Viral Video: ಉತ್ತರ ಕರ್ನಾಟಕ ನನ್ನ ಬೇರು; ಮೇಘನಾ ಗಾಂವಕರ್​ ಇಳಕಲ್ ಸೀರೆ ಸಂಭ್ರಮ

Meghana Goankar : ರಕ್ಷಿತ್​ ಶೆಟ್ಟಿ ನಿಮಗಾಗಿ ಕಾಯುತ್ತಿದ್ದಾರೆ. ನಮ್ಮ ಉತ್ತರ ಕರ್ನಾಟಕದಿಂದ ಇಂಥ ರೀಲ್ ಅನ್ನು ಈತನಕ ಯಾರೂ ಮಾಡಿರಲಿಲ್ಲ. ಓಹ್​ ಕಲಬುರ್ಗಿಯ ನಮ್ಮ ಶಾಲೆಯಲ್ಲಿಯೇ ನೀವು ಓದಿರುವುದು! ಅಂತೆಲ್ಲ ಪ್ರತಿಕ್ರಿಯೆಗಳಿವೆ.

Viral Video: ಉತ್ತರ ಕರ್ನಾಟಕ ನನ್ನ ಬೇರು; ಮೇಘನಾ ಗಾಂವಕರ್​ ಇಳಕಲ್ ಸೀರೆ ಸಂಭ್ರಮ
ಇಳಕಲ್ ಸೀರೆಯಲ್ಲಿ ನಟಿ ಮೇಘನಾ ಗಾಂವಕರ್ (Meghana Gaonkar)
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jun 08, 2023 | 1:32 PM

Kannada Actress : ನಮ್ ಏರಿಯಾಲ್ಲೊಂದಿನ, ವಿನಾಯಕ ಗೆಳೆಯರ ಬಳಗ, ತುಘಲಕ್​, ಚಾರ್​ ಮಿನಾರ್, ಸಿಂಪಲ್ಲಾಗೊಂದು ಇನ್ನೊಂದು ಲವ್​ ಸ್ಟೋರಿ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ಮೇಘನಾ ಗಾಂವಕರ್ (Meghana Goankar)​ ಹೊಸ ರೀಲ್​ ಮೂಲಕ ಟ್ವಿಟರ್​ ಟ್ರೆಂಡಿಂಗ್​ನಲ್ಲಿದ್ದಾರೆ; ಪಾಚಿಹಸಿರಿನ ಪರಾಸ್ಪೇಟ್​ ದಡಿಯ ವಿಸ್ಕೋಸ್​ ಇಳಕಲ್​ ಸೀರೆಯುಟ್ಟು, ಗುಳೇದಗುಡ್ಡದ ಪಂಚರಂಗೀ ಕಣ ತೊಟ್ಟು, ಮೂಗಿಗೆ ಗಾಡೆ ಹಾಕಿಕೊಂಡು, ತುರುಬಿಗೆ ಮಲ್ಲಿಗೆ ಮುಡಿದು, ಕೈಯಲ್ಲಿ ಕಮಲದ ಮೊಗ್ಗು ಹಿಡಿದು…

ಸುಮಾರು 65,000 ಜನರು ಮೇಘನಾ ಟ್ವೀಟ್ ಮಾಡಿದ ಈ ರೀಲ್ ನೋಡಿದ್ದಾರೆ. ಅನೇಕರು ಆಹಾ ನಮ್ಮ ಇಳಕಲ್ ಸೀರೆಯಲ್ಲಿ ಎಷ್ಟು ಛಂದ ಕಾಣ್ತೀರಿ ಎಂದು ಉದ್ಗರಿಸಿದ್ದಾರೆ. ಅಂದಹಾಗೆ ಮೇಘನಾ ಹುಟ್ಟಿದ್ದು ಕಲಬುರ್ಗಿಯಲ್ಲಿ. ಇಲ್ಲಿಯ ಶ್ರೀ ಶರಣಬಸವೇಶ್ವರ ವಸತಿ ಶಾಲೆಯಲ್ಲಿ ಶಿಕ್ಷಣ ಮುಗಿಸಿ ನಂತರ ಬೆಂಗಳೂರಿನ ಮಹಾವೀರ್ ಜೈನ್ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದರು.

ನಂತರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಆದರ್ಶ ಫಿಲ್ಮ್ ಇನ್ಸ್ ಟ್ಯೂಟ್ ನಲ್ಲಿ ಡಿಪ್ಲೋಮೋ ಇನ್ ಆ್ಯಕ್ಟಿಂಗ್​ ಅಂಡ್ ಮೇಕಿಂಗ್​ ಕೋರ್ಸ್ ಪೂರೈಸಿದರು. ನಂತರ ಧಾರಾವಾಹಿ ”ಕುಮುದ” ಮೂಲಕ ಕಿರುತೆರೆ ಪ್ರವೇಶಿಸಿದರು. ರಿಯಾಲಿಟಿ ಷೋ ಮೂಲಕ ಪ್ರತಿಭೆ ಸಾಬೀತುಪಡಿಸಿದರು. ”ಚಾರ್​ ಮಿನಾರ್​” ಸಿನೆಮಾದ ಮೂಲಕ ಮುನ್ನೆಲೆಗೆ ಬಂದರು.

ಈ ಇಳಕಲ್​ ಸೀರೆ ಮೇಘನಾರನ್ನು ಹೊಸ ಅವಕಾಶದೆಡೆ ಕರೆದೊಯ್ದೀತೆ? ಇವರ ನಟನಾ ಸಾಮರ್ಥ್ಯಕ್ಕೆ ಹೊಸ ದಿಕ್ಕು ತೋರಿಸೀತೆ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

Published On - 12:20 pm, Thu, 8 June 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ