Viral Video: ಮ್ಯಾಷಪ್​ ವಿಥ್ ಅಮ್ಮಾ; ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಸಿನಿಸಂಗಮ

Multilingual mashup : ಹಳೆಬೇರು ಹೊಸ ಚಿಗುರು ಕೂಡಿದಾಗಲೇ ಸೊಬಗು. ಅಂತೆಯೇ ಭಿನ್ನ ಭಾಷಿಕರನ್ನು ಬೆಸೆಯುವುದೇ ಕಲೆಯ ಸೌಂದರ್ಯ. ಈ ಅಮ್ಮ ಮತ್ತು ಮಗ ತಮ್ಮ ಮಾತೃಭಾಷೆಯಲ್ಲಷ್ಟೇ ಹಾಡಿದ್ದರೆ ಅವರಿಂದು ನಿಮ್ಮನ್ನು ತಲುಪುತ್ತಿದ್ದರೆ?

Viral Video: ಮ್ಯಾಷಪ್​ ವಿಥ್ ಅಮ್ಮಾ; ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಸಿನಿಸಂಗಮ
ತನ್ನ ತಾಯಿಯೊಂದಿಗೆ ಗಾಯಕ ಸನಾತನ ಶ್ರೀಕೃಷ್ಣ
Follow us
ಶ್ರೀದೇವಿ ಕಳಸದ
|

Updated on:Jun 09, 2023 | 9:59 AM

Music Reels : ಸಂಗೀತವೇ ಒಂದು ಭಾಷೆ. ಆದರೂ ಅದು ಜನಸಾಮಾನ್ಯರ ಮನದಾಳಕ್ಕಿಳಿಯಬೇಕೆಂದರೆ ಭಾಷೆಯ ಸಹಾಯ ಬೇಕು. ಭಾಷೆ ನಮ್ಮನ್ನು ಹತ್ತಿರಕ್ಕೆಳೆದುಕೊಳ್ಳುತ್ತದೆ. ಭಿನ್ನ ಭಾಷೆ, ಭಿನ್ನ ಪ್ರದೇಶದವರೊಂದಿಗೆ ಆಪ್ತತೆ ಕಲ್ಪಿಸುತ್ತದೆ. ಆಪ್ತ ಎನ್ನುವುದು ಸಂತೋಷ ಮತ್ತು ತೃಪ್ತಿಗೆ ಸಂಬಂಧಿಸಿದ್ದು. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಮಲ್ಟಿಲಿಂಗ್ವಲ್​ ಮ್ಯಾಷಪ್​ ವಿಥ್​ ಅಮ್ಮಾ (Multilingual Mashup) ಎಂಬ ಪರಿಕಲ್ಪನೆಯಲ್ಲಿ ಐದು ಭಾಷೆಯ ಸಿನೆಮಾ ಗೀತೆಗಳ ತುಣುಕುಗಳನ್ನು ಅಮ್ಮ ಮತ್ತು ಮಗ ಅದೆಷ್ಟು ಛಂದ ಹಾಡಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Sanathan Shree Krishnan (@sanathanogram)

ತಮಿಳುನಾಡಿನ ಸನಾತನ ಶ್ರೀಕೃಷ್ಣ ಎಂಬ ಯುವಗಾಯಕ ತನ್ನ ತಾಯಿಯೊಂದಿಗೆ ಆಗಾಗ ಇನ್​ಸ್ಟಾ ರೀಲ್ಸ್​ ಮಾಡಿ ಅಂತರ್ಜಾಲದ ಸಂಗೀತಪ್ರಿಯರಿಗೆ ಚಿರಪರಿಚಿತರಾಗಿದ್ದಾರೆ. ಈ ಬಾರಿ ಬಹುಭಾಷೆಯ ಹಾಡುಗಳ ತುಣುಕುಗಳನ್ನು ಈ ರೀಲ್​ನಲ್ಲಿ ಹಾಡಿದ್ದಾರೆ. ತಮಿಳು, ಕನ್ನಡ, ಹಿಂದಿ, ತೆಲುಗು ಮಲಯಾಳಂ ಚಿತ್ರದ ಗೀತೆಗಳನ್ನು ಹಾಡಿದ್ದಾರೆ.  ಹ್ಯಾರೀಸ್​ ಜಯರಾಜ್​, ಎ.ಆರ್. ರೆಹಮಾನ್​, ಸುಶಿನ್​ ಶ್ಯಾಮ್​, ಬಿ, ಅಜನೀಶ್​ ಲೋಕನಾಥ್ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಹಾಡುಗಳು ಇವಾಗಿವೆ.  ಕನ್ನಡದ ಕಿರಿಕ್​ ಪಾರ್ಟಿಯ ಹಾಡೂ ಇದರಲ್ಲಿದೆ ಎನ್ನುವುದು ವಿಶೇಷ.

ಇದನ್ನೂ ಓದಿ :Viral Video: ಕಪ್ಪಾ ಕ್ಲಾಸಿಕಲ್​ ವಿಥ್ ಕಾಫಿ ಗ್ಲಾಸ್​; 5 ಲಕ್ಷ ಜನರು ಮೆಚ್ಚಿದ ಈ ರೀಲ್ಸ್

ಮಿಲಿಯನ್​ಗಟ್ಟಲೆ ಜನರು ನೋಡಿರುವ ಈ ವಿಡಿಯೋ ಅನ್ನು ಸುಮಾರು 6.5 ಲಕ್ಷ ಜನರು ಇಷ್ಪಪಟ್ಟಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ಧಾರೆ. ತಾಯಿಯ ಧ್ವನಿಯನ್ನು ಸಾವಿರಾರು ಜನರು ಪ್ರಶಂಸಿಸಿದ್ದಾರೆ. ಎಂಥ ಮಾರ್ದವತೆ ಇದೆ ಅವರ ಧ್ವನಿಯಲ್ಲಿ ಎಂದು ಹೇಳಿದ್ದಾರೆ. ತಮಿಳು, ತೆಲುಗು, ಮಲಯಾಳಂ, ಕನ್ನಡ ಮುಂತಾದ ಭಾಷಿಕರು ಬೇಕಾದ ಹಾಡುಗಳ ಪಟ್ಟಿಯನ್ನು ನೀಡಿ ಹೊಸ ರೀಲ್ಸ್ ಮಾಡಿ ಎಂದು ಹುರುದುಂಬಿಸಿದ್ದಾರೆ.

ಹಳೆಬೇರು ಹೊಸ ಚಿಗುರು ಕೂಡಿದಾಗಲೇ ಸೊಬಗು. ಅಂತೆಯೇ ಭಿನ್ನ ಭಾಷಿಕರನ್ನು ಬೆಸೆಯುವುದೇ ಕಲೆಯ ಸೌಂದರ್ಯ. ಇಂಥ ಅವಕಾಶವನ್ನು ಇಂದು ಸಾಮಾಜಿಕ ಜಾಲತಾಣಗಳು ಹುಟ್ಟುಹಾಕಿವೆ. ಯಾವುದೇ ಆವಿಷ್ಕಾರದಲ್ಲಿ ವಿಷವೂ ಇರುತ್ತದೆ ಅಮೃತವೂ ಇರುತ್ತದೆ. ಆಯ್ಕೆ ನಿಮ್ಮದೇ. ಈ ಅಮ್ಮ ಮತ್ತು ಮಗ ತಮ್ಮ ಮಾತೃಭಾಷೆಯಲ್ಲಷ್ಟೇ ಹಾಡಿದ್ದರೆ ಅವರಿಂದು ನಿಮ್ಮನ್ನು ತಲುಪುತ್ತಿದ್ದರೆ? ಈ ಹಾಡುಗಳನ್ನು ಕೇಳಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 9:53 am, Fri, 9 June 23

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ