುಕ್ತ ವಸ್ತುಗಳನ್ನು ಮಾರುತ್ತಾರೆ. ಇವುಗಳ ಮೇಲೆ ಕಾಣುವ ಮನಮೋಹಕ ಕುಸುರಿಯನ್ನು ಅವರೂರಿನಲ್ಲಿ ಅವರ ಮನೆಮಂದಿಯೆಲ್ಲ ಕುಳಿತು ಮಾಡುತ್ತಾರೆ. ಇವುಗಳ ದರವೂ ಕೈಗೆಟಕುವಂತಿವೆ.

ಇದನ್ನೂ ಓದಿ : Viral Video: ಕಾಮ್​ ಡೌನ್​; ಬೆಲ್ಲಿ ಡ್ಯಾನ್ಸ್ ನೋಡಿ ”ಮಂಡೇ” ಬಿಸಿ ಓಡಿಸಿ

‘ಎಷ್ಟು ಸುಂದರವಾಗಿವೆ! ಇವುಗಳಿಗಾಗಿ ನಾನು ದೆಹಲಿ ಅಥವಾ ಕೊಲ್ಕತ್ತೆಯಲ್ಲಿ ಇರಬೇಕಿತ್ತು ಎನ್ನಿಸುತ್ತಿದೆ’ ಎಂದೊಬ್ಬರು ಪ್ರತಿಕ್ರಿಯಿಸಿದ್ದಾರೆ. ‘ಪ್ರತಿಯೊಂದು ಬಂಗಾಲಿ ಮನೆಯಲ್ಲೂ ಇಂಥ ಹತ್ತಾರು ಚಾದರಗಳಾದರೂ ಇರುತ್ತವೆ’ ಎಂದು ಇವುಗಳ ಸಾರ್ವತ್ರಿಕತೆಯನ್ನು ಒಬ್ಬರು ಒತ್ತಿ ಹೇಳಿದ್ದಾರೆ. ಬಹುತೇಕ ಸಕಾರಾತ್ಮಕ ಪ್ರತಿಕ್ರಿಯೆಗಳಿರುವ ಈ ಟ್ವೀಟ್‌ಗೆ ಕೆಲವು ಬುದ್ಧಿಗೇಡಿಗಳು ಮತೀಯ ಬಣ್ಣ ಬಳಿದಿರುವುದೂ ಇಲ್ಲಿ ಕಾಣುತ್ತಿದೆ.

ಇದನ್ನೂ ಓದಿ : Viral: ಲೈಕ್ಸ್ ಗಳಿಸುವುದಕ್ಕೋಸ್ಕರ ವಿಮಾನವನ್ನೇ ನೆಲಕ್ಕಪ್ಪಳಿಸಿದ ಭೂಪನಿಗೆ 20 ವರ್ಷ ಜೈಲು?

ಇವನ್ನು ಹೈದರಾಬಾದ್, ಮುಂಬೈ, ಬೆಂಗಳೂರಿಗೆ ಅವರು ಕಳಿಸಲು ಸಾಧ್ಯವೇ? ಎಂದು ಅನೇಕರು ಕೇಳಿದ್ದಾರೆ. ಇವರಂಥ ಸ್ಥಳೀಯ ಕಲಾವಿದರು ಹಾಗೂ ಕುಶಲಕರ್ಮಿಗಳು ಪ್ರಾಮಾಣಿಕ ಜೀವನವನ್ನು ನಡೆಸಬಯಸುವ ಶ್ರಮಜೀವಿಗಳು. ದಯವಿಟ್ಟು ಅಂಥವರಿಗೆ ಪ್ರೋತ್ಸಾಹ ಕೊಡಿ ಎಂದು ನೆಟ್ಟಿಗರೊಬ್ಬರು ಕಾಳಜಿ ವ್ಯಕ್ತಪಡಿಸಿದ್ಧಾರೆ.

ಇದನ್ನೂ ಓದಿ : Viral Video: ಅವನ ಅಂಗಾಲ ಮೇಲೆ ಆಕೆ, ಆಕೆಯ ಅಂಗಾಲ ಮೇಲೆ ನಾಯಿ; ಪರಮ ಕ್ರೌರ್ಯ ಎಂದ ನೆಟ್ಟಿಗರು

ಈ ಟ್ವೀಟ್​ ಗಮನಿಸಿದ ನಿಮಗೀಗ ನಿಮ್ಮ ಊರಿನ ಕುಶಲಕರ್ಮಿಗಳು ನೆನಪಾಗುತ್ತಿದ್ಧಾರಾ? ಅವರ ಪರಿಸ್ಥಿತಿ ಹೇಗಿದೆ, ಅವರ ಉತ್ಪನ್ನಗಳ ವೈಶಿಷ್ಟ್ಯಗಳನ್ನೊಮ್ಮೆ ನೋಡಿಕೊಂಡು ಬನ್ನಿ. ಅವರ ಉತ್ಪನ್ನಗಳು ಮತ್ತು ಸಂಪರ್ಕ ವಿವರವನ್ನು ಪ್ರತಿಕ್ರಿಯೆಗಳ ಮೂಲಕ ತಿಳಿಸಿ.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:51 pm, Mon, 5 June 23

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ