AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಒಂದುವರೆ ವರ್ಷಗಳ ಬಳಿಕ ತಾಯಿ ಮಗನ ಭೇಟಿ, ಈ ಅಮೃತ ಕ್ಷಣದ ವೀಡಿಯೊ ಇಲ್ಲಿದೆ ನೋಡಿ

ವಿದೇಶದಲ್ಲಿದ್ದ ಮಗನೊಬ್ಬ ತನ್ನ ತಾಯಿಯನ್ನು ಸುಮಾರು ಒಂದುವರೆ ವರ್ಷಗಳ ನಂತರ ಭೇಟಿಯಾದಾಗ ತಾಯಿ ತನ್ನ ಮಗನನ್ನು ನೋಡಿ ಕಣ್ತುಬಿಂಕೊಳ್ಳುವ ಭಾವನಾತ್ಮಕ ವೀಡಿಯೋವೊಂದು ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದ್ದು, ಈ ತಾಯಿ ಮಗನ ಪರಿಶುದ್ಧ ಪ್ರೀತಿ ಎಂತಹ ಕಲ್ಲು ಮನಸ್ಸನ್ನೂ ಕರಗಿಸುವಂತಿದೆ.

Viral Video: ಒಂದುವರೆ ವರ್ಷಗಳ ಬಳಿಕ ತಾಯಿ ಮಗನ ಭೇಟಿ, ಈ ಅಮೃತ ಕ್ಷಣದ ವೀಡಿಯೊ ಇಲ್ಲಿದೆ ನೋಡಿ
ವೈರಲ್​​ ವೀಡಿಯೊ
ಮಾಲಾಶ್ರೀ ಅಂಚನ್​
| Edited By: |

Updated on: Jun 07, 2023 | 6:20 PM

Share

ಭವಿಷ್ಯ ರೂಪಿಸುವ ಸಲುವಾಗಿ ಅನೇಕರು ಉನ್ನತ ವಿಧ್ಯಾಭ್ಯಾಸ ಹಾಗೂ ಕೆಲಸದ ನಿಮಿತ್ತ ವಿದೇಶಗಳಿಗೆ ತೆರಳುತ್ತಾರೆ. ಹಲವಾರು ಆಸೆ ಕನಸುಗಳನ್ನು ಹೊತ್ತು ತನ್ನ ತಾಯಿ ಮತ್ತು ಕುಟುಂಬದವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಒಂದೇ ಕಾರಣದಿಂದ ಎಷ್ಟೇ ಕಷ್ಟ ಆದರೂ ಮನೆಯವರಿಂದ ದೂರವಿದ್ದು ಕೆಲಸ ಮಾಡುತ್ತಿರುತ್ತಾರೆ. ಅದೇನೇ ಆದರೂ ತಾಯಿಗೆ ಮಗನದ್ದೇ ಧ್ಯಾನ. ನನ್ನ ಮಗ ಯಾವಾಗ ಮನೆಗೆ ಬರಬಹುದು ಎಂದು ಕಾಯುತ್ತಾ ಕುಳಿತಿರುತ್ತಾಳೆ. ಮಗ ವಿದೇಶದಿಂದ ಅಥವಾ ದೂರದೂರಿನಿಂದ ಬರುತ್ತಿದ್ದಾನೆ ಎಂದು ತಿಳಿದ ತಕ್ಷಣ ತಾಯಿಯ ಖುಷಿಗೆ ಪಾರವೇ ಇರುವುದಿಲ್ಲ. ಅದರಲ್ಲೂ ತಾಯಿ ಮಗನ ಭೇಟಿಯ ಅಪೂರ್ವ ಕ್ಷಣವನ್ನು ನೋಡಲು ಎರಡು ಕಣ್ಣು ಸಾಲದು. ಇಂತಹದ್ದೇ ತಾಯಿ ಮಗನ ಭೇಟಿಯ ಕುರಿತ ಭಾವನಾತ್ಮಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮಗನೊಬ್ಬ ತನ್ನ ತಾಯಿಯನ್ನು ಸುಮಾರು ಒಂದುವರೆ ವರ್ಷಗಳ ನಂತರ ಭೇಟಿಯಾದಾಗ ತಾಯಿ ತನ್ನ ಮಗನನ್ನು ನೋಡಿ ಕಣ್ತುಬಿಂಕೊಳ್ಳುವ ಹೃದಯಸ್ಪರ್ಶಿ ಕ್ಷಣವನ್ನು ಈ ವೀಡಿಯೋದಲ್ಲಿ ಸೆರೆಹಿಡಿಯಲಾಗಿದೆ.

ತಾಯಿ-ಮಗನ ಭಾಂದವ್ಯದ ಕುರಿತ ಈ ಭಾವನಾತ್ಮಕ ವೀಡಿಯೋವನ್ನು ಅನ್ಜಿಲ್ (@anzil_a) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ನನಗೆ ಜಗತ್ತಾಗಿರುವವರೊಂದಿಗೆ ಮತ್ತೆ ಸೇರಿದ ಕ್ಷಣ. ಒಂದುವರೆ ವರ್ಷಗಳ ಬಳಿಕ ನಾನು ನನ್ನ ಕುಟುಂಬವನ್ನು ಭೇಟಿಯಾಗಿ ಅವರನ್ನು ಆಶ್ಚರ್ಯಗೊಳಿಸಿದೆ’ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:Viral Video: ಕೆ.ಎಲ್-19 ಗಾಡಿ ಸೈಡಿಗೆ ಹಾಕಿ, ಹೇ ಹುಡುಗ ಏನೋ, ಯುವಕನ ತರ್ಲೆ ನೋಡಿ

ಈ ವೀಡಿಯೋದಲ್ಲಿ ವಿದೇಶದಲ್ಲಿದ್ದ ಮಗ ತನ್ನ ತಾಯಿಗೆ ಸರ್ಪ್ರೈಸ್ ನೀಡಬೇಕೆಂದು ಮನೆಯವರಿಗೆ ಯಾರಿಗೂ ತಿಳಿಸದೆ ತಾಯ್ನಾಡಿಗೆ ಬರುತ್ತಾನೆ. ಮಗ ಮನೆಯೊಳಗೆ ಕಾಲಿಡುತ್ತಿದ್ದಂತೆ ಮನೆಮಂದಿಗೆಲ್ಲರಿಗೂ ಮನೆಮಗನನ್ನು ಕಂಡು ಆಶ್ಚರ್ಯವಾಗುತ್ತದೆ. ಆತನನ್ನು ತಬ್ಬಿಕೊಂಡು ಮಾತನಾಡಿಸುತ್ತಾರೆ. ಬಳಿಕ ಆತ ಅಡುಗೆ ಮನೆಗೆ ಹೋಗಿ ತಾಯಿಯ ಮುಂದೆ ನಿಂತುಕೊಳ್ಳುತ್ತಾನೆ. ಹೆತ್ತ ಕರುಳಿಗೆ ತನ್ನ ಕರುಳಿನ ಕುಡಿಯನ್ನು ಕಂಡು ಆಶ್ಚರ್ಯವಾದದ್ದು ಮಾತ್ರವಲ್ಲದೆ, ಭಾವನಾತ್ಮಗೊಂಡು ಮಗನ ಮಡಿಲಿನಲ್ಲಿ ಕುಳಿತು ಅಳುವ ಭಾವನಾತ್ಮಕ ದೃಶ್ಯಾವಳಿಯನ್ನು ಕಾಣಬಹುದು.

ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿರುವ ಈ ಹೃದಯಸ್ಪರ್ಶಿ ವೀಡಿಯೋ 14.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 2.7 ಮಿಲಿಯನ್ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಸುಮಾರು 34.6 K ಕಮೆಂಟ್ಸ್ ಗಳೂ ಈ ವೀಡಿಯೋಗೆ ಹರಿದುಬಂದಿವೆ. ಒಬ್ಬ ಬಳಕೆದಾರರು ‘ಈ ವೀಡಿಯೋ ನನ್ನ ಕಣ್ಣಂಚಲ್ಲಿ ನೀರು ತರಿಸಿತು’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ನೀವು ನಿಮ್ಮ ತಾಯಿಯನ್ನು ನೊಡಿದಾಗ, ಪರಿಶುದ್ಧ ಪ್ರೀತಿಯನ್ನು ಕಾಣುತ್ತೀರಿ’ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಅಮ್ಮನ ಹೊರತಾಗಿ ಯಾರು ಇಲ್ಲ’ ಎಂದು ಕಮೆಂಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ