AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಬಾಸ್​, ನಾನು ಗರ್ಭಿಣಿ; ಈ ವಾಟ್ಸಪ್​ ಚಾಟ್​ ಮಿಲಿಯನ್​ಗಟ್ಟಲೆ ಜನರನ್ನು ಸೆಳೆದಿದ್ದೇಕೆ?

Communication : ದಯವಿಟ್ಟು ಈ ವಿಷಯವನ್ನು ಮೊದಲು ನನ್ನ ಹೆಂಡತಿಯೊಂದಿಗೆ ಚರ್ಚಿಸಿ! ಆರಂಭದ ಎರಡು ಮೆಸೇಜ್​ಗಳನ್ನು ಆಕೆ ಓದಿದ್ದಾಳೆ. ಮತ್ತೆ ಯಾಕೆ ನೀವು ಒಂದೇ ಮೆಸೇಜ್​ನಲ್ಲಿ ಈ ಎಲ್ಲಾ ವಿಷಯಗಳನ್ನು ಟೈಪ್ ಮಾಡುವುದಿಲ್ಲ?

Viral: ಬಾಸ್​, ನಾನು ಗರ್ಭಿಣಿ; ಈ ವಾಟ್ಸಪ್​ ಚಾಟ್​ ಮಿಲಿಯನ್​ಗಟ್ಟಲೆ ಜನರನ್ನು ಸೆಳೆದಿದ್ದೇಕೆ?
ಟ್ವಿಟರ್​ನಲ್ಲಿ ಹರಿದಾಡುತ್ತಿರುವ ಸ್ಕ್ರೀನ್ ಶಾಟ್​
TV9 Web
| Edited By: |

Updated on:Jun 08, 2023 | 5:04 PM

Share

WhatsApp : ರಜಾ ಅರ್ಜಿಗೆ (Leave Application) ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಅನೇಕ ಪೋಸ್ಟ್​​ಗಳು ವೈರಲ್ ಆಗಿರುವುದನ್ನು ಓದಿದ್ದೀರಿ. ಅದಕ್ಕೆ ಬಂದ ಪ್ರತಿಕ್ರಿಯೆಗಳ ಮಹಾಪೂರದೊಳಗೂ ತೇಲಿದ್ದೀರಿ. ನಕ್ಕು ಹಗುರಾಗಿದ್ದೀರಿ. ಇದೀಗ ಮತ್ತೊಂದು ರಜಾ ವಿನಂತಿಯ ಸ್ಕ್ರೀನ್​ ಶಾಟ್​ ಟ್ವಿಟರ್​ನಲ್ಲಿ ಹರಿದಾಡುತ್ತಿದೆ. ಇದರಲ್ಲಿ ಮಹಿಳಾ ಉದ್ಯೋಗಿಯೊಬ್ಬರು ತನ್ನ ಕಚೇರಿ ​ ಮುಖ್ಯಸ್ಥರಿಗೆ ವಾಟ್ಸಪ್ ಮೂಲಕ ರಜಾ ವಿನಂತಿ ಮಾಡಿಕೊಂಡಿದ್ದಾರೆ. ಸಂವಹನ ಶೈಲಿಯನ್ನು ಗಮನಿಸಿ.

ಮಹಿಳಾ ಉದ್ಯೋಗಿ : ಹಾಯ್ ಬಾಸ್​

ಬಾಸ್​ : ಯೆಸ್?​

ಮಹಿಳಾ ಉದ್ಯೋಗಿ : ನಾನು ಗರ್ಭಿಣಿ

ಬಾಸ್​ : ??

ಮಹಿಳಾ ಉದ್ಯೋಗಿ : ಆದ್ದರಿಂದ…

ಮಹಿಳಾ ಉದ್ಯೋಗಿ : ನನಗೆ ಕೆಲ ದಿನಗಳ ಮಟ್ಟಿಗೆ ರಜೆ ಬೇಕಿತ್ತು.

ಮಹಿಳಾ ಉದ್ಯೋಗಿ : ಈ ವಿಷಯವನ್ನು ನನ್ನ ಬಾಯ್​ಫ್ರೆಂಡ್ ಜೊತೆ ಚರ್ಚಿಸುವುದಕ್ಕೆ.

ಮಹಿಳಾ ಉದ್ಯೋಗಿ : ದಯವಿಟ್ಟು ನನ್ನ ರಜಾಮನವಿಯನ್ನು ಸ್ವೀಕರಿಸಿ.

ಬಾಸ್​ : ದಯವಿಟ್ಟು ಈ ವಿಷಯವನ್ನು ಮೊದಲು ನನ್ನ ಹೆಂಡತಿಯೊಂದಿಗೆ ಚರ್ಚಿಸಿ!! ಆರಂಭದ ಎರಡು ಮೆಸೇಜ್​ಗಳನ್ನು ಆಕೆ ಓದಿದ್ದಾಳೆ. ಮತ್ತೆ ಯಾಕೆ ನೀವು ಒಂದೇ ಮೆಸೇಜ್​ನಲ್ಲಿ ಈ ಎಲ್ಲಾ ವಿಷಯಗಳನ್ನು ಟೈಪ್ ಮಾಡುವುದಿಲ್ಲ?

ಇದನ್ನೂ ಓದಿ : Viral Video: ಮೆಕ್​ಡೊನಾಲ್ಡ್ಸ್​; ಡೇಟಿಂಗ್​, ಪ್ರೇಮದ ಬೆಲೆ ಇಲ್ಲಿ ರೂ. 179?; ನೆಟ್ಟಿಗರ ಆಕ್ರೋಶ

ಇದು ಈ ಮೇಲಿನ ಟ್ವೀಟ್​ನ ಅನುವಾದ. ಈ ಟ್ವೀಟ್​ ಅನ್ನು ಈತನಕ ಸುಮಾರು 3.9 ಮಿಲಿಯನ್​ ಜನರು ಓದಿದ್ದಾರೆ. 12 ಲಕ್ಷಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. 8,000 ಕ್ಕಿಂತಲೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. 2,000ಕ್ಕಿಂತಲೂ ಹೆಚ್ಚು ಜನರು ಬುಕ್ ಮಾರ್ಕ್ ಮಾಡಿಟ್ಟುಕೊಂಡಿದ್ದಾರೆ.

ಇದನ್ನೂ ಓದಿ : Viral: “ಕಚರಾ” ಮರುಬಳಕೆ; ಝೊಮ್ಯಾಟೋದ ಕೀಳು ಅಭಿರುಚಿಯ ಜಾತೀವಾದಿ ಜಾಹೀರಾತು

ಈಕೆ ಒಂದೊಂದು ಮೆಸೇಜಿನ ಮಧ್ಯೆ ಒಂದು ನಿಮಿಷದ ಗ್ಯಾಪ್​ ಕೊಡುತ್ತಾಳೆ ಎನ್ನುವುದಂತೂ ಖಾತ್ರಿ. ನನ್ನ ತಂದೆ ಒಂದೊಂದು ಪದವನ್ನು ಒಂದೊಂದು ಮೆಸೇಜ್​ನಂತೆ ಕಳಿಸುತ್ತಾರೆ. ನನ್ನ ತಾಯಿಯ ಒಂದು ಮೆಸೇಜ್​ ಇಡೀ ಪರದೆಯನ್ನು ತುಂಬಿಸಿರುತ್ತದೆ. ಒಂದೇ ಮೆಸೇಜಿನಲ್ಲಿ ಎಲ್ಲವನ್ನೂ ಟೈಪ್ ಮಾಡದವರನ್ನು ನಾನಂತೂ ದ್ವೇಷಿಸುತ್ತೇನೆ. ಇದು ನಿಜವಾದದ್ದಲ್ಲ. ವ್ಯೂವ್ಸ್​​ಗಾಗಿ ಸೃಷ್ಟಿಸಿದ್ದು… ಅಂತೆಲ್ಲ ಪ್ರತಿಕ್ರಿಯಿಸಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು? ಈ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ಅನುಭಗಳನ್ನು ಹಂಚಿಕೊಳ್ಳಿ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

Published On - 4:53 pm, Thu, 8 June 23

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್