Viral Video: ಕೊನೆಯಲ್ಲಿ ವಿತರಣೆಯಾಗುವ ಬಹುಮಾನಕ್ಕಾಗಿ ಕಾಯಿರಿ!

Competition : ಕೈಯಲ್ಲಿ ಬ್ಯಾಟ್​​, ಎದುರಿಗೆ ಫುಟ್​ಬಾಲ್​, ಗುರಿ ಮಾತ್ರ ಪೇರಿಸಿಟ್ಟ ತಂಬಿಗೆಗಳು. ಈ ಆಟ ಓಲಂಪಿಕ್​ಗಿಂತ ಭಿನ್ನವಾಗಿದೆ. ಆದರೆ ಇದು ಹಳ್ಳಿಯ ಹೆಣ್ಣುಮಕ್ಕಳಿಗೆ ಮಾತ್ರ!

Viral Video: ಕೊನೆಯಲ್ಲಿ ವಿತರಣೆಯಾಗುವ ಬಹುಮಾನಕ್ಕಾಗಿ ಕಾಯಿರಿ!
ಹಳ್ಳಿಯ ಹೆಣ್ಣುಮಕ್ಕಳು ಆಟದಲ್ಲಿ ಭಾಗಿಯಾದ ದೃಶ್ಯ
Follow us
ಶ್ರೀದೇವಿ ಕಳಸದ
|

Updated on: Jun 08, 2023 | 10:32 AM

Village Game : ಇಲ್ಲೊಂದಿಷ್ಟು ಹಳ್ಳಿಹೆಣ್ಣುಮಕ್ಕಳು ಅಡುಗೆಮನೆ ಬಿಟ್ಟು ಅಂಗಳಕ್ಕೆ ಬಂದಿದ್ದಾರೆ. ಭಾರೀ ಆಸಕ್ತಿಯಿಂದ ಈ ಆಟದಲ್ಲಿ ತೊಡಗಿಕೊಂಡಿದ್ದಾರೆ. ಎದುರಿಗೆ ಒಂದಿಷ್ಟು ತಂಬಿಗೆಗಳನ್ನು ಪೇರಿಸಿಡಲಾಗಿದೆ. ಬ್ಯಾಟಿಂಗ್​ನಿಂದ ಫುಟ್​ಬಾಲ್ (Football) ಉರುಳಿಸಿ ತಂಬಿಗೆಗಳನ್ನು ಕೆಡವುವುದೇ ಆಟದ ಗುರಿ. ಸೆರಗು ಹೊದ್ದುಕೊಂಡು ಬಂದ ಹಳ್ಳಿ ಹೆಣ್ಣುಮಕ್ಕಳು ಸರದಿಯಂತೆ ಬ್ಯಾಟಿಂಗ್​ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಆಟವೆಂದರೆ ಆಟವೇ! ಅದು ನಮ್ಮನ್ನೇ ಆಟವಾಡಿಸುತ್ತದೆ. ಅದೃಷ್ಟಕ್ಕೆ ಕೆಲವರನ್ನಷ್ಟೇ ಆಯ್ಕೆ ಮಾಡಿಕೊಳ್ಳುತ್ತದೆ. ಜೊತಗೆ ಬಹುಮಾನವನ್ನೂ ನೀಡುತ್ತದೆ. ಹಾಗಿದ್ದರೆ ಏನದು ಬಹುಮಾನ? ನೋಡಿ ಈ ವಿಡಿಯೋ.

ಒಂದೇ ಏಟಿಗೆ ಆ ಮಹಿಳೆ ಗುರಿ ಸಾಧಿಸಿಯೇ ಬಿಟ್ಟರು. ಅಗೋ ನೋಡಿದಿರಲ್ಲ ಕೈಯಲ್ಲಿ ಎಣ್ಣೆ! ಅಂತೂ ಬಹುಮಾನ ಸಿಕ್ಕಿತು. ಅಬ್ಬಾ, ಕೆಲ ತಿಂಗಳುಗಳ ತನಕ ಈಕೆ ನಿಶ್ಚಿಂತೆ. ನೆಟ್ಟಿಗರು ಈ ವಿಡಿಯೋ ನೋಡಿ ಉತ್ಸಾಹದಿಂದ ಪ್ರತಿಕ್ರಿಯಿಸುತ್ತಿದ್ದಾರೆ ನಿಜ. ಆದರೆ ಆಟಕ್ಕಿಂತ ಜನರಿಗೆ ಎಣ್ಣೆಯ ಕಡೆಗೇ ಹೆಚ್ಚು ಗಮನ ಹೋದಂತಿದೆ. ಇದು ಯಾವ ಎಣ್ಣೆ? ಮತ್ತದರ ವೆಚ್ಚ, ಉಪಯೋಗ ಇತ್ಯಾದಿಯ ಬಗ್ಗೆ.

ಇದನ್ನೂ ಓದಿ : Viral Video: ಆದಿಪುರುಷ್​; ಪ್ರತಿ ಪ್ರದರ್ಶನದಲ್ಲೂ ಹನುಮಂತನಿಗಾಗಿ ಒಂದು ಸೀಟು ಕಾಯ್ದಿರಿಸಿ!

ಸ್ಪೇನ್​ನಲ್ಲಿ ಹಣದುಬ್ಬರದಿಂದಾಗಿ 3 ಲೀಟರ್​ ಆಲೀವ್​ ಎಣ್ಣೆಯ ಬೆಲೆ ಸುಮಾರು ರೂ. 2,000 ಆಗಿದೆ ಎಂದು ಒಬ್ಬರು ಸಂಕಟ ತೋಡಿಕೊಂಡಿದ್ದಾರೆ. ಇದು ಸಂಸ್ಕರಿಸಿದ ಎಣ್ಣೆಯಾಗಿದೆ, ಇಷ್ಟೊಳ್ಳೆಯ ಎಣ್ಣೆಯನ್ನು ಬಹುಮಾನದ ರೂಪದಲ್ಲಿ ಕೊಟ್ಟಿದ್ದು ಖುಷಿ ಎಂದು ಇನ್ನೊಬ್ಬರು. ಗಂಡಸರು ”ಎಣ್ಣೆ”ಯನ್ನು ಬಹುಮಾನವಾಗಿ ಪಡೆದಿದ್ದರೆ ಅದು ಅವರಿಗಷ್ಟೇ ಮೀಸಲಾಗಿರುತ್ತಿತ್ತು. ಈ ಎಣ್ಣೆ ಇಲ್ಲಿ ಇಡೀ ಕುಟುಂಬಕ್ಕೆ ಉಪಯೋಗವಾಗಲಿದೆ ಎಂದು ಮೆಚ್ಚಿದ್ದಾರೆ ಕೆಲವರು.

ಇದನ್ನೂ ಓದಿ : Viral Video: “ದುಯಿ ಭಾಯೀ” ಮತೀಯತೆಯ ವಿಷದಿಂದ ಕಲುಷಿತವಾದ ಭಾರತೀಯರ ಹೃದಯಗಳನ್ನೂ ಸರಿಪಡಿಸಲಿ

ಸದಾ ಅಡುಗೆ, ಮನೆ, ಮಕ್ಕಳು, ಕುಟುಂಬ ಎಂದು ಮುಳುಗಿರುವ ಹೆಣ್ಣುಮಕ್ಕಳಿಗೆ ಇಂಥ ಆಟವನ್ನು ಆಡಿಸಿರುವುದು ಮತ್ತು ಬಹುಮಾನ ನೀಡಿರುವುದು ಸಂತಸ ತಂದಿದೆ ಎಂದಿದ್ದಾರೆ ಹಲವಾರು ಜನ. ಆದರೆ ಇದು ಯಾವ ಬ್ರ್ಯಾಂಡ್​ ಎಣ್ಣೆ? ಪ್ರಚಾರ ಕಾರ್ಯ ಭಾರೀ ವಿನೂತನವಾಗಿದೆ ಎಂದಿದ್ದಾರೆ ಒಬ್ಬರು.

ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ