Viral: “ಕಚರಾ” ಮರುಬಳಕೆ; ಝೊಮ್ಯಾಟೋದ ಕೀಳು ಅಭಿರುಚಿಯ ಜಾತೀವಾದಿ ಜಾಹೀರಾತು
Zomato : “ಲಗಾನ್" ಚಿತ್ರದ “ಕಚರಾ" ಎಂಬ ಪಾತ್ರವನ್ನು ಝೊಮ್ಯಾಟೋ ಇದೀಗ ‘ಮರುಬಳಕೆ' ಮಾಡಿ ಜಾಹೀರಾತು ತಯಾರಿಸಿದೆ. ಈ ಮೂಲಕ, ತಮ್ಮ ಕಂಪೆನಿಯು ವಸ್ತುಗಳ ಮರುಬಳಕೆಗೆ ಆದ್ಯತೆ ನೀಡುತ್ತದೆ ಎಂಬ ಸಂದೇಶವನ್ನು ಸಾರಿದೆ.
Advertisement : ಝೊಮ್ಯಾಟೋ (Zomato) ಸಂಸ್ಥೆಯಂತೂ ತನ್ನ ಚಾಲಾಕು ಮಾರ್ಕೆಟಿಂಗ್ ತಂತ್ರ, ಚತುರೋಕ್ತಿ, ಹಾಸ್ಯಪ್ರವೃತ್ತಿಯಿಂದ ಸಾಮಾಜಿಕ ಜಾಲತಾಣದಲ್ಲಿ ತನ್ನ ಉತ್ಪನ್ನ ಹಾಗೂ ಸೇವೆಗಳಿಗೆ ಹೊರತಾಗಿಯೂ ಮಾತುಗಾರಿಕೆಯಿಂದ ಜನಪ್ರಿಯವಾಗಿದೆ. ಅದರ ಜಾಹೀರಾತುಗಳು ವಿಭಿನ್ನವಾಗಿದ್ದು ಹಲವರಿಗೆ ಮೆಚ್ಚುಗೆಯಾಗಿ, ಕೆಲವರಿಗೆ ಕಿರಿಕಿರಿ ಮಾಡಿ, ಒಟ್ಟಾರೆ ಎಲ್ಲರೂ ಎದ್ದುಕುಳಿತು ಗಮನಿಸುವಂತಿರುತ್ತವೆ. ಮಾಧ್ಯಮ, ಜಾಹೀರಾತು ಕ್ಷೇತ್ರದ ಅನುಭವಸ್ಥರೂ ಇಂಥವುಗಳನ್ನು ವಿಮರ್ಶಕ ದೃಷ್ಟಿಯಿಂದ ಗಮನಿಸಿ ಇವುಗಳಲ್ಲಿನ ಕೌಶಲ ಹಾಗೂ ಜಾಣ್ಮೆಯನ್ನು ಬಿಡಿಸಿ ತೋರಿಸಿದ್ದಾರೆ.
Usually, I’m a big fan of Zomato’s marketing, mostly done in-house. But their new ad film, made for World Environment Day, made for an uncomfortable watch, at least for me – your mileage may vary. I understand the intent: to use the ‘Kachra’ character from Lagaan for his name 1/5 pic.twitter.com/WmoYYS4grg
ಇದನ್ನೂ ಓದಿ— Karthik ?? (@beastoftraal) June 6, 2023
ಆದರೆ ಅತೀ ಜಾಣತನವೂ ಒಮ್ಮೊಮ್ಮೆ ಮುಳುವಾಗುತ್ತದೆ. ಸೃಜನಶೀಲತೆ ಮಾನವ ಸಹಜ ಸೂಕ್ಷ್ಮ ಸಂವೇದನೆಯ ಹಂಗು ತೊರೆದು ಬರೀ ಚಾತುರ್ಯ ಅಥವಾ ಗಿಮಿಕ್ಸ್ನಿಂದ ಕೂಡಿದ್ದರೆ ನಾಚಿಕೆಗೇಡು ಎಂದೆನ್ನಿಸಿಕೊಳ್ಳುತ್ತದೆ. ಝೊಮ್ಯಾಟೋ ಬಿಡುಗಡೆ ಮಾಡಿದ ಇತ್ತೀಚಿನ ಜಾಹೀರಾತು ಇಂಥದ್ದೇ. ಸುಮಾರು 20 ವರ್ಷಗಳ ಹಿಂದೆ ದೊಡ್ಡ ಸಂಚಲನ ಮೂಡಿಸಿದ್ದ “ಲಗಾನ್” ಚಿತ್ರದ “ಕಚರಾ” ಎಂಬ ಪಾತ್ರವನ್ನು ಝೊಮ್ಯಾಟೋ ಇದೀಗ ‘ಮರುಬಳಕೆ’ ಮಾಡಿ ಜಾಹೀರಾತು ತಯಾರಿಸಿದೆ. ಈ ಮೂಲಕ, ತಮ್ಮ ಕಂಪೆನಿಯು ವಸ್ತುಗಳ ಮರುಬಳಕೆಗೆ ಆದ್ಯತೆ ನೀಡುತ್ತದೆ ಎಂಬ ಸಂದೇಶವನ್ನು ಸಾರಿದೆ.
ಇದನ್ನು ಓದಿ : Viral Video: “ದುಯಿ ಭಾಯೀ” ಮತೀಯತೆಯ ವಿಷದಿಂದ ಕಲುಷಿತವಾದ ಭಾರತೀಯರ ಹೃದಯಗಳನ್ನೂ ಸರಿಪಡಿಸಲಿ
”ಕಚರಾ ಎಂದು ಶೀರ್ಷಿಕೆ ಕೊಟ್ಟಿದ್ದು ಮೊದಲನೇ ತಪ್ಪು, ಈಗ ಅದನ್ನೇ ಮರುಕಳಿಸಿ ಅದೇ ಪಾತ್ರಧಾರಿಯನ್ನು ತೀರಾ ಅಮಾನವೀಯವಾಗಿ ಚಿತ್ರಿಸಿ, ಅವನಿಂದ ಮನೆಮಂದಿಗೆಲ್ಲ ಚಾಕರಿ ಮಾಡಿಸುವುದನ್ನು ತೋರಿಸಿದ್ದಾರೆ,” “ಇದು ದಲಿತ ಶೋಷಣೆಯ ವಿಜೃಂಭಣೆ; ಸಂವೇದನಾರಹಿತ ಜಾತೀವಾದಿ ಝೊಮ್ಯಾಟೋ” “ಮರುಬಳಕೆಯ ಬಗ್ಗೆ ಎಷ್ಟು ಬಗೆಯಲ್ಲಿ ಎಷ್ಟು ಚೆಂದವಾಗಿ ಹೇಳಬಹುದಿತ್ತು, ಆದರೆ ಝೊಮ್ಯಾಟೋ ಆಯ್ಕೆ ಮಾಡಿಕೊಂಡದ್ದು ಇಂಥ ಕೀಳುಮಟ್ಟವನ್ನು” ಎಂಬ ಉಗ್ರ ಆದರೆ ಸರಿಯಾದ ಪ್ರತಿಕ್ರಿಯೆಗಳು ಟ್ವಿಟರ್ನಲ್ಲಿ ಹರಿದಾಡುತ್ತಿವೆ.
ಇದನ್ನೂ ಓದಿ : Viral Video: ಉತ್ತರ ಕರ್ನಾಟಕ ನನ್ನ ಬೇರು; ಮೇಘನಾ ಗಾಂವಕರ್ ಇಳಕಲ್ ಸೀರೆ ಸಂಭ್ರಮ
ಒಂದು ಜಾಹೀರಾತು ಹೊರಬರಬೇಕೆಂದರೆ ಅದು ಅನೇಕರ ಅವಗಾಹನೆಗೆ ಬಂದು ಅನುಮತಿ ಪಡೆದಿರಬೇಕಾಗುತ್ತದೆ. ಹಾಗಿದ್ದರೆ ಇಡೀ ಝೊಮ್ಯಾಟೋದ ನಾಯಕತ್ವದಲ್ಲಿ ಸಂವೇದನೆ ಇರುವವರು ಒಬ್ಬರೂ ಇಲ್ಲವೇ? ಎಂಬ ಪ್ರಶ್ನೆ ಏಳುತ್ತದೆ. ಕಾರ್ಪೊರೇಟ್ ಸಂಸ್ಥೆಗಳಿಗೆ ಸಾಮಾಜಿಕ ಹೊಣೆಗಾರಿಕೆಯೇ ಬೇಡವೇ? ನಿಮ್ಮ ಅಭಿಪ್ರಾಯ ತಿಳಿಸಿ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ