ಉಬ್ಬಿದ ಕೆನ್ನೆ ಇಷ್ಟವಿಲ್ಲ ತೆಳ್ಳಗಾಗು ಎಂದು ಪತಿಯ ಚಿತ್ರಹಿಂಸೆ, 17 ಕೆಜಿ ಕಡಿಮೆಯಾಗಿ ಅಸ್ಥಿಪಂಜರದಂತಾದ್ಲು ಆದರೂ ಬಿಟ್ಟು ಹೋದ
ಜಗತ್ತಿನಲ್ಲಿ ಇತರರ ಸಂತೋಷಕ್ಕಾಗಿ ಯಾವುದೇ ವ್ಯಕ್ತಿಯು ತಮ್ಮ ದೈಹಿಕ ನೋಟವಾಗಲಿ ಅಥವಾ ಆರೋಗ್ಯವಾಗಲಿ ಎಂದಿಗೂ ಹಾಳುಮಾಡಿಕೊಳ್ಳಬಾರದು.
ಜಗತ್ತಿನಲ್ಲಿ ಇತರರ ಸಂತೋಷಕ್ಕಾಗಿ ಯಾವುದೇ ವ್ಯಕ್ತಿಯು ತಮ್ಮ ದೈಹಿಕ ನೋಟವಾಗಲಿ ಅಥವಾ ಆರೋಗ್ಯವಾಗಲಿ ಎಂದಿಗೂ ಹಾಳುಮಾಡಿಕೊಳ್ಳಬಾರದು. ನಿಮ್ಮನ್ನು ಪ್ರೀತಿಸುವವರು ನೀವು ಹೇಗಿದ್ದರೂ ಪ್ರೀತಿಸುತ್ತಾರೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ನೀವು ಈಗ ನೋಡುತ್ತಿರುವ ಮಹಿಳೆಯ ಹೆಸರು ಯಾನಾ ಬೊಬ್ರೊವಾ. ಯಾನಾ ನೈಋತ್ಯ ರಷ್ಯಾದ ಬೆಲ್ಗೊರೊಡ್ ನಿವಾಸಿ. ಯಾನಾ ತನ್ನ ಆರೋಗ್ಯವನ್ನು ನಿರ್ಲಕ್ಷಿಸಿ ತನ್ನ ಗಂಡನ ಇಚ್ಛೆಗೆ ಆದ್ಯತೆ ನೀಡಿದ್ದರಿಂದ ಇದೀಗ ಪಶ್ಚಾತ್ತಾಪ ಪಡುತ್ತಿದ್ದಾಳೆ. ಗಂಡನಿಗೆ ಆಕೆಯ ಉಬ್ಬಿದ ಕೆನ್ನೆ ಇಷ್ಟವಿರಲಿಲ್ಲ, ಆಕೆಯ ತೂಕ ಹೆಚ್ಚು ಎಂದು ಸದಾ ಜಗಳವಾಡುತ್ತಾ ಚಿತ್ರಹಿಂಸೆ ಕೊಡುತ್ತಿದ್ದ.
ಗಂಡನ ಆಸೆ ಬದುಕನ್ನೇ ಮುಳುಗಿಸಿತು ಇದನ್ನೆಲ್ಲಾ ಕೇಳಿದ ಯಾನಾ ತನ್ನ ತೂಕವನ್ನು ನಿಯಂತ್ರಿಸಲು ಮತ್ತು ತನ್ನ ಕೊಬ್ಬಿದ ಕೆನ್ನೆಗಳನ್ನು ಚಪ್ಪಟೆಗೊಳಿಸಲು ಪ್ರಯತ್ನಿಸಲು ಪ್ರಾರಂಭಿಸಿದಳು. ರಷ್ಯಾದ ಟಾಕ್ ಶೋನಲ್ಲಿ ಸಂದರ್ಶನವೊಂದರಲ್ಲಿ, ಮಾತನಾಡಿ ಅವರು ವಿಶ್ವವಿದ್ಯಾನಿಲಯದಲ್ಲಿದ್ದಾಗ, ತಮ್ಮ ತೂಕವನ್ನು ಕಡಿಮೆ ಮಾಡಲು ನಿರ್ಧರಿಸಿದರು, ಅದು ಕೂಡ ತನ್ನ ಗಂಡನ ಆಸೆಯನ್ನು ಪೂರೈಸಲು ನಿರ್ಧರಿಸಿದೆ ಎಂದು ಹೇಳಿಕೊಂಡಿದ್ದಾರೆ. ಅವರು ವಿವೇಚನಾರಹಿತವಾಗಿ ವ್ಯಾಯಾಮ ಮಾಡುವುದಲ್ಲದೆ, ಅವರ ಆಹಾರಕ್ರಮವನ್ನು ಮಿತಿಗೊಳಿಸಿದರು. ಹೀಗೆ ಮಾಡಿದ್ದರಿಂದ ಅವಳ ದೇಹ ತೆಳ್ಳಗಾಗತೊಡಗಿತು ಮತ್ತು ಗಂಡನಿಗೆ ಇದೆಲ್ಲ ಗೊತ್ತಿದ್ದರೂ ಅವಳು ಅತಿಯಾಗಿ ತೆಳ್ಳಗಾಗುತ್ತಿದ್ದಾಳೆಂದು ಹೇಳಲೇ ಇಲ್ಲ.
ಮತ್ತಷ್ಟು ಓದಿ: Viral Video: ಒಂದುವರೆ ವರ್ಷಗಳ ಬಳಿಕ ತಾಯಿ ಮಗನ ಭೇಟಿ, ಈ ಅಮೃತ ಕ್ಷಣದ ವೀಡಿಯೊ ಇಲ್ಲಿದೆ ನೋಡಿ
ಕೆಲಸದಿಂದ ವಜಾ ಅಷ್ಟೇ ಅಲ್ಲ, ಪತಿ ಯಾನಾಳನ್ನು ಜನರನ್ನು ಭೇಟಿಯಾಗದಂತೆ ತಡೆದು ಅವಳನ್ನು ಕೆಲಸದಿಂದ ವಜಾಗೊಳಿಸಿದನು. ಗಂಡನಿಗಾಗಿಯೇ ಆಕೆ ತೆಳ್ಳಗಾಗುತ್ತಿದ್ದರೂ, ಆಕೆ ತೆಳ್ಳಗಾದ ಬಳಿಕ ಆತನಿಗೆ ಆಕೆ ಇಷ್ಟವಾಗಲೇ ಇಲ್ಲ. ನನ್ನ ಪತಿ ನನಗೆ ಹೆಚ್ಚು ಅಗತ್ಯವಿರುವಾಗ, ಅವನು ನನ್ನನ್ನು ಬೆಂಬಲಿಸಲಿಲ್ಲ ಎಂದು ಯಾನಾ ಬೇಸರ ವ್ಯಕ್ತಪಡಿಸಿದ್ದಾಳೆ. ನನ್ನ ಉಂಗುರವನ್ನು ವಾಪಸ್ ಕೊಟ್ಟು ಬಳಿಕ ನನ್ನ ಬಿಟ್ಟು ಹೋಗೇ ಬಿಟ್ಟರು. ಆದರೆ ಕೊನೆಯಲ್ಲಿ ನನ್ನ ಕೈಗಳು ಖಾಲಿಯಾಗಿವೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಯಾನಾಳ ಆರೋಗ್ಯದ ಸ್ಥಿತಿಯನ್ನು ವಿವರಿಸಿದ ಪೌಷ್ಟಿಕತಜ್ಞ ಮರಿನಾ ಮಕಿಶಾ, ಯಾನಾಳ ದೇಹವು ಈಗ ತಾನೇ ತಿನ್ನಲು ಪ್ರಾರಂಭಿಸಿದೆ. ಇದು ಸ್ನಾಯುಗಳು ಮತ್ತು ಚರ್ಮವನ್ನು ತಿನ್ನಲು ಪ್ರಾರಂಭಿಸಿದೆ. ಇದೀಗ ಯಾನಾ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಯಾನಾ ತನ್ನ ತೂಕವನ್ನು 17 ಕೆಜಿಗೆ ಇಳಿಸಿದ್ದಾಳೆ ಅವರ ತೂಕ ಈಗ ಕೇವಲ 22 ಕೆಜಿಗೆ ಇಳಿದಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:09 pm, Thu, 8 June 23