AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಲೈಕ್ಸ್ ಗಳಿಸುವುದಕ್ಕೋಸ್ಕರ ವಿಮಾನವನ್ನೇ ನೆಲಕ್ಕಪ್ಪಳಿಸಿದ ಭೂಪನಿಗೆ 20 ವರ್ಷ ಜೈಲು?

Social Media : 'ವ್ಯೂವ್ಸ್​ ಬದಲು ಇದನ್ನವನು ಧರ್ಮಕ್ಕೋಸ್ಕರ ಮಾಡಿದ್ದರೆ ಅದರ ಪರಿಣಾಮವೇ ಬೇರೆಯಾಗುತ್ತಿತ್ತು,’ ಎಂದು ಒಬ್ಬರು. ಟಿಕ್​ಟಾಕರ್​ಗಳು, ಯೂಟ್ಯೂಬರ್​ಗಳು ಕಂಟೆಂಟ್​ಗಾಗಿ ನಡೆಸುವ ಸರ್ಕಸ್​ಗಳು ಅಪಾಯಕಾರಿ ಎಂದು ಹಲವರು.

Viral: ಲೈಕ್ಸ್ ಗಳಿಸುವುದಕ್ಕೋಸ್ಕರ ವಿಮಾನವನ್ನೇ ನೆಲಕ್ಕಪ್ಪಳಿಸಿದ ಭೂಪನಿಗೆ 20 ವರ್ಷ ಜೈಲು?
ವಿಮಾನದಿಂದ ನೆಗೆಯುತ್ತಿರುವ ಕಂಟೆಂಟ್​ ಕ್ರಿಯೇಟರ್​
ಶ್ರೀದೇವಿ ಕಳಸದ
|

Updated on:Jun 05, 2023 | 12:07 PM

Share

Social Media : ಇದು ಸೃಜನಶೀಲ ಆರ್ಥಿಕತೆಯ (Creator Economy) ಯುಗ. ಜನರ ಗಮನವೇ (attention) ಇಂದಿಲ್ಲಿ ಚಲಾವಣೆಯಲ್ಲಿರುವ ನಾಣ್ಯ. Content is king ಎನ್ನುವುದಾರೆ ವೈರಲ್ ಕಂಟೆಂಟ್ ಎನ್ನುವುದು ಚಕ್ರಾಧಿಪತಿ. ಲಕ್ಷಾಂತರ ಲೈಕುಗಳು ನೋಟಗಳು ಸಿಕ್ಕರೆ ಸ್ವರ್ಗಾರೋಹಣ. ಇಲ್ಲದಿದ್ದಲ್ಲಿ ಪ್ರಪಾತ ದರ್ಶನ. ಇಲ್ಲೊಬ್ಬ ಯೂಟ್ಯೂಬರ್ ತನ್ನ ವಿಡಿಯೋವನ್ನು ಹಿಟ್ ಮಾಡಲು ಪ್ರಪಾತ ದರ್ಶನವನ್ನೇ ಮಾಡಿಸಿದ್ದಾನೆ. ತಾನು ಹಾರಿಸುತ್ತಿದ್ದ ಕಿರುವಿಮಾನದಿಂದ ಜಿಗಿದು ನಿಯಂತ್ರಣ ತಪ್ಪಿದ ವಿಮಾನ ನೆಲಕ್ಕಚ್ಚುವಂತೆ ಮಾಡಿದ್ದಾನೆ. ಅದ್ಯಾಕೆ ಅಂತೀರಾ? ಸುಮ್ಮನೇ ಒಂದು ಕಡೆಯಿಂದ ಇನ್ನೊಂದು ಕಡೆ ವಿಮಾನ ಹಾರಿಹೋದರೆ ಅದನ್ನ್ಯಾರು ನೋಡುತ್ತಾರಲ್ಲವೆ?

ಇವನ ಇಂಥ ಸಾಹಸಕ್ಕೆ 20 ವರ್ಷ ಜೈಲು ಶಿಕ್ಷೆ ದಕ್ಕುವ ಸಂಭವವಿದೆಯಂತೆ. ‘ಮೂರ್ಖತನದ ಆಟವಾಡಿದವರಿಗೆ ತಕ್ಕ ಬಹುಮಾನ ದಕ್ಕುವುದು,’ ಎಂದೊಬ್ಬರು ತೀರ್ಪು ನೀಡಿದ್ದಾರೆ. ‘ನಾನು ಜಿಟಿಎ (GTA) ಆಡುವಾಗ ಇದನ್ನು ಲೆಕ್ಕವಿಲ್ಲದಷ್ಟು ಸಲ ಮಾಡಿದ್ದೇನೆ ಮತ್ತು ಕ್ಷಣಾರ್ಧದಲ್ಲಿ ಜೈಲಿನಿಂದ ತಪ್ಪಿಸಿಕೊಂಡಿದ್ದೇನೆ ಕೂಡ’ ಎಂದು ವಿಡಿಯೋ ಗೇಮರ್ ಒಬ್ಬರು ತಮ್ಮ ಅಕ್ಕಿಕಾಳು ಎಸೆದಿದ್ದಾರೆ. ‘ಇದಕ್ಕೆ ಇಪ್ಪತ್ತು ವರ್ಷದ ಶಿಕ್ಷೆಯೇ? ಅತಿಯಾಯಿತು.’ ಎಂದಿದ್ದಾರೆ ಒಬ್ಬರು. ಒಟ್ಟಿನಲ್ಲಿ ಆ ಯೂಟ್ಯೂಬರ್ ಬಗ್ಗೆ ಸಹಾನುಭೂತಿ ತೋರಿಸಿದವರು ಕೆಲ ಮಂದಿಯಷ್ಟೇ.

ಇದನ್ನೂ ಓದಿ : Viral Video: ಕಾಮ್​ ಡೌನ್​; ಬೆಲ್ಲಿ ಡ್ಯಾನ್ಸ್ ನೋಡಿ; ”ಮಂಡೇ” ಬಿಸಿ ಓಡಿಸಿ

‘ಇದೇ ಕೆಲಸವನ್ನು ಅವನು ಧರ್ಮದ ಕಾರಣದಿಂದ ಮಾಡಿದ್ದರೆ ಆ ಕತೆಯೇ ಬೇರೆಯಿರುತ್ತಿತ್ತು,’ ಎಂದೊಬ್ಬರು ಹೇಳಿ ಇದಕ್ಕೆ ಹೊಸದೇ ಆಯಾಮ ಕೊಟ್ಟಿದ್ದಾರೆ. ಅವನಿಗೆ ಬೇಕಾಗಿದ್ದು ಜನರ ಗಮನ. ಅದಂತೂ ದಂಡಿಯಾಗಿ ದಕ್ಕಿದೆ. ಜೈಲಿಗೆ ಹೋದರೆ ಅಲ್ಲಿಯೂ ಏನಾದರೂ ಹುಂಬತನ ಮಾಡದೇ ಬಿಟ್ಟಾನೆಯೇ?

ಇದನ್ನೂ ಓದಿ : Viral Video: ಯಾರಿಗೆಲ್ಲ ಬೇಕು ಈ ಬೌಲ್​ ಕಟ್​, ಎಲ್ಲಾ ಸಾಲಾಗಿ ಬನ್ರಿ 

ಹೌದು, ಇತ್ತೀಚಿನ ದಿನಗಳಲ್ಲಿ ಯೂಟ್ಯೂಬರ್‌ಗಳು ಮತ್ತು ಟಿಕ್‌ಟಾಕರ್​ಗಳು ವ್ಯೂವ್ಸ್​​ಗಾಗಿ ನಡೆಸುವ ಅಪಾಯಕಾರೀ ಸರ್ಕಸ್​​ಗಳು ಆತಂಕಕಾರಿಯಾಗಿವೆ. ಹೇಳದೆ ಕೇಳದೆ ಜನರ ಮನೆಗಳಿಗೆ ನುಗ್ಗುವುದದರಿಂದ ಹಿಡಿದು ಅಪಘಾತಕ್ಕೀಡಾದ ವಿಮಾನಗಳವರೆಗೆ. ಯಾಕೆ ಹೀಗೆ ಮಾಡುತ್ತಿದ್ದೀರಿ ಎಂದು ನೀವವರನ್ನು ಪ್ರಶ್ನಿಸಿ, ನಾವು ಕಂಟೆಂಟ್​ ಕ್ರಿಯೇಟರ್ಸ್ ಎಂದು ಹೇಳುತ್ತಾರೆ! ಎಂದು ಪ್ರತಿಕ್ರಿಯಿದ್ದಾರೆ ಇನ್ನೊಬ್ಬರು.

ಇದನ್ನು ನೋಡಿ ನಿಮಗೇನನ್ನಿಸಿತು? ಬರೆಯಿರಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:06 pm, Mon, 5 June 23

ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ