Viral Video: ‘ರಂಗ್ ಲಗೇಯಾ ಇಶ್ಕ್ ದಾ’ ಹಾಡಿಗೆ ಯುವಕನೊಬ್ಬನ ಶಾಸ್ತ್ರೀಯ ನೃತ್ಯ, ಇಲ್ಲಿದೆ ನೋಡಿ
ಡಾನ್ಸರ್ ರಾಹುಲ್ ಶರ್ಮ ಎಂಬವರು ‘ರಂಗ್ ಲಗೇಯಾ ಇಶ್ಕ್ ದಾ’ ಹಾಡಿಗೆ ಶಾಸ್ತ್ರೀಯ ನೃತ್ಯವನ್ನು ಮಾಡಿದ್ದು, ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹಿಪ್-ಆಪ್ ಶೈಲಿಯಿಂದ ಶಾಸ್ತ್ರೀಯ ಶೈಲಿಯ ನೃತ್ಯದ ವರೆಗೆ ಹಲವು ಪ್ರಕಾರದ ಡಾನ್ಸ್ ವೀಡಿಯೋಗಳು ಹೆಚ್ಚು ಹರಿದಾಡುತ್ತಿರುತ್ತವೆ. ಅದರಲ್ಲೂ ಇತ್ತೀಚಿಗೆ ವಿದೇಶಿಯರು ಹಾಗೂ ಅನೇಕ ಭಾರತೀಯರು ಶ್ರೀಕೃಷ್ಣನ ಗೀತೆಗಳಿಗೆ ಹಾಗೂ ಸಿನಿಮಾ ಹಾಡುಗಳಿಗೆ ಭಾರತೀಯ ಶೈಲಿಯ ಉಡುಗೆ ತೊಟ್ಟು ಶಾಸ್ತ್ರೀಯ ಪ್ರಕಾರದ ನೃತ್ಯವನ್ನಾಡುವ ವೀಡಿಯೋಗಳು ವೈರಲ್ ಆಗುತ್ತಿರುತ್ತವೆ. ಅದೇ ರೀತಿ ವೃಂದಾವನದಲ್ಲಿ ಯುವಕನೋರ್ವ ಬಾಲಿವುಡ್ನ ‘ರಂಗ್ ಲಗೇಯಾ ಇಶ್ಕ್ ದಾ’ ಹಾಡಿಗೆ ಭಾರತೀಯ ಶಾಸ್ತ್ರೀಯ ಶೈಲಿಯ ನೃತ್ಯ ಮಾಡಿದ್ದು, ಈತನ ನೃತ್ಯ ನೋಡುಗರನ್ನು ಮನಸೂರೆಗೊಳಿಸಿದೆ.
ಈ ವೀಡಿಯೋವನ್ನು ಡಾನ್ಸರ್ ರಾಹುಲ್ ಶರ್ಮ (@rahulsharma.rg) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅದಕ್ಕೆ ಕೃಷ್ಣ ರಂಗ್ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೀಡಿಯೋದಲ್ಲಿ ಅವರು ಕೆಂಪು ಹಾಗೂ ಬಿಳಿ ಬಣ್ಣದ ಉಡುಪನ್ನು ಧರಿಸಿದ್ದು, ಮೋಹಿತ್ ಚೌಹಾನ್ ಮತ್ತು ರೋಚಕ್ ಕೊಹ್ಲಿಯವರು ಹಾಡಿರುವ ‘ರಂಗ್ ಲಗೇಯಾ ಇಶ್ಕ್ ದಾ’ ಹಿಂದಿ ಹಾಡಿಗೆ ವೃಂದಾವನದಲ್ಲಿ ಕುಳಿತುಕೊಂಡ ಭಂಗಿಯಲ್ಲಿ ಕೈಗಳ ಚಲನೆಯ ಮೂಲಕ ಶಾಂತಚಿತ್ತತೆಯಿಂದ ನೃತ್ಯ ಮಾಡುವುದನ್ನು ಕಾಣಬಹುದು. ಈ ಡಾನ್ಸ್ ವಿಡಿಯೋದಲ್ಲಿ ರಾಹುಲ್ ಅವರ ಮುಖ ಭಾವನೆ ಹಾಗೂ ಕೈಗಳ ಚಲನೆ ನೋಡುಗರನ್ನು ಆಕರ್ಷಿಸುವಂತಿದೆ.
View this post on Instagram
ಇದನ್ನೂ ಓದಿ: Viral Video: ಅಪ್ಪಾ ನನಗೆ ಮುತ್ತು ಕೊಡಪ್ಪಾ….ವೈರಲ್ ಆಗುತ್ತಿದೆ ತಂದೆ ಮಗಳ ಮುದ್ದಾದ ವೀಡಿಯೊ
ಮೇ 13ರಂದು ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, 68.8 ಸಾವಿರ ವೀಕ್ಷಣೆಗಳನ್ನು ಹಾಗೂ 8.8 ಸಾವಿರ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ತುಂಬಾ ಸುಂದರವಾದ ನೃತ್ಯ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಇದು ನಿಜವಾಗಿಯೂ ಅದ್ಭುತವಾಗಿದೆ’ ಎಂದು ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ‘ರಾಧೆ ರಾಧೆ’ ಹಾಗೂ ‘ಹರೆ ಕೃಷ್ಣ’ ಎಂದು ಕಮೆಂಟ್ ನಲ್ಲಿ ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ