AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಯುವಕರನ್ನೇ ನಾಚಿಸುವಂತೆ ಅದ್ಭುತವಾಗಿ ಡಾನ್ಸ್ ಮಾಡಿದ ಸಿಖ್ ದಂಪತಿ

ಸಿಖ್ ದಂಪತಿಗಳಿಬ್ಬರು ಜಿಂದಗಿ ನಾ ಮಿಲೇಗಿ ದೊಬಾರಾ ಚಲನಚಿತ್ರದ ಸೆನೊರಿಟಾ ಹಾಡಿಗೆ ಯುವಕರನ್ನೇ ನಾಚಿಸುವಂತೆ ಅದ್ಭುತವಾಗಿ ಡಾನ್ಸ್ ಮಾಡಿದ್ದು, ಈ ಸುಂದರ ವೀಡಿಯೋ ನೆಟ್ಟಿಗರ ಮನ ಗೆದ್ದಿದೆ.

Viral Video: ಯುವಕರನ್ನೇ ನಾಚಿಸುವಂತೆ ಅದ್ಭುತವಾಗಿ ಡಾನ್ಸ್ ಮಾಡಿದ ಸಿಖ್ ದಂಪತಿ
ವೈರಲ್ ವೀಡಿಯೊ
ಅಕ್ಷಯ್​ ಪಲ್ಲಮಜಲು​​
|

Updated on: Jun 07, 2023 | 4:40 PM

Share

ಸಾಮಾಜಿಕ ಮಾಧ್ಯಮಗಳಲ್ಲಿ ಡಾನ್ಸ್ ವೀಡಿಯೋಗಳದ್ದೇ ಹವಾ. ಪ್ರತಿನಿತ್ಯವೂ ಇನ್ಸ್ಟಾಗ್ರಾಮ್, ಫೇಸ್ ಬುಕ್ ಹಾಗೂ ಇನ್ನಿತರ ಸಾಮಾಜಿಕ ಮಾಧ್ಯಮಗಳಲ್ಲಿ ಡಾನ್ಸ್ ವೀಡಿಯೋಗಳು ಹರಿದಾಡುತ್ತಿರುತ್ತವೆ. ಅದರಲ್ಲೂ ವಯಸ್ಸಾದ ದಂಪತಿಗಳು ಡಾನ್ಸ್ ಮಾಡುವ ವೀಡಿಯೋಗಳಿದ್ದರೆ ನೋಡುಗರು ಅಂತಹ ವಿಡಿಯೋಗಳನ್ನು ತುಸು ಹೆಚ್ಚೇ ಇಷ್ಟಪಡುತ್ತಾರೆ. ಏಕೆಂದರೆ ಅಲ್ಲಿ ದಂಪತಿಗಳ ಅನ್ಯೋನ್ಯತೆಯನ್ನು ಹಾಗೂ ನಿಷ್ಮಲ್ಮಶ ಪ್ರೀತಿಯನ್ನು ಕಣ್ತುಂಬಿಕೊಳ್ಳಬಹುದು. ಇದೇ ರೀತಿ ಇಲ್ಲೊಂದು ಮುದ್ದಾದ ಜೋಡಿಯು ಜಿಂದಗಿ ನಾ ಮಿಲೇಗಿ ದೋಬಾರಾ ಚಲನಚಿತ್ರದ ಸೆನೊರಿಟಾ ಹಾಡಿಗೆ ಸಾಲ್ಸಾ ನೃತ್ಯ ಪ್ರದರ್ಶನ ಮಾಡಿದ್ದು, ಜೀವನವನ್ನು ಆನಂದಿಸಲು ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಈ ಜೋಡಿಯು ತೋರಿಸಿಕೊಟ್ಟಿದ್ದಾರೆ. ಇವರಿಬ್ಬರ ಡಾನ್ಸ್ ವೀಡಿಯೋ ಫೇಸ್ಬುಕ್ ನಲ್ಲಿ ಹರಿದಾಡುತ್ತಿದ್ದು, ದಂಪತಿಗಳಿಬ್ಬರ ಅನ್ಯೋನ್ಯತೆಯನ್ನು ಕಂಡು ನೋಡುಗರು ಮನಸ್ಪೂರ್ವಕವಾಗಿ ಖುಷಿಪಟ್ಟಿದ್ದಾರೆ.

ಈ ಹೃದಯಸ್ಪರ್ಶಿ ವೀಡಿಯೋದಲ್ಲಿ ಸಿಖ್ ದಂಪತಿಗಳು ನಿಜವಾಗಿಯೂ ದಾಂಪತ್ಯ ಜೀವನದ ಸಂತೋಷ ಮತ್ತು ಉತ್ಸಾಹವನ್ನು ಆನಂದಿಸುವುದನ್ನು ಕಣ್ತುಂಬಿಕೊಳ್ಳಬಹುದು. ಈ ವೀಡಿಯೋವನ್ನು ಸಿಖ್ಲೆನ್ಸ್ (@sikhlens) ಎಂಬ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಯಾವುದೋ ಒಂದು ಕಾರ್ಯಕ್ರಮದಲ್ಲಿ ವಯಸ್ಸಾದ ದಂಪತಿಗಳಿಬ್ಬರು ಸ್ಟೇಜ್ ಮೇಲೆ ಪ್ರೀತಿಯಿಂದ ಸೆನೋರಿಟಾ ಹಾಡಿಗೆ ನೃತ್ಯ ಮಾಡಿದ್ದು, ಅಲ್ಲಿ ನೆರೆದಿದ್ದ ಜನರೆಲ್ಲರೂ ದಂಪತಿಗಳ ಅದ್ಭುತ ನೃತ್ಯ ಪ್ರದರ್ಶನವನ್ನು ನೋಡಿ ಹೋ ವಾವ್ ಎನ್ನುತ್ತಾ, ಚಪ್ಪಾಳೆ ತಟ್ಟುತ್ತಾ ದಂಪತಿಗಳನ್ನು ಹುರಿದುಂಬಿಸುವುದನ್ನು ಮತ್ತು ಅವರ ನೃತ್ಯವನ್ನು ಶ್ಲಾಘಿಸುವುದನ್ನು ವೀಡಿಯೋದಲ್ಲಿ ಕಾಣಬಹುದು. ತಮ್ಮೊಳಗಿನ ಕಲೆಯನ್ನು ಪ್ರದರ್ಶಿಸಲು ಹಾಗೂ ದಾಂಪತ್ಯ ಜೀವನದ ಪ್ರೀತಿಯನ್ನು ಆನಂದಿಸಲು ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಈ ಜೋಡಿ ತೋರಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: Viral Video: ಪಾವ್ ಭಾಜಿ ಐಸ್ಕ್ರೀಮ್ ರೋಲ್, ಇದೆಂತಹ ಐಸ್ಕ್ರೀಮ್ ಎಂದು ತಲೆಕೆಡಿಸಿಕೊಂಡ ನೆಟ್ಟಿಗರು

ವನ್ನು ಹಂಚಿಕೊಳ್ಳಲಾಗಿದ್ದು, 2.2 ಮಿಲಿಯನ್ ವೀಕ್ಷಣೆಗಳನ್ನು ಮತ್ತು 112 ಸಾವಿರ ಲೈಕ್ಸ್​​​​ಗಳನ್ನು ಪಡೆದುಕೊಂಡಿದೆ. ಹಾಗೂ 4.2 ಸಾವಿರ ಕಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಅದ್ಭುತ ನೃತ್ಯ ಪ್ರದರ್ಶನ. ವೃದ್ಧಾಪ್ಯದಲ್ಲಿ ನಾನು ಅಂತಹ ಚೈತನ್ಯ ಮತ್ತು ಪ್ರೀತಿಯಿಂದ ನನ್ನ ಜೊತೆ ನೃತ್ಯ ಮಾಡಬಹುದಾದ ಸಂಗಾತಿಯನ್ನು ವರಿಸಿದರೆ, ನಾನು ನನ್ನನ್ನು ಅದೃಷ್ಟಶಾಲಿ ಎಂದು ಪರಿಗಣಿಸುತ್ತೇನೆ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ದಂಪತಿಗಳಿಬ್ಬರ ನೃತ್ಯ ಪ್ರದರ್ಶನ ಸುಂದರವಾಗಿತ್ತು ಹಾಗೂ ಸ್ಪೂರ್ತಿದಾಯಕವಾಗಿದೆ’ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ‘ದಂಪತಿಗಳ ಅನ್ಯೋನ್ಯತೆಯನ್ನು ನೋಡಿ ಬಹಳ ಸಂತೋಷವಾಯಿತು’ ಎಂದು ಕಮೆಂಟ್ ಮಾಡಿದ್ದಾರೆ. ಹಾಗೂ ಅನೇಕ ಪೇಸ್ಬುಕ್ ಬಳಕೆದಾರರು ದಂಪತಿಗಳ ನೃತ್ಯ ಪ್ರದರ್ಶನ ಅದ್ಭುತವಾಗಿತ್ತು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ